ರೇಖಾ ಜುಂಜುನ್ವಾಲಾಗೆ ಈ ಷೇರಿನಿಂದ ಒಂದೇ ದಿನದಲ್ಲಿ 78 ಕೋಟಿಗೂ ಹೆಚ್ಚು ಲಾಭ: ನಿಮ್ಮ ಬಳಿಯೂ ಇದ್ಯಾ ಕರ್ನಾಟಕ ಮೂಲದ ಈ ಸ್ಟಾಕ್‌?

By BK Ashwin  |  First Published Nov 1, 2023, 12:48 PM IST

ಕಳೆದ 3 ವರ್ಷಗಳಲ್ಲಿ ಈ ಕಂಪನಿಯು ಹೂಡಿಕೆದಾರರಿಗೆ 330 ಪ್ರತಿಶತದಷ್ಟು ಗಮನಾರ್ಹ ಆದಾಯವನ್ನು ನೀಡಿದೆ. ಈ ಸ್ಟಾಕ್‌ ಬಗ್ಗೆ ಇಲ್ಲಿದೆ ವಿವರ..


ನವದೆಹಲಿ (ನವೆಂಬರ್ 1, 2023): ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಭಾರಿ ಏರುಪೇರಾಗುತ್ತಿದೆ. ಕಳೆದ ಶುಕ್ರವಾರ ಷೇರುಪೇಟೆಯಲ್ಲಿ ಏರಿಕೆಯಾಗಿತ್ತು. ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕಗಳು ಕ್ರಮವಾಗಿ 63,783 ಮತ್ತು 19,047 ಮಟ್ಟದಲ್ಲಿ ಶೇಕಡಾ 1.01 ರಷ್ಟು ಏರಿಕೆ ಕಂಡಿತ್ತು. 

ಒಟ್ಟಾರೆ ಮಾರುಕಟ್ಟೆ ಲಾಭಗಳ ಜೊತೆಗೆ, ಮಲ್ಟಿಬ್ಯಾಗರ್ ಪಿಎಸ್‌ಯು ಬ್ಯಾಂಕಿಂಗ್ ಸ್ಟಾಕ್ ಟ್ರೆಂಡಿಂಗ್‌ನಲ್ಲಿತ್ತು. ಕಳೆದ 3 ವರ್ಷಗಳಲ್ಲಿ ಈ ಕಂಪನಿಯು ಹೂಡಿಕೆದಾರರಿಗೆ 330 ಪ್ರತಿಶತದಷ್ಟು ಗಮನಾರ್ಹ ಆದಾಯವನ್ನು ನೀಡಿದೆ. ಇಷ್ಟು ರೋಚಕತೆಯನ್ನು ಸೃಷ್ಟಿಸಿದ ಸ್ಟಾಕ್ ಹೆಸರು ಬೇರೆ ಯಾವುದೂ ಅಲ್ಲ, ಕೆನರಾ ಬ್ಯಾಂಕ್.

Tap to resize

Latest Videos

ಇದನ್ನು ಓದಿ: ಒಂದೇ ದಿನದಲ್ಲಿ 90 ಕೋಟಿಗೂ ಅಧಿಕ ಲಾಭ ಗಳಿಸಿದ ರಾಕೇಶ್‌ ಜುಂಜುನ್ವಾಲಾ ಪತ್ನಿ: ನಿಮ್ಮ ಬಳಿಯೂ ಇದ್ಯಾ ಈ ಸ್ಟಾಕ್?

ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಹೂಡಿಕೆದಾರರರಾಗಿದ್ದ ರಾಕೇಶ್‌ ಜುಂಜುನ್ವಾಲಾ ಈ ಬ್ಯಾಂಕಿನಲ್ಲಿ 3,75,97,600 ಷೇರುಗಳನ್ನು ಹೊಂದಿದ್ದಾರೆ ಅಥವಾ ಕಂಪನಿಯಲ್ಲಿ 2.07 ಶೇಕಡಾ ಪಾಲನ್ನು ಹೊಂದಿದ್ದಾರೆ. ಸದ್ಯ ಅವರ ನಿಧನದ ನಂತರ ಪತ್ನಿ ರೇಖಾ ಜುಂಜುನ್ವಾಲಾ ಅವರು ಈ ಷೇರುಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಶುಕ್ರವಾರದ ಮುಕ್ತಾಯದ ಬೆಲೆಯಂತೆ, ಈ ಸ್ಟಾಕ್ ಪ್ರತಿ ಷೇರಿಗೆ 380.70 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದ್ದು, 20.85 ಪಾಯಿಂಟ್‌ಗಳು ಅಥವಾ ಶೇಕಡಾ 5.79 ರಷ್ಟು ಏರಿಕೆಯಾಗಿದೆ. ಅಂದರೆ ಈ ಸ್ಟಾಕ್‌ನಿಂದ ಕೇವಲ 1 ದಿನದಲ್ಲಿ ರೇಖಾ ಜುಂಜುನ್ವಾಲಾ ಪೋರ್ಟ್‌ಫೋಲಿಯೋ 78,39,09,960 ಕೋಟಿ ರೂ. ಗಳಿಸಿದೆ (ಅಂದರೆ 3,75,97,600 ಷೇರುಗಳು x ಪ್ರತಿ ಷೇರಿಗೆ ರೂ 20.85). ಈ ಸ್ಟಾಕ್ ಬಿಎಸ್‌ಇಯಲ್ಲಿ 3.58 ಪಟ್ಟು ಹೆಚ್ಚು ಪ್ರಮಾಣದಲ್ಲಿ ಹೆಚ್ಚಳದೊಂದಿಗೆ ಪ್ರತಿ ಷೇರಿಗೆ 387.70 ರೂ. ಹೆಚ್ಚಳವಾಗಿದ್ದು, 52 ವಾರಗಳ ಗರಿಷ್ಠ ದರ ಮುಟ್ಟಿದೆ.

