ಗ್ರಾಮೀಣ ಭಾರತದ ಡಿಜಿಟಲ್ ಕ್ರಾಂತಿ: ಮಹಿಳೆಯರ ಸಬಲೀಕರಣ ಹಾಗೂ ಸಂಪರ್ಕ ವ್ಯವಸ್ಥೆಯ ರೂಪಾಂತರ

Published : May 05, 2023, 07:12 PM IST
ಗ್ರಾಮೀಣ ಭಾರತದ ಡಿಜಿಟಲ್ ಕ್ರಾಂತಿ: ಮಹಿಳೆಯರ ಸಬಲೀಕರಣ ಹಾಗೂ ಸಂಪರ್ಕ ವ್ಯವಸ್ಥೆಯ ರೂಪಾಂತರ

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಭಾರತದ ಡಿಜಿಟಲ್ ಹಣ ಪಾವತಿ ಪರಿಸರ ವ್ಯವಸ್ಥೆಯು, 2022ರಲ್ಲಿದ್ದ 338 ಮಿಲಿಯನ್ ಬಳಕೆದಾರರ ಜೊತೆಗೆ ಬಳಕೆದಾರರ ಅಂಶಿಕ ನೆಲೆಯಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ  ಶೇಕಡ 13ರ ಹೆಚ್ಚಳವಾಗುವುದರೊಂದಿಗೆ ಗಣನೀಯ ಬೆಳವಣಿಗೆಯನ್ನು ಕಂಡಿದೆ. 

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಡಿಜಿಟಲ್ ಕ್ರಾಂತಿಯಲ್ಲಿ ಗ್ರಾಮೀಣ ಜನಸಂಖ್ಯೆ ಹಾಗೂ ಮಹಿಳೆಯರ ಮುಂಚೂಣಿಯ ಪರಿಣಾಮವಾಗಿ ಭಾರತದ ಡಿಜಿಟಲ್ ಸ್ವರೂಪವು, ಭಾರಿ ಗಾತ್ರದ ಪರಿವರ್ತನೆಯನ್ನು ಹೊಂದುತ್ತಿದೆ. ಅಂತರ್ಜಾಲದ ಪ್ರಸರಣ ತೀವ್ರತೆ,  ವೈವಿಧ್ಯಮಯ ಸಾಧನೆಗಳ ಅಳವಡಿಕೆ, ಸಾಮಾಜಿಕ ವಾಣಿಜ್ಯ ಹಾಗೂ  ಡಿಜಿಟಲ್ ಪಾವತಿ ವಿಧಾನಗಳ ಬಳಕೆ  ಇವುಗಳ ತ್ವರಿತಗತಿಯ ಬೆಳವಣಿಗೆ ಇವೆಲ್ಲವೂ ಜನರು ಪರಸ್ಪರವಾಗಿ ವ್ಯವಹರಿಸುವ, ವರ್ತಿಸುವ ಹಾಗೂ ವಹಿವಾಟು ನಡೆಸುವ ರೀತಿಗೆ ಹೊಸ ರೂಪವನ್ನೇ ನೀಡುತ್ತಿದೆ.

