ದೀಪಾವಳಿಗೆ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ ಎಸ್ ಬಿಐ; ಎಫ್ ಡಿ ಬಡ್ಡಿದರ ಶೇ.0.80ಕ್ಕೆ ಏರಿಕೆ

Published : Oct 22, 2022, 06:36 PM IST
ದೀಪಾವಳಿಗೆ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ ಎಸ್ ಬಿಐ; ಎಫ್ ಡಿ ಬಡ್ಡಿದರ ಶೇ.0.80ಕ್ಕೆ ಏರಿಕೆ

ಸಾರಾಂಶ

ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುವ ಮೂಲಕ ಎಸ್ ಬಿಐ ದೀಪಾವಳಿ ಹಬ್ಬಕ್ಕೆ ಗ್ರಾಹಕರ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್ ಡಿಗಳಿಗೆ ಬಡ್ಡಿದರವನ್ನು ಶೇ. 0.8ರಷ್ಟು ಏರಿಕೆ ಮಾಡಿದೆ.   

ನವದೆಹಲಿ (ಅ.22): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗ್ರಾಹಕರಿಗೆ ದೀಪಾವಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಎಸ್ ಬಿಐ ಸ್ಥಿರ ಠೇವಣಿಗಳ (ಎಫ್ ಡಿ) ಮೇಲಿನ ಬಡ್ಡಿದರವನ್ನು ಗರಿಷ್ಠ 80 ಮೂಲಾಂಕಗಳಷ್ಟು ಅಂದ್ರೆ ಶೇ.0.8ರಷ್ಟು ಏರಿಕೆ ಮಾಡಿದೆ. ಈ ಹೊಸ ದರವು 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್ ಡಿಗಳಿಗೆ ಅನ್ವಯಿಸಲಿದ್ದು, ಅಕ್ಟೋಬರ್ 22ರಿಂದಲೇ (ಶನಿವಾರದಿಂದಲೇ) ಜಾರಿಗೆ ಬರಲಿದೆ. ಎಸ್ ಬಿಐ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಎಫ್ ಡಿ ಬಡ್ಡಿದರ ಹೆಚ್ಚಳ 25 ಮೂಲಾಂಕಗಳಿಂದ 80 ಮೂಲಾಂಕಗಳ ತನಕ ಇರಲಿದೆ.  ಎಸ್ ಬಿಐ ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತಿರೋದು ಈ ತಿಂಗಳಲ್ಲಿ ಇದು ಎರಡನೇ ಬಾರಿ. ಈ ಹಿಂದೆ ಅಕ್ಟೋಬರ್ 15ರಂದು ಎಸ್ ಬಿಐ ಎಫ್ ಡಿ ಮೇಲಿನ ಬಡ್ಡಿದರವನ್ನು 20 ಮೂಲಾಂಕಗಳಷ್ಟು ಹೆಚ್ಚಳ ಮಾಡಿತ್ತು.  ಹಿರಿಯ ನಾಗರಿಕರಿಗೆ ಕೂಡ ಇದರಿಂದ ಸಾಕಷ್ಟು ಪ್ರಯೋಜನ ಸಿಗಲಿದೆ. 

211 ದಿನಗಳಿಂದ 1 ವರ್ಷದ ಅವಧಿಯೊಳಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ 80 ಮೂಲಾಂಕಗಳಷ್ಟು ಏರಿಕೆಯಾಗಿದೆ.ಇದ್ರಿಂದ ಬಡ್ಡಿದರ ಶೇ.4.70ದಿಂದ ಶೇ.5.50ಗೆ ಹೆಚ್ಚಳವಾಗಿದೆ. ಇನ್ನು 180ರಿಂದ 210ದಿನಗಳ ಅವಧಿಯ ಎಫ್ ಡಿ ದರ ಶೇ.5.25ಕ್ಕೆ ಏರಿಕೆಯಾಗಿದೆ. 2 ವರ್ಷಕ್ಕಿಂತ ಹೆಚ್ಚಿನ ಹಾಗೂ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ ಡಿ ಬಡ್ಡಿದರ ಶೇ.6.25ಕ್ಕೆ ಏರಿಕೆಯಾಗಿದೆ. 46ರಿಂದ 179 ದಿನಗಳ ಅವಧಿಯ ಎಫ್ ಡಿಗೆ ಬಡ್ಡಿದರ ಶೇ.4.50ಗೆ ಹೆಚ್ಚಳವಾಗಿದೆ. 180ರಿಂದ 210 ದಿನಗಳ ಅವಧಿಯ ಎಫ್ ಡಿ ಶೆ.5.25, 211 ದಿನಗಳಿಂದ 1 ವರ್ಷದೊಳಗಿನ ಸ್ಥಿರ ಠೇವಣಿ ಬಡ್ಡಿದರ ಶೇ.5.50, 1ರಿಂದ 2 ವರ್ಷಗಳ ಅವಧಿಯ ಎಫ್ ಡಿಗೆ ಶೇ.6.10, 2ರಿಂದ 3 ವರ್ಷಗಳ ಅವಧಿಯ ಎಫ್ ಡಿಗೆ ಶೇ.6.25, 3ರಿಂದ 5 ವರ್ಷಗಳ ಅವಧಿಯ ಹಾಗೂ 5ರಿಂದ 10 ವರ್ಷಗಳ ಎಫ್ ಡಿಗೆ ಶೇ.6.10 ಬಡ್ಡಿದರ ನಿಗದಿಪಡಿಸಲಾಗಿದೆ. 

