ಕೆಲಸ ಬೇಗನೆ ಮುಗಿಸಿಕೊಳ್ಳಿ, ಅಕ್ಟೋಬರ್‌ನಲ್ಲಿ ಒಟ್ಟು 21 ದಿನ ಬ್ಯಾಂಕ್ ರಜೆ; ಇಲ್ಲಿದೆ RBI ಕ್ಯಾಲೆಂಡರ್!

By Suvarna NewsFirst Published Sep 24, 2021, 5:51 PM IST
Highlights
  • ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ರಜೆ
  • ಅಕ್ಟೋಬರ್ ತಿಂಗಳಲ್ಲಿ 21 ದಿನ  ರಜೆ
  • ಎಲ್ಲಾ ರಾಜ್ಯಕ್ಕೆ ಅನ್ವಯವಾಗಲ್ಲ 21 ದಿನ ರಜೆ
  • ಇಲ್ಲಿದೆ  RBI ಕ್ಯಾಲೆಂಡರ್ ವಿವರ

ನವದೆಹಲಿ(ಸೆ.24):  ಬ್ಯಾಂಕ್(Bank) ಕೆಲಸಗಳು ಇದ್ದರೆ ಬೇಗನೆ ಮುಗಿಸಿಕೊಳ್ಳುವುದು ಉತ್ತಮ. ಹೆಚ್ಚಿನವರು ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿದ್ದರೂ, ಬ್ಯಾಂಕ್ ಕಚೇರಿಗೆ ತೆರಳದೆ ಕೆಲ ಕೆಲಸಗಳು ನಡೆಯುವುದಿಲ್ಲ. ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ಕೆಲಸ ಮಾಡಿಸುವ ಯೋಚನೆಯಲ್ಲಿದ್ದರೆ ಸಂಕಷ್ಟ ತಪ್ಪಿದ್ದಲ್ಲ. ಕಾರಣ ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿನ ಬ್ಯಾಂಕ್ ರಜೆ(Bank Holdiay) ಸಂಖ್ಯೆ 21. 

ಕಾರ್ಡ್ ಟೋಕನೈಸೇಷನ್: ಮುಂದಿನ ವರ್ಷದಿಂದ ಆನ್ಲೈನ್ ಪಾವತಿ ಸುರಕ್ಷಿತ

ಅಕ್ಟೋಬರ್(October) ತಿಂಗಳಲ್ಲಿ ಬ್ಯಾಂಕ್ ತೆರೆದಿರುವುದಕ್ಕಿಂತ ಮುಚ್ಚಿರುವುದೇ ಹೆಚ್ಚು. ಆದರೆ 21 ದಿನ ಎಲ್ಲಾ ರಾಜ್ಯಗಳಲ್ಲಿ ಅನ್ವಯವಾಗುವುದಿಲ್ಲ. RBI ಬಿಡುಗಡೆ ಮಾಡಿದ ಕ್ಯಾಲೆಂಡರ್‌ನಲ್ಲಿ(calendar) ಖಾಸಗಿ ಬ್ಯಾಂಕ್, ಸಾರ್ವಜನಿಕ ಬ್ಯಾಂಕ್, ವಿದೇಶಿ ಬ್ಯಾಂಕ್, ಸಹಕಾರಿ ಬ್ಯಾಂಕ್ ಹಾಗೂ ಪ್ರಾದೇಶಿಕ ಬ್ಯಾಂಕ್‌ಗಳ ರಜೆ ವಿವರವನ್ನು ನೀಡಿದೆ.

75 ವರ್ಷ ಮೇಲ್ಪಟ್ಟವರಿಗೆ ಐಟಿ ರಿಟರ್ನ್ಸ್ ವಿನಾಯ್ತಿ ಫಾರಂ ಬಿಡುಗಡೆ

ಅಕ್ಟೋಬರ್ ತಿಂಗಳಲ್ಲಿ ಗಾಂಧಿ ಜಯಂತಿ(Gandhi Jayanti), ವಿಜಯ ದಶಮಿ(Vijaya Dashami), ಈದ್ ಮಿಲಾದ್(Id-E-Milad), ವಾಲ್ಮೀಕಿ ಜಯಂತಿ (Valmiki Jayanti) ಸೇರಿದಂತೆ ಹಲವು ರಜೆಗಳಿವೆ. ಇದರೊಂದಿಗೆ ಕೆಲ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುವ ದುರ್ಗಾ ಪೂಜಾ, ಕಟಿ ಬಿಹು ಸೇರಿದಂತೆ ಕೆಲ ಹಬ್ಬಗಳ ರಜೆ ಕೂಡ ಅಕ್ಟೋಬರ್ ತಿಂಗಳಲ್ಲೇ ಆಗಮಿಸುತ್ತಿದೆ.

ಬ್ಯಾಂಕ್ ಲಾಕರ್ ಹೊಸ ನಿಯಮ: ವಸ್ತು ಕಳೆದು ಹೋದ್ರೆ ಸಿಗಲಿದೆ ಪರಿಹಾರ!

