
ನವದೆಹಲಿ(ಜೂ.12): ಕೊರೋನಾ ವೈರಸ್ ಚಿಕಿತ್ಸೆಗಾಗಿ ಬಳಸುವ ಉಪಕರಣ, ಔಷಧಿ, ಇಂಜೆಕ್ಷನ್ ಮೇಲಿನ ತೆರಿಗೆ ನಿರ್ಧರಿಸಲು ಕರೆದಿದ್ದ 44ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ದೇಶದಲ್ಲಿ ಹೆಚ್ಚಾಗುತ್ತಿರುವ ಬ್ಲಾಕ್ ಫಂಗಸ್ ಚಿಕಿತ್ಸೆಯ ಚುಚ್ಚು ಮದ್ದಿನ ಮೇಲಿನ GST(ತೆರಿಗೆ)ಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ.
"
ಕೋವಿಡ್ ಅಬ್ಬರವಿದ್ದರೂ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ!
ಕೌನ್ಸಿಲ್ ಸಭೆ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ನಿರ್ಧಾರಗಳನ್ನು ಘೋಷಿಸಿದರು. ಕೋವಿಡ್ ಸಂಬಂಧಿತ ಉಪಕರಣಗಳ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು. ಈ ಸಭೆಯಲ್ಲಿನ ಪ್ರಮುಖ ನಿರ್ಧಾರಗಳ ವಿವರ ಇಲ್ಲಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಲಸಿಕೆ ನೀತಿ ಪ್ರಕಾರ ಶೇಕಡಾ 75 ರಷ್ಟು ಲಸಿಕೆಯನ್ನು ಕೇಂದ್ರ ಖರೀದಿಸಿ ರಾಜ್ಯಗಳಿಗೆ ಹಂಚಲಿದೆ. ಶೇಕಡಾ 75 ರಷ್ಟು ಲಸಿಕೆ ಖರೀದಿಯಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಪಾವತಿಸಲಿದೆ. ಈ ಜಿಎಸ್‌ಟಿ ಮೊತ್ತವನ್ನು ರಾಜ್ಯಗಳಿಗೆ ಹಂಚಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
3 ತಿಂಗಳಲ್ಲಿ 20124 ಕೋಟಿ ರು. ಜಿಎಸ್‌ಟಿ ವಂಚನೆ ಪತ್ತೆ!.
ಕೋವಿಡ್ ಸಂಬಂಧಿತ ಉಪಕರಣ, ಔಷಧಿಗಳ ಮೇಲಿನ ಜಿಎಸ್‌ಟಿ ಕಡಿತ ಕುರಿತು ಪರಿಶೀಲಿಸಲು ಜಿಎಸ್‌ಟಿ ಕೌನ್ಸಿಲ್ ಸಚಿವರ ಸಮಿತಿಯೊಂದನ್ನ ರಚಿಸಿತ್ತು. ಈ ಸಮಿತಿ ಕೌನ್ಸಿಲ್‍ಗೆ ವರದಿ ನೀಡಿದೆ. ಈ ವರದಿಯ ಆಧಾರದಲ್ಲಿ ಇದೀಗ ಮಹತ್ವದ ನಿರ್ಧಾರಗಳ ಕೈಗೊಳ್ಳಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.