ಭಾರತದ ಅತೀ ದೊಡ್ಡ ಕ್ರಿಪ್ಟೋ ಕರೆನ್ಸಿ ವಿನಿಮಯ WazirXಗೆ ಇಡಿ ಶೋಕಾಸ್ ನೋಟಿಸ್

By Chethan Kumar  |  First Published Jun 11, 2021, 2:55 PM IST
  • ಫೆಮಾ ಉಲ್ಲಂಘಿಸಿದ ಭಾರತದ ಅತೀ ದೊಡ್ಡ ಕ್ರಿಪ್ಟೋ ಕರೆನ್ಸಿ ಸಂಸ್ಥೆ 
  • WazirX ಹಾಗೂ ನಿರ್ದೇಶಕರಿಗೆ ಇಡಿಯಿಂದ ನೋಟೀಸ್
  • ಚೀನಾ ಬೆಟ್ಟಿಂಗ್ ಆ್ಯಪ್ ಮೂಲಕ ಬಂದ ಹಣ ಕ್ರಿಪ್ರ್ಟೋ ಕರೆನ್ಸಿಗೆ ಪರಿವರ್ತನೆ

ನವದೆಹಲಿ(ಜೂ.11):  ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999(FEMA) ಉಲ್ಲಂಘಿಸಿದ ಭಾರತದ ಅತೀ ದೊಡ್ಡ ಕ್ರಿಪ್ಟೋ ಕರೆನ್ಸಿ ವಿನಿಮಯ  WazirXಗೆ ಸಂಕಷ್ಟ ಎದುರಾಗಿದೆ. ನಿಯಮ ಉಲ್ಲಂಘಿಸಿದ M/s ಝನ್ಮಾಯಿ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್(WazirX) ಹಾಗೂ ಕಂಪನಿ ನಿರ್ದೇಶಕರಾದ ನಿಶ್ಚಲ್ ಶೆಟ್ಟಿ ಮತ್ತು ಸಮೀರ್ ಹುಮಾನ್ ಮಾತ್ರೆಗೆ ಜಾರಿ ನಿರ್ದೇಶನಾಲಯ(ED) ಶೋಕಾಸ್ ನೋಟಿಸ್ ನೀಡಿದೆ. 

ಬಿಟ್‌ಕಾಯನ್‌ನಂಥ ಕರೆನ್ಸಿ ಬಳಸಿದರೆ ಜೈಲುಶಿಕ್ಷೆ, ದಂಡ

Latest Videos

undefined

ಬರೋಬ್ಬರಿ  2790.74 ಕೋಟಿ ಮೌಲ್ಯದ ಕ್ರಿಪ್ಟೋ-ಕರೆನ್ಸಿ ವ್ಯವಹಾರಗಳಿಗೆ ಇಡಿ ಈ ನೋಟಿಸ್ ನೀಡಿದೆ.  ಮತ್ತೊಂದು ಅತೀ ದೊಡ್ಡ ಅವ್ಯವಾಹರದ ವಾಸನೆ ಬಡಿಯುತ್ತಿದೆ. ಕಾರಣ ಕ್ರಿಪ್ಟೋ ಕರೆನ್ಸಿ ಈ ಅವ್ಯವಹಾರದಲ್ಲಿ ಚೀನಾದ ಮೊಬೈಲ್ ಆ್ಯಪ್ಲಿಕೇಶನ್ ವಂಚನೆ ವ್ಯವಹಾರವೂ ಥಳುಕು ಹಾಕಿಕೊಂಡಿದೆ. 

ಫೇಸ್ ಬುಕ್ ಡಿಜಿಟಲ್ ಕರೆನ್ಸಿ ಲಿಬ್ರಾಗೆ ಅಧಿಕೃತ ಚಾಲನೆ

ಚೀನಾ ಒಡೆತನದ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ಲಿಕೇಶನ್ ಹಾಗೂ ಮನಿ ಲಾಂಡರಿಂಗ್ ಕುರಿತು ಭಾರತದಲ್ಲಿ ತನಿಖೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯ FEMA ಕಾಯ್ದೆಯಡಿ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಬಹಿರಂಗವಾಗಿದೆ. ಚೀನಾ ಮೂಲದ ವ್ಯಕ್ತಿಗಳು ಭಾರತದಲ್ಲಿ ನಡೆಸುತ್ತಿರುವ ಆನ್‌ಲೈನ್ ಬೆಟ್ಟಿಂಗ್ ಮೂಲಕ ಪಡೆದ ಹಣವನ್ನು ಕ್ರಿಪ್ರ್ಟೋ ಕರೆನ್ಸಿಯಾಗಿ(USDT)ಪರಿವರ್ತಿಸಿದ್ದಾರೆ.  ಸುಮಾರು 57 ಕೋಟಿ ರೂಪಾಯಿಗಳನ್ನು ಈ ರೀತಿ ಪರಿವರ್ತಿಸಿ ಬಿನಾನ್ಸ್(ಕೇಮನ್ ಐಸ್‌ಲ್ಯಾಂಡ್‌ನಲ್ಲಿ ನೋಂದಾಯಿಸಲಾದ ವಿನಿಮಯ) ವರ್ಗಾಯಿಸಲಾಗಿದೆ. ಈ ಕುರಿತು ಮಾಹಿತಿ ಪಡೆದ ಜಾರಿ ನಿರ್ದೇಶನಾಲಯ ತನಿಖೆ ಚುರುಕುಗೊಳಿಸಿದೆ.