ಅಂತರ್ಜಾಲದ ಅಳವಡಿಕೆಯಲ್ಲಿ ಗ್ರಾಮೀಣ ಭಾರತದ ಮುನ್ನಡೆ: ಇತ್ತೀಚಿನ ಅಂದಾಜಿನ ಪ್ರಕಾರ, 2025ರ ವೇಳೆಗೆ ಭಾರತದ ಹೊಸ ಅಂತರ್ಜಾಲ ಬಳಕೆದಾರರಲ್ಲಿ  ಸುಮಾರು 56% ರಷ್ಟು ಹೆಚ್ಚಿನ ಪ್ರಮಾಣದ ಜನರು ಗ್ರಾಮೀಣ ಪ್ರದೇಶದಿಂದಲೇ ಬರುವರು. ಡಿಜಿಟಲ್ ವಿಭಜನೆಯನ್ನು ಕಡಿತಗೊಳಿಸುವಲ್ಲಿ ಸರ್ಕಾರದ ಪ್ರಯತ್ನಗಳು ಹಾಗೂ ಅಂತರ್ಜಾಲ ಸಕ್ರಿಯ ಸಾಧನಗಳ ಸುಲಭವಾಗಿ ಕೈಗೆಟಕುವುದರ ಏರಿಕೆಯ ಪ್ರಭಾವದಿಂದಾಗಿ ಗ್ರಾಮೀಣ ಸಂಪರ್ಕ ವ್ಯವಸ್ಥೆ ಈ ಬಗೆಯಲ್ಲಿ ರಭಸವಾಗಿ ಮೇಲೇರುತ್ತಿದೆ. ಇದರ ಪರಿಣಾಮವಾಗಿ ಪ್ರಥಮ ಬಾರಿಗೆ, ಸಕ್ರಿಯವಾಗಿರದ ಅಂತರ್ಜಾಲ ಬಳಕೆದಾರರ ಪ್ರಮಾಣವು 714 ಮಿಲಿಯನ್ ಅಥವಾ ರಾಷ್ಟ್ರದ ಜನಸಂಖ್ಯೆಯ 48% ಕ್ಕೆ ಇಳಿದು ಅಲ್ಪಸಂಖ್ಯಾತ ವರ್ಗವಾಗಿದೆ.

ಮಹಿಳೆಯರು, ಡಿಜಿಟಲ್ ಭಾರತದ ಸಂಚಾಲಕ ಶಕ್ತಿ: ಡಿಜಿಟಲ್ ಕ್ರಾಂತಿಯು ಲಿಂಗ ಸ್ವಭಾವ/ನಡವಳಿಕೆಯಲ್ಲಿಯೂ ಗಮನಾರ್ಹ ಬದಲಾವಣೆಯನ್ನು ಕಾಣುತ್ತಿದೆ.  2022ರಲ್ಲಿ  57% ರಷ್ಟು ಹೊಸ ಅಂತರ್ಜಾಲ ಬಳಕೆದಾರರು ಮಹಿಳೆಯರಾಗಿದ್ದು ಈ ಅಂಕಿ  2025ರ ವೇಳೆಗೆ 65%ಕ್ಕೆ ಏರುವುದು ಎಂದು ಅಂದಾಜಿಸಲಾಗಿದೆ. ಈ ಪ್ರವೃತ್ತಿಯು, ಭಾರತದಲ್ಲಿ ಮಹಿಳೆಯರ ಸಬಲೀಕರಣದ ಪ್ರಗತಿ ಹಾಗೂ ಅಂತರ್ಜಾಲದ ಮೂಲಕ ಅವರಿಗೆ ದೊರಕುವ ಮಾಹಿತಿಗೆ ಅವಕಾಶ ಲಭ್ಯತೆ, ಶಿಕ್ಷಣ ಹಾಗೂ ಆರ್ಥಿಕ ಅವಕಾಶಗಳ ಪ್ರಯೋಜನ ಪಡೆಯುವ ಸಾಧ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಅಂತರ್ಜಾಲ ಅವಕಾಶ ಸಾಧ್ಯತೆಗಾಗಿ  ಸಾಧನಗಳ ವೈವಿಧ್ಯೀಕರಣ: ಭಾರತದಲ್ಲಿ ಅಂತರ್ಜಾಲ ಅವಕಾಶ ಸಾಧ್ಯತೆಗಾಗಿ ದೊರಕುವ ಸಾಧನಗಳ ಆಯ್ಕೆಯಲ್ಲಿಯೂ ಹೆಚ್ಚಿನ ವೈವಿಧ್ಯತೆ ಕಂಡುಬರುತ್ತಿದೆ. ವೈಯಕ್ತಿಕ ಕಂಪ್ಯೂಟರ್ ಗಳು ಹಾಗೂ ಮೊಬೈಲ್ ಫೋನ್ ಗಳು  ಜನಪ್ರಿಯವಾಗಿರುವುದರ. ಜೊತೆಗೆ ಪರ್ಯಾಯ ಸಾಧನೆಗಳಾದ ಟ್ಯಾಬ್ಲೆಟ್‌ಗಳು, ಪ್ರಸರಣ ಸಾಧನಗಳು ಸ್ಮಾರ್ಟ್ ಸ್ಪೀಕರ್ ಗಳು, ಸ್ಮಾರ್ಟ್ ಟಿವಿಗಳಂತಹ ಪರ್ಯಾಯ ಸಾಧನಗಳ ಬಳಕೆಯಲ್ಲಿಯೂ ಗಮನಾರ್ಹ ಹೆಚ್ಚಳ ಕಾಣಬರುತ್ತಿದೆ.

