ಎಷ್ಟೇ ವಿದ್ಯಾವಂತರಾಗಿದ್ರೂ ಮಕ್ಕಳಿಗೆ ಕಲಿಸುವ ಕಲೆ ತಿಳಿದಿರೋದಿಲ್ಲ. ಮಕ್ಕಳ ತಲೆಯಲ್ಲಿ ವಿದ್ಯೆಯನ್ನು ಹೇಗೆ ತುಂಬಬೇಕು ಎಂಬುದು ನಿಮಗೆ ಗೊತ್ತಿದ್ರೆ ತಡ ಮಾಡ್ಬೇಡಿ. ಖಾಲಿ ಕುಳಿತುಕೊಳ್ಳುವ ಬದಲು ಹಣ ಸಂಪಾದನೆ ಶುರು ಮಾಡಿ.
ಈಗ ಯಾವ ಮಕ್ಕಳಿಗೆ ಟ್ಯೂಷನ್ ಬೇಡ ಹೇಳಿ?. ಈಗಷ್ಟೆ ಶಾಲೆ ಮೆಟ್ಟಿಲು ಹತ್ತಿರುವ ಐದು ವರ್ಷದ ಮಗುವಿನಿಂದ ಐಎಎಸ್ ಪರೀಕ್ಷೆಗೆ ಸಿದ್ಧತೆ ಮಾಡ್ತಿರುವವರು ಕೂಡ ಟ್ಯೂಷನ್ ಆಶ್ರಯಿಸಿದ್ದಾರೆ. ಈ ಟ್ಯೂಷನ್ ಅನೇಕರ ಬಾಳಿಗೆ ಆದಾಯದ ಮೂಲವಾಗಿದೆ. ನೀವು ವಿದ್ಯಾವಂತರಾಗಿದ್ದು, ಹಣ ಗಳಿಸಲು ಸ್ವಂತ ಉದ್ಯೋಗ ಶುರು ಮಾಡುವ ಆಲೋಚನೆಯಲ್ಲಿದ್ದರೆ ಟ್ಯೂಷನ್ ಸೆಂಟರ್ ತೆರೆಯಬಹುದು. ನಾವಿಂದು ಟ್ಯೂಷನ್ ಹಾಗೂ ಅದ್ರ ಆದಾಯದ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಟ್ಯೂಷನ್ (Tuition) ಕ್ಲಾಸ್ ಶುರು ಮಾಡೋದು ಹೇಗೆ? : ಮೊದಲನೇಯದಾಗಿ ನೀವು ಟ್ಯೂಷನ್ ಶುರು ಮಾಡುವ ಮುನ್ನ ಯಾರಿಗೆ ಟ್ಯೂಷನ್ ಹೇಳ್ತಿರಿ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಎಲ್ಲ ವಯಸ್ಸಿನ ಮಕ್ಕಳನ್ನು ರೂಮಿನಲ್ಲಿ ಕೂಡಿಹಾಕಿಕೊಂಡು ಕಲಿಸಲು ಸಾಧ್ಯವಿಲ್ಲ. ಇದ್ರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ (Education) ಸಿಗುವುದಿಲ್ಲ. ಕ್ರಮೇಣ ನಿಮ್ಮ ಟ್ಯೂಷನ್ ಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ನೀವು ಕಡಿಮೆ ಓದಿದ್ದರೆ ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಮಾತ್ರ ಟ್ಯೂಷನ್ ಹೇಳಬಹುದು. ಹೆಚ್ಚಿಗೆ ಕಲಿತಿದ್ದೇವೆ, ಕಲಿಸುವ ಸಾಮರ್ಥ್ಯ ಹೊಂದಿದ್ದೇವೆ ಎನ್ನುವವರು ಅವರ ಶಿಕ್ಷಣ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ದೊಡ್ಡ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಬಹುದು.
