ಹಣಕಾಸು ಸಂಬಂಧಿ ಕೆಲಸಗಳಿಗೆ ನೀಡಿರುವ ಅಂತಿಮ ಗಡುವಿನ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ನವೆಂಬರ್ ತಿಂಗಳಲ್ಲಿ ಕೂಡ ಇಂಥ ಕೆಲವು ಪ್ರಮುಖ ಹಣಕಾಸು ಸಂಬಂಧಿ ಕೆಲಸಗಳಿಗೆ ಅಂತಿಮ ಗಡುವು ನೀಡಲಾಗಿದೆ.
ನವದೆಹಲಿ (ನ.1): ನವೆಂಬರ್ ತಿಂಗಳು ಅನೇಕ ಪ್ರಮುಖ ಹಣಕಾಸಿನ ಕೆಲಸಗಳಿಗೆ ಅಂತಿಮ ಗಡುವಾಗಿದೆ. ಹೀಗಾಗಿ ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಣಕಾಸು ಕೆಲಸಗಳನ್ನು ಅಂತಿಮ ಗಡುವಿನೊಳಗೆ ಮುಗಿಸದಿದ್ರೆ ಜೇಬಿನ ಮೇಲಿನ ಹೊರೆ ಹೆಚ್ಚಲಿದೆ. ಅಲ್ಲದೆ, ಮುಂದೆ ಕೆಲವು ಕೆಲಸಗಳನ್ನು ಮಾಡಲು ಅಡಚಣೆ ಕೂಡ ಎದುರಾಗಲಿದೆ. ಹೀಗಾಗಿ ಹಣಕಾಸು ಸಂಬಂಧಿ ಕೆಲಸಗಳ ಗಡುವಿನ ಬಗ್ಗೆ ಸದಾ ಮಾಹಿತಿ ಹೊಂದಿರೋದು ಅಗತ್ಯ. ಜೀವನ ಪ್ರಮಾಣ ಪತ್ರ ಸಲ್ಲಿಕೆಗೆ ನವೆಂಬರ್ ತಿಂಗಳು ಅಂತಿಮ ಗಡುವಾಗಿದೆ. ಪಿಂಚಣಿದಾರರು ಪ್ರತಿವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡೋದು ಅಗತ್ಯ. ಇಲ್ಲವಾದರೆ ಪಿಂಚಣಿ ಬರೋದು ಸ್ಥಗಿತಗೊಳ್ಳುತ್ತದೆ. ಇನ್ನು ಐಡಿಬಿಐ ಬ್ಯಾಂಕ್, ಪಂಜಾಬ್ ಹಾಗೂ ಸಿಂಧ್ ಬ್ಯಾಂಕುಗಳ ವಿಶೇಷ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಲು ಈ ತಿಂಗಳಲ್ಲಿ ಅಂತಿಮ ಗಡುವು ನೀಡಲಾಗಿದೆ. ಹಾಗೆಯೇ ಎಚ್ ಡಿಎಫ್ ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ಸ್ ಕೇರ್ ಎಫ್ ಡಿಯಲ್ಲಿ ಹೂಡಿಕೆ ಮಾಡಲು ಕೂಡ ಈ ತಿಂಗಳು ಅಂತಿಮ ಗಡುವು.
1. ಜೀವನ್ ಪ್ರಮಾಣಪತ್ರ: 80 ವರ್ಷ ಮೇಲ್ಪಟ್ಟ ಪಿಂಚಣಿದಾರರು ಪಿಂಚಣಿ ಪಡೆಯಲು ಪ್ರತಿ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು. ಈ ವರ್ಷ ಈ ಪ್ರಮಾಣ ಪತ್ರವನ್ನು ನವೆಂಬರ್ 30ರೊಳಗೆ ಸಲ್ಲಿಕೆ ಮಾಡಬೇಕು. ಸೂಪರ್ ಸೀನಿಯರ್ ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಅಕ್ಟೋಬರ್ 1ರಿಂದ ನವೆಂಬರ್ 30ರೊಳಗೆ ಸಲ್ಲಿಕೆ ಮಾಡಬೇಕು. ಇನ್ನು 60 ವರ್ಷ ಹಾಗೂ 80 ವರ್ಷ ನಡುವಿನ ಹಿರಿಯ ನಾಗರಿಕರಿಗೆ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಲು ನವೆಂಬರ್ 1ರಿಂದ ನವೆಂಬರ್ 30ರ ತನಕ ಕಾಲಾವಕಾಶ ನೀಡಲಾಗಿದೆ.
