80 ಸಾವಿರ ಮೌಲ್ಯದ ಐಷಾರಾಮಿ ಶೂ ಖರೀದಿಸಿದವನಿಗೆ ಸಂಕಷ್ಟ: ಕೋರ್ಟ್ ಮೊರೆ ಹೋದ ಗ್ರಾಹಕ

Published : Apr 10, 2023, 01:23 PM IST
80 ಸಾವಿರ ಮೌಲ್ಯದ ಐಷಾರಾಮಿ ಶೂ ಖರೀದಿಸಿದವನಿಗೆ ಸಂಕಷ್ಟ: ಕೋರ್ಟ್ ಮೊರೆ ಹೋದ ಗ್ರಾಹಕ

ಸಾರಾಂಶ

ಇಲ್ಲೊಂದು ಕಡೆ ಯುವಕನೋರ್ವ ಬರೋಬ್ಬರಿ 80 ಸಾವಿರ ಮೌಲ್ಯದ ಶೂವೊಂದನ್ನು ಟ್ರಯಲ್ ನೋಡದೇ ಖರೀದಿಸಿದ್ದು, ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಮುಂಬೈ: ಒಳ ಉಡುಪುಗಳ ಹೊರತುಪಡಿಸಿ ಸಾಮಾನ್ಯವಾಗಿ ನಾವು ಧರಿಸುವ ಯಾವುದೇ ವಸ್ತುವನ್ನು ಖರೀದಿಸುವ ಮೊದಲು ನಮ್ಮ ದೇಹಕ್ಕಿದ್ದು ಸರಿ ಹೊಂದುವುದೇ ಎಂದು ಧರಿಸಿ ನೋಡಿ, ಅಥವಾ ಪರಿಶೀಲಿಸಿ ನೋಡಿ ವಸ್ತುಗಳನ್ನು ಬಟ್ಟೆ ಬರೆ ಚಪ್ಪಲಿಗಳನ್ನು ಖರೀದಿಸಬೇಕು. ಇದಕ್ಕಾಗಿಯೇ ಬಹುತೇಕ ಬಟ್ಟೆ ಶಾಪ್‌ಗಳಲ್ಲಿ ಟ್ರಯಲ್ ರೂಮ್‌ಗಳಿರುತ್ತವೆ. ಚಪ್ಪಲಿ ಅಂಗಡಿಗಳಲ್ಲಿ ಧರಿಸಿ ನೋಡುವ ಅವಕಾಶವಿರುತ್ತದೆ. ಅದರಲ್ಲೂ ಅತೀ ದುಬಾರಿ ವಸ್ತುಗಳನ್ನು  ಖರೀದಿಸುವಾಗ ಹತ್ತು ಹಲವು ಬಾರಿ ಯೋಚನೆ ಮಾಡೇಕು. ಆದರೆ ಇಲ್ಲೊಂದು ಕಡೆ ಯುವಕನೋರ್ವ ಬರೋಬ್ಬರಿ 80 ಸಾವಿರ ಮೌಲ್ಯದ ಶೂವೊಂದನ್ನು ಟ್ರಯಲ್ ನೋಡದೇ ಖರೀದಿಸಿದ್ದು, ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಮುಂಬೈನ ಯುವಕನೋರ್ವ ಫ್ರೆಂಚ್ ಐಷಾರಾಮಿ ಬ್ರಾಂಡ್  ಲೂಯಿಸ್ ವಿಟಾನ್‌ನ ಶೂವೊಂದನ್ನು (French luxury brand Louis Vuitton) ಖರೀದಿಸಿದ್ದಾರೆ. ಆದರೆ ಖರೀದಿಸುವ ಮುನ್ನಅವರು ಶಾಪ್‌ನಲ್ಲಿ ಅದನ್ನು ಕಾಲಿಗೆ ಹಾಕಿ ಸರಿ ಹೊಂದುತ್ತದೆಯೋ ಇಲ್ಲವೋ ಎಂದು ನೋಡದೇ  ಸೀದಾ ಖರೀದಿಸಿ ಮನೆಗೆ ತಂದಿದ್ದಾರೆ. ನಂತರ ಮನೆಯಲ್ಲಿ ಕಾಲಿಗೆ ಹಾಕಿ ನೋಡಿದಾಗ ಇದು ತಮ್ಮ ಕಾಲಿಗೆ ಸರಿ ಹೊಂದುವುದಿಲ್ಲ ಎಂದು ಅವರಿಗೆ ಅನಿಸಿದೆ. ಕೂಡಲೇ ಅವರು ಶಾಪ್‌ಗೆ ಹೋಗಿ ಈ ಶೂವನ್ನು ವಾಪಸ್‌ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಆದರೆ ಅಂಗಡಿಯವರು ಇದನ್ನು ವಾಪಸ್ ಪಡೆಯಲು ನಿರಾಕರಿಸಿದ್ದು, ಇದರಿಂದ ಸಿಟ್ಟಿಗೆದ್ದ  ಯುವಕ ಅಂಗಡಿ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಮತ್ತೊಂದು ಕಾಸ್ಟ್ಲಿಯೆಸ್ಟ್‌ ಚಿಂದಿಯೊಂದಿಗೆ ಬಂದ Balenciaga: ಕಿವಿಯೋಲೆ ಬೆಲೆ ಕೇಳಿದ್ರೆ ದಂಗಾಗ್ತೀರಾ

