ಕೇಂದ್ರ ಬಜೆಟ್‌ನಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣದಲ್ಲಿ ಶೇ. 16ರಷ್ಟು ಏರಿಕೆಯಾಗಿದೆ. ನಿರ್ಮಲಾ ಸೀತಾರಾಮನ್, 5.93 ಲಕ್ಷ ಕೋಟಿ ಹಣವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ಬಾರಿ 69 ಸಾವಿರ ಕೋಟಿ ರೂಪಾಯಿ ಏರಿಕೆಯಾಗಿದೆ.
ನವದೆಹಲಿ (ಫೆ.1): ವಿಶ್ವದ ಅತೀದೊಡ್ಡ ಸೇನಾಶಕ್ತಿಗಳಲ್ಲಿ ಒಂದಾಗಿರುವ ಭಾರತೀಯ ಸೇನೆಗೆ ಕೇಂದ್ರ ಬಜೆಟ್‌ನಲ್ಲೂ ದೊಡ್ಡ ಪಾಲು ಮೀಸಲಿಟ್ಟಿದೆ. ನಿರ್ಮಲಾ ಸೀತಾರಾಮನ್ ಬುಧವಾರ ಮಂಡನೆ ಮಾಡಿದ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ 5.94 ಲಕ್ಷ ಕೋಟಿ ಹಣವನ್ನು ಮೀಸಲಿಡಲಾಗಿದೆ. ಒಟ್ಟಾರೆ ರಕ್ಷಣಾ ಕ್ಷೇತ್ರಕ್ಕೆ ಕಳೆದ ಬಾರಿಯ ಬಜೆಟ್‌ಗೆ ಹೋಲಿಸಿದರೆ ಈ ಬಾರಿಯ ಬಜೆಟ್‌ನಲ್ಲಿ 69 ಸಾವಿರ ಕೋಟಿ ರೂಪಾಯಿ ಏರಿಕೆ ಮಾಡಲಾಗಿದೆ. ಇದು ಭಾರತೀಯ ಸೇನೆಯ ಮೂರೂ ಸೇನಾಪಡೆಗಳನ್ನು ಆಧುನೀಕರಣಗೊಳಿಸಲು ಬಳಸಿಕೊಳ್ಳಲಾಗುತ್ತದೆ. 2022-23ರಲ್ಲಿ ದೇಶದ ಸೇನೆಗೆ ಬಜೆಟ್‌ನಲ್ಲಿ 5,25, 166 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿತ್ತು. ಬಜೆಟ್‌ನಲ್ಲಿ ಭಾರತೀಯ ಸೇನಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣವನ್ನು ನೋಡಿದರೆ, ಭಾರತ ತನ್ನ ಗಡಿ ರಕ್ಷಣೆಯಲ್ಲಿ ಎಷ್ಟು ಎಚ್ಚರವಾಗಿ ಎನ್ನುವುದು ಅರ್ಥವಾಗುತ್ತದೆ. ನೆರೆಯ ದೇಶಗಳಾದ ಚೀನಾ ಹಾಗೂ ಪಾಕಿಸ್ತಾನದಿಂದ ನಿರಂತರವಾಗಿ ಆಕ್ರಮಣವನ್ನು ಭಾರತ ಎದುರಿಸುತ್ತಿದೆ. ಅದರ ನಡುವೆ ಸರ್ಕಾರ ರಕ್ಷಣಾ ವಲಯಕ್ಕೆ ದೊಡ್ಡ ಮಟ್ಟದ ಹಣ ಮೀಸಲಿಡಲಾಗಿದೆ.
ಒಟ್ಟು 14.4 ಲಕ್ಷ ಸೈನಿಕರನ್ನು ಭಾರತದ ಸೇನಾಪಡೆಗಳು ಹೊಂದಿದ್ದು, ವಿಶ್ವದ ದೊಡ್ಡ ಸೇನಾಪಡೆ ಎನಿಸಿಕೊಂಡಿದೆ. ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಆಧುನೀಕರಣಕ್ಕೆ ಈ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಶಸ್ತ್ರಾಸ್ತ್ರ ಕಾರ್ಖಾನೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಶಸ್ತಾಸ್ತ್ರಗಳ ಖರೀದಿಗಾಗಿ ಈ ಹಣವನ್ನು ಬಳಸಿಕೊಳ್ಳಾಗುತ್ತದೆ.