ಉದ್ಯೋಗಸ್ಥ ಮಹಿಳೆಯರಿಗೆ ಹೂಡಿಕೆಗಿರುವ 5 ಅತ್ಯುತ್ತಮ ಆಯ್ಕೆಗಳು ಇವೇ ನೋಡಿ..
2.ಐಡಿಬಿಐ ಬ್ಯಾಂಕ್ ವಿಶೇಷ ಎಫ್ ಡಿ: ಐಡಿಬಿಐ ಬ್ಯಾಂಕ್ ತನ್ನ ವಿಶೇಷ ಸ್ಥಿರ ಠೇವಣಿ ಯೋಜನೆಗಳ ವ್ಯಾಲಿಡಿಟಿ ದಿನಾಂಕವನ್ನು ವಿಸ್ತರಿಸಿದ್ದು, 2023ರ ನವೆಂಬರ್ 30ರ ತನಕ ಕಾಲಾವಕಾಶ ನೀಡಿವೆ. ಈ ಹಿಂದೆ 2023ರ ಅಕ್ಟೋಬರ್ 31ರ ತನಕ ಕಾಲಾವಕಾಶ ನೀಡಲಾಗಿತ್ತು. ಈ ವಿಶೇಷ ಎಫ್ ಡಿ ಯೋಜನೆಗೆ ಅಮೃತ್ ಮಹೋತ್ಸವ ಎಫ್ ಡಿ ಎಂದು ಹೆಸರಿಡಲಾಗಿದೆ. ಇನ್ನು ಈ ವಿಶೇಷ ಎಫ್ ಡಿ ಇತರ ಎಫ್ ಡಿಗಳಿಗಿಂತ ಹೆಚ್ಚಿನ ಬಡ್ಡಿದರ ಹೊಂದಿದೆ. 444 ದಿನಗಳ ಈ ಎಫ್ ಡಿ ಯೋಜನೆಗೆ ಎನ್ ಆರ್ ಇ ಹಾಗೂ ಎನ್ ಆರ್ ಒ ಗ್ರಾಹಕರು ಶೇ.7.15ರಷ್ಟು ಬಡ್ಡಿದರ ಹೊಂದಿದ್ದರೆ, ಹಿರಿಯ ನಾಗರಿಕರಿಗೆ ಶೇ.7.65ರಷ್ಟು ಬಡ್ಡಿ ನೀಡಲಾಗುತ್ತಿದೆ. ಇನ್ನು 375 ದಿನಗಳ ಅವಧಿಯ ಎಫ್ ಡಿಗೆ ಹಿರಿಯ ನಾಗರಿಕರಿಗೆ ಶೇ.7.65ರಷ್ಟು ಬಡ್ಡಿ ನೀಡಲಾಗುತ್ತದೆ. ಇನ್ನು ಸಾಮಾನ್ಯ, ಎನ್ ಆರ್ ಇ ಹಾಗೂ ಎನ್ ಆರ್ ಒ ಗ್ರಾಹಕರಿಗೆ ಶೇ.7.10 ಬಡ್ಡಿ ನೀಡಲಾಗುತ್ತಿದೆ. ಅವಧಿಪೂರ್ಣ ವಿತ್ ಡ್ರಾ ಅಥವಾ ಎಫ್ ಡಿ ಮುಕ್ತಾಯಗೊಳಿಸುವ ಅವಕಾಶ ಕೂಡ ಇದೆ.