ಡಿಜಿಟಲ್ ಹಣ ಪಾವತೀಕರಣ: ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮ: ಇತ್ತೀಚಿನ ವರ್ಷಗಳಲ್ಲಿ ಭಾರತದ ಡಿಜಿಟಲ್ ಹಣ ಪಾವತಿ ಪರಿಸರ ವ್ಯವಸ್ಥೆಯು, 2022ರಲ್ಲಿದ್ದ 338 ಮಿಲಿಯನ್ ಬಳಕೆದಾರರ ಜೊತೆಗೆ ಬಳಕೆದಾರರ ಅಂಶಿಕ ನೆಲೆಯಲ್ಲಿ  ಕೇವಲ ಒಂದು ವರ್ಷದ ಅವಧಿಯಲ್ಲಿ  ಶೇಕಡ 13ರ ಹೆಚ್ಚಳವಾಗುವುದರೊಂದಿಗೆ ಗಣನೀಯ ಬೆಳವಣಿಗೆಯನ್ನು ಕಂಡಿದೆ. ಈ ಡಿಜಿಟಲ್ ಹಣ ಪಾವತಿ ಬಳಕೆದಾರರಲ್ಲಿ 30%ರಷ್ಟು ಜನರು ಗ್ರಾಮೀಣ ಭಾರತದವರಾಗಿರುವುದು ಗಮನಾರ್ಹ ಅಂಶವಾಗಿದ್ದು, ಇದು ದೇಶದ ಒಳನಾಡಿನಲ್ಲಿ ಡಿಜಿಟಲ್ ವ್ಯವಹಾರ ವಹಿವಾಟಿನ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ

ಸಾಮಾಜಿಕ ವಾಣಿಜ್ಯ ಹಾಗೂ ಸಾಮಾಜಿಕ ಜಾಲತಾಣ ಮಾಧ್ಯಮಗಳು: ಗ್ರಾಮೀಣ  ಭಾರತವು ನಗರ ಪ್ರದೇಶಗಳಿಗಿಂತ ಹೆಚ್ಚಿನ ಸಾಮಾಜಿಕ ಜಾಲತಾಣ ಮಾಧ್ಯಮಗಳ ಬಳಕೆದಾರರ ಹೆಗ್ಗಳಿಕೆಯನ್ನು ಹೊಂದಿರುವುದು ಕುತೂಹಲಕಾರಿ ವಿಷಯವಾಗಿದ್ದು. ಅಂತರ್ಜಾಲದ ಮೂಲಕ (ಆನ್ ಲೈನ್) ಖರೀದಿಗಾಗಿ ಭಾರತೀಯರು ಸಾಮಾಜಿಕ ಸಂಪರ್ಕ ಜಾಲ ಮಾಧ್ಯಮಗಳ ಮೊರೆಹೋಗುವುದರೊಂದಿಗೆ, ಈ ವರ್ಧಿತ ಡಿಜಿಟಲ್  ಚಟುವಟಿಕೆಯು ಸಾಮಾಜಿಕ ವಾಣಿಜ್ಯದ ಏರಿಕೆಗೆ ಕಾರಣವಾಗಿದೆ. ವಾಸ್ತವವಾಗಿ ಕೇವಲ ಒಂದೇ ಒಂದು ವರ್ಷದಲ್ಲಿ ಸಾಮಾಜಿಕ ವಾಣಿಜ್ಯವು ಆಶ್ಚರ್ಯಕರವಾಗಿ 51%ರ  ಬೆಳವಣಿಗೆಯನ್ನು ಹೊಂದಿದ್ದು, ಇದು ನ್ಯಾಯ ಸಮ್ಮತವಾದ ವಿದ್ಯುನ್ಮಾನ ವಾಣಿಜ್ಯ (ಇ-ಕಾಮರ್ಸ್)  ಚಾನಲ್ ಗಳಾಗಿ ಸಾಮಾಜಿಕ ಜಾಲತಾಣ ಮಾಧ್ಯಮಗಳ ಹೆಚ್ಚುತ್ತಿರುವ ಸ್ವೀಕೃತಿಯನ್ನು ಸಾರಿ ಹೇಳುತ್ತಿದೆ.

ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ

ಗ್ರಾಮೀಣ ಪ್ರದೇಶಗಳು ಹಾಗೂ ಮಹಿಳೆಯರು ಈ ಪರಿವರ್ತನೆಯ ಕೇಂದ್ರವಾಗಿ ಭಾರತದ ಡಿಜಿಟಲ್ ಕ್ರಾಂತಿಯು ಎಲ್ಲಾ ಅಡೆತಡೆಗಳನ್ನು ಮೀರಿ ಮುನ್ನಡೆಯುತ್ತಿದೆ. ಅಂತರ್ಜಾಲದ ಪ್ರಸರಣ ತೀವ್ರತೆ ಹೆಚ್ಚಾಗಿ ಬೆಳೆಯುತ್ತಾ ಹೋದಂತೆ ಡಿಜಿಟಲ್ ವೇದಿಕೆಗಳು ಸರ್ವರಿಗೂ ಸುಲಭದಲ್ಲಿ ಲಭ್ಯವಾಗಿ ಭಾರತದ ಡಿಜಿಟಲ್ ಸ್ವರೂಪದ ಭವಿಷ್ಯವು ಹಿಂದೆಂದಿಗಿಂತಲೂ ಹೆಚ್ಚು ಉಜ್ವಲವಾಗಿ ಕಾಣುತ್ತಿದೆ. ಪ್ರಸ್ತುತದಲ್ಲಿ ನಡೆಯುತ್ತಿರುವ ಡಿಜಿಟಲ್ ಹಣ ಪಾವತಿ ಹಾಗೂ ಸಾಮಾಜಿಕ ವಾಣಿಜ್ಯದ  ವಿಸ್ತರಣೆಯು ಎಲ್ಲಾ ನಾಗರಿಕರನ್ನು ಸಶಕ್ತಗೊಳಿಸಿ ಒಟ್ಟಾರೆ ಬೆಳವಣಿಗೆಯನ್ನು ಉತ್ತೇಜಿಸುವಂತಹ ಡಿಜಿಟಲ್ ಚಾಲಿತ ಭವಿಷ್ಯವನ್ನು ತನ್ನದಾಗಿಸಿಕೊಳ್ಳಲು ರಾಷ್ಟ್ರದ ಸಿದ್ಧತೆಯನ್ನು ಎತ್ತಿ ತೋರುತ್ತದೆ.

ಭಾರತದಲ್ಲಿ ನಿರುದ್ಯೋಗಿ ತಲೆಮಾರನ್ನೇ ಸೃಷ್ಟಿಸಿದ ಪ್ರಯೋಜನವಿಲ್ಲದ ಪದವಿಗಳು!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