Credit Card Users:ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್; ಬಿಲ್ಲಿಂಗ್ ಸೈಕಲ್ ಬದಲಾಯಿಸಲು ಅವಕಾಶ

Published : Jul 02, 2022, 05:25 PM IST
Credit Card Users:ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್; ಬಿಲ್ಲಿಂಗ್ ಸೈಕಲ್ ಬದಲಾಯಿಸಲು ಅವಕಾಶ

ಸಾರಾಂಶ

ಕ್ರೆಡಿಟ್ ಕಾರ್ಡ್ ಹೊಂದಿರೋರಿಗೆ ಬಿಲ್ಲಿಂಗ್ ಸೈಕಲ್ ಬಗ್ಗೆ ತಿಳಿದೇ ಇರುತ್ತದೆ. ಎಷ್ಟೋ ಬಾರಿ ಈ ಬಿಲ್ಲಿಂಗ್ ಸೈಕಲ್ ಬದಲಾಯಿಸುವ ಅವಕಾಶವಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನೇಕ ಗ್ರಾಹಕರು ಒಂದಲ್ಲ ಒಂದು ಬಾರಿ ಯೋಚಿಸಿರುತ್ತಾರೆ. ಈಗ ಆರ್ ಬಿಐ ಗ್ರಾಹಕರಿಗೆ ಇಂಥ ಒಂದು ಅವಕಾಶವನ್ನು ನೀಡಿದೆ.   

Business Desk:ನೀವು ಕ್ರೆಡಿಟ್ ಕಾರ್ಡ್ ( Credit card) ಬಳಕೆದಾರರಾಗಿದ್ರೆ ನಿಮಗೆ ಬಿಲ್ಲಿಂಗ್ ಸೈಕಲ್ (billing cycle) ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತದೆ. ಹೆಸರೇ ಹೇಳುವಂತೆ ಬಿಲ್ಲಿಂಗ್ ಸೈಕಲ್ ಅಂದ್ರೆ ಎಷ್ಟು ಅವಧಿಗೆ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ (credit card bill) ಸೃಷ್ಟಿಯಾಗಿದೆ ಎಂಬುದು. ನಿಮ್ಮ ತಿಂಗಳ  ಹಣಕಾಸು ಯೋಜನೆ ದೃಷ್ಟಿಯಿಂದ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬಗ್ಗೆ ಕೂಡ ಮಾಹಿತಿ ಹೊಂದಿರೋದು ಅಗತ್ಯ. ಬಿಲ್ಲಿಂಗ್ ಸೈಕಲ್ ಬಗ್ಗೆ ನಿಮಗೆ ಮಾಹಿತಿಯಿದ್ರೆ ಕ್ರೆಡಿಟ್ ಕಾರ್ಡ್ ಮೇಲೆ ವಿಧಿಸಲಾಗುವ ಬಡ್ಡಿ ಶುಲ್ಕ ( interest charges) ಹಾಗೂ ವಿಳಂಬ ಶುಲ್ಕ (late fees) ಪಾವತಿಯಿಂದ ತಪ್ಪಿಸಿಕೊಳ್ಳಬಹುದು. ಹೀಗಾಗಿ ಕ್ರೆಡಿಟ್ ಕಾರ್ಡ್ ಬಳಕೆ ನಿಮ್ಮ ಜೇಬಿಗೆ ಅನಗತ್ಯ ಹೊರೆಯಾಗಬಾರದು ಅಂದ್ರೆ ನೀವು ಬಿಲ್ಲಿಂಗ್ ಸೈಕಲ್ ಬಗ್ಗೆ ತಿಳಿಯೋದು ಅತ್ಯವಶ್ಯಕ.

ಒಮ್ಮೆ ಕ್ರೆಡಿಟ್ ಕಾರ್ಡ್ ವಿತರಣೆಯಾದ್ರೆ ಮುಗಿಯಿತು, ನೀವು ಕಾರ್ಡ್ ರದ್ದು ಮಾಡೋ ತನಕ ಬಿಲ್ಲಿಂಗ್ ಸೈಕಲ್ ಸಾಮಾನ್ಯವಾಗಿ ಒಂದೇ ಅವಧಿಗೆ ಫಿಕ್ಸ್ ಆಗಿರುತ್ತದೆ. ಆದ್ರೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕರಿಗೆ ತಮ್ಮ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಅನ್ನು ಒಮ್ಮೆ ಬದಲಾಯಿಸಲು ಅವಕಾಶ ನೀಡಿದೆ. ಈ ಅವಕಾಶ ಈ ತಿಂಗಳಿನಿಂದಲೇ ಪ್ರಾರಂಭವಾಗಲಿದೆ. ಕಾರ್ಡ್ ವಿತರಕರು ಎಲ್ಲ ಕ್ರೆಡಿಟ್ ಕಾರ್ಡ್ಗಳಿಗೆ (Credit cards) ಒಂದೇ ನಿಗದಿತ ಬಿಲ್ಲಿಂಗ್ ಸೈಕಲ್ ಫಾಲೋ ಮಾಡದ ಕಾರಣ ಆರ್ ಬಿಐ ಬಳಕೆದಾರರಿಗೆ ತಮ್ಮ ಸ್ವಂತ ಅನುಕೂಲಕ್ಕೆ ತಕ್ಕಂತೆ ಬಿಲ್ಲಿಂಗ್ ಅವಧಿ ಆಯ್ಕೆ ಮಾಡಲು ಅವಕಾಶ ನೀಡಿದೆ.

