2 ತಿಂಗಳ ನಂತರ ಡೀಸೆಲ್‌ ಬೆಲೆ ಏರಿ​ಕೆ : ಪೆಟ್ರೋಲ್‌ ಬೆಲೆ ಏರಿಕೆ ಇಲ್ಲ

By Kannadaprabha News  |  First Published Sep 25, 2021, 8:05 AM IST
  • ಕಳೆದ 2 ತಿಂಗಳುಗಳಿಂದ ತಟಸ್ಥವಾಗಿದ್ದ ಡೀಸೆಲ್‌ ಬೆಲೆಯಲ್ಲಿ ಶುಕ್ರವಾರ ಲೀಟರ್‌ಗೆ 20 ಪೈಸೆ ಏರಿಕೆ\
  • ಪೆಟ್ರೋಲ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ

ನವದೆಹಲಿ (ಸೆ.25): ಕಳೆದ 2 ತಿಂಗಳುಗಳಿಂದ ತಟಸ್ಥವಾಗಿದ್ದ ಡೀಸೆಲ್‌ (Diesel) ಬೆಲೆಯಲ್ಲಿ ಶುಕ್ರವಾರ ಲೀಟರ್‌ಗೆ 20 ಪೈಸೆ ಏರಿಕೆಯಾಗಿದೆ ಹಾಗೂ ಪೆಟ್ರೋಲ್‌ (Petrol)ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಮೂಲಕ ದೆಹಲಿಯಲ್ಲಿ ಒಂದು ಲೀಟರ್‌ ಡೀಸೆಲ್‌ ಬೆಲೆ 88.82 ರು. ಹಾಗೂ ಬೆಂಗ​ಳೂ​ರಿ​ನಲ್ಲಿ 94.27 ರು. ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ  (fuel Price) ಹೆಚ್ಚಾದ್ದರಿಂದ ಡೀಸೆಲ್‌ ಬೆಲೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯವಾಗಿ ಬೆಲೆ ಹೆಚ್ಚಾದರೂ ಸೆ.5ರಿಂದ ಭಾರತದ ಇಂಡಿಯನ್‌ ಆಯಿಲ್‌ (indian oil), ಭಾರತ್‌ ಪೆಟ್ರೋಲಿಯಂ, ಹಿಂದೂಸ್ತಾನ್‌ ಪೆಟ್ರೋಲಿಯಂ ಇಂಧನ ಬೆಲೆಯನ್ನು ಪರಿಷ್ಕರಿಸಿರಲಿಲ್ಲ.

Latest Videos

undefined

ಪೆಟ್ರೋಲ್‌ GSTಗಿಲ್ಲ: ಬೆಲೆ ಇಳಿಕೆ ನಿರೀಕ್ಷೆ ಠುಸ್‌

ಕಳೆದ ಕೆಲವು ವಾರಗಳಿಂದಲೂ ಕಚ್ಚಾ ತೈಲದ ಬೆಲೆ ಏರುಗತಿಯಲ್ಲಿದ್ದರೂ ಭಾರತೀಯ ಕಂಪೆನಿಗಳು ಬೆಲೆ ಹೆಚ್ಚಿಸಿರಲಿಲ್ಲ. ಶುಕ್ರವಾರ ಬೆಲೆಯನ್ನು ಮತ್ತೆ ಪರಿಷ್ಕರಿಸಿದ್ದು ಹೆಚ್ಚಾದ ಬೆಲೆಯನ್ನು ಗ್ರಾಹಕರಿಗೆ ವರ್ಗಾಯಿಸಿವೆ. ಹಾಗಾಗಿ ಮುಂಬೈನಲ್ಲಿ ಒಂದು ಲೀಟರ್‌ ಡೀಸೆಲ್‌ ಬೆಲೆ 96.41 ರು ಹಾಗೂ ಪೆಟ್ರೋಲ್‌ಗೆ 107.26 ರು ಆಗಿದೆ.

ಜಿಎಸ್‌ಟಿ ವ್ಯಾಪ್ತಿಗಿಲ್ಲ

ಕೆಲ ದಿನಗಳ ಹಿಂದಷ್ಟೆ ನಡೆದ  ಸರಕು ಸೇವಾ ತೆರಿಗೆ ಸಭೆಯಲ್ಲಿ ಜಿಎಸ್‌ಟಿ  ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌ ಕೂಡ ಬರಬಹುದು. ತನ್ಮೂಲಕ ದುಬಾರಿಯಾಗಿರುವ ಈ ಎರಡೂ ಇಂಧನಗಳ ಬೆಲೆ ಇಳಿಕೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿತ್ತು.  

ಸಮಿತಿ ಸದಸ್ಯರ ವಿರೋಧ; ಪೆಟ್ರೋಲ್, ಡೀಸೆಲ್ GST ವ್ಯಾಪ್ತಿಗೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್!

ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಎಲ್ಲಾ ರಾಜ್ಯಗಳು ಆದಾಯ ನಷ್ಟದ ಕಾರಣ ಮುಂದಿಟ್ಟು ಜಿಎಸ್‌ಟಿ ವ್ಯಾಪ್ತಿಗೆ ತೈಲೋತ್ಪನ್ನ ತರುವುದನ್ನು ಸಂಪೂರ್ಣವಾಗಿ ವಿರೋಧಿಸಿದ್ದವು. ಇನ್ನೊಂದೆಡೆ ಕೇಂದ್ರ ಸರ್ಕಾರ ಕೂಡ ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ಇದು ಸಕಾಲವಲ್ಲ ಎಂದು ಹೇಳಿದ ಕಾರಣ ವಿಷಯ ಹೆಚ್ಚಿನ ಚರ್ಚೆಯನ್ನೇ ಕಾಣದೆ ಕೊನೆಗೊಂಡಿತ್ತು.

ಸಭೆಯ ಬಳಿಕ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕೇರಳ ಹೈಕೋರ್ಟ್‌ ಆದೇಶದಂತೆ ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಜಿಎಸ್‌ಟಿಯ ಅಡಿಯಲ್ಲಿ ತರುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿತ್ತು. ಆದರೆ, ತೈಲೋತ್ಪನ್ನಗಳನ್ನು ಜಿಎಸ್‌ಟಿಯ ಅಡಿಯಲ್ಲಿ ತರುವ ಸಮಯ ಇದಲ್ಲ ಎಂಬುದಾಗಿ ಜಿಎಸ್‌ಟಿ ಮಂಡಳಿ ಅಭಿಪ್ರಾಯಪಟ್ಟಿತ್ತು. ಹೀಗಾಗಿ ಸದ್ಯದ ಮಟ್ಟಿಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಜಿಎಸ್‌ಟಿಯ ಅಡಿಯಲ್ಲಿ ಬಾರದೆ ಇದೀಗ ಮತ್ತೆ ಬೆಲೆ ಏರಿಕೆ ಆಗಿದೆ

click me!