ಬಿಲಿಯನೇರ್ ಮುಕೇಶ್ ಅಂಬಾನಿ ಫ್ಯಾಮಿಲಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕೋಟಿ ಕೋಟಿ ಉದ್ಯಮವನ್ನು ಮುನ್ನಡೆಸೋ ಅಂಬಾನಿ ಮಕ್ಕಳು ಸಹ ಲಕ್ಸುರಿಯಸ್ ಲೈಫ್‌ಸ್ಟೈಲ್ ಹೊಂದಿದ್ದಾರೆ. ಹಾಗೆಯೇ ಇಶಾ ಅಂಬಾನಿ ಗಂಡನ ಫ್ಯಾಮಿಲಿ ಕೂಡಾ ಸಿಕ್ಕಾಪಟ್ಟೆ ರಿಚ್ ಅನ್ನೋದು ಗೊತ್ತಿದ್ಯಾ? ಆನಂದ್ ಪಿರಾಮಲ್ ಕುಟುಂಬದ ಉದ್ಯಮದ ಬಗ್ಗೆ ಇಲ್ಲಿದೆ ಮಾಹಿತಿ.
ಏಷ್ಯಾ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ. ಬರೋಬ್ಬರಿ 7.6 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ. ಕೋಟಿ ಕೋಟಿ ಕಂಪೆನಿಗಳ ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ. ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಹಾಗೂ ಮಗಳು ಇಶಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಯಾವಾಗ್ಲೂ ಕಾಸ್ಟ್ಲೀ ಡ್ರೆಸ್, ಬ್ಯಾಗ್, ಆಸೆಸ್ಸರೀಸ್ ಧರಿಸಿ ಕಾಣಸಿಗುತ್ತಾರೆ. ಆದರೆ ಕೇವಲ ಅಂಬಾನಿ ಮಾತ್ರವಲ್ಲ ಇಶಾ ಅಂಬಾನಿಯನ್ನು ಮದುವೆ ಮಾಡಿಕೊಟ್ಟಿರೋ ಮನೆಯೂ ಸಿಕ್ಕಾಪಟ್ಟೆ ಶ್ರೀಮಂತ ಉದ್ಯಮ ಕುಟುಂಬವಾಗಿದೆ.
ಇಶಾ ಅಂಬಾನಿ ಗಂಡನ ಫ್ಯಾಮಿಲಿ ಕೂಡಾ ಸಿಕ್ಕಾಪಟ್ಟೆ ರಿಚ್, ಖ್ಯಾತ ಲಗ್ಗೇಜ್ ಬ್ರ್ಯಾಂಡ್ ಮುನ್ನಡೆಸುತ್ತೆ ಪಿರಾಮಲ್ ಫ್ಯಾಮಿಲಿ. ಮುಕೇಶ್ ಅಂಬಾನಿಯವರ ಪುತ್ರಿ ಇಶಾ ಅಂಬಾನಿ 2019ರಲ್ಲಿ ಬಿಲಿಯನೇರ್ ಪಿರಾಮಲ್ ಕುಟುಂಬದ ಕುಡಿ ಆನಂದ್ ಪಿರಾಮಲ್ ಅವರನ್ನು ವಿವಾಹವಾದರು. ಆನಂದ್ ಅವರ ತಂದೆ ಅಜಯ್ ಪಿರಮಾಲ್ ಅವರು ಪಿರಾಮಲ್ ಗ್ರೂಪ್ ಮುಖ್ಯಸ್ಥ. ಆದರೆ ಈ ಬಿಲಿಯನೇರ್‌ನ ಹಿರಿಯ ಸಹೋದರ ದಿಲೀಪ್ ಪಿರಾಮಲ್ ಬಗ್ಗೆ ಹೆಚ್ಚು ಮಂದಿಗೆ ತಿಳಿದಿಲ್ಲ. ಇಶಾ ಅಂಬಾನಿ ಕುಟುಂಬದ ಸದಸ್ಯರಾದ ದಿಲೀಪ್ ಪಿರಾಮಲ್ 6368 ಕೋಟಿ ರೂ. ಮೌಲ್ಯದ ಜನಪ್ರಿಯ ಲಗೇಜ್ ಬ್ರ್ಯಾಂಡ್ ಉದ್ಯಮವನ್ನು (Luggege brand Business) ಮುನ್ನಡೆಸುತ್ತಾರೆ.
ಬ್ಯೂಟಿ ಬ್ರ್ಯಾಂಡ್ Nykaa ವಿರುದ್ಧ ಸ್ಪರ್ಧೆಗಿಳಿದ ಅಂಬಾನಿ; 8.4 ಲಕ್ಷ ಕೋಟಿ ವೆಚ್ಚದಲ್ಲಿ 'ತಿರಾ' ಮಳಿಗೆ ಆರಂಭ
ವಿಐಪಿ ಇಂಡಸ್ಟ್ರೀಸ್ ಮುನ್ನಡೆಸುತ್ತಿರುವ ದಿಲೀಪ್ ಪಿರಾಮಲ್
ದಿಲೀಪ್ ಪಿರಾಮಲ್, ಆನಂದ್ ಪಿರಮಾಲ್ ಅವರ ಚಿಕ್ಕಪ್ಪ ತಮ್ಮ ಸ್ವಂತ ಉದ್ಯಮವನ್ನು ಸ್ಥಾಪಿಸಲು ಕುಟುಂಬದ ಜವಳಿ ವ್ಯಾಪಾರದಿಂದ ಹೊರಬಂದರು.- ವಿಐಪಿ ಇಂಡಸ್ಟ್ರೀಸ್. ವಿಐಪಿ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ, ದಿಲೀಪ್ ವಿಐಪಿ ಬ್ಯಾಗ್‌ಗಳು ಮತ್ತು ಸಾಮಾನುಗಳ ಉತ್ಪಾದನೆಯನ್ನು ನೋಡಿಕೊಳ್ಳುತ್ತಾರೆ, ಭಾರತದ ಪ್ರಮುಖ ಲಗೇಜ್ ಮತ್ತು ಕೈಚೀಲ ತಯಾರಕರೆಂದು ಗುರುತಿಸಿಕೊಂಡಿದ್ದಾರೆ. ದಿಲೀಪ್ ಪಿರಾಮಲ್ ನಾಯಕತ್ವದಲ್ಲಿ ವಿಐಪಿ ಇಂಡಸ್ಟ್ರೀಸ್ ಸುಮಾರು 6,368 ಕೋಟಿ ರೂಪಾಯಿಗಳ ಗಮನಾರ್ಹ ಆದಾಯವನ್ನು (Income) ಸಾಧಿಸಿದೆ.
