ಎಲ್ಐಸಿ ಆಗಾಗ ಅನೇಕ ಹೊಸ ಪಾಲಿಸಿಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಆಯಾ ವರ್ಗದ ಜನರ ಅಗತ್ಯಗಳಿಗೆ ಅನುಗುಣವಾಗಿ ಎಲ್ಐಸಿ ಪಾಲಿಸಿಗಳನ್ನು ರೂಪಿಸುತ್ತದೆ. ಅದರಂತೆ ಮೇ 2ರಿಂದ ಜಾರಿಗೆ ಬರುವಂತೆ 'ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್' ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ. ಹಾಗಾದ್ರೆ ಯಾರು ಈ ಯೋಜನೆ ಪ್ರಯೋಜನ ಪಡೆಯಬಹುದು? ಅದರ ವಿಶೇಷತೆಯೇನು? ಇಲ್ಲಿದೆ ಮಾಹಿತಿ.
Business Desk: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಆಗಾಗ ಹೊಸ ಪಾಲಿಸಿಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಸಮಾಜದ ಎಲ್ಲ ವರ್ಗದ ಹಾಗೂ ವಯೋಮಾನದ ಜನರಿಗೆ ಹೊಂದಿಕೆಯಾಗುವ ಪಾಲಿಸಿಗಳನ್ನು ಎಲ್ ಐಸಿ ರೂಪಿಸುತ್ತದೆ. ಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ಹೀಗೆ ಎಲ್ಲರಿಗೂ ಸರಿಹೊಂದುವ ಪಾಲಿಸಿಗಳನ್ನು ಎಲ್ಐಸಿ ರೂಪಿಸುತ್ತಲೇ ಇರುತ್ತದೆ. ಅದರಂತೆ ಇತ್ತೀಚೆಗೆ ಎಲ್ಐಸಿ ಹೊಸ ಯೋಜನೆಯನ್ನು ಜಾರಿ ಮಾಡಿದೆ. 50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗೆ ಈ ಹೊಸ ಯೋಜನೆ ಅನ್ವಯಿಸಲಿದೆ. ಈ ಯೋಜನೆಗೆ 'ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್ ಸ್ಕೀಮ್' ಎಂದು ಹೆಸರಿಡಲಾಗಿದೆ. ಎಲ್ಐಸಿಯ ಈ ನೂತನ ಯೋಜನೆ 2023ರ ಮೇ 2ರಿಂದ ಜಾರಿಗೆ ಬಂದಿದೆ. ಈ 'ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್ ಸ್ಕೀಮ್'ಮೂಲಕ ಉದ್ಯೋಗದಾತ ಸಂಸ್ಥೆ ತಮ್ಮ ಉದ್ಯೋಗಿಗಳಿಗೆ ನಿವೃತ್ತಿ ಬಳಿಕದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ನೆರವು ನೀಡಲಿದೆ. ಈ ಮೂಲಕ ಪ್ರತಿ ಸದಸ್ಯರಿಗೆ ನಿಗದಿತ ಜೀವ ವಿಮಾ ಪಾವತಿ ನೀಡುತ್ತದೆ.
ಇನ್ನು ಎಲ್ಐಸಿ ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್ ಸ್ಕೀಮ್ ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಗುಂಪು ವಿಮಾ ಯೋಜನೆಯಾಗಿದೆ. ಉದ್ಯೋಗಿಗಳಿಗೆ ನಿವೃತ್ತಿಯ ಬಳಿಕ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಲು ಈ ಯೋಜನೆ ನೆರವು ನೀಡಲಿದೆ.
ಎಲ್ಐಸಿಯ ಈ ಎರಡು ಪಾಲಿಸಿಗಳು ನಾಳೆಯಿಂದ ಲಭ್ಯವಿಲ್ಲ, ಏಕೆ? ಇಲ್ಲಿದೆ ಮಾಹಿತಿ
ಎಲ್ಐಸಿ ಹೊಸ ಯೋಜನೆ ಏನು ಹೇಳುತ್ತೆ?
ಎಲ್ಐಸಿ ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್ ಸ್ಕೀಮ್ ಪ್ರತಿ ಸದಸ್ಯರಿಗೆ ನಿಗದಿತ ಜೀವ ವಿಮಾ ಪ್ರಯೋಜನವನ್ನು ನೀಡುತ್ತದೆ. ಉದ್ಯೋಗಿಗಳ ಪ್ರಯೋಜನಕ್ಕೆ ಯಾವುದೇ ನೆರವು ನೀಡಲು ಬಯಸುವ ಉದ್ಯೋಗಿಗಳು ಈ ಯೋಜನೆ ಪ್ರಯೋಜನ ಪಡೆಯಬಹುದು. ಇನ್ನು ಈ ಯೋಜನೆ ಪ್ರತಿ ಉದ್ಯೋಗಿಗೆ ಸ್ಥಿರ ಲೈಫ್ ಕವರ್ ಪ್ರಯೋಜನವನ್ನು ನೀಡುತ್ತದೆ. ಇನ್ನು ಇದು ಎಲ್ಐಸಿಯ 11 ಗ್ರೂಪ್ ಉತ್ಪನ್ನವಾಗಿದ್ದು, ಗ್ರೂಪ್ ಆಕ್ಸಿಡೆಂಟ್ ಬೆನಿಫಿಟ್ ರೈಡರ್ ಆಗಿದೆ.
'ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಲಿಸ್ಟಿಂಗ್ ಬಾಧ್ಯತೆಗಳು ಹಾಗೂ ಬಹಿರಂಗಪಡಿಸುವಿಕೆ ಅಗತ್ಯಗಳು) ನಿಯಮಗಳು 2015ರ ನಿಯಮ 30ರ ಅನ್ವಯ ಭಾರತೀಯ ಜೀವ ವಿಮಾ ನಿಗಮ ತನ್ನ ಹೊಸ ಯೋಜನೆಯನ್ನು 2023ರ ಮೇ 2ರಂದು ಬಿಡುಗಡೆ ಮಾಡೋದಾಗಿ ತಿಳಿಸಿದೆ ಎಂದು ಈ ಮೂಲಕ ನಿಮಗೆ ಮಾಹಿತಿ ನೀಡಲಾಗುತ್ತಿದೆ' ಎಂದು ಎಲ್ಐಸಿ ಸೆಬಿಗೆ ಸಲ್ಲಿಸಿದ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ತಿಳಿಸಿದೆ.
ಎಲ್ಐಸಿ ಗ್ರೂಪ್ ಪೋಸ್ಟ್ ಪ್ರಯೋಜನಗಳು
*ಉದ್ಯೋಗಿ ನಿವೃತ್ತಿಗಿಂತ ಮುನ್ನವೇ ಸೇವೆಯಲ್ಲಿರುವಾಗಲೇ ಮರಣ ಹೊಂದಿದರೆ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ.
*ರಾಜೀನಾಮೆ ಅಥವಾ ನಿವೃತ್ತಿ ಯೋಜನೆಯ ನಿಯಮಗಳ ಅನ್ವಯ ನಿವೃತ್ತಿ ಬಳಿಕದ ವೈದ್ಯಕೀಯ ಪ್ರಯೋಜನಗಳನ್ನು ಇದರೊಂದಿಗೇ ನೀಡಲಾಗುತ್ತದೆ.
*ಗ್ರೂಪ್ ಪಾಲಿಸಿ ಖಾತೆಯಲ್ಲಿರುವ ನಿಧಿ ಲಭ್ಯತೆ ಆಧರಿಸಿ ಈ ಯೋಜನೆ ನಿಯಮಗಳು ಅವಕಾಶ ನೀಡಿದ್ರೆ ವಿಮೆ ಹೊಂದಿರುವ ವ್ಯಕ್ತಿಯ ಕುಟುಂಬ ಸದಸ್ಯರು ನಿವೃತ್ತಿ ಬಳಿಕದ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಬಹುದು.
*ಇನ್ನು ಈ ಯೋಜನೆ ಪ್ರತಿ ವಿಮೆ ಹೊಂದಿರುವ ವ್ಯಕ್ತಿಗೆ ಸ್ಥಿರ ಲೈಫ್ ಕವರ್ ಬೆನಿಫಿಟ್ ಒದಗಿಸುತ್ತದೆ.
ಎಸ್ ಬಿಐ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ; ಮೇ 1ರಿಂದಲೇ ಜಾರಿಗೆ
ಎಲ್ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿ
ಎಲ್ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿ ಕೂಡ ವರ್ಷಾಶನ ನೀಡುವ ಯೋಜನೆಯಾಗಿದೆ. ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ರೆ ನಿವೃತ್ತಿ ಬಳಿಕ ವರ್ಷಾಶನ ಪಡೆಯಬಹುದು. ಈ ವರ್ಷಾಶನ ಯೋಜನೆಯಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತದ ಪ್ರೀಮಿಯಂ ಪಾವತಿಸಬಹುದು. 30ರಿಂದ 79 ವರ್ಷ ನಡುವಿನ ವಯಸ್ಸಿನವರು ಎಲ್ಐಸಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇನ್ನು ಈ ಪಾಲಿಸಿಯನ್ನು ಆನ್ ಲೈನ್ ನಲ್ಲಿ ಖರೀದಿಸಿದ್ರೆ ಶೇ.2ರಷ್ಟು ರಿಯಾಯಿತಿ ಕೂಡ ಸಿಗುತ್ತದೆ. ಈ ಪಾಲಿಸಿಯ ಇನ್ನೊಂದು ವಿಶೇಷತೆ ಅಂದರೆ ವಿಭಿನ್ನ ವರ್ಷಾಶನ ಆಯ್ಕೆಗಳಿವೆ. ಇದನ್ನು ಕನಿಷ್ಠ ಒಂದು ವರ್ಷದ ಬಳಿಕ ಅಥವಾ ಗರಿಷ್ಠ 12 ವರ್ಷದ ಬಳಿಕ ವರ್ಷಾಶನ ಪಡೆಯಲು ಅನುಕೂಲವಾಗುವಂತೆ ಖರೀದಿಸಬಹುದು.