ಇದನ್ನೂ ಓದಿ: ಟಾಟಾ ಗ್ರೂಪ್‌ ಒಡೆತನದ ಈ ಷೇರಿನಿಂದ ಒಂದು ತಿಂಗಳಲ್ಲಿ 1390 ಕೋಟಿ ರೂ. ಲಾಭ ಗಳಿಸಿದ ಜುಂಜುನ್ವಾಲಾ ಪತ್ನಿ

2024 ರ ಆರ್ಥಿಕ ವರ್ಷದಲ್ಲಿ ಕಂಪನಿ ಉತ್ತಮ ತ್ರೈಮಾಸಿಕ ಫಲಿತಾಂಶಗಳು ಮತ್ತು ಅರ್ಧ-ವಾರ್ಷಿಕ ಫಲಿತಾಂಶಗಳನ್ನು ಪ್ರಕಟಿಸಿದ್ದರಿಂದ ಷೇರು ಬೆಲೆಯಲ್ಲಿ ಹಠಾತ್‌ ಏರಿಕೆಯಾಗಿದೆ. ತ್ರೈಮಾಸಿಕ ಫಲಿತಾಂಶಗಳ ಪ್ರಕಾರ, Q2FY23 ಕ್ಕೆ ಹೋಲಿಸಿದರೆ Q2FY24 ರಲ್ಲಿ ಒಟ್ಟು ಆದಾಯವು 23.88 ಶೇಕಡಾ ಅಂದರೆ 33,891.21 ಕೋಟಿಗೆ ಹೆಚ್ಚಾಗಿದೆ. ಅಂದರೆ, ನಿವ್ವಳ ಲಾಭವು 41.79 ರಷ್ಟು ಏರಿಕೆಯಾಗಿ 3,677.39 ಕೋಟಿಗಳಿಗೆ ಹೆಚ್ಚಾಗಿದೆ. Q2FY24 ಗಾಗಿ EPS 20.93 ರೂ ಆಗಿದೆ. ಹಾಗೂ,. ಅರ್ಧ-ವಾರ್ಷಿಕ ಫಲಿತಾಂಶಗಳ ಪ್ರಕಾರ, H1FY23 ಕ್ಕೆ ಹೋಲಿಸಿದರೆ H1FY24 ರಲ್ಲಿ ಒಟ್ಟು ಆದಾಯವು 29.46 ಶೇಕಡಾ ಅಂದರೆ 66,150.62 ಕೋಟಿಗೆ ಏರಿಕೆಯಾಗಿದೆ. ಅಂದರೆ, ನಿವ್ವಳ ಲಾಭವು 55.87 ರಷ್ಟು ಅಂದರೆ 7,250.89 ಕೋಟಿಗಳಿಗೆ ಹೆಚ್ಚಾಗಿದೆ. ಅಲ್ಲದೆ, H1FY24 ಗಾಗಿ EPS 39.97 ರೂ. ಆಗಿದೆ.

ಕೆನರಾ ಬ್ಯಾಂಕ್ 1906 ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾಗಿದ್ದು, ಕಂಪನಿಯು 69,000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಕ್ಯಾಪ್ ಹೊಂದಿದೆ. ಕಳೆದ 5 ವರ್ಷಗಳಲ್ಲಿ 37 ಶೇಕಡಾ CAGR ನ ಉತ್ತಮ ಲಾಭದ ಬೆಳವಣಿಗೆಯನ್ನು ನೀಡಿದೆ. ಹೂಡಿಕೆದಾರರು ಈ ಲಾರ್ಜ್-ಕ್ಯಾಪ್ ಸ್ಟಾಕ್ ಮೇಲೆ ಕಣ್ಣಿಡಬಹುದು.

ಇದನ್ನೂ ಓದಿ: TATA ಗ್ರೂಪ್‌ನ ಈ ಷೇರಿಂದ ಜುಂಜುನ್ವಾಲಾ ಪತ್ನಿಗೆ ಒಂದೇ ದಿನದಲ್ಲಿ 315 ಕೋಟಿ ಲಾಭ: ನೀವು ಯಾಕೆ ಟ್ರೈ ಮಾಡ್ಬಾರ್ದು!

click me!