Union Budget 2023 ಆಯವ್ಯಯ ಮಂಡನೆ ಬಳಿಕ ಯಾವುದು ದುಬಾರಿ, ಯಾವುದು ಅಗ್ಗ?

By Suvarna News  |  First Published Feb 1, 2023, 1:54 PM IST

ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಕೇದ್ರ ಬಜೆಟ್ ಮಂಡಿಸಿದ್ದಾರೆ. ಮಧ್ಯಮ ವರ್ಗದ ತೆರಿಗೆದಾರರಿಗೆ ಬಂಪರ್ ಕೊಡುಗೆ ಘೋಷಿಸಿದರೆ, ಆಮದು ಸುಂಕ, ರಫ್ತು ಸುಂಕದಲ್ಲಿ ಕೆಲ ಬದಲಾವಣೆಗಳಾಗಿವೆ. ಇಷ್ಟೇ ಅಲ್ಲ ಸಿಗರೇಟು ತಂಬಾಕು ದುಬಾರಿಯಾಗಿದ್ದರೆ, ಮೊಬೈಲ್ ಫೋನ್, ಸ್ಥಳೀಯ ಮತ್ಸ ಉತ್ಪನ್ನಗಳು ಅಗ್ಗವಾಗಿದೆ. ಬಜೆಟ್ ಬಳಿಕ ಯಾವುದೇ ದುಬಾರಿ? ಯಾವುದು ಅಗ್ಗ ಇಲ್ಲಿದೆ ಸಂಪೂರ್ಣ ವಿವರ.


ನವದೆಹಲಿ(ಫೆ.01):  ಬಹುನಿರೀಕ್ಷಿತ ಕೇಂದ್ರದ ಬಜೆಟ್ ಮಂಡನೆಯಾಗಿದೆ. ಹಲವು ಕುತೂಹಲಗಳು, ಆತಂಕಕ್ಕೆ ಉತ್ತರ ಸಿಕ್ಕಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಭಾರತ ಬಜೆಟ್ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ಮೋದಿ ಸರ್ಕಾರ ಮಂಡಿಸಿದ 5ನೇ ಹಾಗೂ ಸಂಪೂರ್ಣ ಕೊನೆಯ ಬಜೆಟ್ ಆಗಿದೆ. ಪ್ರತಿ ವರ್ಷದಂತೆ ಬಜೆಟ್ ಬಳಿಕ ಜನಸಾಮಾನ್ಯರ ಮೇಲೆ ಈ ಬಜೆಟ್ ಬೀರುವ ಪರಿಣಾಮ ಏನು? ಜನಸಾಮಾನ್ಯ ದಿನನಿತ್ಯದ ಬದುಕಿನಲ್ಲಿ ಈ ಬಜೆಟ್ ಯಾವ ರೀತಿ ಪರಿಣಾಮ ಬೀರಲಿದೆ. ಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಭಾರತದಲ್ಲಿ ಹಲವು ವಸ್ತುಗಳು, ಉತ್ಪನ್ನಗಳು ದುಬಾರಿಯಾಗಿದ್ದರೆ, ಕೆಲ ವಸ್ತುಗಳು ಅಗ್ಗವಾಗಿದೆ.  ಈ ಕುರಿತ ಸಂಪೂರ್ಣ ಲಿಸ್ಟ್ ಇಲ್ಲಿದೆ.

ಯಾವುದು ದುಬಾರಿ?
ಅಡುಗೆ ಮನೆ ಚಿಮಿಣಿ ಬೆಲೆ ಏರಿಕೆ(ಸುಂಕ ಶೇಕಡ 7 ರಿಂದ 13ಕ್ಕೆ ಏರಿಕೆ)
ಚಿನ್ನ, ಪ್ಲಾಟಿನಂ, ಬೆಳ್ಳಿ ದುಬಾರಿ
ತಾಮ್ರದ ಉತ್ಪನ್ನಗಳು ದುಬಾರಿ
ಆಮದು ಮಾಡಿಕೊಂಡ ರಬ್ಬರ್
ಸಿಗರೇಟು, ತುಂಬಾಕು ಉತ್ಪನ್ನಗಳು ದುಬಾರಿ
ಬ್ರಾಂಡೆಟ್ ಬಟ್ಟೆ ದುಬಾರಿ
ಪ್ರೈವೇಟ್ ಜೆಟ್, ಹೆಲಿಕಾಪ್ಟರ್ ದುಬಾರಿ
ಚಿನ್ನಾಭರಣಗಳು ದುಬಾರಿ
ಗ್ಲಾಸ್ ಪೇಪರ್, ವಿಟಮಿನ್ಸ್ ಸೇರಿದಂತೆ 35 ಉತ್ಪನ್ನಗಳು ದುಬಾರಿ