WazirX ಸಂಸ್ಥೆ ವಿನಿಮಯ  ವ್ಯವಾಹರದಲ್ಲಿ  ವ್ಯಕ್ತಿಯಿಂದ ವ್ಯಕ್ತಿಗೆ (P2P) ವಹಿವಾಟುಗಳನ್ನು ಅನುಮತಿಸುತ್ತದೆ.  ಖಾತೆಗಳಲ್ಲಿರುವ ಕ್ರಿಪ್ಟೋಕರೆನ್ಸಿಯ ವರ್ಗಾವಣೆ / ರಶೀದಿಯನ್ನು ದೇಶಿಯರು ಇಟ್ಟುಕೊಳ್ಳಬಹುದಾದ ಇತರ ವಿನಿಮಯ ಕೇಂದ್ರಗಳ ವ್ಯಾಲೆಟ್‌ಗಳಿಗೆ ವರ್ಗಾಯಿಸುತ್ತದೆ.  ಇಲ್ಲಿ WazirX ಮನಿ ಲಾಂಡರಿಂಗ್(AML), ಭಯೋತ್ಪಾದನೆ ಹಣಕಾಸು ಮುನ್ನಚ್ಚೆರಿಕೆ ಮಾನದಂಡ ಮತ್ತು ಫೆಮಾ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. 

ಬೆಂಗಳೂರಿನಲ್ಲಿ ದೇಶದ ಮೊದಲ ಬಿಟ್ ಕಾಯಿನ್ ಎಟಿಎಂ!

ED ತನಿಖೆಯಲ್ಲಿ WazirX ಕ್ರಿಪ್ರ್ಟೋ ಕರೆನ್ಸಿ ಬಳಕೆದಾರರು ಪೂಲ್ ಖಾತೆಯ ಮೂಲಕ 880 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ರೋಟೋ ಕರೆನ್ಸಿಯನ್ನು ಬಿನಾನ್ಸೆ ಖಾತೆಗಳಿಂದ ಪಡೆದಿದ್ದಾರೆ. ಇನ್ನು 1,400 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ರ್ಟೋ ಕರೆನ್ಸಿಯನ್ನು ಬಿನಾನ್ಸ್ ಖಾತೆಗಳಿಗೆ ವರ್ಗಾಯಿಸಿರುವುದು ಪತ್ತೆಯಾಗಿದೆ.

ಈ ಕುರಿತು ಯಾವುದೇ ಲೆಕ್ಕಪರಿಶೋಧನೆ ಅಥವಾ ತನಿಖೆ ನಡೆಸುವ ವಹಿವಾಟುಗಳು WazirXನಲ್ಲಿಲ್ಲ. ಸರಿಯಾದ ದಾಖಲಾತಿಗಳಲ್ಲಿದೆ WazirX ತನ್ನ ಗ್ರಾಹಕರಿಗೆ ಸ್ಥಳ, ರಾಷ್ಟ್ರೀಯತೆ ಪರಿಗಣಿಸದೆ ಕ್ರಿಪ್ರ್ಟೋ ಕರೆನ್ಸಿ ವರ್ಗಾಯಿಸುತ್ತಿದೆ. ಈ ಮೂಲಕ ಕಾನೂನಿನ ಉಲ್ಲಂಘನೆ ಮಾಡುತ್ತಿರವುದು ಸ್ಪಷ್ಟವಾಗಿದೆ. ಈ ಕಾರಣಕ್ಕಾಗಿ WazirX ಹಾಗೂ ನಿರ್ದೇಶಕರಾದ ನಿಶ್ಚಲ್ ಶೆಟ್ಟಿ ಹಾಗೂ ಸಮೀರ್‌ಗೆ ನೊಟೀಸ್ ಜಾರಿ ನಿರ್ದೇಶನಾಲಯ ನೊಟೀಸ್ ನೀಡಿದೆ.

click me!