Business Ideas : ಬಹುಬೇಡಿಕೆಯಿರುವ ಈ ಬ್ಯುಸಿನೆಸ್ ಶುರು ಮಾಡಿ, ಲಾಭ ಗಳಿಸಿ

By Suvarna News  |  First Published May 5, 2023, 6:08 PM IST

ಆಹಾರ ಕ್ಷೇತ್ರ ವಿಸ್ತಾರವಾಗಿದೆ. ಯಾವುದು ಬೇಡಿಕೆ ಹೆಚ್ಚಿರುವ ಹಾಗೂ ಲಾಭತರುವ ವ್ಯವಹಾರ ಎಂಬುದನ್ನು ಪರಿಶೀಲಿಸಿ, ನೀವು ಬುದ್ಧಿವಂತಿಕೆಯಿಂದ ವ್ಯಾಪಾರ ಶುರು ಮಾಡಿ, ಅದ್ರ ಗುಣಮಟ್ಟಕ್ಕೆ ಆದ್ಯತೆ ನೀಡಿದ್ರೆ ಲಾಭ ಗ್ಯಾರಂಟಿ. 
 


ಗೋಧಿ ಹಿಟ್ಟು, ಅಕ್ಕಿಯಂತೆ ವಿಶ್ವದ ಎಲ್ಲೆಡೆ ಟೀಗೆ ಅತಿ ಹೆಚ್ಚು ಬೇಡಿಕೆಯಿದೆ. ಇದು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಉತ್ಪನ್ನವಾಗಿದೆ. ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ ವರದಿ ಪ್ರಕಾರ, ಜಾಗತಿಕ ಚಹಾ ಉತ್ಪಾದನೆಯ ಶೇಕಡಾ 25 ರಷ್ಟು ಪ್ರಮುಖ ಗ್ರಾಹಕರು ಭಾರತದಲ್ಲಿದ್ದಾರೆ. ನೀವು ವ್ಯಾಪಾರ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ಟೀ ಬ್ಯಾಗ್ ತಯಾರಿಸುವ ವ್ಯವಹಾರ ಶುರು ಮಾಡಬಹುದು. 

ಟೀ ಬ್ಯಾಗ್ (Tea Bag) ಒಂದು ಸಣ್ಣ, ರಂಧ್ರವಿರುವ ಚೀಲ. ಇದ್ರರ ಒಳಗೆ ಟೀ ಎಲೆಗಳಿರುತ್ತವೆ.  ಬಿಸಿ ನೀರಿನ ಕಪ್ ಗೆ ಈ ಚೀಲವನ್ನು ಹಾಕಿ ಟೀ ತಯಾರಿಸಲಾಗುತ್ತದೆ. ಈ ರೀತಿ ಟೀ ತಯಾರಿಸೋದು ಸುಲಭ. ಹಾಗಾಗಿಯೇ ಎಲ್ಲೆಡೆ ಟೀ ಬ್ಯಾಗ್ ಬಳಕೆ ಹೆಚ್ಚಾಗಿದೆ. ನಾವಿಂದು ಟೀ ಬ್ಯಾಗ್ ವ್ಯಾಪಾರದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ. ಟೀ ಬ್ಯಾಗ್ ಒಂದು ಆಹಾರ (Food) ಉತ್ಪನ್ನವಾಗಿದೆ. ವ್ಯಾಪಾರವನ್ನು ಪ್ರಾರಂಭಿಸುವ ಮೊದಲು ವಿವಿಧ ನೋಂದಣಿಗಳು ಮತ್ತು ಪರವಾನಗಿಗಳ ಅಗತ್ಯವಿದೆ. ನೀವು ಯಾವ ಸ್ಥಳದಲ್ಲಿ ಹಾಗೂ ಯಾವ ಮಟ್ಟದಲ್ಲಿ ವ್ಯಾಪಾರ (business) ಶುರು ಮಾಡುತ್ತೀರಿ ಎಂಬುದನ್ನು ಅವಲಂಭಿಸಿರುತ್ತದೆ.  

