Works To Complete Before Dec.31: ಜೇಬಿನ ಮೇಲೆ ಪರಿಣಾಮ ಬೀರೋ ಈ 4 ಕೆಲಸಗಳನ್ನು ತಕ್ಷಣ ಮಾಡಿಬಿಡಿ

By Suvarna News  |  First Published Dec 16, 2021, 3:01 PM IST

*ಡಿ.31ರೊಳಗೆ ಈ ನಾಲ್ಕು ಕೆಲಸಗಳನ್ನು ನೀವು ಮಾಡದಿದ್ರೆ ನಿಮಗೇ ನಷ್ಟ.
*ಪಿಎಫ್ ಖಾತೆಗೆ ನಾಮಿನಿ ಸೇರ್ಪಡೆ, ಆಧಾರ್ ಯುಎಎನ್ ಜೋಡಣೆ, ಐಟಿಆರ್ ಸಲ್ಲಿಕೆಗೆ ಡಿ.31 ಗಡುವು
* ಪಿಂಚಣಿದಾರರ ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಕೆಗೂ ಡಿ.31 ಅಂತಿಮ ದಿನಾಂಕ


ನವದೆಹಲಿ (ಡಿ.16):  ನಾವೀಗ ಈ ವರ್ಷದ ಕೊನೆಯ ತಿಂಗಳಲ್ಲಿದ್ದೇವೆ. 2022ರ ಸ್ವಾಗತಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ.  ಹೀಗಿರೋವಾಗ ಈ ತಿಂಗಳ ಅಂತ್ಯದೊಳಗೆ ನೀವು ಮಾಡಿ ಮುಗಿಸಲೇಬೇಕಾದ ಕೆಲವು ಮಹತ್ವದ ಕಾರ್ಯಗಳಿವೆ. ಒಂದು ವೇಳೆ ಡಿ.31ರೊಳಗೆ ನೀವು ಈ ಕೆಲಸಗಳನ್ನು ಮಾಡಿ ಮುಗಿಸದಿದ್ರೆ ನಿಮ್ಮಆರ್ಥಿಕ ಪರಿಸ್ಥಿತಿ ಮೇಲೆ ಇವು ನೇರ ಪರಿಣಾಮ ಬೀರೋ ಸಾಧ್ಯತೆಯಿದೆ. ಹಾಗಾದ್ರೆ ಈ ತಿಂಗಳ ಅಂತ್ಯದೊಳಗೆ ನೀವು ಮಾಡಿ ಮುಗಿಸಲೇಬೇಕಾದ 4 ಮಹತ್ವದ ಕೆಲಸಗಳು ಯಾವುವು?

ಪಿಎಫ್ (PF)ಖಾತೆಗೆ ನಾಮಿನಿ(( nominee)) ಸೇರ್ಪಡೆ 
ಒಂದು ವೇಳೆ ನೀವು ನೌಕರರ ಭವಿಷ್ಯ ನಿಧಿ (EPF )ಖಾತೆ ಹೊಂದಿದ್ರೆ ಅದಕ್ಕೆ ನಾಮಿನಿ(( nominee)) ಸೇರ್ಪಡೆ ಮಾಡಲು ಡಿ.31 ಕೊನೆಯ ದಿನಾಂಕವಾಗಿದೆ.  ನೌಕರರ ಭವಿಷ್ಯ ನಿಧಿ ಸಂಸ್ಥೆ( EPFO) ಎಲ್ಲ ಪಿಎಫ್ ಖಾತೆದಾರರು ಈ ದಿನಾಂಕದೊಳಗೆ ನಾಮಿನಿ ಸೇರ್ಪಡೆ ಮಾಡುವಂತೆ ತಿಳಿಸಿದೆ. ಒಂದು ವೇಳೆ ನೀವು ಈ ದಿನಾಂಕದೊಳಗೆ ನಾಮಿನಿ ಸೇರ್ಪಡೆ ಮಾಡಲು ವಿಫಲರಾದ್ರೆ ಇಪಿಎಫ್ ನಿಂದ  (EPF)ಸಿಗೋ ಕೆಲವು ಪ್ರಯೋಜನಗಳಿಂದ ವಂಚಿತರಾಗುತ್ತೀರಿ. 'ಪಿಎಫ್ ಚಂದಾದಾರರು ಆನ್ಲೈನ್ ಪಿಎಫ್, ಪಿಂಚಣಿ (pension)ಹಾಗೂ ಇನ್ಯುರೆನ್ಸ್(insurance)ಸೇವೆಗಳ ಮೂಲಕ ತಮ್ಮ ಸಂಗಾತಿ, ಮಕ್ಕಳು ಹಾಗೂ ಪೋಷಕರನ್ನು ಸಂರಕ್ಷಿಸಲು ನಾಮಿನೇಷನ್ ನೋಂದಣಿ ಮಾಡೋದು ಅತೀಮುಖ್ಯ' ಎಂದು ಇಪಿಎಫ್ಒ ಪ್ರಕಟಣೆಯಲ್ಲಿ ತಿಳಿಸಿದೆ. ಒಂದು ವೇಳೆ ನೀವು ಇನ್ನೂ ಪಿಎಫ್ ಖಾತೆಗೆ ನಾಮಿನಿ ಸೇರ್ಪಡೆ ಮಾಡದಿದ್ರೆ EPFO ಅಧಿಕೃತ ವೆಬ್ ಸೈಟ್ epfindia.gov.in ಮೂಲಕ ಇ-ನಾಮಿನಿ ಅರ್ಜಿ(e-nominee form) ಭರ್ತಿ ಮಾಡಿ.

