ಟೊಮೆಟೊ ತುಂಬಿಕೊಂಡು ಕೋಲಾರದಿಂದ ರಾಜಸ್ಥಾನಕ್ಕೆ ಹೊರಟಿದ್ದ ಲಾರಿ ನಾಪತ್ತೆ: ರೈತರು ಕಂಗಾಲು

By Sathish Kumar KH  |  First Published Jul 30, 2023, 3:36 PM IST

ಕೋಲಾರದ ಮಾರುಕಟ್ಟೆಯಿಂದ 21 ಲಕ್ಷ ರೂ. ಮೌಲ್ಯದ ಟೊಮೆಟೊಗಳನ್ನು ಲೋಡ್‌ ಮಾಡಿ ರಾಜಸ್ಥಾನದ ಜೈಪುರಕ್ಕೆ ಕಳುಹಿಸಿದ್ದ ಟೊಮೆಟೊ ಲಾರಿ ಮಾರ್ಗ ಮಧ್ಯದಲ್ಲಿಯೇ ನಾಪತ್ತೆಯಾಗಿದೆ.


ಕೋಲಾರ (ಜು.30): ಇಡೀ ದೇಶದಲ್ಲಿ ಟೊಮೆಟೊಗೆ ಬಂಗಾರದ ಬೆಲೆಯಿದೆ. ಹೀಗಾಗಿ ಟೊಮೆಟೊ ಬೆಳೆಗಾರರು ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಆದರೆ, ಕೋಲಾರದ ಮಾರುಕಟ್ಟೆಯಿಂದ 21 ಲಕ್ಷ ರೂ. ಮೌಲ್ಯದ ಟೊಮೆಟೊಗಳನ್ನು ಲೋಡ್‌ ಮಾಡಿ ರಾಜಸ್ಥಾನದ ಜೈಪುರಕ್ಕೆ ಕಳುಹಿಸಿದ್ದ ಟೊಮೆಟೊ ಲಾರಿ ಮಾರ್ಗ ಮಧ್ಯದಲ್ಲಿಯೇ ನಾಪತ್ತೆಯಾಗಿದೆ. ಲಕ್ಷಾಂತರ ರೂ, ಮೌಲ್ಯದ ಟೊಮೆಟೊ ಲಾರಿ ಎಲ್ಲಿದೆ ಎಂಬುದು ಗೊತ್ತಾಗದೇ ವ್ಯಾಪಾರಿಗಳು ಕಂಗಾಲಾಗಿದ್ದಾನೆ.

ಕೋಲಾರದಿಂದ ರಾಜಾಸ್ಥಾನಕ್ಕೆ ಹೊರಟಿದ್ದ ಟೊಮ್ಯಾಟೊ ಲಾರಿ ನಾಪತ್ತೆಯಾಗಿದೆ. ಕೋಲಾರ ಮಾರುಕಟ್ಟೆಯಿಂದ ರಾಜಸ್ಥಾನ ರಾಜ್ಯದ ಜೈಪುರ ನಗರಕ್ಕೆ ಲಾರಿ ಹೊರಟಿತ್ತು. ಕೋಲಾರದ ಮೆಹತ್ ಟ್ರಾನ್ಸ್ ಪೋರ್ಟ್ ಗೆ ಸೇರಿದ ಲಾರಿಯು ಜುಲೈ-27 ರಂದು ಹೊರಟಿದ್ದು, ಈಗಾಗಲೇ ರಾಜಾಸ್ಥಾನದ ಜೈಪುರ್‌ಗೆ ತಲುಪಬೇಕಿತ್ತು. ಆದರೆ, ಲಾರಿ ಸಮೇತವಾಗಿ ಡ್ರೈವರ್ ನಾಪತ್ತೆಯಾಗಿದ್ದಾನೆ. ಎಷ್ಟೇ ಕರೆ ಮಾಡಿದರೂ ಚಾಲಕ ಫೋನ್‌ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಲ್ಲಿ ಸುಮಾರು ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ತುಂಬಲಾಗಿತ್ತು. ಇದರಿಂದ ಆತಂಕದಲ್ಲಿರುವ ಮಂಡಿ ಮಾಲೀಕ ಕೋಲಾರ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 

