ಚೀಸ್ ತಿಂದು ಮಲಗೋ ಕೆಲಸಕ್ಕೆ ಸಿಗ್ತಿದೆ 81 ಸಾವಿರ ರೂ ವೇತನ!

By Suvarna NewsFirst Published Jan 30, 2023, 1:40 PM IST
Highlights

ಚೀಸ್ ಎಲ್ಲರಿಗೂ ಇಷ್ಟ. ನಿದ್ರೆ ಬಗ್ಗೆ ಕೇಳೋದೇ ಬೇಡ. ಎರಡೂ ಒಟ್ಟಿಗೆ ಸಿಕ್ಕಿದ್ರೆ ಅದ್ರ ಮಜವೇ ಬೇರೆ. ಇನ್ನು ಇದ್ರ ಜೊತೆ ನಿಮಗೆ ಸಂಬಳ ಅಂತ ಹಣ ಸಿಕ್ಕಿದ್ರೆ ಬಿಡ್ತಿರಾ? ಈಗ ಇಂಥದ್ದೊಂದು ಕೆಲಸಕ್ಕೆ ಕಂಪನಿ ಉದ್ಯೋಗಿಗಳ ಹುಡುಕಾಟ ನಡೆಸಿದೆ.
 

ಇಡೀ ದಿನ ಕೆಲಸ ಮಾಡಿ ಜನರು ಬೇಸತ್ತಿರುತ್ತಾರೆ. ಕಂಪ್ಯೂಟರ್ ಮುಂದೆ ಕುಳಿತು ಒಂದೇ ಕೆಲಸ ಮಾಡೋದು ಕೆಲವರಿಗೆ ಬೋರ್ ಎನ್ನಿಸಿದ್ರೆ ಸುತ್ತಾಡಿ, ಜನರನ್ನು ಸಂತೈಸಿ ಮಾಡುವ ಕೆಲಸ ಮತ್ತೆ ಕೆಲವರಿಗೆ ಬೇಸರತರಿಸಿರುತ್ತದೆ. ಆರಾಮವಾಗಿ ಒಂದ್ಕಡೆ ಕುಳಿತು, ಆಹಾರ ಸೇವನೆ ಮಾಡ್ತಾ ಹಣ ಗಳಿಸುವ ಕೆಲಸ ಸಿಕ್ಕಿದ್ರೆ ಎಷ್ಟು ಚೆನ್ನಾಗಿತ್ತು ಅಂತಾ ಅನೇಕರು ಕನಸು ಕಾಣ್ತಾರೆ. ನೀವು ಕೂಡ ಆರಾಮ (Comfort ) ವಾಗಿ ಆಹಾರ (Food) ಸೇವನೆ ಮಾಡ್ತಾ ಹಣ (Money) ಗಳಿಸುವ ಆಸೆಯಲ್ಲಿದ್ದರೆ ಒಂದು ಅವಕಾಶವಿದೆ. ನೀವು ಚೀಸ್ ತಿಂದು ರಾತ್ರಿ (Night) ಆರಾಮವಾಗಿ ಮಲಗಿದ್ರೆ ಸಾಕು. ನಿಮ್ಮ ಕೈಗೆ ಸಂಬಳ ಬರುತ್ತದೆ. ನಾವಿಂದು ಇಂಥ ಕೆಲಸ ನೀಡ್ತಿರುವ ಕಂಪನಿ ಯಾವುದು, ಅದ್ರ ಉದ್ದೇಶವೇನು ಎಂಬುದನ್ನು ನಿಮಗೆ ಹೇಳ್ತೆವೆ.