Tap to resize

Latest Videos

ಹೊಸ ಯೋಜನೆ ಪರಿಚಯಿಸಿದ ಎಲ್ಐಸಿ; ಏನಿದರ ವಿಶೇಷತೆ, ಯಾರೆಲ್ಲ ಈ ಪಾಲಿಸಿ ಪ್ರಯೋಜನ ಪಡೆಯಬಹುದು?

ಟೀ ಬ್ಯಾಗ್ ಬ್ಯುಸಿನೆಸ್ ಶುರು ಮಾಡಲು ಅಗತ್ಯವಿರುವ ಕಚ್ಚಾ ವಸ್ತು :  ಇದು ಆಹಾರವಾಗಿರುವ ಕಾರಣ ನೀವು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಒಳ್ಳೆ ಗುಣಮಟ್ಟದ ಟೀ ಎಲೆಯ್ನನು ನೀವು ಆಯ್ಕೆ ಮಾಡಿಕೊಳ್ಳಬೇಕು. ಸಾವಯವ ಟೀ,  ಗ್ರೀನ್ ಟೀ, ಗಿಡಮೂಲಿಕೆ ಚಹಾ, ಅಸ್ಸಾಂ ಟೀ, ಮಿಕ್ಸ್ ಟೀ ಹೀಗೆ ಇದ್ರಲ್ಲಿ ವಿವಿಧ ಬಗೆಯಿದೆ.

ಒಂದು ಟೀಬ್ಯಾಗ್ ಸುಮಾರು 1-4 ಔನ್ಸ್ ಟೀ ಎಲೆಗಳನ್ನು ಹೊಂದಿರುತ್ತದೆ. ಟೀ ಚೀಲ ತಯಾರಿಸಲು ಗುಣಮಟ್ಟದ ಕಾಗದವನ್ನು ನೀವು ಆಯ್ಕೆ ಮಾಡಬೇಕು. ಇದಲ್ಲದೆ. ಕಾರ್ಡ್‌ಬೋರ್ಡ್ ಪ್ಯಾಕೆಟ್‌ಗಳು ಮತ್ತು ಚೀಲಗಳಂತಹ ಪ್ಯಾಕೇಜಿಂಗ್ ಸಾಮಗ್ರಿ ಅಗತ್ಯವಿರುತ್ತದೆ. ಟೀ ಬ್ಯಾಗ್ ತಯಾರಿಸುವ ವೇಳೆ ಅನೇಕ ವಿಧಾನಗಳನ್ನು ಪಾಲಿಸಬೇಕು. ಅದ್ರ ಬಗ್ಗೆ ನೀವು ತರಬೇತಿ ಪಡೆಯುವುದು ಸೂಕ್ತ. ಹಾಗೆಯೇ ಟೀ ಬ್ಯಾಗ್ ವ್ಯಾಪಾರ ನಡೆಸುವಾಗ ಕ್ವಾಲಿಟಿ ಕಂಟ್ರೋಲ್ ಚೆಕ್ ಕೂಡ ಮುಖ್ಯವಾಗುತ್ತದೆ. ವೃತ್ತಿಪರ ಟೀ ಟೇಸ್ಟರ್‌ಗಳು ಪ್ರತಿ ಬ್ಯಾಚ್ ಚಹಾವನ್ನು ಫಿಲ್ಟರ್ ಪೇಪರ್‌ಗೆ ಸುರಿಯುವ ಮೊದಲು ಪರೀಕ್ಷಿಸುತ್ತಾರೆ. ಶುಚಿತ್ವ, ಶುದ್ಧತೆ ಮತ್ತು ತಾಜಾತನವನ್ನು ಪರೀಕ್ಷಿಸಲು ತಜ್ಞರು ತಾಜಾ ಚಹಾ ಎಲೆಗಳನ್ನು ಕೂಡ ಪರೀಕ್ಷಿಸುತ್ತಾರೆ. 

