
ನವದೆಹಲಿ (ಜೂ.11): ಕಳೆದ 2 ವರ್ಷಗಳಿಂದ ಆದಾಯ ತೆರಿಗೆ ವಿವರ ಸಲ್ಲಿಕೆ ಮಾಡದೇ ಬಾಕಿ ಉಳಿಸಿಕೊಂಡಿದ್ದರೆ ಜೂ.1ರಿಂದ ದುಪ್ಪಟ್ಟು ಟಿಡಿಎಸ್ ಕಡಿತಗೊಳ್ಳಲಿದೆ.
ಟಿಡಿಎಸ್ ಕಡಿತಕ್ಕೆ ಕೇಂದ್ರ ಸರ್ಕಾರ ನೂತನ 206ಎಬಿ ಸೆಕ್ಷನ್ ಅನ್ನು ಜಾರಿ ಮಾಡಲಾಗಿದ್ದು, 2 ವರ್ಷದಿಂದ ಐಟಿಆರ್ ಸಲ್ಲಿಕೆ ಮಾಡದೇ ಇದ್ದವರಿಗೆ ಜು.1ರಿಂದ ದುಪ್ಪಟ್ಟು ಟಿಡಿಎಸ್ ಅನ್ನು ಕಡಿತಗೊಳಿಸಬೇಕು ಎಂದು ತಿಳಿಸಲಾಗಿದೆ.
ಇದೀಗ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್ ಜನಸ್ನೇಹಿ ಅವತಾರದಲ್ಲಿ, ಹೊಸತೇನಿದೆ?
50 ಸಾವಿರಕ್ಕಿಂತ ಹೆಚ್ಚು ಟಿಡಿಎಸ್ ಕ್ಲೈಮ್‌ಗೆ ಅರ್ಹರಾಗಿರುವವರು 2 ವರ್ಷದಿಂದ ಐಟಿಆರ್ ಸಲ್ಲಿಕೆ ಮಾಡದೇ ಇದ್ದರೆ ಹೆಚ್ಚಿನ ಟಿಡಿಎಸ್ ಕಡಿತ ಆಗಲಿದೆ. ನೂತನ ನಿಯಮದ ಪ್ರಕಾರ, ಉದ್ಯೋಗಿ ಕಳೆದ 2 ವರ್ಷದಿಂದ ಟಿಡಿಎಸ್ ಕ್ಲೇಮ್ ಮಾಡಿಕೊಳ್ಳದೇ ಇದ್ದರೆ, ಆತ/ ಆಕೆಯ ವೇತನದಿಂದ ದುಪಟ್ಟು ಟಿಡಿಎಸ್ ಕಡಿತ ಮಾಡುವುದು ಕಂಪನಿಗಳ ಜವಾಬ್ದಾರಿ ಆಗಿದೆ.
ಟಿಡಿಎಸ್ ಸಲ್ಲಿಕೆ ದಿನಾಂಕ ಜೂ.30ರವರೆಗೆ ವಿಸ್ತರಣೆ! ...
ಉದಾಹರಣೆಗೆ ಪ್ರಸ್ತುತ ಶೇ.10ರಷ್ಟುಟಿಡಿಎಸ್ ಕಡಿತ ಆಗುತ್ತಿದ್ದರೆ ಶೇ.20ರಷ್ಟುಟಿಡಿಎಸ್ ಕಡಿತಗೊಳ್ಳಲಿದೆ. ಆದರೆ, ಇದು ದಂಡ ಇಲ್ಲ. ಆದಾಯ ತೆರಿಗೆ ಪಾವತಿ ವೇಳೆ ಸೂಕ್ತ ದಾಖಲೆಗಳನ್ನು ನೀಡಿ ಕಡಿತಗೊಂಡಿರುವ ಟಿಡಿಎಸ್ ಅನ್ನು ಮರಳಿ ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
2020-21ನೇ ಸಾಲಿನ ಟಿಡಿಎಸ್ ಪಾವತಿಗೆ ಜೂ.30 ಕೊನೆಯ ದಿನವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.