ಮುಂಬೈನ ಕೊಲಬಾ ಪ್ರದೇಶದಲ್ಲಿರುವ ಲೂಯಿಸ್ ವಿಟಾನ್‌ನ ಔಟ್‌ಲೆಟ್‌ನಿಂದ ಅವರು ಶೂ ಖರೀದಿಸಿದ್ದಾರೆ.  ಆದರೆ ಈಗ ಸಂಸ್ಥೆ ಆ ಶೂಗಳು ಮಾರಾಟ ಮಾಡಲಾಗದ ಸ್ಥಿತಿಯಲ್ಲಿದೆ ಎಂದು ಹೇಳಿ ವಾಪಸ್ ಪಡೆಯಲು ನಿರಾಕರಿಸಿದ್ದಾರೆ.  ಒಂದೆರಡು ರೂಪಾಯಿಯ ಮಾಲಾದರೆ ಹೋಗಲಿ ಎಂದು ಸುಮ್ಮನಿರಬಹುದು. ಆದರೆ ಒಂದು ಸಾವಿರವೂ ಅಲ್ಲ ಎರಡು ಸಾವಿರವೂ ಅಲ್ಲ ಬರೋಬ್ಬರಿ 80 ಸಾವಿರ ಮೌಲ್ಯದ ಶೂಗಳು, ಸೋ ಸುಮ್ಮನಿರಲೂ ಹೇಗೆ ಸಾಧ್ಯ ಹೇಳಿ.

ಹೀಗಾಗಿ ಶೂ ಖರೀದಿಸಿದ ಮಲಾಡ್ ಜಾವೇದ್ ಅಜಮ್‌ ಎಂಬುವವರು ಈಗ ಮುಂಬೈನ ಗ್ರಾಹಕ ನ್ಯಾಯಾಲಯಕ್ಕೆ ತೆರಳಿ ಲೂಯಿ ವಿಟಾನ್ ಇಂಡಿಯಾ ರಿಟೇಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ದೂರು ದಾಖಲಿಸಿದ್ದಾರೆ.  ಗ್ರಾಹಕ ನ್ಯಾಯಾಲಯದಲ್ಲಿ ಜಾವೇದ್ ಅಜಮ್‌ (Jawed Azam) ನೀಡಿದ ದೂರಿನ ಪ್ರಕಾರ,  ಕೊಲಬಾದ ಲೂಯಿ ವಿಟಾನ್ ಇಂಡಿಯಾ ಔಟ್‌ಲೆಟ್‌ನಲ್ಲಿ ಅವರು ಅಲ್ಲಿನ ಸೇಲ್ಸ್‌ಮ್ಯಾನ್ ಸಲಹೆಯಂತೆ ಶೂ ಖರೀದಿಸಿದ್ದಾರೆ. ಜಾವೇದ್ ಅವರ ಕಾಲಿನ ಸೈಜ್ ನೋಡಿ ಶೂ ಖರೀದಿಸಲಾಗಿತ್ತು.  ಅಲ್ಲದೇ ಖರೀದಿದಾರನಾಗಿ ಜಾವೇದ್ ಅವರು ಬೆಂಗಳೂರಿಗೆ ಹೋಗುವುದಕ್ಕಾಗಿ  ಬಹಳ ಅರ್ಜೆಂಟಿನಲ್ಲಿದ್ದು,  ಅಲ್ಲಿ ಅವರು ಟ್ರಯಲ್ ನೋಡಿರಲಿಲ್ಲ. 

