ಪೆಟ್ರೋಲ್ ಪಂಪ್‌ಗಳು ₹2,000 ನೋಟು ಹಿಂಪಡೆಯುವಿಕೆಯ ಬಿಸಿ ಎದುರಿಸುತ್ತಿದ್ದು, ಗ್ರಾಹಕರು ಶುಕ್ರವಾರದಿಂದ್ಲೇ ₹100 ಅಥವಾ ₹200 ಕ್ಕಿಂತ ಕಡಿಮೆ ಮೌಲ್ಯದ ಇಂಧನ ಹಾಕಿಸಿಕೊಳ್ಳಲು 2 ಸಾವಿರ ರೂ. ನೋಟುಗಳನ್ನು ನೀಡಿ ಚೇಂಜ್ ಕೇಳುತ್ತಿದ್ದಾರೆ.
ಹೊಸದಿಲ್ಲಿ (ಮೇ 22, 2023): ಆರ್‌ಬಿಐ 2 ಸಾವಿರ ರೂ. ನೋಟುಗಳನ್ನು ಬ್ಯಾಂಕ್ ಹಾಗೂ ಆರ್‌ಬಿಐ ಕಚೇರಿಗಳಿಗೆ ಹಿಂತಿರುಗಿಸಲು ಹಾಗೂ ತಮ್ಮ ಅಕೌಂಟ್‌ಗೆ ಆ ಹಣ ಹಾಕಿಕೊಳ್ಳಲು ಸೂಚಿಸಿದೆ. ಆದರೆ, ಜನ ಮಾತ್ರ ಬ್ಯಾಂಕ್‌ಗೆ ಹೋಗೋ ತಾಪತ್ರಯ ಬೇಡ ಅಂತ ಇತರೆ ನಾನಾ ಮಾರ್ಗಗಳನ್ನು ನೋಡುತ್ತಿದ್ದಾರೆ. ಚಿನ್ನ, ಐಷಾರಾಮಿ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಅದರ ಜತೆಗೆ, ಪೆಟ್ರೋಲ್ ಬಂಕ್ ಮೊರೆಗೂ ಹೋಗುತ್ತಿದ್ದಾರೆ.
ಹೌದು, ಪೆಟ್ರೋಲ್ ಪಂಪ್‌ಗಳು ₹2,000 ನೋಟು ಹಿಂಪಡೆಯುವಿಕೆಯ ಬಿಸಿ ಎದುರಿಸುತ್ತಿದ್ದು, ಗ್ರಾಹಕರು ಶುಕ್ರವಾರದಿಂದ್ಲೇ ₹100 ಅಥವಾ ₹200 ಕ್ಕಿಂತ ಕಡಿಮೆ ಮೌಲ್ಯದ ಇಂಧನ ಹಾಕಿಸಿಕೊಳ್ಳಲು 2 ಸಾವಿರ ರೂ. ನೋಟುಗಳನ್ನು ನೀಡಿ ಚೇಂಜ್ ಕೇಳುತ್ತಿದ್ದಾರೆ. ಈ ಹಿನ್ನೆಲೆ, ಸಣ್ಣ ಮುಖಬೆಲೆಯ ನೋಟುಗಳ ಅಲಭ್ಯತೆಯಿಂದಾಗಿ ₹2,000ಕ್ಕೆ ಬದಲಾವಣೆ ನೀಡಲು ಅನೇಕ ಪೆಟ್ರೋಲ್ ಬಂಕ್‌ಗಳಿಗೆ ಸಾಧ್ಯವಾಗ್ತಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆ, ಕೆಲ ಪೆಟ್ರೋಲ್ ಬಂಕ್‌ಗಳು ದೊಡ್ಡ ಮುಖಬೆಲೆಯ ನೋಟುಗಳನ್ನು ಕೊಟ್ಟು ಸಣ್ಣಮೊತ್ತದ ಇಂಧನ ಹಾಕಿಸಿಕೊಳ್ಳೋಕೆ ಒಪ್ಪದೆ ಚೇಂಜ್ ಇಲ್ಲ ಎಂದು ಕೆಲ ಪಂಪ್‌ಗಳಲ್ಲಿ ಬೋರ್ಡ್ ಹಾಕಲಾಗಿದೆ.