ಆರಂಭದಲ್ಲಿ ಯಾವಾಗ್ಲೂ ಮನೆಯಿಂದಲೇ ಕೆಲಸ ಶುರು ಮಾಡುವುದು ಒಳ್ಳೆಯದು. ಇದ್ರಿಂದ ನೀವು ಕಟ್ಟಡಕ್ಕೆ ನೀಡುವ ಬಾಡಿಗೆ (Rent) ಉಳಿಯುತ್ತದೆ. ನಿಮ್ಮ ಮನೆಯಲ್ಲಿಯೇ ಬ್ಯಾಚ್ ಮಾಡಿ ನೀವು ಕಲಿಸಲು ಶುರು ಮಾಡಿ. ದಿನಕ್ಕೆ 4 ಬ್ಯಾಚ್ ನಲ್ಲಿ ನೀವು ಮಕ್ಕಳಿಗೆ ಕಲಿಸಬಹುದು. ಸುಮಾರು 2 ಗಂಟೆಗಳ ಕಾಲ ಟ್ಯೂಷನ್ ಮಾಡಿದ್ರೆ ಮಕ್ಕಳಿಗೆ ವಿಷ್ಯವನ್ನು ಮನದಟ್ಟು ಮಾಡ್ಬಹುದು. ನೀವು ಸಣ್ಣ ಮಕ್ಕಳಿಗೆ ಮೂರ್ನಾಲ್ಕು ವಿಷ್ಯ ಕಲಿಸಬಹುದು. ದೊಡ್ಡವರಿಗಾದ್ರೆ ಒಂದು ಅಥವಾ ಎರಡು ವಿಷ್ಯ ಮಾತ್ರ ತೆಗೆದುಕೊಳ್ಳಿ. ಬೇರೆ ಸಬ್ಜೆಕ್ಟ್ ಬರೋದಿಲ್ಲ ಎನ್ನುವವರು ಮಾತೃಭಾಷೆಯನ್ನು ಮಾತ್ರ ಕಲಿಸಿ ಹಣಗಳಿಸಬಹುದು.
ಈಗಿನ ದಿನಗಳಲ್ಲಿ ನಮ್ಮ ಕರ್ನಾಟಕದಲ್ಲಿರುವ ಎಷ್ಟೋ ಜನರಿಗೆ ಕನ್ನಡ ಬರ್ತಿಲ್ಲ. ಅವರಿಗೆ ಕನ್ನಡ ಕಲಿಸುವ ಮೂಲಕ ನೀವು ಆದಾಯ ಗಳಿಸಬಹುದು. ನೀವು ಆನ್ಲೈನ್ ನಲ್ಲಿ ಕೂಡ ಟ್ಯೂಷನ್ ತೆಗೆದುಕೊಳ್ಳಬಹುದು. ಈ ಕೊರೊನಾ ವೈರಸ್ ಸಮಯದಲ್ಲಿ ಹೆಚ್ಚಿನ ಮಕ್ಕಳು ಆನ್‌ಲೈನ್ ಕೋಚಿಂಗ್ ಮೂಲಕ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಅಂದಿನಿಂದ ಆನ್‌ಲೈನ್ ಕೋಚಿಂಗ್ ಸೆಂಟರ್‌ಗಳ ಬೇಡಿಕೆ ಮತ್ತಷ್ಟು ಹೆಚ್ಚಿದೆ. ನೀವು ನಿಮ್ಮ ಹೋಮ್ ಕೋಚಿಂಗ್ ಸೆಂಟರ್ ಅನ್ನು ಆನ್‌ಲೈನ್ ಕೋಚಿಂಗ್ ಸೆಂಟರ್ ಆಗಿ ಪರಿವರ್ತಿಸಿದರೆ ಇದರಿಂದ ನೀವು ಉತ್ತಮ ಹಣವನ್ನೂ ಗಳಿಸಬಹುದು.
ಕೋಚಿಂಗ್ ಸೆಂಟರ್ ಪ್ರಸಿದ್ಧಿಗೆ ಹೀಗೆ ಮಾಡಿ : ಕೋಚಿಂಗ್ ಸೆಂಟರ್ ವಿಸ್ತರಿಸಬೇಕೆಂದ್ರೆ ನೀವು ಸಣ್ಣ ಜಾಗವನ್ನ ಬಾಡಿಗೆಗೆ ಪಡೆದು ಶುರು ಮಾಡಬಹುದು. ಮನೆಯಲ್ಲಿಯೇ ದೊಡ್ಡ ಜಾಗವಿದ್ರೆ ಒಂದರೆಡು ಜನರನ್ನು ಕೆಲಸಕ್ಕೆ ನೇಮಿಸಿಕೊಂಡು ಅವರಿಂದ ಶಿಕ್ಷಣ ಕೊಡಿಸಬಹುದು.