ದೀಪಾವಳಿ ಬೋನಸ್ ಸಿಕ್ತಾ? ಆ ಹಣವನ್ನುಇಲ್ಲಿ ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ!

ಹಿರಿಯ ನಾಗರಿಕರ ಎಫ್ ಡಿ
ಹಿರಿಯ ನಾಗರಿಕರ ಆಯ್ದ ಸ್ಥಿರ ಠೇವಣಿಗಳ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ. 46 ದಿನಗಳಿಂದ 179 ದಿನಗಳ ಅವಧಿಯ ಸ್ಥಿರ ಠೇವಣಿ ಬಡ್ಡಿದರವನ್ನು ಶೇ. 4.50 ರಿಂದ ಶೇ. 5ಕ್ಕೆ ಹೆಚ್ಚಿಸಲಾಗಿದೆ. 180 ದಿನಗಳಿಂದ 210 ದಿನಗಳ ತನಕದ ಎಫ್ ಡಿ ಬಡ್ಡಿದರವನ್ನು ಶೇ. 5.15ರಿಂದ ಶೇ. 5.75ಕ್ಕೆ ಏರಿಕೆ ಮಾಡಲಾಗಿದೆ.  3ರಿಂದ 5 ವರ್ಷಗಳ ಸ್ಥಿರ ಠೇವಣಿಗೆ ಶೇ.6.60, 5ರಿಂದ 10 ವರ್ಷಗಳ ಸ್ಥಿರ ಠೇವಣಿಗೆ ಶೇ.6.90 ಬಡ್ಡಿದರ ನಿಗದಿಪಡಿಸಲಾಗಿದೆ. ಇನ್ನು ಎಸ್ ಬಿಐ ಸಿಬ್ಬಂದಿ ಹಾಗೂ ಪಿಂಚಣಿದಾರರು ನಿಗದಿತ ಬಡ್ಡಿದರಕ್ಕಿಂತ ಶೇ.1ರಷ್ಟು ಹೆಚ್ಚಿನ ಬಡ್ಡಿದರ ಪಡೆಯಲಿದ್ಧಾರೆ. 

ಕೆಲವು ದಿನಗಳ ಹಿಂದೆ ಎಸ್ ಬಿಐ 10 ಕೋಟಿ ರೂ. ಹಾಗೂ ಅದಕ್ಕಿಂತ ಜಾಸ್ತಿ ಮೊತ್ತದ ಎಫ್ ಡಿ ಮೇಲಿನ ಬಡ್ಡಿದರವನ್ನು ಶೇ. 5.65ರಿಂದ ಶೇ. 5.85ಗೆ ಹೆಚ್ಚಳ ಮಾಡಿತ್ತು.  

Personal Finance : ದೀಪಾವಳಿಗೆ ಹಣ ಹೂಡಿಕೆ ಮಾಡುವ ಮುನ್ನ ಇವಿಷ್ಟು ಗೊತ್ತಿರಲಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸೆಪ್ಟೆಂಬರ್ 30ರಂದು ರೆಪೋ ದರವನ್ನು  ಶೇ. 5.4 ರಿಂದ ಶೇ. 5.9ಕ್ಕೆ ಹೆಚ್ಚಳ ಮಾಡಿತ್ತು. ರೆಪೋ ದರ ಹೆಚ್ಚಳ ಮಾಡಿದ ಪರಿಣಾಮ ವಿವಿಧ ಬ್ಯಾಂಕುಗಳು ಕೂಡ ಎಫ್ ಡಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿವೆ.  ಸೆ.30ರಂದು ಆರ್ ಬಿಐ ರೆಪೋ ದರವನ್ನು ಶೇ.0.50ರಷ್ಟು ಹೆಚ್ಚಳ ಮಾಡಿತ್ತು. ಇದರಿಂದ ರೆಪೋ ದರ ಶೇ.5.9ಕ್ಕೆ ಹೆಚ್ಚಳವಾಗಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ನಿಯಂತ್ರಣ ಹಾಕಲು ಆರ್ ಬಿಐ ಈ ವರ್ಷ ಸತತ ನಾಲ್ಕು ಬಾರಿ ರೆಪೋ ದರ ಹೆಚ್ಚಳ ಮಾಡಿದೆ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