Tap to resize

Latest Videos

undefined

ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ

ಯಾವುದು ಅಗ್ಗ?
ಮೊಬೈಲ್ ಬಿಡಿ ಭಾಗ ಮೇಲಿನ ಆಮದು ಸುಂಕ ಇಳಿಕೆ
ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳಾದ ಲಿಥಿಯಂ ಐಯಾನ್ ಬ್ಯಾಟರಿ ಬೆಲೆ ಇಳಿಕೆ
ಕ್ಯಾಮೆರಾ ಲೆನ್ಸ್, ಆಟದ ಸಾಮಾನು
ಸೈಕಲ್ ಟಿವಿ ಬಿಡಿಭಾಗ, ಗ್ಲಿಸರಿನ್, ನೈಸರ್ಗಿಕ ಅನಿಲ ಇಳಿಕೆ
ವಜ್ರಗಳ ತಯಾರಿಕೆಯಲ್ಲಿ ಬಳಸುವ ಬೀಜಗಳು
ದೇಶಿಯ ಸಿಗಡಿ ಉತ್ಪನ್ನ
ಈಥೈಲ್ ಆಲ್ಕೋಹಾಲ್
 
ಸೀತಾರಾಮನ್ ಕೆಲ ಆಮದು ಹಾಗೂ ರಫ್ತು ತೆರಿಗೆಯಲ್ಲಿ ಬದಲಾವಣೆ ಮಾಡಲಾಗಿದೆ.  ಜವಳಿ ಹಾಗೂ ಕೃಷಿ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇಕಡ 21 ರಿಂದ ಶೇಕಡಾ 13ಕ್ಕೆ ಇಳಿಸಲಾಗಿದೆ. ಈ ಮೂಲಕ ಈ ಎರಡು ಕ್ಷೇತ್ರಕ್ಕೆ ಭಾರಿ ಉತ್ತೇಜನ ಸಿಗಲಿದೆ. ಜವಳಿ ಹಾಗೂ ಕೃಷಿ ಕ್ಷೇತ್ರವನ್ನು ಹೆಚ್ಚಾಗಿ ಅವಲಂಬಿಸಿರುವ ಭಾರತಕ್ಕೆ ಈ ಬಜೆಟ್ ಹೊಸ ಸಂಚಲನ ಸೃಷ್ಟಿಸಲಿದೆ. ಇದರ ಜೊತೆಗೆ ಆಟಿಕೆ, ಬೈಸಿಕಲ್, ಆಟೋಮೊಬೈಲ್ ಸೇರಿದಂತೆ ಕೆಲ ವಸ್ತುಗಳ ಮೇಲಿನ ಮೂಲಭೂತ ಆಮದು ಸುಂಕ, ಸೆಸ್ ಹಾಗೂ ಹೆಚ್ಚುವರಿ ಶುಲ್ಕಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.

 

Union Budget 2023 ಮಧ್ಯಮ ವರ್ಗಕ್ಕೆ ಬಂಪರ್, ಆದಾಯ ತೆರಿಗೆ ಮಿತಿ 7 ಲಕ್ಷ ರೂಗೆ ಏರಿಕೆ!

ಕಳೆದ ವರ್ಷ ಅಂದರೆ 2022ರ ಬಜೆಟ್‌ನಲ್ಲಿ ಲೌಡ್‌ಸ್ಪೀಕರ್, ಹೆಡ್‌ಫೋನ್, ಇಯರ್‌ಫೋನ್, ಛತ್ರಿ, ಚಿನ್ನಾಭರಣ, ಸ್ಮಾರ್ಟ್ ಮೀಟರ್ಸ್,ಸೌರ ಶಕ್ತಿ ಬ್ಯಾಟರಿ, ಸೋಲಾರ್ ಮಾಡ್ಯುಲ್, X ರೇ ಮಶಿನ್, ಎಲೆಕ್ಟ್ರಾನಿಕ್ ಆಟದ ಸಾಮಾನು ಅಗ್ಗವಾಗಿತ್ತು. ಇದೇ ವೇಳೆ ಬಟ್ಟೆ, ಮೊಬೈಲ್ ಫೋನ್ ಚಾರ್ಜರ್, ಶೀತಲೀಕರಣ ಮತ್ಸ ಉತ್ಪನ್ನ, ಕೋಕಾ ಬೀಜಗಳು, ಕಟ್ ಹಾಗೂ ಪಾಲೀಶ್ಡ್ ಡೈಮಂಡ್ ಬೆಲೆ ದುಬಾರಿಯಾಗಿತ್ತು.

click me!