ಚೀಸ್ ತಿನ್ನುವ ಕೆಲಸ : ಊಟ ಮಾಡೋದು, ಮಲಗೋದು ಯಾರಿಗೆ ಇಷ್ಟವಾಗಲ್ಲ ಹೇಳಿ. ಈ ಕೆಲಸ ಮಾಡಿಯೂ ಹಣ ಸಿಕ್ಕಿದ್ರೆ ಖುಷಿ ಡಬಲ್ ಆಗುತ್ತೆ. ನಿಮಗೆ ಚೀಸ್ ಇಷ್ಟವಾಗಿದ್ರೆ ಮಲಗುವ ಮುನ್ನ ಚೀಸ್ ತಿನ್ನಿ. ಆಮೇಲೆ ಆರಾಮವಾಗಿ ಮಲಗಿ. ಬೆಳಿಗ್ಗೆ ಎದ್ದು, ಹಿಂದಿನ ರಾತ್ರಿ ನಿದ್ರೆ ಹೇಗಿತ್ತು ಎಂಬುದನ್ನು ವಿವರಿಸಿ. ಅಷ್ಟೆ. ನಿಮ್ಮ ಕೆಲಸ ಮುಗಿತು. 

ಮನೆ ಖರೀದಿ ಯೋಚನೆ ಇದೆಯಾ? ಡೌನ್ ಪೇಮೆಂಟ್ ಗೆ ಉಳಿತಾಯ ಮಾಡಲು ಇಲ್ಲಿವೆ ಟಿಪ್ಸ್

ಚೀಸ್ ತಿಂದು ಮಲಗಿದ್ರೆ ಕಾಡಲ್ಲ ದುಃಸ್ವಪ್ನ : ರಾತ್ರಿ ಚೀಸ್ ತಿಂದು ಮಲಗಿದ್ರೆ ದುಃಸ್ವಪ್ನ ಕಾಡುತ್ತೆ  ಎಂಬುದು ಯುರೋಪಿಯನ್ ಸಿದ್ಧಾಂತವಾಗಿದೆ. ಮ್ಯಾಟ್ರೆಸ್ ರಿವ್ಯೂ ಕಂಪನಿಯು ಈ ಯುರೋಪಿಯನ್ ಸಿದ್ಧಾಂತವನ್ನು ಪರೀಕ್ಷಿಸಲು ಹೊರಟಿದೆ. ಇದಕ್ಕಾಗಿ ಕೆಲವರಿಗೆ ಕೆಲಸ ಮಾಡುವ ಅವಕಾಶ ನೀಡ್ತಿದೆ. ಜನರ ನಿದ್ರೆಯ ಮಾದರಿಗಳನ್ನು ಅಧ್ಯಯನ ಮಾಡುವುದು ಈ ಕಂಪನಿ ಉದ್ದೇಶವಾಗಿದೆ.  

ಅಧ್ಯಯನಕ್ಕೆ ಬೇಕು ಇಷ್ಟು ಜನ : ಇದಕ್ಕೆ ಸ್ಲೀಪ್ ಜಂಕಿ ಅಧ್ಯಯನಕ್ಕಾಗಿ ಐದು ಜನರು ಹುಡುಕಾಟ ನಡೆಸುತ್ತಿದೆ. ಮೂರು ತಿಂಗಳ ಕಾಲ ಈ ಅಧ್ಯಯನ ನಡೆಯಲಿದೆ. ಮಲಗುವ ಮೊದಲು ಪ್ರತಿದಿನ ಚೀಸ್ ತಿನ್ನಬೇಕಾಗುತ್ತದೆ. ಪ್ರಯೋಗದಲ್ಲಿ ಭಾಗವಹಿಸುವ ಐದು ಜನರು ಚೀಸ್ ತಿಂದ ನಂತರ ಅವರ ನಿದ್ರೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಉದಾಹರಣೆಗೆ ನಿದ್ರೆಯ ಗುಣಮಟ್ಟ ಹೇಗಿತ್ತು, ಕನಸು ಹೇಗಿತ್ತು, ಇಡೀ ದಿನದ ಶಕ್ತಿಯ ಮಟ್ಟ ಹೇಗಿತ್ತು ಮತ್ತು ಚೀಸ್ ತಿನ್ನುವುದರಿಂದ ದುಃಸ್ವಪ್ನಗಳು ಕಾಡಿದವೇ ಎಂಬುದನ್ನು ತಿಳಿಸಬೇಕಾಗುತ್ತದೆ. 