ಇದನ್ನು ಓದಿ: ಕಪ್ಪು ಹಣ ಹೊಂದಿದವ್ರಿಗೆ ರೆಡ್ ಕಾರ್ಪೆಟ್ ಹಾಸಲಾಗಿದೆ: 2 ಸಾವಿರ ರೂ. ನೋಟು ಹಿಂಪಡೆತಕ್ಕೆ ಚಿದಂಬರಂ ಟೀಕೆ
ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಜಾರ್ಖಂಡ್ ಮತ್ತು ಮಹಾರಾಷ್ಟ್ರದ ಕನಿಷ್ಠ ಆರು ಡೀಲರ್‌ಗಳಿಗೆ ನಗದು ವಹಿವಾಟಿನಲ್ಲಿ ಹಠಾತ್ ಏರಿಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆ ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿನ ಹಲವಾರು ಪಂಪ್‌ಗಳು ₹ 2,000 ನೋಟುಗಳನ್ನು ₹ 1,000 ಅಥವಾ ಅದಕ್ಕಿಂತ ಹೆಚ್ಚಿನ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಗೆ ಮಾತ್ರ ಸ್ವೀಕರಿಸಲಾಗುವುದು ಎಂದು ನೋಟಿಸ್‌ಗಳನ್ನು ಹಾಕಿವೆ ಎಂದು ತಿಳಿದುಬಂದಿದೆ.
ಇನ್ನು, ದೆಹಲಿ ಮೂಲದ ವಿತರಕರು “ರಾಜಧಾನಿಯಲ್ಲಿರುವುದರಿಂದ ನಾವು ಅಂತಹ ಸೂಚನೆಗಳನ್ನು ಹಾಕಲು ಸಾಧ್ಯವಿಲ್ಲ. ₹2,000 ನೋಟುಗಳು ಕಾನೂನುಬದ್ಧ ಟೆಂಡರ್ ಆಗಿರುವುದರಿಂದ ನಾವು ಅವುಗಳನ್ನು ನಿರಾಕರಿಸುವಂತಿಲ್ಲ. ಆದರೆ ನಮ್ಮಲ್ಲಿ ಸಹ ಸಣ್ಣ ನೋಟುಗಳ ಕೊರತೆಯೂ ಇದೆ. UPI, BHIM ಮತ್ತು Paytm ಮೂಲಕ ಹಣ ಹಾಕಲು ಗ್ರಾಹಕರನ್ನು ವಿನಂತಿಸುವುದನ್ನು ನಾವು ಪರಿಗಣಿಸುತ್ತಿದ್ದೇವೆ’’ ಎಂದು ಡೀಲರ್ ಒಬ್ಬರು ಹೇಳಿದ್ದಾರೆ.
ಇದನ್ನೂ ಓದಿ: 2 ಸಾವಿರ ರೂ. ನೋಟುಗಳನ್ನೇ ಕೊಟ್ಟು 5 ಲಕ್ಷಕ್ಕೂ ಹೆಚ್ಚು ಬೆಲೆಬಾಳೋ ಚಿನ್ನದ ಆಭರಣ ಖರೀದಿಸಿದ ಗ್ರಾಹಕ!
