
ದೀಪಾವಳಿ ಸಂದರ್ಭದಲ್ಲಿ ಜನರು ಬಂಗಾರ, ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಖರೀದಿ ಮಾಡ್ತಾರೆ. ಹಾಗೆಯೇ ಕೆಲವರು ಬ್ಯಾಂಕ್ ನಲ್ಲಿ ಹಣ ಠೇವಣಿಯಿಡಲು ಬಯಸ್ತಾರೆ. ನೀವೂ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಮಾಡಲು ನಿರ್ಧರಿಸಿದ್ದರೆ ಕೆಲ ವಿಷ್ಯಗಳನ್ನು ತಿಳಿಯಬೇಕಾಗುತ್ತದೆ. ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ ಮಾಡುವುದು ಹೂಡಿಕೆಗೆ ಒಳ್ಳೆಯ ಮಾರ್ಗ. ಆದ್ರೆ ಯಾವ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ ಮಾಡಿದ್ರೆ ಒಳ್ಳೆಯದು ಎಂಬುದನ್ನು ತಿಳಿಯಬೇಕು. ಯಾವ ಬ್ಯಾಂಕ್ ಸ್ಥಿರ ಠೇವಣಿಗೆ ಎಷ್ಟು ಬಡ್ಡಿ ನೀಡುತ್ತದೆ ಎಂಬುದನ್ನು ಗ್ರಾಹಕರು ತಿಳಿಯಬೇಕು.
ಮೇ 2022 ರಿಂದ ಬ್ಯಾಂಕ್ (Bank) ನಿರಂತರವಾಗಿ ಎಫ್ ಡಿ (FD) ಬಡ್ಡಿದರಗಳನ್ನು ಹೆಚ್ಚಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೂಡ ರೆಪೋ (Repo) ದರವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಸೆಪ್ಟೆಂಬರ್ 30ರಂದು ಆರ್ ಬಿಐ ಬ್ಯಾಂಕ್ ರೆಪೋ ದರ ಹೆಚ್ಚಾಗಿದೆ. ಆರ್ ಬಿಐ ರೆಪೋ ದರ ಹೆಚ್ಚಿಸಿದ ನಂತ್ರ ಕೆಲ ಬ್ಯಾಂಕ್ ಗಳು ಬಡ್ಡಿ ದರದಲ್ಲಿ ಬದಲಾವಣೆ ಮಾಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಹೆಚ್ ಡಿ ಎಫ್ ಬ್ಯಾಂಕ್ (HDFC Bank) ,ಆಕ್ಸಿಸ್ ಬ್ಯಾಂಕ್ (Axis Bank) ಮತ್ತು ಐಸಿಐಸಿಐ ಬ್ಯಾಂಕ್ ಇತ್ತೀಚೆಗೆ ಸ್ಥಿರ ಠೇವಣಿಗಳ ಬಡ್ಡಿದರವನ್ನು ಹೆಚ್ಚಿಸಿವೆ. ನಾವಿಂದು ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡ್ತಿದೆ ಎಂಬುದನ್ನು ಹೇಳ್ತೇವೆ.
ಸ್ಥಿರ ಠೇವಣಿ ಮೇಲೆ ಐಸಿಐಸಿಐ ಬ್ಯಾಂಕ್ ನೀಡುತ್ತೆ ಇಷ್ಟು ಬಡ್ಡಿ : ಐಸಿಐಸಿಐ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಬ್ಯಾಂಕ್ ಎಫ್‌ಡಿಗಳಿಗೆ ಶೇಕಡಾ 3 ರಿಂದ 6.20 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ ಶೇಕಡಾ 3.50 ರಿಂದ 6.75 ರವರೆಗೆ ಬಡ್ಡಿಯನ್ನು ನೀಡುತ್ತಿದೆ.