Latest Videos

undefined

Bengaluru crime: ವಾಹನ ಸಮೇತ ಟೊಮೆಟೋ ದೋಚಿದ್ದ ದಂಪತಿ ಸೆರೆ

ಕೋಲಾರ ಮಾರುಕಟ್ಟೆಯ ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರು ಜಂಟಿಯಾಗಿ ಲಾರಿಯಲ್ಲಿ ಟೊಮೆಟೊ ತುಂಬಿ ಜೈಪುರ ನಗರಕ್ಕೆ ಕಳುಹಿಸುತ್ತಿದ್ದರು. ಇನ್ನು ನಿಮ್ಮ ಲಾರಿ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಮೆಹತ್ ಟ್ರಾನ್ಸ್‌‌ ಪೋರ್ಟ್ ಮಾಲೀಕ ಸಾಧಿಕ್ ಅವರನ್ನು ಸಂಪರ್ಕ ಮಾಡಲು ಮುಂದಾದರೂ ಇತ್ತ ಟ್ರಾನ್ಸ್‌ಪೋರ್ಟ್‌ ಮಾಲೀಕನೂ ಸಂಪರ್ಕಕ್ಕೂ ಸಿಗದೆ ನಾಪತ್ತೆ ಆಗಿದ್ದಾನೆ. ಇದರಿಂದ ಅನುಮಾನಗೊಂಡು ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಟೊಮೆಟೋ ತುಂಬಿದ್ದ ವಾಹನವನ್ನೇ ಕದ್ದ ಚಾಲಾಕಿ ದಂಪತಿ: ಬೆಂಗಳೂರಿನಲ್ಲಿ ಇತ್ತೀಚೆಗೆ (ಜು.22ರಂದು) ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಸಮೀಪ ಕಾರು ಅಪಘಾತದ ನೆಪದಲ್ಲಿ ರೈತರಿಂದ ಸರಕು ಸಾಗಾಣಿಕೆ ವಾಹನ ಸಮೇತ ಎರಡು ಟನ್‌ ಟೊಮೆಟೋ ಕಳವು ಮಾಡಿದ್ದ ತಮಿಳುನಾಡು ಮೂಲದ ಚಾಲಾಕಿ ದಂಪತಿಯನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ರಾಜ್ಯದ ವೆಲ್ಲೂರು ಜಿಲ್ಲೆಯ ಅಂಬೂರು ಸಮೀಪದ ವನಿಯಂಬಾಡಿ ನಿವಾಸಿಗಳಾದ ಭಾಸ್ಕರನ್‌ ಹಾಗೂ ಆತನ ಪತ್ನಿ ಸಿಂಧುಜಾ ಬಂಧಿತರಾಗಿದ್ದು, ಆರೋಪಿಗಳಿಂದ ಬೊಲೆರೋ ಪಿಕ್‌ಆಪ್‌, ಎಕ್ಸ್‌ಯುವಿ 509 ಕಾರು ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ. ಈ ಕೃತ್ಯದ ಬಳಿಕ ತಪ್ಪಿಸಿಕೊಂಡಿರುವ ಸುಂಕದಟ್ಟೆಯ ರಾಕೇಶ್‌, ಮಹೇಶ್‌ ಹಾಗೂ ತಮಿಳುನಾಡಿನ ಕುಮಾರ್‌ ಪತ್ತೆಗೆ ತನಿಖೆ ನಡೆದಿತ್ತು.

ಕಳ್ಳರಿಗೆ ಸಿಕ್ಕಿದ್ದು 1.5 ಲಕ್ಷ ರೂ:  ಇನ್ನು ರೈತರಿಂದ 2 ಲಕ್ಷ ರೂಪಾಯಿ ಮೌಲ್ಯದ 2 ಸಾವಿರ ಕೆಜಿ ಟೊಮೆಟೋ ಕದ್ದ ದಂಪತಿ ತಮಿಳುನಾಡಿನ ಮಾರುಕಟ್ಟೆಯಲ್ಲಿ ಮಾಡಿ ಬರೋಬ್ಬರಿ 1.5 ಲಕ್ಷ ರೂ.ಗಳನ್ನು ಸಂಪಾದನೆ ಮಾಡಿದ್ದರು. ಆದರೆ, ಈ ಟೊಮೆಟೋ ಕಳ್ಳತನ ಮಾಡಿದ್ದ ದಂಪತಿಯನ್ನು ಸೆರೆ ಹಿಡಿಯಲು ಪೊಲೀಸರು ಸುಮಾರು 1 ಲಕ್ಷ ರೂ. ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ, ಸಾಮಾನ್ಯವಾಗಿ ಎಲ್ಲರೂ ಬಳಸುವಂತಹ ತರಕಾರಿ ಟೊಮೆಟೊಗೆ ದುಬಾರಿ ಬೆಲೆ ಆಗಿರುವುದೇ ಇದಕ್ಕೆಲ್ಲ ಕಾರಣ ಆಗುತ್ತಿದೆ. ಮತ್ತೊಂದೆಡೆ ಇನ್ನೂ ಒಂದು ತಿಂಗಳ ಕಾಲ ಟೊಮೆಟೊ ಬೆಲೆ ಇಳಿಕೆ ಮುನ್ಸೂಚನೆ ಸಿಗುತ್ತಿಲ್ಲ.

ಟೊಮೆಟೋ ದರ ಏರಿಕೆ ಹಿನ್ನೆಲೆ: ಸಸಿಗಳಿಗೆ ಹೆಚ್ಚಿದ ಬೇಡಿಕೆ

ಕೋಲಾರದಲ್ಲಿ ಟೊಮೆಟೊ ಬಾಕ್ಸ್‌ ಕಳ್ಳತನ: ಮತ್ತೊಂದೆಡೆ ಇದೇ ಕೋಲಾರ ನಗರದ ಟೊಮೆಟೋ ಮಾರುಕಟ್ಟೆಯಲ್ಲಿ ಟೊಮೆಟೊ ಬಾಕ್ಸ್‌ ಕಳ್ಳತನ ಮಾಡಿ ಹೊತ್ತುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ದೇಶಾದ್ಯಂತ ಟೊಮೆಟೊ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ, ಟೊಮೆಟೊ ಹಣ್ಣು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯ ಐಎನ್‌ಆರ್‌ ಮಂಡಿಯಲ್ಲಿ ಟೊಮೆಟೊ ಕದಿಯುವ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶನಿವಾರ ರಾತ್ರಿ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳ್ಳ ಸುತ್ತಮುತ್ತ ನೋಡಿ ಒಂದು ಬಾಕ್ಸ್ ಟೊಮೆಟೊ  ಹೊತ್ತುಕೊಂಡು ಹೋಗಿದ್ದಾನೆ. ಈ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. 

click me!