ಡೀಸೆಲ್ ಬೆಲೆ 8.36 ರೂ ಇಳಿಕೆ, VAT ಕಡಿತಗೊಳಿಸಿದ ಸರ್ಕಾರ!

Published : Jul 30, 2020, 02:21 PM ISTUpdated : Jul 30, 2020, 06:09 PM IST
ಡೀಸೆಲ್ ಬೆಲೆ 8.36 ರೂ ಇಳಿಕೆ, VAT ಕಡಿತಗೊಳಿಸಿದ ಸರ್ಕಾರ!

ಸಾರಾಂಶ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇದೀಗ ಭಾರತವನ್ನೇ ಕಂಗೆಡಿಸಿದೆ. ಕೊರೋನಾ ವೈರಸ್ ಹೊಡೆತದ ನಡುವೆ ಇಂಧನ ಬೆಲೆಯೂ ಏರಿಕೆ ಕಂಡಿರುವುದು ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಗಿಂತ ಹೆಚ್ಚಾಗಿರುವುದು ಮತ್ತಷ್ಟು ಆತಂಕ ತಂದಿದೆ. ಇದೀಗ ಸರ್ಕಾರ ಡೀಸೆಲ್ ಮೇಲಿನ VAT ತೆರಿಗೆ ಕಡಿತಗೊಳಿಸೋ ಮೂಲಕ ಬರೋಬ್ಬರಿ 8.36 ರೂಪಾಯಿ ಕಡಿಮೆ ಮಾಡಿದೆ.  

ದೆಹಲಿ(ಜು.30):  ಕೊರೋನಾ ವೈರಸ್ ಕಾರಣ ಜನರ ಜೀವನ ಕಷ್ಟವಾಗಿದೆ. ಆದಾಯದ ಮೂಲಕಕ್ಕೆ ಕತ್ತರಿ ಬಿದ್ದಿದೆ. ಇದರ ಬೆನ್ನಲ್ಲೇ ಇಂಧನ ದರ ಏರಿಕೆಯೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ, ಪೆಟ್ರೋಲ್ ಬೆಲೆಗಿಂತ ಹೆಚ್ಚಾಗಿದೆ. ಇದರಿಂದ ಅಗತ್ಯ ವಸ್ತು ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರಿಗೆ ಡೀಸೆಲ್ ಬೆಲೆ ಏರಿಕೆ ಬಿಸಿ ತಪ್ಪಿಸಲು ದೆಹಲಿ ಸರ್ಕಾರ VAT ಕಡಿತಗೊಳಿಸಿದೆ.

ಪೆಟ್ರೋಲ್‌ಗಿಂತ ಈಗ ಡೀಸೆಲ್‌ ದುಬಾರಿ! 

ಡೀಸೆಲ್ ಮೇಲಿನ VAT(value added tax)ಶೇಕಡಾ 16.75 ರಷ್ಟು ಕಡಿತ ಮಾಡಲಾಗಿದೆ. ಈ ಮೊದಲು ದೆಹಲಿಯಲ್ಲಿ ಡೀಸೆಲ್ ಮೇಲೆ ಶೇಕಡಾ 30 ರಷ್ಟು VAT ತೆರಿಗೆ ಹಾಕಲಾಗುತ್ತಿತ್ತು. ಸದ್ಯ ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 81.94 ರೂಪಾಯಿ ಆಗಿದೆ. ಡೀಸೆಲ್ ಬೆಲೆ ಪೆಟ್ರೋಲ್‌ಗಿಂತ ದುಬಾರಿಯಾಗಿದೆ. ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 80.43 ರೂಪಾಯಿ. 

ಇಂಧನ ಬೆಲೆ ಏರಿಕೆ ಸರಿಯಲ್ಲ: ಮೋದಿಗೆ ಸೋನಿಯಾ ಪತ್ರ.

VAT ಕಡಿತದಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ 73.64 ರೂಪಾಯಿ  ಆಗಲಿದೆ. ವ್ಯಾಪಾರಿಗಳು, ಕೈಗಾರಿಕೆಗಳು ಡೀಸೆಲ್ ಮೇಲಿನ VAT ಕಡಿತಕ್ಕೆ ಮನವಿ ಮಾಡಿತ್ತು. ದೆಹಲಿ ಆರ್ಥಿಕತ ಪುನ್ಚೇತನ ದೃಷ್ಟಿಯಿಂದ ಡೀಸೆಲ್ ಮೇಲಿನ VAT ಕಡಿತಗೊಳಿಸಿ, ಡೀಸೆಲ್ ಬೆಲೆಯನ್ನ ಕಡಿಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!