
ನವದೆಹಲಿ(ಜ.05): ಇನ್ನೇನು 2,000 ಮುಖ ಬೆಲೆಯ ಹೊಸ ನೋಟುಗಳು ಬಂದಾಗಲಿವೆ ಎಂಬ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದೆ.
ಈ ಮಧ್ಯೆ 2,000 ಮುಖಬೆಲೆಯ ನೋಟುಗಳು ಬಂದ್ ಆಗುವುದಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಸ್ಪಷ್ಟಪಡಿಸಿದ್ದಾರೆ.
2000 ಮುಖಬೆಲೆಯ ನೋಟುಗಳನ್ನು ಪ್ರಿಂಟ್ ಮಾಡುವುದನ್ನು ಬಂದ್ ಮಾಡಲಾಗುತ್ತದೆ ಎಂಬುದು ಕೇವಲ ವದಂತಿ ಎಂದಿರುವ ಗರ್ಗ್, 2,000 ಮುಖಬೆಲೆಯ ಹೊಸ ನೋಟುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಚಲಾವಣೆಯಲ್ಲಿವೆ ಎಂದು ತಿಳಿಸಿದ್ದಾರೆ.
ಅಲ್ಲದೇ 2,000 ಮುಖ ಬೆಲೆಯ ನೊಟುಗಳ ಪ್ರಿಂಟಿಂಗ್ ಕೂಡ ಈ ಮೊದಲಿನ ಪ್ರಮಾಣದಲ್ಲಿಯೇ ನಡೆಯುತ್ತಿದ್ದು, ಯಾರೂ ಆತಂಕ ಪಡಬೇಕಿಲ್ಲ ಎಂದು ಗರ್ಗ್ ಮನವಿ ಮಾಡಿದ್ದಾರೆ.
2,000 ಮುಖ ಬೆಲೆಯ ನೋಟುಗಳ ಪ್ರಿಂಟಿಂಗ್ ಸ್ಥಗಿತಗೊಳಿಸುವ ಯಾವುದೇ ಇರಾದೆ ಸರ್ಕಾರ ಅಥವಾ ಆರ್‌ಬಿಐಗೆ ಇಲ್ಲ ಎಂದು ಗರ್ಗ್ ಸ್ಪಷ್ಟಪಡಿಸಿದ್ದಾರೆ.
2,000 ರೂಪಾಯಿ ಮೌಲ್ಯದ ನೋಟು ಮುದ್ರಣ ಬಹುತೇಕ ಬಂದ್!: ಮುಂದೇನು?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.