ಭಾರತದಲ್ಲಿ ಟೀ ಬ್ಯಾಗ್ ವ್ಯಾಪಾರ ಶುರು ಮಾಡಲು ಕೆಲ ಯಂತ್ರಗಳ ಅಗತ್ಯವಿದೆ. ಟೀ ಬ್ಯಾಗ್ ತಯಾರಿಸುವ ಯಂತ್ರದ ವೆಚ್ಚ 1,75,000 ರೂಪಾಯಿಯಿದೆ. ಕಚ್ಚಾ ವಸ್ತುಗಳ ಬೆಲೆ ಸುಮಾರು 25,000 ರೂಪಾಯಿಯಿದೆ. ಯಂತ್ರೋಪಕರಣ ಹಾಗೂ ಇತರ ಖರ್ಚಿಗೆ ನೀವು 1,00,000 ರೂಪಾಯಿ ಖರ್ಚು ಮಾಡಬೇಕು. ಪ್ಯಾಕೇಜಿಂಗ್ ಗೆ  25,000 ರೂಪಾಯಿ ವೆಚ್ಚವಾಗುತ್ತದೆ. ಇದಲ್ಲದೆ 25,000 ರೂಪಾಯಿಯನ್ನು ನೀವು ಇತರೇ ಖರ್ಚಿಗೆ ತೆಗೆದಿಡಬೇಕು. ಒಟ್ಟಾರೆ ನೀವು ಟೀ ಬ್ಯಾಗ್ ಬ್ಯುಸಿನೆಸ್ ಶುರು ಮಾಡಲು ಸುಮಾರು 2,50,000 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. 

ಬರೀ ಪಾದದ ಫೋಟೋ ಹಾಕಿ ಈಕೆ ಗಳಿಸೋದೆಷ್ಟು ಗೊತ್ತಾ?

ಮಾರ್ಕೆಟಿಂಗ್ ಹೇಗೆ? : ಟೀ ಬ್ಯಾಗ್ ಬ್ಯುಸಿನೆಸ್ ಶುರು ಮಾಡೋದು ಮಾತ್ರವಲ್ಲ ಅದನ್ನು ಹೇಗೆ ಮಾರಾಟ ಮಾಡ್ಬೇಕು ಎಂಬುದು ತಿಳಿದಿರಬೇಕು. ನೀವು ಸ್ಥಳೀಯವಾಗಿ ಅಥವಾ ಸಗಟು ಅಂಗಡಿಗೆ ಮಾರಾಟ ಮಾಡಬಹುದು. ಜನಪ್ರಿಯ B2B ವೆಬ್‌ಸೈಟ್‌ಗಳು ಮತ್ತು B2C ವೆಬ್‌ಸೈಟ್‌ ನಲ್ಲಿ ಹೆಸರು ನೋಂದಾಯಿಸಿಕೊಂಡು ನಿಮ್ಮ ಉತ್ಪನ್ನಗಳ ಬಗ್ಗೆ ಜಾಹೀರಾತು ನೀಡಬಹುದು. ನೀವು ಸೂಪರ್‌ಮಾರ್ಕೆಟ್‌, ಶಾಪಿಂಗ್ ಸೆಂಟರ್‌, ಸಣ್ಣ ಅಂಗಡಿಗಳಿಗೆ ಮಾರಾಟ ಮಾಡಿ ಆದಾಯ ಗಳಿಸಬಹುದು.  ಈಗಾಗಲೇ ಅನೇಕ ಕಂಪನಿಗಳು ಟೀ ಬ್ಯಾಗ್ ಮಾರಾಟ ಮಾಡ್ತಿದ್ದು, ನಿಮ್ಮ ಉತ್ಪನ್ನಕ್ಕೆ ಬೇಡಿಕೆ ಬರಬೇಕೆಂದ್ರೆ ನೀವು ಗುಣಮಟ್ಟಕ್ಕೆ ಹಾಗೂ ಜಾಹೀರಾತಿಗೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ. 
 

click me!