ಗೂಗಲ್ ಪೇ ಮೊಬೈಲ್ ರೀಚಾರ್ಜ್ ಮೇಲೆ 3ರೂ. ಶುಲ್ಕ ವಿಧಿಸಲು ಪ್ರಾರಂಭಿಸಿದೆ. ಈ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ.ಆದ್ರೆ ಗ್ರಾಹಕರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಮೊಬೈಲ್ ರೀಚಾರ್ಜ್ ಗೆ ಗೂಗಲ್ ಪೇ ಮೂಲಕ ಪಾವತಿ ಮಾಡಿದಾಗ 3ರೂ. ಶುಲ್ಕ ಸೇರಿಸಿರುವ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.
Business Desk: ಗೂಗಲ್ ಪೇ ಯುಪಿಐ ಸೇವೆ ಬಳಸಿಕೊಂಡು ಮೊಬೈಲ್ ರೀಚಾರ್ಜ್ ಮಾಡುವ ಬಳಕೆದಾರರಿಗೆ 3ರೂ. ಹೊಸ ಶುಲ್ಕ ಪರಿಚಯಿಸಲಾಗಿದೆ. ಬಳಕೆದಾರರು ಗೂಗಲ್ ಪೇ ಮೂಲಕ ಪ್ರೀಪೇಯ್ಡ್ ಮೊಬೈಲ್ ರಿಚಾರ್ಜ್ ಪ್ಲ್ಯಾನ್ ಆಯ್ಕೆ ಮಾಡಿದಾಗ ಈ ಶುಲ್ಕ ಅನ್ವಯಿಸುತ್ತದೆ. ಈ ಮೂಲಕ ಇಂಥ ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ವಿಧಿಸದಿರುವ ಆಪ್ ನ ಈ ಹಿಂದಿನ ನೀತಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಹೊಸ ನೀತಿಯಿಂದ ಈಗ ಗೂಗಲ್ ಪೇ ಕೂಡ ಇತರ ಯುಪಿಐ ಪಾವತಿ ಆಪ್ ಗಳಾದ ಪೇಟಿಎಂ ಹಾಗೂ ಫೋನ್ ಪೇ ಸಾಲಿಗೆ ಸೇರ್ಪಡೆಗೊಂಡಿದೆ. ಪೇಟಿಎಂ ಹಾಗೂ ಫೋನ್ ಪೇ ಈಗಾಗಲೇ ಇಂಥ ವಹಿವಾಟುಗಳ ಮೇಲೆ ಶುಲ್ಕಗಳನ್ನು ವಿಧಿಸುತ್ತಿವೆ. ಈ ಬದಲಾವಣೆಗಳ ಹೊರತಾಗಿಯೂ ಗೂಗಲ್ ತನ್ನ ಪೇಮೆಂಟ್ ಆಪ್ ನಲ್ಲಿ ಹೆಚ್ಚುವರಿ ಕನ್ವಿನೆನ್ಸ್ ಶುಲ್ಕಗಳ ಬಗ್ಗೆ ಈ ತನಕ ಘೋಷಣೆ ಮಾಡಿಲ್ಲ. ಒಬ್ಬರು ಗ್ರಾಹಕರು 749ರೂ. ಜಿಯೋ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಗೆ ಗೂಗಲ್ ಪೇ ಬಳಸಿ ಪಾವತಿ ಮಾಡಿದಾಗ 3ರೂ. ಶುಲ್ಕ ಸೇರಿಸಿರುವ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕವಷ್ಟೇ ಬಳಕೆದಾರರಿಗೆ ಈ ಬಗ್ಗೆ ಅರಿವಾಗಿದೆ.
ಈ ಬಗ್ಗೆ ಟಿಪ್ ಸ್ಟಾರ್ ಮುಕುಲ್ ಶರ್ಮಾ ಎಕ್ಸ್ ನಲ್ಲಿ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ. 100ರೂ.ಗಿಂತ ಕಡಿಮೆ ಮೊತ್ತದ ರಿಚಾರ್ಜ್ ಪ್ಲ್ಯಾನ್ ಗಳಿಗೆ ಯಾವುದೇ ಕನ್ವಿನೆನ್ಸ್ ಶುಲ್ಕವಿಲ್ಲ. 100ರೂ. ಹಾಗೂ 200ರೂ. ನಡುವಿನ ಪ್ಲ್ಯಾನ್ ಗಳು ಹಾಗೂ 200ರೂ. ಹಾಗೂ 300ರೂ. ನಡುವಿನ ಪ್ಲ್ಯಾನ್ ಗಳಿಗೆ ಕ್ರಮವಾಗಿ 2ರೂ. ಹಾಗೂ 3ರೂ. ಶುಲ್ಕಗಳನ್ನು ವಿಧಿಸಲಾಗುತ್ತದೆ. ಇನ್ನು 300ರೂ. ಮೀರಿದ ವಹಿವಾಟುಗಳಿಗೆ 3ರೂ. ಕನ್ವಿನೆನ್ಸ್ ಶುಲ್ಕ ವಿಧಿಸಲಾಗುತ್ತದೆ.
undefined
ಗೂಗಲ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್: ಎಮರ್ಜೆನ್ಸಿಗೆ 15 ಸಾವಿರ ರೂ. ಸಾಲ ಬೇಕಂದ್ರೂ ಸಿಗುತ್ತೆ ನೋಡಿ..!