ದೇಶದಲ್ಲಿನ ಬ್ಯಾಂಕ್ ರಜಾ ವಿವರ(RBI ಕ್ಯಾಲೆಂಡರ್):
ಅಕ್ಟೋಬರ್ 1: ಹಣಕಾಸು ವರ್ಷದ ಮಧ್ಯಭಾಗದ ರಜೆ(ಕೇವಲ ಗ್ಯಾಂಗ್ಟಾಕ್‌ನಲ್ಲಿ ಮಾತ್ರ)
ಅಕ್ಟೋಬರ್ 2: ಗಾಂಧಿ ಜಯಂತಿ
ಅಕ್ಟೋಬರ್ 3: ಭಾನುವಾರ
ಅಕ್ಟೋಬರ್ 6: ಮಹಾಲಯ ಅಮಾವಾಸ್ಯೆ (ಅಗರ್ತಲಾ, ಬೆಂಗಳೂರು, ಕೋಲ್ಕತಾ)
ಅಕ್ಟೋಬರ್ 7: ಮೀರಾ ಚೌರೆನ್ ಹೌಬಾ ಸನಮಾಹಿ(ಇಂಪಾಲ್)
ಅಕ್ಟೋಬರ್ 9: ಎರಡನೇ ಶನಿವಾರ
ಅಕ್ಟೋಬರ್ 10: ಭಾನುವಾರ
ಅಕ್ಟೋಬರ್ 12: ದುರ್ಗಾ ಪೂಜಾ(ಮಹಾ ಸಪ್ತಮಿ)ಅಗರ್ತಲಾ, ಕೋಲ್ಕತಾ)
ಅಕ್ಟೋಬರ್ 13: ದುರ್ಗಾ ಪೂಜಾ(ಮಹಾ ಸಪ್ತಮಿ)(ಅಗರ್ತಲಾ, ಭುವನೇಶ್ವರ, ಗ್ಯಾಂಗ್ಟಾಕ್, ಗುವಾಹಟಿ, ಇಂಫಾಲ್, ಕೋಲ್ಕತಾ, ಪಾಟ್ನಾ, ರಾಂಚಿ)
ಅಕ್ಟೋಬರ್ 14: ದುರ್ಗಾ ಪೂಜಾ/ದಸರಾ/ಮಹಾ ನವಮಿ/ಆಯುಧಾ ಪೂಜಾ(ಅಗರ್ತಲಾ, ಬೆಂಗಳೂರು, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಕಾನ್ಪುರ, ಕೊಚ್ಚಿ, ಕೋಲ್ಕತಾ, ಲಕ್ನೋ, ಪಾಟ್ನಾ, ರಾಂಚಿ, ಶಿಲ್ಲಾಂಗ್, ಶ್ರೀನಗರ, ತಿರುವನಂತಪುರಂ)
ಅಕ್ಟೋಬರ್ 15:  ದುರ್ಗಾ ಪೂಜಾ/ದಸರಾ/ ವಿಜಯ ದಶಮಿ(ಇಂಫಾಲ್ ಮತ್ತು ಶಿಮ್ಲಾ ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು)
ಅಕ್ಟೋಬರ್ 16: ದುರ್ಗಾ ಪೂಜೆ (ದಾಸೈನ್) / (ಗ್ಯಾಂಗ್ಟಾಕ್)
ಅಕ್ಟೋಬರ್ 17: ಭಾನುವಾರ
ಅಕ್ಟೋಬರ್ 18: ಕಟಿ ಬಿಹು(ಗುವ್ಹಾಟಿ)
ಅಕ್ಟೋಬರ್ 19: ಈದ್ ಇ ಮಿಲಾದ್(ಅಹಮದಾಬಾದ್, ಬೇಲಾಪುರ, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ, ಕೊಚ್ಚಿ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್‌ಪುರ್, ರಾಂಚಿ, ಶ್ರೀನಗರ, ತಿರುವನಂತಪುರಂ)
ಅಕ್ಟೋಬರ್ 20: ವಾಲ್ಮೀಕಿ ಜಯಂತಿ, ಲಕ್ಷ್ಮೀ ಪೂಜೆ(ಅಗರ್ತಲಾ, ಬೆಂಗಳೂರು, ಚಂಡೀಘಡ, ಕೋಲ್ಕತಾ, ಶಿಮ್ಲಾ)
ಅಕ್ಟೋಬರ್ 22: ಈದ್-ಇ-ಮಿಲಾದ್-ಉಲ್-ನಬಿ (ಜಮ್ಮು, ಶ್ರೀನಗರ)
ಅಕ್ಟೋಬರ್ 23: ನಾಲ್ಕನೇ ಶನಿವಾರ
ಅಕ್ಟೋಬರ್ 24: ಭಾನುವಾರ
ಅಕ್ಟೋಬರ್ 26: ಆ್ಯಕ್ಸೆಶನ್ ಡೇ(ಜಮ್ಮು ಕಾಶ್ಮೀರ)

ಅಕ್ಟೋಬರ್ 31:ಭಾನುವಾರ

ಪಾಸಿಟಿವ್ ಪೇ ವ್ಯವಸ್ಥೆ ಅಂದ್ರೇನು? ಅದ್ರಿಂದ ಯಾರಿಗೆ ಲಾಭ?

ಅಕ್ಟೋಬರ್ ತಿಂಗಳಲ್ಲಿ 5 ಭಾನುವಾರ, ಎರಡು ರಜಾ ದಿನದ ಶನಿವಾರ ಹಾಗೂ ಆಯಾ ರಾಜ್ಯದ ಹಬ್ಬದ ರಜೆಗಳು ಇವೆ. ಹೀಗಾಗಿ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯದ ಬ್ಯಾಂಕ್‌ಗಳಿಗೆ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ರಜೆಗಳು ಸಿಗಲಿವೆ. 

click me!