ತಿನ್ನುಲು ನೀಡಲಾಗುತ್ತೆ ಈ ವಸ್ತು : ಮೊದಲೇ ಹೇಳಿದಂತೆ ಇದು ಚೀಸ್ ಗೆ ಸಂಬಂಧಿಸಿದ ಅಧ್ಯಯನ. ಇದ್ರಲ್ಲಿ ಜನರಿಗೆ ಬೇರೆ ಬೇರೆ ರೀತಿಯ ಚೀಸ್ ನೀಡಲಾಗುತ್ತದೆ. ನೀಲಿ ಚೀಸ್, ಹಾರ್ಡ್ ಚೀಸ್, ಮೃದುವಾದ ಚೀಸ್ ಮತ್ತು ಸಂಸ್ಕರಿಸಿದ ಚೀಸ್ ಸೇರಿವೆ. ಸಸ್ಯಾಹಾರಿ ಮತ್ತು ಲ್ಯಾಕ್ಟೋಸ್ ಮುಕ್ತ ಚೀಸ್ ಆಯ್ಕೆಗಳು ಸಹ ಇರುತ್ತವೆ. ಈ ಅಧ್ಯಯನದಲ್ಲಿ ಪಾಲ್ಗೊಳ್ಳುವ ಜನರು ಪ್ರತಿ ರಾತ್ರಿ ಮಲಗುವ ಮುನ್ನ ವಿಭಿನ್ನ ಚೀಸ್ ತಿನ್ನಬೇಕು. ಅದೂ ಒಂದು ವಾರದವರೆಗೆ. ಈ ಪ್ರಕ್ರಿಯೆಯು ಮೂರು ತಿಂಗಳವರೆಗೆ ಮುಂದುವರಿಯುತ್ತದೆ. ಚೀಸ್ ಪ್ರಯೋಗಗಳ ನಡುವೆ ಒಂದು ವಾರದ ವಿರಾಮವನ್ನು ನೀಡಲಾಗುತ್ತದೆ. ನಿಖರವಾದ ಫಲಿತಾಂಶಕ್ಕಾಗಿ ಹೀಗೆ ಮಾಡಲಾಗುತ್ತದೆ. 

UNION BANK RECRUITMENT 2023: ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ

ಅಧ್ಯಯನದಲ್ಲಿ ಪಾಲ್ಗೊಳ್ಳುವವರ ಸಂಬಳ ಹಾಗೂ ವಯಸ್ಸು : ಕಂಪನಿಯು ಕನಿಷ್ಠ 21 ವರ್ಷದ 5 ಜನರನ್ನು ಹುಡುಕುತ್ತಿದೆ. ಅವರು ಸ್ಮಾರ್ಟ್ ವಾಚ್‌ಗಳು ಅಥವಾ ಫಿಟ್‌ನೆಸ್ ಟ್ರ್ಯಾಕರ್‌ಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರಬೇಕು. ಇದರಿಂದ ಅವರು ನಿದ್ರೆಯನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು ಎನ್ನುತ್ತದೆ ಕಂಪನಿ. ಒಂಟಿಯಾಗಿ ಮಲಗಬಲ್ಲ ಹಾಗೂ ನಿದ್ರೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಲ್ಲದ ವ್ಯಕ್ತಿ ಇದ್ರಲ್ಲಿ ಪಾಲ್ಗೊಳ್ಳಬಹುದು. ಹಾಗೆಯೇ ಡೈರಿ ಅಥವಾ ಲ್ಯಾಕ್ಟೋಸ್‌ ಅಲರ್ಜಿ ಹೊಂದಿರಬಾರದು. ಕಂಪನಿ ಉದ್ಯೋಗಿಗೆ  1000 ಡಾಲರ್ ಅಂದ್ರೆ ಸುಮಾರು 81,515  ರೂಪಾಯಿ ನೀಡುತ್ತಿದೆ.  

click me!
Last Updated Jan 30, 2023, 1:40 PM IST
click me!