ಹೊಸ ಕನ್ವಿನೆನ್ಸ್ ಶುಲ್ಕಗಳಿಗೆ ಸಂಬಂಧಿಸಿ ಗೂಗಲ್ ಇತ್ತೀಚೆಗೆ ಭಾರತೀಯ ಬಳಕೆದಾರರಿಗೆ ಟರ್ಮ್ಸ್ ಆಫ್ ಸರ್ವೀಸ್ ಅಪ್ಡೇಟ್ ನೀಡಿದೆ. ಒಂದು ವೇಳೆ ಈ ಸೇರ್ಪಡೆ ನವೆಂಬರ್ 10 ಅಪ್ಡೇಟ್ ಭಾಗವಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಇನ್ನು ಯಾವುದೇ ವಹಿವಾಟು ಪೂರ್ಣಗೊಳಿಸುವ ಮುನ್ನ ಬಳಕೆದಾರರಿಗೆ ಶುಲ್ಕಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕಂಪನಿಯ ವಿವರಣೆಯಲ್ಲಿ ಶುಲ್ಕದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಈಗಾಗಲೇ ಪೇಟಿಎಂ, ಫೋನ್ ಪೇ ಮುಂತಾದ ಪಾವತಿ ಅಪ್ಲಿಕೇಷನ್ ಗಳು ಮೊಬೈಲ್ ರಿಚಾರ್ಜ್ ಮೇಲೆ ಶುಲ್ಕ ವಿಧಿಸುತ್ತಿವೆ. ಅದೇರೀತಿ ಫುಡ್ ಆರ್ಡರ್ ಅಥವಾ ಮೂವಿ ಟಿಕೆಟ್ಸ್ ಬುಕ್ಕಿಂಗ್ ಮೇಲೆ ಕೂಡ ಶುಲ್ಕಗಳನ್ನು ವಿಧಿಸಲಾಗುತ್ತದೆ.
ದಿನಕ್ಕೆ ಎಷ್ಟು ವಹಿವಾಟು ನಡೆಸಬಹುದು?
ಗೂಗಲ್ ಪೇ ಅಥವಾ ಜಿಪೇ ಬಳಕೆದಾರರು ಒಂದು ದಿನದಲ್ಲಿ ಯುಪಿಐ ಮೂಲಕ ಒಂದು ಲಕ್ಷ ರೂ.ಗಿಂತ ಅಧಿಕ ಮೊತ್ತದ ಹಣವನ್ನು ಕಳುಹಿಸುವಂತಿಲ್ಲ. ಇದರ ಹೊರತಾಗಿ ಈ ಆಪ್ ಒಂದು ದಿನದಲ್ಲಿ 10ಕ್ಕಿಂತ ಹೆಚ್ಚಿನ ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸುವುದಿಲ್ಲ ಕೂಡ. ಇದರರ್ಥ ನೀವು ಒಂದು ದಿನದಲ್ಲಿ ಒಂದು ಲಕ್ಷ ರೂ. ತನಕದ ಒಂದೇ ವಹಿವಾಟು ನಡೆಸಬಹುದು ಅಥವಾ ವಿವಿಧ ಮೊತ್ತಗಳ 10 ವಹಿವಾಟುಗಳನ್ನು ನಡೆಸಬಹುದು.
ಭಾರತದಲ್ಲಿ ಗೂಗಲ್ ಪೇ ಎಷ್ಟು ಸೇಫ್, ಕಂಪೆನಿ ವಿರುದ್ಧದ ಪಿಐಎಲ್ ದೆಹಲಿ ಹೈಕೋರ್ಟ್ ನಿಂದ ವಜಾ
ಸಾಲ ಸೌಲಭ್ಯ
ಗೂಗಲ್ ಪೇ ಬಳಕೆದಾರರಿಗೆ ಎಮರ್ಜೆನ್ಸಿಗೆ 15 ಸಾವಿರ ರೂ. ತನಕ ಸಾಲ ಪಡೆಯುವ ಸೌಲಭ್ಯ ಕೂಡ ಇದೆ. ಗ್ರಾಹಕರಿಗಾಗಿ, ಗೂಗಲ್ ಪೇ ಕಂಪನಿಯು ಆಕ್ಸಿಸ್ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ವೈಯಕ್ತಿಕ ಸಾಲಗಳ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುತ್ತಿದೆ. ಇದು Google Pay ನಲ್ಲಿ ತನ್ನ ವೈಯಕ್ತಿಕ ಸಾಲಗಳನ್ನು ಲಭ್ಯವಾಗುವಂತೆ ಮಾಡುತ್ತದೆ ಎಂದೂ ತಿಳಿದುಬಂದಿದೆ.