ಅಲ್ಲದೆ, “ಹಿಂದೆ, ₹2,000 ನೋಟುಗಳು ನಮ್ಮ ಒಟ್ಟು ದೈನಂದಿನ ಮಾರಾಟದ 1-2% ಆಗಿದ್ದವು. ಈಗ ಅದು ಶೇ.80ಕ್ಕೆ ಜಿಗಿದಿದೆ. ನಾವು ಬ್ಯಾಂಕ್‌ಗಳಲ್ಲ, ಮತ್ತು ದೈನಂದಿನ ಮಾರಾಟದಲ್ಲಿ ನಾವು ಏನನ್ನು ಪಡೆಯುತ್ತೇವೆ ಎಂಬುದರ ಆಧಾರದ ಮೇಲೆ ನಮ್ಮ ನಗದು ಹಣವು ಸೀಮಿತವಾಗಿದೆ. ₹ 2,000 ಕರೆನ್ಸಿಯನ್ನು ಹಿಂತೆಗೆದುಕೊಳ್ಳುವ ಆರ್‌ಬಿಐ ನಿರ್ಧಾರದಿಂದಾಗಿ ಇದು ಪ್ರಾಯೋಗಿಕ ಸಮಸ್ಯೆಯಾಗಿದೆ. ಅವುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸಾಕಷ್ಟು ಸಮಯವಿದೆ ಎಂದು ಜನರಿಗೆ ಸಮರ್ಪಕವಾಗಿ ತಿಳಿದಿಲ್ಲ’’ ಎಂದು ಮತ್ತೊಬ್ಬರು ಪೆಟ್ರೋಲ್ ಪಂಪ್ ಮಾಲೀಕರು ತಿಳಿಸಿದ್ದಾರೆ.
₹ 2,000 ನೋಟು ಚಲಾವಣೆಯಿಂದ ಹಿಂಪಡೆಯಲಾಗಿದೆ, ಆದರೂ ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮೇ 19 ರಂದು ತಿಳಿಸಿದೆ. ಅಲ್ಲದೆ, ಸೆಪ್ಟೆಂಬರ್ 30 ರೊಳಗೆ ನೋಟುಗಳನ್ನು ಬದಲಾಯಿಸಲು ಅಥವಾ ಠೇವಣಿ ಮಾಡಲು ಜನರಿಗೆ ಸಲಹೆ ನೀಡಿದೆ. ಆದರೆ, ನವೆಂಬರ್ 2016 ರಲ್ಲಿ ಜನರು ಬ್ಯಾಂಕ್‌ಗಳಿಗೆ ಹೋಗಲು ಪಟ್ಟ ತೊಂದರೆಯಿಂದ ಹೆದರಿಕೊಂಡು ಯುಪಿಐ ಮಾಡುವವರೂ ಸಹ 2 ಸಾವಿರ ರೂ. ನೋಟುಗಳನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ: 2 ಸಾವಿರ ರೂ. ನೋಟನ್ನು ಬ್ಯಾಂಕ್‌ಗೆ ವಾಪಸ್ ಮಾಡಲು ಯಾವ ಅರ್ಜಿ, ದಾಖಲೆ ಸಲ್ಲಿಸ್ಬೇಕು? ಇಲ್ಲಿದೆ ಮಾಹಿತಿ..
ಇನ್ನು, ಈ ಬಗ್ಗೆ ಮಾಹಿತಿ ನೀಡಿದ ಉದ್ಯಮಿಯೊಬ್ಬರು, ‘’ಪೆಟ್ರೋಲ್ ಪಂಪ್‌ಗಳು ₹ 2,000 ನೋಟುಗಳನ್ನು ಸ್ವೀಕರಿಸುತ್ತಿವೆ. ಆದರೆ, ನೀವು ಸಂಪೂರ್ಣ ಮೊತ್ತಕ್ಕೆ ಇಂಧನವನ್ನು ಹಾಕಿಸಿಕೊಂಡರೆ ಮಾತ್ರ ಬಾಕಿಯನ್ನು ಹಿಂದಿರುಗಿಸಲು ಸಣ್ಣ ನೋಟುಗಳು ಅವರ ಬಳಿ ಇಲ್ಲ" ಎಂದು ಚಂಡೀಗಢ ಮೂಲದ ಉದ್ಯಮಿಯೊಬ್ಬರು ಹೇಳಿದರು.