ದಿಲೀಪ್ ಅವರು 1970ರ ದಶಕದಲ್ಲಿ ಕುಟುಂಬದ ವ್ಯವಹಾರದಲ್ಲಿ ತಮ್ಮ ವೃತ್ತಿಜೀವನವನ್ನು (Professional life) ಪ್ರಾರಂಭಿಸಿದರೂ. ಆ ನಂತರ ವಿಐಪಿ ಇಂಡಸ್ಟ್ರೀಸ್ ಸ್ಥಾಪಿಸಿದರು, ಬ್ಯಾಗ್‌ಗಳು ಮತ್ತು ಲಗೇಜ್ ವಲಯದಲ್ಲಿ ಬ್ರ್ಯಾಂಡ್‌ನ್ನು ರಾಷ್ಟ್ರವ್ಯಾಪಿ ಪ್ರಾಮುಖ್ಯತೆಗೆ ಪ್ರೇರೇಪಿಸಿದರು.
ದಿಲೀಪ್ ಪಿರಮಾಲ್ ಅವರು ಕಾರ್ಲ್ಟನ್, ಕ್ಯಾಪ್ರೀಸ್, ಅರಿಸ್ಟೋಕ್ರಾಟ್, ಸ್ಕೈಬ್ಯಾಗ್ಸ್ ಮತ್ತು ಆಲ್ಫಾ ಸೇರಿದಂತೆ ಹಲವಾರು ಯಶಸ್ವಿ ಬ್ರ್ಯಾಂಡ್‌ಗಳನ್ನು ತಮ್ಮ ಕಂಪನಿಯ ಅಡಿಯಲ್ಲಿ ಪರಿಚಯಿಸಿದರು - ಇವೆಲ್ಲವೂ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿವೆ. ಭಾರತದಲ್ಲಿ ನಾಲ್ಕು ಚಕ್ರದ ಲಗೇಜ್ ಬ್ಯಾಗ್ ಪರಿಚಯಿಸಿದ ಹೆಗ್ಗಳಿಕೆ ದಿಲೀಪ್ ಪಿರಾಮಲ್ ಅವರಿಗೆ ಸಲ್ಲುತ್ತದೆ. ಗಮನಾರ್ಹ ಆವಿಷ್ಕಾರವೆಂದರೆ ಇದನ್ನು ಮೊದಲು ಅವರ ಸ್ಕೈಬ್ಯಾಗ್ಸ್ ಬ್ರಾಂಡ್‌ನಲ್ಲಿ ಅಳವಡಿಸಲಾಗಿತ್ತು. ನಾಸಿಕ್‌ನಲ್ಲಿ ಸಾಧಾರಣ ಗಿರಣಿಯಾಗಿ ಪ್ರಾರಂಭವಾದ ವಿಐಪಿ ಇಂಡಸ್ಟ್ರೀಸ್ ಆಗಿ ವಿಕಸನಗೊಂಡಿತು, ಈಗ 6368 ಕೋಟಿ ರೂ.ಗಳ ಗಣನೀಯ ಮೌಲ್ಯವನ್ನು ಹೊಂದಿದೆ.
ಭಾರತದ ಅತ್ಯಂತ ದುಬಾರಿ ಪಾರ್ಟಿ ಇದು, ಅತಿಥಿಗಳ ಸತ್ಕಾರಕ್ಕೆ ಖರ್ಚಾಗಿದ್ದೆಷ್ಟು ಗೊತ್ತಾ?
ದಿಲೀಪ್ ಅವರ ಹಿರಿಯ ಮಗಳು ರಾಧಿಕಾ ಅವರು ವಿಐಪಿ ಇಂಡಸ್ಟ್ರೀಸ್ ಅನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಬಹುಕೋಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಿಗೆ, ತಂದೆ-ಮಗಳು ಜೋಡಿಯು ಕಂಪನಿಯನ್ನು ಶತಕೋಟಿ ಡಾಲರ್ ಆದಾಯದ ಮೈಲಿಗಲ್ಲಿಗೆ ಏರಿಸಲು ಯೋಜಿಸಿದೆ. ಫೋರ್ಬ್ಸ್ ಪ್ರಕಾರ, ಪಿರಾಮಲ್ ಕುಟುಂಬವು ಒಟ್ಟಾರೆಯಾಗಿ ಸರಿಸುಮಾರು USD 5.8 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದರೆ, ದಿಲೀಪ್ ಪಿರಾಮಲ್ ಅವರ ವೈಯಕ್ತಿಕ ಸಂಪತ್ತು ಸುಮಾರು 4,000 ಕೋಟಿ ಎಂದು ಅಂದಾಜಿಸಲಾಗಿದೆ.