SBI WhatsApp Banking: ಎಸ್ ಬಿಐ ಗ್ರಾಹಕರಿಗೆ ಶುಭ ಸುದ್ದಿ; ಶೀಘ್ರದಲ್ಲೇ ವಾಟ್ಸಾಪ್ ಬ್ಯಾಂಕಿಂಗ್ ಸೇವೆ

ಬಿಲ್ಲಿಂಗ್ ಸೈಕಲ್ ಬಗ್ಗೆ ಮಾಹಿತಿ ಇರಲಿ
ನಿಮ್ಮ ಕೊನೆಯ (ಈ ಹಿಂದಿನ)  ಹಾಗೂ ಮುಂದಿನ ಕ್ರೆಡಿಟ್ ಕಾರ್ಡ್ ಕ್ಲೋಸಿಂಗ್ ಸ್ಟೇಟ್ಮೆಂಟ್ ನಡುವಿನ ಅವಧಿಯೇ  ಬಿಲ್ಲಿಂಗ್ ಸೈಕಲ್. ಇದನ್ನು ಇನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ನಿದರ್ಶನದೊಂದಿಗೆ ನೋಡೋಣ. ಉದಾಹರಣೆಗೆ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಪ್ರತಿ ತಿಂಗಳು  18ರಂದು ಸೃಷ್ಟಿಯಾಗುತ್ತದೆ ಎಂದು ಭಾವಿಸೋಣ. ಆಗ ನಿಮ್ಮ ಬಿಲ್ಲಿಂಗ್ ಸೈಕಲ್ ಕಳೆದ ತಿಂಗಳ 19ರಂದು ಪ್ರಾರಂಭವಾಗಿ ಈ ತಿಂಗಳ 19ರ ತನಕ ಮುಂದುವರಿಯುತ್ತದೆ. ಈ ಬಿಲ್ಲಿಂಗ್ ಅವಧಿಯಲ್ಲಿನ ಬ್ಯಾಲೆನ್ಸ್ ವರ್ಗಾವಣೆ (Balance transfer), ನಗದು ವಿತ್ ಡ್ರಾಗಳು (Cash withdraws) ಸೇರಿದಂತೆ ಎಲ್ಲ  ವಹಿವಾಟುಗಳು ನಿಮ್ಮ ಮಾಸಿಕ ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಅಥವಾ ಬಿಲ್ ನಲ್ಲಿ ಇರುತ್ತವೆ. ಈ ಬಿಲ್ಲಿಂಗ್ ಸೈಕಲ್ ಬಳಿಕ ನಡೆಸಿದ ಯಾವುದೇ ವಹಿವಾಟು ಮುಂದಿನ ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ನಲ್ಲಿ ಬರುತ್ತದೆ. ಉದಾಹರಣೆಗೆ ನೀವು ಈ ತಿಂಗಳ 20ರಂದು ಕ್ರೆಡಿಟ್ ಕಾರ್ಡ್ ಬಳಸಿ ಯಾವುದೇ ವಹಿವಾಟು ನಡೆಸಿದ್ರೆ ಅದರ ಮಾಹಿತಿ ಮುಂದಿನ ಬಿಲ್ ನಲ್ಲಿ ಇರುತ್ತದೆ. ನಿಮ್ಮ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ವಿತರಕರನ್ನು ಅವಲಂಬಿಸಿ ಬಿಲ್ಲಿಂಗ್ ಸೈಕಲ್ ಅವಧಿ 28 ರಿಂದ 31 ದಿನಗಳ ಕಾಲ ಇರುತ್ತದೆ.

Business Idea: ಅತಿ ಹೆಚ್ಚು ಬೇಡಿಕೆಯಿರೋ ಈ ಬ್ಯುಸಿನೆಸ್ ಶುರು ಮಾಡಿ ಲಾಭ ಗಳಿಸಿ

ಆರ್ ಬಿಐ ಏನ್ ಹೇಳಿದೆ?
ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ತಿದ್ದುಪಡಿ ಮಾಡಲು ಈ ಹಿಂದೆ ಯಾವುದೇ ನಿಯಮಗಳಿರಲಿಲ್ಲ. ಬ್ಯಾಂಕುಗಳು ತಮ್ಮ ಆಂತರಿಕ ನೀತಿಗಳನ್ನು ಆಧರಿಸಿ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಬದಲಾಯಿಸಲು ಅವಕಾಶ ನೀಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಆರ್ ಬಿಐ ಹೀಗೆ ಹೇಳಿದೆ-'ಕಾರ್ಡ್ ವಿತರಕರು ಎಲ್ಲ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸ್ಟ್ಯಾಂಡರ್ಡ್ ಬಿಲ್ಲಿಂಗ್ ಸೈಕಲ್ ಅನುಸರಿಸುತ್ತಿಲ್ಲ. ಹೀಗಾಗಿ ಕಾರ್ಡ್ ಬಳಕೆದಾರರಿಗೆ ಒಂದು ಬಾರಿ ತಮ್ಮ ಅನುಕೂಲಕ್ಕೆ ತಕ್ಕಂತೆ  ಬಿಲ್ಲಿಂಗ್ ಸೈಕಲ್ ಮಾರ್ಪಾಡು ಮಾಡುವ ಆಯ್ಕೆ ಒದಗಿಸಬೇಕು.' ಈ ಹೊಸ ನಿಯಮವು 2022ರ ಜುಲೈ 1ರಿಂದಲೇ ಜಾರಿಗೆ ಬಂದಿದೆ. ಹೀಗಾಗಿ ಗ್ರಾಹಕರು ಈಗ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ಅವಕಾಶವಿದೆ. ಈ ಆಯ್ಕೆ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!