ಬಂದ್‌ಗೂ ಬಗ್ಗದ ತೈಲದರ: ಇಂದಿನ ಬೆಲೆ ಆಗ್ತಿಲ್ಲ ಕೇಳ್ಲಿಕ್ಕೆ!

First Published 10, Sep 2018, 12:46 PM IST
Highlights

ತೈಲದರ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಭಾರತ್ ಬಂದ್! ಇಂದೂ ಕೂಡ ತೈಲದರಲ್ಲಿ ದಾಖಲೆಯ ಏರಿಕೆ! ಪೆಟ್ರೋಲ್ ಬೆಲೆ 23 ಪೈಸೆ ಹಾಗೂ ಡೀಸೆಲ್ ಬೆಲೆ 22 ಪೈಸೆ ಏರಿಕೆ! ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಗೊತ್ತಾ?

ನವದೆಹಲಿ(ಸೆ.10): ತೈಲದರ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿವೆ. ಈ ಮಧ್ಯೆ ಇಂದೂ ಕೂಡ ತೈಲದರಲ್ಲಿ ಭಾರೀ ಏರಿಕೆಯಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆಯ ಮಟ್ಟ ತಲುಪಿದೆ.

ಪ್ರತೀ ಲೀಟರ್ ಪೆಟ್ರೋಲ್ ಬೆಲೆ 23 ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತೀ ಲೀಟರ್'ಗೆ 22 ಪೈಸೆ ಏರಿಕೆ ಕಂಡು ಬಂದಿದೆ. ಪೆಟ್ರೋಲ್ ಬೆಲೆ 80.73 ರೂ. ಹಾಗೂ ಡೀಸೆಲ್ ಬೆಲೆ 72.83 ರೂ. ಆಗಿದೆ. ಇನ್ನು ಮುಂಬೈ ನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ದಾಖಲೆಯ 88.12 ರೂ. ಆಗಿದೆ. 

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡು ಬಂದಿರುವುದು ಇದೇ ಮೊದಲು. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80.73 ರೂ. ಹಾಗೂ ಡೀಸೆಲ್ ಬೆಲೆ 72.83 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 83.91 ರೂ. ಇದ್ದರೆ, ಡೀಸೆಲ್ ಬೆಲೆ 76.98 ರೂ. ಇದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 83.36 ರೂ ಇದ್ದರೆ, ಡೀಸೆಲ್ ಬೆಲೆ 75.18 ರೂ ಇದೆ.

Last Updated 19, Sep 2018, 9:18 AM IST