ಇಂದು ನಮ್ಮೆಲ್ಲರ ಬಳಿ ಎಟಿಎಂ ಕಾರ್ಡ್ ಇದೆ. ಆದರೆ, ಎಟಿಎಂ ಕಾರ್ಡ್ ಹೊಂದಿರೋರಿಗೆ ವಿಮಾ ಕವರೇಜ್ ಕೂಡ ಸಿಗುತ್ತದೆ ಎಂಬ ಮಾಹಿತಿ ಮಾತ್ರ ನಮ್ಮಲ್ಲಿ ಬಹುತೇಕರಿಗೆ ತಿಳಿದಿಲ್ಲ. ಎಟಿಎಂ ಕಾರ್ಡ್ ಹೊಂದಿರೋರಿಗೆ ಅವರ ಖಾತೆಗಳಲ್ಲಿನ ವಹಿವಾಟುಗಳನ್ನು ಆಧರಿಸಿ ಬ್ಯಾಂಕ್ ಗಳು 50,000ರೂ.ನಿಂದ 10ಲಕ್ಷ ರೂ. ತನಕ ಅಪಘಾತ ವಿಮಾ ಕವರೇಜ್ ಒದಗಿಸುತ್ತವೆ.
Business Desk:ಇಂದು ಬ್ಯಾಂಕ್ ಖಾತೆ ಹೊಂದಿರುವ ಎಲ್ಲರ ಬಳಿ ಎಟಿಎಂ ಕಾರ್ಡ್ ಇದ್ದೇ ಇರುತ್ತದೆ. ಹಾಗೆಯೇ ಎಟಿಎಂ ಕಾರ್ಡ್ ಪ್ರಯೋಜನದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ನಿಮ್ಮ ಬಳಿ ಎಟಿಎಂ ಕಾರ್ಡ್ ಇದ್ದರೆ ಹಣಕ್ಕಾಗಿ ಈ ಹಿಂದಿನಂತೆ ಬ್ಯಾಂಕ್ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಚಲನ್ ಭರ್ತಿ ಮಾಡಬೇಕಾಗಿಯೂ ಇಲ್ಲ. ಹಣದ ಅಗತ್ಯ ಬಿದ್ದಾಗ ರಜಾದಿನಗಳಂದು ಕೂಡ ಎಟಿಎಂ ಕೇಂದ್ರಗಳಿಗೆ ಹೋಗಿ ಹಣ ವಿತ್ ಡ್ರಾ ಮಾಡಬಹುದು. ಅಷ್ಟೇ ಏಕೆ ಎಟಿಎಂ ಕಾರ್ಡ್ ಪರ್ಸ್ ನಲ್ಲಿದ್ರೆ ನಗದಿನ ಅಗತ್ಯವೂ ಇಲ್ಲ. ಖರೀದಿ ಬಳಿಕ ಕಾರ್ಡ್ ಬಳಸಿ ಪಾವತಿ ಮಾಡಬಹುದು. ಆನ್ ಲೈನ್ ಶಾಪಿಂಗ್ ತಾಣಗಳಲ್ಲೂ ಎಟಿಎಂ ಕಾರ್ಡ್ ಬಳಸಿ ಪಾವತಿ ಮಾಡಬಹುದು. ಎಟಿಎಂ ಕಾರ್ಡ್ ನ ಈ ಎಲ್ಲ ಪ್ರಯೋಜನಗಳ ಬಗ್ಗೆ ನಮಗೆ ತಿಳಿದೇ ಇದೆ. ಆದರೆ, ಎಟಿಎಂ ಕಾರ್ಡ್ ದಾರರಿಗೆ ವಿಮೆ ಕವರೇಜ್ ಕೂಡ ಸಿಗುತ್ತದೆ ಎಂಬುದು ನಿಮಗೆ ತಿಳಿದಿದೆಯಾ? ಎಟಿಎಂ ಕಾರ್ಡ್ ಹೊಂದಿರುವ ಬಹುತೇಕರಿಗೆ ಈ ವಿಷಯ ತಿಳಿದಿಲ್ಲ. ಸಾರ್ವಜನಿಕ ಹಾಗೂ ಖಾಸಗಿ ವಲಯದ ಎಲ್ಲ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಆರೋಗ್ಯ ವಿಮೆ ಕವರೇಜ್ ಒದಗಿಸುತ್ತವೆ. ಅಪಘಾತದಿಂದ ಆಸ್ಪತ್ರೆ ಸೇರಿದ್ದರೆ ಅಥವಾ ಮರಣ ಹೊಂದಿದ್ರೆ ವಿಮೆ ಕವರೇಜ್ ಒದಗಿಸುತ್ತದೆ.