3.ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ ಎಫ್ ಡಿ: ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ ಪಿಎಸ್ ಬಿ ಧನ್ ಲಕ್ಷ್ಮೀ ಹಾಗೂ ಪಿಎಸ್ ಬಿ ಸೇವಿಂಗ್ ಫ್ಲಸ್ ಎಂಬ ಹೊಸ ಸ್ಥಿರ ಠೇವಣಿ ಯೋಜನೆಗಳನ್ನು ಪರಿಚಯಿಸಿದೆ. ಈ ಎರಡೂ ಯೋಜನೆಗಳಲ್ಲಿ ಹೂಡಿಕೆ ಮಾಡಲು ನವೆಂಬರ್ 30ರ ತನಕ ಕಾಲಾವಕಾಶ ನೀಡಲಾಗಿದೆ. ಪಿಎಸ್ ಬಿ ಸೇವಿಂಗ್ ಫ್ಲಸ್ ಯೋಜನೆ 333 ದಿನಗಳ ಅವಧಿಗೆ ವಾರ್ಷಿಕ ಶೇ. 6.50ರಷ್ಟು ಬಡ್ಡಿದರ ನೀಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ 500ರೂ. ಠೇವಣಿಯಿಡೋದು ಅಗತ್ಯ. ಹಿರಿಯ ನಾಗರಿಕರು ಹಾಗೂ ಸೂಪರ್ ಸೀನಿಯರ್ ಸಿಟಿಜನ್ಸ್ ಗೆ ಕ್ರಮವಾಗಿ ಶೇ. 7 ಹಾಗೂ ಶೇ.7.15 ಬಡ್ಡಿದರ ನೀಡಲಾಗುತ್ತದೆ. ಪಿಎಸ್ ಬಿ ಧನ್ ಲಕ್ಷ್ಮೀ ಯೋಜನೆ 444 ದಿನಗಳ ಅವಧಿಗೆ ವಾರ್ಷಿಕ ಶೇ.7.40ರಷ್ಟು ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರು ಹಾಗೂ ಸೂಪರ್ ಸೀನಿಯರ್ ಸಿಟಿಜನ್ಸ್ ಇದೇ ಅವಧಿಗೆ ಕ್ರಮವಾಗಿ ಶೇ. 7.90 ಹಾಗೂ ಶೇ.8.05ರಷ್ಟು ಬಡ್ಡಿದರ ಪಡೆಯಬಹುದು.
ಜಿಎಸ್ ಟಿ, ಲ್ಯಾಪ್ ಟಾಪ್ ಆಮದು ಸೇರಿದಂತೆ ನವೆಂಬರ್ 1ರಿಂದ ಈ 5 ನಿಯಮಗಳಲ್ಲಿ ಬದಲಾವಣೆ
4.ಎಚ್ ಡಿಎಫ್ ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ಸ್ ಕೇರ್ ಎಫ್ ಡಿ: ಎಚ್ ಡಿಎಫ್ ಸಿ ಬ್ಯಾಂಕಿನ ಸೀನಿಯರ್ ಸಿಟಿಜನ್ಸ್ ಕೇರ್ ಎಫ್ ಡಿ ಯೋಜನೆ ಅಡಿಯಲ್ಲಿ ಹೂಡಿಕೆದಾರರು ಶೇ.0.25ರಷ್ಟು ಹೆಚ್ಚುವರಿ ಬಡ್ಡಿದರ ಪಡೆಯಲು ಅರ್ಹತೆ ಹೊಂದಿದ್ದಾರೆ. ಈ ಪ್ರೀಮಿಯಂ ಹಿರಿಯ ನಾಗರಿಕರಿಗೆ ಎಫ್ ಡಿಗಳ ಮೇಲೆ ಪಾವತಿಸುವ ಪ್ರೀಮಿಯಂಗಳಿಗಿಂತ ಶೇ.0.50ರಷ್ಟು ಹೆಚ್ಚುವರಿ ಪ್ರೀಮಿಯಂ ನೀಡಲಾಗುತ್ತದೆ. ಈ ವಿಶೇಷ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು 2023ರ ನವೆಂಬರ್ 7 ಅಂತಿಮ ಗಡುವಾಗಿದೆ.