ಕೊರೋನಾ ವೈರಸ್ ಕಾರಣ ವಿಸ್ತರಣೆ ಮಾಡಲಾಗಿದ್ದ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್(ITR) ದಿನಾಂಕ ಮತ್ತೆ ವಿಸ್ತರಣೆ ಮಾಡಲಾಗಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಸ್ತರಿಸಿದ ಹೊಸ ದಿನಾಂಕ ಪ್ರಕಟಿಸಿದ್ದಾರೆ.
ನವದೆಹಲಿ(ಅ.24): ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ದಿನಾಂಕದ ಗಡುವು ಮತ್ತೆ ವಿಸ್ತರಣೆಯಾಗಿದೆ. ಕೊರೋನಾ ವೈರಸ್ ಕಾರಣ ಹಣಕಾಸು ವರ್ಷ 2019-20(FY20) ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ದಿನಾಂಕ ನವೆಂಬರ್ 30ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಈ ದಿನಾಂಕವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ.
ಪಾನ್, ಆಧಾರ್ ನೀಡದ ಉದ್ಯೋಗಿಗಳ ಜೇಬಿಗೆ ಕತ್ತರಿ!.
undefined
ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವೈಯುಕ್ತಿಕ ಹಾಗೂ ಇತರ ITR ಗಡುವನ್ನು ಡಿಸೆಂಬರ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ತೆರಿಗೆ ಕಾಯ್ದೆ 1961ರ ಪ್ರಕಾರ ಜುಲೈ 31ಕ್ಕೆ ITR ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆದರೆ ಕೊರೋನಾ ವೈರಸ್ ಕಾರಣ ಇದೀಗ ಡಿಸೆಂಬರ್ 31ಕ್ಕೆ ವಿಸ್ತರಣೆ ಮಾಡಲಾಗಿದೆ.
ಟ್ಯಾಕ್ಸ್ ಕಟ್ಟಕ್ಕೆ ಹೊರಟ್ರಾ?: ಟಿಡಿಎಸ್, ಅಡ್ವಾನ್ಸ್ ಟ್ಯಾಕ್ಸ್ ಎಲ್ಲಾ ಗೊತ್ತು ತಾನೆ?
ತೆರಿಗೆದಾರರು ಹಾಗೂ ಜೊತೆಗಾರರ ITR ಸಲ್ಲಿಕೆ ಅಂತಿಮ ಗಡುವನ್ನು ವಿಸ್ತರಿಸಲಾಗಿದೆ. ತೆರಿಗೆದಾರರ ಅಂತಿಮ ದಿನಾಂಕವನ್ನು ಅಕ್ಟೋಬರ್ 31ರಿಂದ ಇದೀಗ ಜನವರಿ 31, 2021ಕ್ಕೆ ವಿಸ್ತರಿಸಲಾಗಿದೆ.
ತೆರಿಗೆದಾರರ ಅಂತಾರಾಷ್ಟ್ರೀಯ, ರಾಷ್ಟ್ರೀಯ ಟ್ರಾನ್ಸಾಕ್ಷನ್ ವರದಿ, ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಅಂತಿಮ ದಿನಾಂಕವನ್ನೂ ನವೆಂಬರ್ 31 ರಿಂದ ಜನವರಿ 31, 2021ಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಟ್ಯಾಕ್ಸ್ ರಿಪೋರ್ಟ್, ಆಡಿಟ್ ರಿಪೋರ್ಟ್ ಅಥವಾ ಅಂತಾರಾಷ್ಟ್ರೀಯ, ರಾಷ್ಟ್ರೀಯ ರಿಪೋರ್ಟ್ ಹಾಗೂ ITR ಸಲ್ಲಿಕೆ ದಿನಾಂಕವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ. ಇದರಿಂದ ಮಧ್ಯಮ ವರ್ಗದ ತೆರಿಗೆದಾರರಿಗೆ ITR ದಿನಾಂಕ ವಿಸ್ತರಣೆ ಹೆಚ್ಚಿನ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.