ಗ್ರಾಹಕರ ಖಾತೆಗಳಲ್ಲಿನ ವಹಿವಾಟುಗಳನ್ನು ಆಧರಿಸಿ ಬ್ಯಾಂಕ್ ಗಳು 50,000ರೂ.ನಿಂದ 10ಲಕ್ಷ ರೂ. ತನಕ ಅಪಘಾತ ವಿಮಾ ಕವರೇಜ್ ಒದಗಿಸುತ್ತವೆ. ಆದರೆ, ಬಹುತೇಕರು ಎಟಿಎಂ ವಿಮಾ ಕವರೇಜ್ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗೋದಿಲ್ಲ. ಬ್ಯಾಂಕ್ ಗಳು ಕೂಡ ಎಟಿಎಂ ವಿಮಾ ಕವರೇಜ್ ಬಗ್ಗೆ ಮಾಹಿತಿ ನೀಡುವ ಗೋಜಿಗೆ ಹೋಗೋದಿಲ್ಲ. ಆದರೆ, ಈಗ ಬಹುತೇಕ ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ಹೊಂದಿರೋರಿಗೆ ವಿಮಾ ಕವರೇಜ್ ಬಗ್ಗೆ ಮಾಹಿತಿ ನೀಡುತ್ತಿವೆ. ಎಟಿಎಂ ಕಾರ್ಡ್ ಹೊಂದಿರುವ ವ್ಯಕ್ತಿಯ ಖಾತೆ ನಿಷ್ಕ್ರಿಯವಾಗಿದ್ರೆ ವಿಮೆಯನ್ನು ಬ್ಯಾಂಕ್ ಹಿಂಪಡೆಯಬಹುದು.
ಮನೆ ಖರೀದಿಯಲ್ಲಿ ಪತ್ನಿ ಪಾಲುದಾರಳೇ? ಹಾಗಿದ್ರೆ ಆಸ್ತಿ ಆದಾಯ ತೆರಿಗೆಯಲ್ಲೂ ಆಕೆಗೆ ಪಾಲಿದೆ!
ಮರಣ ಹೊಂದಿದ ವ್ಯಕ್ತಿಗೆ ವಿಮೆ ಕ್ಲೇಮ್ ಹೇಗೆ?
ಎಟಿಎಂ ಕಾರ್ಡ್ ಹೊಂದಿರುವ ವ್ಯಕ್ತಿ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ವಿಮೆ ಕ್ಲೈಮ್ ಮಾಡಲು ಸಾಧ್ಯವಿದೆ. ಇದಕ್ಕಾಗಿ ನೀವು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಹಾಗೆಯೇ ಆ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರೆ ಎಲ್ಲ ವೈದ್ಯಕೀಯ ವರದಿಗಳನ್ನು ಸಂಗ್ರಹಿಸಬೇಕು. ಒಂದು ವೇಳೆ ವ್ಯಕ್ತಿ ಸಾವನ್ನಪ್ಪಿದರೆ ಆತನ ಸಂಬಂಧಿಕರ ಬಳಿ ಪೋಸ್ಟ್ ಮಾರ್ಟ್ಂ ವರದಿ, ಪೊಲೀಸ್ ವರದಿ, ಮರಣ ಪ್ರಮಾಣಪತ್ರ ಹಾಗೂ ಮೃತ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ಇರಬೇಕು. ಕಳೆದ 60 ದಿನಗಳಲ್ಲಿ ಕಾರ್ಡ್ ಹೊಂದಿರೋರು ಎಟಿಎಂ ಕಾರ್ಡ್ ಬಳಸಿ ನಡೆಸಿದ ಕೆಲವು ವಹಿವಾಟುಗಳ ಬಗ್ಗೆ ಬ್ಯಾಂಕಿಗೆ ಮಾಹಿತಿ ನೀಡಬೇಕು.