5.94 ಲಕ್ಷ ಕೋಟಿ ರೂಪಾಯಿಗಳಲ್ಲಿ ಶಸ್ತಾಸ್ತ್ರ ಖರೀದಿ, ತಯಾರಿಕೆ ಹಾಗೂ ಆಧುನೀಕರಣಕ್ಕಾಗಿ 1.62 ಲಕ್ಷ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. 2022ರಲ್ಲಿ 1.50 ಲಕ್ಷ ಕೋಟಿ ಮೀಸಲಿಡಲಾಗಿತ್ತು. ಸೇನೆಯ ರೆವಿನ್ಯೂಗೆ 2.70 ಲಕ್ಷ ಕೋಟಿ, ಪಿಂಚಣಿಗೆ 1.38 ಲಕ್ಷ ಕೋಟಿ, ಸಿವಿಲ್ ಡಿಫೆನ್ಸ್‌ಗೆ 0.22 ಲಕ್ಷ ಕೋಟಿ ಮೀಸಲಿಡಲಾಗಿದೆ. ಇನ್ನು ಸೇನಾವಾರು ಲೆಕ್ಕಾಚಾರಕ್ಕೆ ಹೋಗೋದಾದರೆ, ಭೂಸೇನೆಗ 37.24 ಸಾವಿರ ಕೋಟಿ ರೂಪಾಯಿ, ನೌಕಾಸೇನೆಗೆ 52.80 ಸಾವಿರ ಕೋಟಿ ರೂಪಾಯಿ ಹಾಗೂ ವಾಯುಸೇನೆಗೆ 57.13 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.
Budget 2023: ಒಂದು ಜಿಲ್ಲೆ, ಒಂದು ಉತ್ಪನ್ನ; ಪ್ರವಾಸೋದ್ಯಮಕ್ಕೆ ಸರ್ಕಾರದ ಚೈತನ್ಯ!
undefined
ರಕ್ಷಣಾ ಬಜೆಟ್‌ಅನ್ನು 5 ವರ್ಷಗಳಲ್ಲೇ ದ್ವಿಗುಣ ಮಾಡಿದ ಮೋದಿ ಸರ್ಕಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಹೋಲಿಸಿದರೆ, ರಕ್ಷಣಾ ಕ್ಷೇತ್ರದ ಬಜೆಟ್‌ಅನ್ನು ದ್ವಿಗುಣ ಮಾಡಿದೆ. 2017ರಲ್ಲಿ ರಕ್ಷಣಾ ಕ್ಷೇತ್ರಕ್ಕೆ 2.74 ಲಕ್ಷ ಕೋಟಿ ರೂಪಾಯಿ ಹಣ ಮೀಸಲಿಡಲಾಗಿದ್ದರೆ, ಈ ಬಾರಿ ಬಜೆಟ್‌ನಲ್ಲಿ ಈ ಮೊತ್ತ 5.94 ಕೋಟಿ ರೂಪಾಯಿಗೆ ಏರಿದೆ. ಇನ್ನು 2022-23ರ ಸಾಲಿನ ಅಂದರೆ ಕಳೆದ ವರ್ಷದ ಬಜೆಟ್ ಗಾತ್ರ 39.45 ಲಕ್ಷ ಕೋಟಿ ರೂಪಾಯಿ ಆಗಿತ್ತು. ಅದರಲ್ಲಿ ಶೇ. 13.31ರಷ್ಟು ಅಂದರೆ 5.25 ಲಕ್ಷ ಕೋಟಿ ರೂಪಾಯಿಯನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಡಲಾಗಿತ್ತು. ಇದರಲ್ಲಿ 1.19 ಲಕ್ಷ ಕೋಟಿ ಪಿಂಚಣಿಗೆ ಮೀಸಲಿಡಲಾಗಿತ್ತು. 2021-22ರ ಬಜೆಟ್‌ಗೆ ಹೋಲಿಸಿದರೆ, ಕಳೆದ ವರ್ಷದ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಶೇ. 9.82 ರಷ್ಟು ಏರಿಕೆಯಾಗಿತ್ತು. ಒಟ್ಟು 46,970 ಕೋಟಿ ರೂಪಾಯಿಯನ್ನು ಸರ್ಕಾರ ಏರಿಕೆ ಮಾಡಿತ್ತು.
Union Budget 2023 ಮಧ್ಯಮ ವರ್ಗ ಸೇರಿದಂತೆ ಪ್ರತಿ ಕ್ಷೇತ್ರಕ್ಕೆ ಭರಪೂರ ಕೊಡುಗೆ, ಬಜೆಟ್ ಮೇಲೆ ಮೋದಿ ಭಾಷಣ!
ಕಳೆದ ಐದು ವರ್ಷಗಳಲ್ಲಿ ರಕ್ಷಣಾ ಬಜೆಟ್
2018-19: 4,04,365 ಕೋಟಿ
2019-20: 4,31,011 ಕೋಟಿ
2020-21: 4,71,378 ಕೋಟಿ
2021-22: 4,78,196 ಕೋಟಿ
2022-23: 5,25,166 ಕೋಟಿ