Business Idea : ಅಮೂಲ್ ಫ್ರಾಂಚೈಸಿ ಪಡೆದು ಹೀಗೆ ಗಳಿಕೆ ಶುರು ಮಾಡಿ
ಸ್ಥಿರ ಠೇವಣಿ ಮೇಲೆ ಎಸ್ಬಿಐ ಬ್ಯಾಂಕ್ ನೀಡುತ್ತೆ ಇಷ್ಟು ಬಡ್ಡಿ? : ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 20 ಮೂಲಾಂಶಗಳವರೆಗೆ ಎಫ್ ಡಿ ಬಡ್ಡಿದರಗಳನ್ನು ಹೆಚ್ಚಿಸಿದೆ. ಎಸ್‌ಬಿಐ ಸಾಮಾನ್ಯ ಗ್ರಾಹಕರಿಗೆ ಶೇಕಡಾ 3ರಿಂದ ಶೇಕಡಾ 5.85ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡಾ 3.50ರಿಂದ ಶೇಕಡಾ 6.65ರಷ್ಟು ಬಡ್ಡಿಯನ್ನು ನೀಡುತ್ತದೆ. ಈ ಬಡ್ಡಿ 7 ದಿನಗಳಿಂದ 10 ವರ್ಷಗಳಲ್ಲಿ ಮುಕ್ತಾಯಗೊಳ್ಳುವ ಎಫ್‌ಡಿಗಳಿಗೆ ಅನ್ವಯಿಸುತ್ತದೆ.
HDFC ಬ್ಯಾಂಕ್ ಬಡ್ಡಿ ಹೀಗಿದೆ : ಎಚ್‌ಡಿಎಫ್‌ಸಿ ಬ್ಯಾಂಕ್ ಚಿಲ್ಲರೆ ಹೂಡಿಕೆದಾರರಿಗೆ ಎಫ್‌ಡಿ ಬಡ್ಡಿದರಗಳನ್ನು 75 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಿದೆ. 7 ದಿನಗಳಿಂದ 10 ವರ್ಷಗಳಲ್ಲಿ ಪೂರ್ಣಗೊಳ್ಳುವ ಎಫ್‌ಡಿಯಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇಕಡಾ 3ರಿಂದ ಶೇಕಡಾ 6 ರವರೆಗೆ ಬಡ್ಡಿ ಸಿಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಪೂರ್ಣಗೊಳ್ಳುವ ಎಫ್‌ಡಿ ಮೇಲೆ ಶೇಕಡಾ 3.50ರಿಂದ ಶೇಕಡಾ 6.75 ರಷ್ಟು ಬಡ್ಡಿ ಸಿಗುತ್ತದೆ.
8ನೆಯ ತರಗತಿ ಫೇಲ್ ಆದ ವ್ಯಕ್ತಿ ಇಂದು ದೊಡ್ಡ ಹೋಟೆಲ್ ಉದ್ಯಮಿ!
ಆಕ್ಸಿಸ್ ಬ್ಯಾಂಕ್ ಸ್ಥಿರ ಠೇವಣಿ ಮೇಲೆ ನೀಡುತ್ತೆ ಇಷ್ಟು ಬಡ್ಡಿ : ಇನ್ನು ಆಕ್ಸಿಸ್ ಬ್ಯಾಂಕ್ ಕೂಡ FD Interest ದರಗಳನ್ನು ಹೆಚ್ಚಿಸಿದೆ. ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಸಾಮಾನ್ಯ ಜನರಿಗೆ ಶೇಕಡಾ 3.50ರಿಂದ ಶೇಕಡಾ 6.10ರಷ್ಟು ಬಡ್ಡಿಯನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳವರೆಗಿನ ಸ್ಥಿರ ಠೇವಣಿ ಮೇಲೆ ಶೇಕಡಾ 3.50ರಿಂದ ಶೇಕಡಾ 6.85ರವರೆಗೆ ಬಡ್ಡಿಯನ್ನು ನೀಡುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.