ಅಂಬಾನಿ ಆಸ್ತಿ, ಒಂದೇ ದಿನದಲ್ಲಿ 16,765 ಕೋಟಿ ಏರಿಕೆ: ವಾರೆನ್ ಬಫೆಟ್ ಹಿಂದಿಕ್ಕಲು ಸಜ್ಜು!

By Suvarna NewsFirst Published Sep 24, 2021, 4:00 PM IST
Highlights

* ರಿಲಯನ್ಸ್ ಒಡೆಯನ ಆಸ್ತಿಯಲ್ಲಿ ಒಂದೇ ದಿನದಲ್ಲಿ ಭಾರೀ ಏರಿಕೆ

* ಒಂದೇ ದಿನದಲ್ಲಿ 16,765 ಕೋಟಿ ಏರಿಕೆಯಾಯ್ತು ಅಂಬಾನಿ ಆಸ್ತಿ

* ವಿಶ್ವದ ಟಾಪ್‌ 15 ಶ್ರೀಮಂತರಲ್ಲಿ ಅಂಬಾನಿಗೆ ಸ್ಥಾನ

ನವದೆಹಲಿ(ಸೆ.24): ಏಷ್ಯಾ ಮತ್ತು ಭಾರತದ ಅತಿದೊಡ್ಡ ಶ್ರೀಮಂತ ಮುಖೇಶ್ ಅಂಬಾನಿಯ(Mukesh Ambani) ಒಟ್ಟು ಆಸ್ತಿ ಮೌಲ್ಯದಲ್ಲಿ ಗುರುವಾರ 2.27 ಬಿಲಿಯನ್ ಡಾಲರ್ (ಸುಮಾರು 16,765 ಕೋಟಿ) ಹೆಚ್ಚಾಗಿದೆ. Bloomberg Billionaires Index ಪ್ರಕಾರ, ಅವರ ನಿವ್ವಳ ಮೌಲ್ಯ ಈಗ 95.4 ಬಿಲಿಯನ್ ಡಾಲರ್ ತಲುಪಿದೆ. ಈ ಮೂಲಕ ಅವರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11 ನೇ ಸ್ಥಾನಕ್ಕೇರಿದ್ದಾರೆ. ದೇಶದ ಅತ್ಯಮೂಲ್ಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಷೇರುಗಳು ಗುರುವಾರ 2.43 ಶೇಕಡಾ ಏರಿಕೆಯಾಗಿದೆ. ಇದು ಅಂಬಾನಿಯ ನಿವ್ವಳ ಮೌಲ್ಯದಲ್ಲಿ ಜಿಗಿತಕ್ಕೆ ಕಾರಣವಗಿದೆ. ಈ ವರ್ಷ ಅವರ ನಿವ್ವಳ ಮೌಲ್ಯ 18.7 ಬಿಲಿಯನ್ ಡಾಲರ್ ಹೆಚ್ಚಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ, ಅಂಬಾನಿ 90 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಆದರೆ ಈ ಬಾರಿ ಅವರ ನಿವ್ವಳ ಮೌಲ್ಯ 95.4 ಬಿಲಿಯನ್ ಡಾಲರ್ ಇದ್ದರೂ, ಟಾಪ್‌ 10 ರಲ್ಲಿ ಸ್ಥಾನ ಪಡೆದಿಲ್ಲ. ಇದಕ್ಕೆ ಕಾರಣ, ವಿಶ್ವದ ಅಗ್ರ 10 ಶ್ರೀಮಂತ ರ ನಿವ್ವಳ ಮೌಲ್ಯ 100 ಬಿಲಿಯನ್ ಡಾಲರ್ ಗಿಂತ ಹೆಚ್ಚಿರುವುದು. 10 ನೇ ಸ್ಥಾನದಲ್ಲಿ ಅಮೆರಿಕದ ಪೌರಾಣಿಕ ಹೂಡಿಕೆದಾರ ವಾರೆನ್ ಬಫೆಟ್ ಇದ್ದಾರೆ, ಅವರ ನಿವ್ವಳ ಮೌಲ್ಯ 101 ಬಿಲಿಯನ್ ಡಾಲರ್. ಅಂಬಾನಿಯ ನಿವ್ವಳ ಮೌಲ್ಯ ಪ್ರಸ್ತುತ ಅವರಿಗಿಂತ 5.6 ಬಿಲಿಯನ್ ಡಾಲರ್ ಕಡಿಮೆ ಇದೆ.