ಆದರೆ ವಿಮಾನ ನಿಲ್ದಾಣವನ್ನು ತಲುಪಿದ ನಂತರ, ಅವರು ಅಲ್ಲಿ ಅದನ್ನು ಹಾಕಲು ಪ್ರಯತ್ನಿಸಿದ್ದು, ಆಗ ಅವರಿಗೆ ಶೂಗಳ ಗಾತ್ರ ಬೇರೆ ಬೇರೆಯಾಗಿರುವುದ ಗಮನಕ್ಕೆ ಬಂದಿದೆ. ಹೀಗಾಗಿ ಅವರು ಬೆಂಗಳೂರು ತಲುಪಿದ ನಂತರ ಮತ್ತೊಂದು ಶೂ ಖರೀದಿಸಿದ್ದು,  ಈ ಶೂವನ್ನು ಬಳಸದೇ ಇಟ್ಟುಕೊಂಡಿದ್ದರು.  ನಂತರ ಅವರು ಮುಂಬೈಗೆ ಮರಳಿದ ನಂತರ ಶೂವನ್ನು ಮರಳಿ ಔಟ್‌ಲೆಟ್‌ಗೆ ನೀಡಲು ಹೋಗಿದ್ದಾರೆ.  ಆದರೆ  ಸಂಸ್ಥೆ, ಈ ಶೂ ಮರು ಮಾರಾಟ ಮಾಡಲು ಉತ್ತಮ ಸ್ಥಿತಿಯಲ್ಲಿಲ್ಲದ ಕಾರಣ ಅದನ್ನು ಮರಳಿ ಪಡೆದು ಹಣ ವಾಪಸ್‌ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ಕಿತ್ತೋಗಿರೋ ಶೂಗಳ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ

ಜನವರಿ 2021ರಲ್ಲಿ ಈ ಘಟನೆ ನಡೆದಿದ್ದು, ಸೆಪ್ಟೆಂಬರ್ 2021ರಲ್ಲಿ ಯುವಕ ಕೇಸ್‌ ದಾಖಲಿಸಿದ್ದರು. ಇತ್ತೀಚೆಗೆ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಗ್ರಾಹಕರ ನ್ಯಾಯಾಲಯ ಖರೀದಿದಾರರಿಗೆ 'ಸೌಹಾರ್ದಯುತ ಪರಿಹಾರ' (amicable solution) ನೀಡುವಂತೆ ಲೂಯಿಸ್ ವಿಟಾನ್ ಇಂಡಿಯಾವನ್ನು ಕೇಳಿದೆ.  ಆದರೆ ಈ ವಿಚಾರವನ್ನು ಸಾಬೀತುಪಡಿಸುವ ವಿಚಾರ ದೂರುದಾರರ ಮೇಲಿದೆ ಎಂದು ಆಯೋಗ ಹೇಳಿದೆ.  ತಮ್ಮ ಪ್ರಕರಣವನ್ನು ಸರಿಯಾಗಿ ಮತ್ತು ಸೂಕ್ತ ದಾಖಲೆಗಳ ಬೆಂಬಲದೊಂದಿಗೆ ಸಾಬೀತುಪಡಿಸುವ ಜವಾಬ್ದಾರಿ ದೂರುದಾರರ ಮೇಲಿದೆ. ದೂರುದಾರರು ಶೂವನ್ನು ಯಾವ ಸ್ಥಿತಿಯಲ್ಲಿದೆ ಸಲ್ಲಿಸಲಿದ್ದಾರೆ ಎಂಬುದನ್ನು ಆಯೋಗವೂ ಗಮನಿಸಲಿದೆ ಎಂದು ಹೇಳಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!