Business Ideas: ಬಾಯಿ ಚಪ್ಪರಿಸಿ ತಿನ್ನುವ ಫಾಸ್ಟ್ ಫುಡ್ ಬ್ಯುಸಿನೆಸ್ ಮಾಡಿ ಹಣ ಗಳಿಸಿ
ಹೋಮ್ ಟ್ಯೂಷನ್ ಗೆ ಎಷ್ಟು ಹೂಡಿಕೆ ಮಾಡಬೇಕು ? : ನಿಮ್ಮ ಮನೆಯಿಂದ ನಿಮ್ಮ ಹೋಮ್ ಟ್ಯೂಷನ್ ವ್ಯವಹಾರವನ್ನು ನೀವು ಪ್ರಾರಂಭಿಸುತ್ತಿದ್ದರೆ ಅದಕ್ಕಾಗಿ ನೀವು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಅಗತ್ಯವಿಲ್ಲ. ನಿಮಗೆ ಕೇವಲ ಒಂದು ಕೊಠಡಿ ಮಾತ್ರ ಬೇಕಾಗುತ್ತದೆ. ಅದು ನಿಮ್ಮ ಮನೆಯಲ್ಲಿರುತ್ತದೆ. ಇದಲ್ಲದೆ ನೀವು ವೈಟ್‌ಬೋರ್ಡ್, ಮಾರ್ಕರ್ ಪೆನ್ ಇತ್ಯಾದಿಗಳನ್ನು ಹೊಂದಿರಬೇಕು. ದೊಡ್ಡ ಪ್ರಮಾಣದಲ್ಲಿ ಶುರು ಮಾಡುವುದಿದ್ರೆ ಕಟ್ಟಡದ ಬಾಡಿಗೆ, ಅಲ್ಲಿ ಖುರ್ಚಿ ವ್ಯವಸ್ಥೆ ಸೇರಿದಂತೆ ಸ್ವಲ್ಪ ಹಣ ಹೂಡಬೇಕಾಗುತ್ತದೆ.
Business Ideas: ಆಯಿಲ್ ಮಿಲ್ ಶುರು ಮಾಡಿ ಕೈತುಂಬ ಲಾಭಗಳಿಸಿ
ಟ್ಯೂಷನ್ ನಿಂದ ಲಾಭವೆಷ್ಟು? : ಆರಂಭದಲ್ಲಿ ಚಿಕ್ಕ ಮಕ್ಕಳಿಗೆ ಕಲಿಸುವಾಗ ಬೋಧನಾ ಶುಲ್ಕವನ್ನು ಕಡಿಮೆ ಇಟ್ಟುಕೊಳ್ಳಬೇಕು. ಏಕೆಂದರೆ ಆ ಸಮಯದಲ್ಲಿ ನಿಮಗೆ ಕಲಿಸಲು ಹೆಚ್ಚಿನ ಅನುಭವ ಇರುವುದಿಲ್ಲ. 8 ರಿಂದ 10ನೇ ತರಗತಿಯ ಮಕ್ಕಳಿಂದ 2000 ಶುಲ್ಕವನ್ನು ನೀವು ಪಡೆಯಬಹುದು. ಅನುಭವ ಹೆಚ್ಚಾದಂತೆ ನೀವು ಹೆಚ್ಚು ಹಣ ಪಡೆಯಬಹುದು. ಹಾಗೆಯೇ ಮಕ್ಕಳ ಸಂಖ್ಯೆ ಹೆಚ್ಚಾದಂತೆ ನಿಮ್ಮ ಗಳಿಕೆ ಹೆಚ್ಚಾಗುತ್ತದೆ. ನೀವು ಸುಲಭವಾಗಿ ಸುಮಾರು 20-30 ಸಾವಿರ ರೂಪಾಯಿ ಗಳಿಸಬಹುದು.