ಏತನ್ಮಧ್ಯೆ, ಅದಾನಿ ಗ್ರೂಪ್ (Adani Group) ಅಧ್ಯಕ್ಷ ಗೌತಮ್ ಅದಾನಿ(Gautam Adani)  68.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 14 ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ನಂತರ ಅವರು ಭಾರತ ಮತ್ತು ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ. ಅಂಬಾನಿ ಮತ್ತು ಅದಾನಿ ನಡುವೆ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್(Francoise Bettencourt Meyers)  ಮೇಯರ್ಸ್ 12 ನೇ ಮತ್ತು ಸ್ಪೇನ್‌ನ ಅಮಾನ್ಸಿಯೊ ಒರ್ಟೆಗಾ(Amancio Ortega) ಸ್ಥಾನ ಪಡೆದಿದ್ದಾರೆ. ಅದಾನಿಯ ನಿವ್ವಳ ಮೌಲ್ಯವು ಈ ವರ್ಷ 34.7 ಬಿಲಿಯನ್ ಡಾಲರ್ ಹೆಚ್ಚಾಗಿದೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) 204 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಮೆಜಾನ್‌ನ ಜೆಫ್ ಬೆಜೋಸ್(Jeff Bezos) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು 197 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ( 165 ಬಿಲಿಯನ್ ಡಾಲರ್), ಫ್ರೆಂಚ್ ಉದ್ಯಮಿ ಮತ್ತು ವಿಶ್ವದ ಅತಿದೊಡ್ಡ ಐಷಾರಾಮಿ ಸರಕುಗಳ ಕಂಪನಿ LVMH ಮೊಯೆಟ್ ಹೆನ್ನೆಸ್ಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್(Bill Gates) (135 ಬಿಲಿಯನ್ ಡಾಲರ್) ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅಮೆರಿಕಾದ ಮಾಧ್ಯಮ ದಿಗ್ಗಜ ಮತ್ತು ಫೇಸ್ಬುಕ್ (Facebook) ಸಿಇಒ ಮಾರ್ಕ್ ಜುಕರ್ ಬರ್ಗ್(Mark Zukerberg) ಐದನೇ ಸ್ಥಾನದಲ್ಲಿದ್ದು, ಅವರ ನಿವ್ವಳ ಮೌಲ್ಯ 129 ಬಿಲಿಯನ್ ಡಾಲರ್. ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿ ಮತ್ತು ಇಂಟರ್ನೆಟ್ ಉದ್ಯಮಿ ಲ್ಯಾರಿ ಪೇಜ್(Larry Page) 126 ಬಿಲಿಯನ್ ಡಾಲರ್ ಜೊತೆ ಆರನೇ ಸ್ಥಾನ, ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್(Sergey Brin)  21 ಬಿಲಿಯನ್ ಡಾಲರ್, ಅಮೆರಿಕನ್ ಉದ್ಯಮಿ ಮತ್ತು ಹೂಡಿಕೆದಾರ ಸ್ಟೀವ್ ಬಾಲ್ಮರ್(Steve Ballmer) 107 ಬಿಲಿಯನ್ ಡಾಲರ್, 104 ಬಿಲಿಯನ್ ಡಾಲರ್ ಹೊಂದಿರುವ ಲ್ಯಾರಿ ಎಲಿಸನ್ ಒಂಬತ್ತನೇ ಸ್ಥಾನದಲ್ಲಿದ್ದಾರೆ ಮತ್ತು ಹೆಸರಾಂತ ಹೂಡಿಕೆದಾರ ವಾರೆನ್ ಬಫೆಟ್ (Warren Buffett)  101 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ. ವಿಶ್ವದ ಅಗ್ರ 10 ಶ್ರೀಮಂತರಲ್ಲಿ 9 ಮಂದಿ ಅಮೆರಿಕದವರೆನ್ನುವುದು ಉಲ್ಲೃಖನೀಯ. 

click me!