ಸೆಬಿಯಲ್ಲಿ ನೋಂದಾಯಿತ ತೆರಿಗೆ ಹಾಗೂ ಹೂಡಿಕೆ ತಜ್ಞರ ಪ್ರಕಾರ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅಪಘಾತ ಮರಣ ವಿಮೆಯು ಆ ವ್ಯಕ್ತಿ ಬಳಸುತ್ತಿರುವ ಕಾರ್ಡ್ ಮಾದರಿಯನ್ನು ಅವಲಂಬಿಸಿ 30,000 ರೂ. ನಿಂದ 10 ಲಕ್ಷ ರೂ. ತನಕ ಇರುತ್ತದೆ.
ಪ್ಯಾನ್ ಕಾರ್ಡ್ ಕಳೆದು ಹೋಗಿದೆಯಾ? ಡೋಂಟ್ ವರಿ, ಮರು ಅರ್ಜಿ ಸಲ್ಲಿಕೆ ಮಾಡಿ
ಮದುವೆ ವಿಮೆ : ಮದುವೆ ಮುಂದೂಡಲ್ಪಟ್ರೆ ಹಾಲ್ ಬುಕ್ಕಿಂಗ್ ಹಣ ಹಿಂದೆ ಬರುವುದಿಲ್ಲ. ಇಂತಹ ಸಂದರ್ಭಗಳನ್ನು ಎದುರಿಸಲು ದೇಶದ ಹಲವು ವಿಮಾ ಕಂಪನಿಗಳು ವಿವಾಹ ವಿಮೆಯನ್ನು ನೀಡುತ್ತವೆ. ಮದುವೆ ವಿಮೆಯನ್ನು (wedding insurance)ನೀವು ಪಡೆದಿದ್ದರೆ ನಿಮಗೆ 10 ಲಕ್ಷ ರೂಪಾಯಿ ಸಿಗುತ್ತದೆ. ಮದುವೆ ವಿಮೆ ಮಾಡಿಸಿದ್ದು,ಮದುವೆ ರದ್ದಾದಲ್ಲಿ ನಿಮಗೆ ವಿಮಾ ಕಂಪನಿಗಳು (Insurance Companies) ಹಣ ನೀಡುತ್ತವೆ. ಮುಂಗಡ ಡಿಎಯನ್ನು ಅಡುಗೆದಾರರಿಗೆ ಪಾವತಿಸಿದ್ದರೆ, ಹಾಲ್ ಅಥವಾ ರೆಸಾರ್ಟ್‌ಗೆ ಮುಂಗಡ ಹಣ ನೀಡಿದ್ದರೆ, ಟ್ರಾವೆಲ್ ಏಜೆನ್ಸಿಗಳಿಗೆ ಮುಂಗಡ ಹಣವನ್ನು ನೀಡಿದ್ದರೆ, ಮದುವೆ ಕಾರ್ಡ್ಗಳ ಮುದ್ರಣಕ್ಕೆ ಹಣ ಪಾವತಿಸಿದ್ದರೆ, ಅಲಂಕಾರ ಮತ್ತು ಸಂಗೀತಕ್ಕಾಗಿ ಪಾವತಿಸಿದ ಹಣ, ಮದುವೆಯ ಸ್ಥಳದ ಡೆಕೋರೇಷನ್ ಗಾಗಿ ಹಣ ನೀಡಿದ್ದರೆ ಈ ಹಣವನ್ನು ವಿಮಾ ಕಂಪನಿಗಳು ನಿಮಗೆ ಹಿಂತಿರುಗಿಸುತ್ತವೆ.