100 ರೂಪಾಯಿ ಗಡಿ ದಾಟಿದ ಡೀಸೆಲ್ ಬೆಲೆ; ಪೆಟ್ರೋಲ್ ಮತ್ತಷ್ಟು ದುಬಾರಿ!

By Chethan Kumar  |  First Published Jun 12, 2021, 8:34 PM IST
  • ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ
  • ಪೆಟ್ರೋಲ್ ಈಗಾಗಲೇ 100 ರೂಪಾಯಿ ದಾಟಿ ಮುನ್ನುಗ್ಗುತ್ತಿದೆ
  • ಇದೀಗ ಡೀಸೆಲ್ ಬೆಲೆ ಕೂಡ 100ರ ಗಡಿ ದಾಟಿದೆ

ನವದೆಹಲಿ(ಜೂ.12): ಕೊರೋನಾ ವೈರಸ್ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಬಿಸಿ ಪ್ರತಿಯೊಬ್ಬರನ್ನು ಕಾಡುತ್ತಿದೆ. ಇಷ್ಟು ದಿನ ಪೆಟ್ರೋಲ್ ಬೆಲೆ 100ರ ಗಡಿ ಗಾಡಿ ಹಲವು ದಿನಗಳಾಗಿವೆ. ಇದೀಗ ಡೀಸೆಲ್ ಬೆಲೆಯೂ 100 ರೂಪಾಯಿ ದಾಡಿದೆ. ರಾಜಸ್ಥಾನದಲ್ಲಿ ಡೀಸೆಲ್ ಬೆಲೆ 100 ರೂಪಾಯಿ ಗಡಿ ದಾಟಿದೆ.

ತಿಗಣೆಯಂತೆ ಜನರ ರಕ್ತ ಹೀರುತ್ತಿರುವ ಮೋದಿ: ಪ್ರಧಾನಿ ವಿರುದ್ಧ ಸಿದ್ದು ಕೆಂಡಾಮಂಡಲ

Tap to resize

Latest Videos

undefined

ಮೇ 4 ರಿಂದ ಆರಂಭಗೊಂಡ ತೈಲ ಬೆಲೆ ಏರಿಕೆ ಇನ್ನೂ ನಿಂತಿಲ್ಲ. ಇದೀಗ 23ನೇ ಬಾರಿಗೆ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ 27 ಪೈಸೆ ಹೆಚ್ಚಾಗಿದ್ದರೆ, ಡೀಸೆಲ್ ಬೆಲೆ 23 ಪೈಸೆ ಹೆಚ್ಚಾಗಿದೆ.  ಕರ್ನಾಟಕದಲ್ಲೂ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಈ ಮೂಲಕ ಶತಕ ಬಾರಿಸಿದ 7ನೇ ರಾಜ್ಯ ಅನ್ನೋ ಕುಖ್ಯಾತಿಗೆಗೆ ಪಾತ್ರವಾಗಿದೆ.

ಕರ್ನಾಟಕದ ಬೀದರ್, ಬಳ್ಳಾರಿ, ಕೊಪ್ಪಳ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು  ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 99.39 ಪೈಸೆ ಆಗಿದ್ದರೆ, ಡೀಸೆಲ್ ಬೆಲೆ 92.97 ರೂಪಾಯಿ ಆಗಿದೆ. ರಾಜಸ್ಥಾನ, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಸ, ತೆಲಂಗಾಣ, ಹಾಗೂ ಲಡಾಖ್‍‍‌ನಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. 

'6 ತಿಂಗಳಲ್ಲಿ 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್‌ ದರ ಹೆಚ್ಚಳ

ದೆಹಲಿಯಲ್ಲಿ ಪೆಟ್ರೋಲ್  96.12 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 86.98 ರೂಪಾಯಿ ಪ್ರತಿ ಲೀಟರ್‌ಗೆ ಆಗಿದೆ.  ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ದೇಶದಲ್ಲೇ ಗರಿಷ್ಠ ಬೆಲೆಯಾಗಿದೆ. ಇಲ್ಲಿ ಪೆಟ್ರೋಲ್ ಬೆಲೆ 107.22 ರೂಪಾಯಿ . ಡೀಸೆಲ್ ಬೆಲೆ 100.5 ರೂಪಾಯಿ.  ಇನ್ನು ಪ್ರೀಮಿಯಂ ಪೆಟ್ರೋಲ್ ಬೆಲೆ 110.50 ರೂಪಾಯಿ ಹಾಗೂ  ಡೀಸೆಲ್ ಬೆಲೆ 103.72 ರೂಪಾಯಿ.

click me!