Latest Videos

undefined

Money Transfer : ತಪ್ಪಾದ ಖಾತೆಗೆ ಹಣ ಹೋದ್ರೆ ವಾಪಸ್ ಪಡೆಯೋದು ಹೇಗೆ?

ಐಟಿಆರ್ (ITR) ಫೈಲಿಂಗ್ ಗಡುವು
2021ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ (Income tax returns) ಸಲ್ಲಿಕೆಗೆ ಡಿ.31 ಕೊನೆಯ ದಿನಾಂಕವಾಗಿದೆ. ಕೇಂದ್ರ ನೇರ ತೆರಿಗೆಗಳ ನಿಗಮ (CBDT)ಐಟಿ ರಿಟರ್ನ್ಸ್ ಸಲ್ಲಿಕೆಗೆ ಈ ಮೊದಲು ಜುಲೈ 31 ರ ಗಡುವು ನೀಡಿತ್ತು. ಆದ್ರೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಅನೇಕ ತಾಂತ್ರಿಕ ದೋಷಗಳ ಬಗ್ಗೆ ಬಳಕೆದಾರರಿಂದ(Users) ದೂರುಗಳು(Complaints) ಬಂದ ಹಿನ್ನೆಲೆಯಲ್ಲಿ ಈ ಅವಧಿಯನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಿತು. ಆ ಬಳಿಕ ಸರ್ಕಾರ ಈ ಅವಧಿಯನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿ ಡಿಸೆಂಬರ್ 31ಕ್ಕೆ ಅಂತಿಮ ಗಡುವು ಫಿಕ್ಸ್ (fix)ಮಾಡಿದೆ. ಇ-ಫೈಲಿಂಗ್ (e-filling)ಪೋರ್ಟಲ್ ಮೂಲಕವೇ ಶೀಘ್ರವಾಗಿ ರಿಟರ್ನ್ಸ್ ಫೈಲ್ ಮಾಡುವಂತೆ ಆದಾಯ ತೆರಿಗೆ ಇಲಾಖೆ (Income Tax Department) ತೆರಿಗೆದಾರರನ್ನು(Taxpayers) ಒತ್ತಾಯಿಸಿದೆ. 

ಪಿಂಚಣಿದಾರರ ಜೀವಿತಾವಧಿ ಪ್ರಮಾಣಪತ್ರ (Life certificate)ಸಲ್ಲಿಕೆ 
60 ವರ್ಷ ಮೇಲ್ಪಟ್ಟ ಪಿಂಚಣಿದಾರರು ಜೀವಿತಾವಧಿ ಪ್ರಮಾಣ ಪತ್ರ (Life Certificate)ಸಲ್ಲಿಸೋ ಗಡುವನ್ನುಸಿಬ್ಬಂದಿ, ಸಾವರ್ಜನಿಕ ಕೊಂದುಕೊರತೆ ಹಾಗೂ ಪಿಂಚಣಿ ಸಚಿವಾಲಯವು ನವೆಂಬರ್ 30ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಕೇಂದ್ರ ಸರ್ಕಾರದ ಪ್ರತಿ ನಿವೃತ್ತ  ಉದ್ಯೋಗಿ ಪಿಂಚಣಿ (Pension) ಮುಂದುವರಿಕೆಗೆ ನವೆಂಬರ್ ತಿಂಗಳಲ್ಲಿ ಜೀವಿತಾವಧಿ ಪ್ರಮಾಣಪತ್ರ ಸಲ್ಲಿಸೋದು ಕಡ್ಡಾಯ. ಆದ್ರೆ ಕೋವಿಡ್ -19 (COVID-19)ಪ್ರಕರಣಗಳು ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರೋದನ್ನು ಗಮನಿಸಿ ನಿವೃತ್ತ ನೌಕರರ ಆರೋಗ್ಯದ ದೃಷ್ಟಿಯಿಂದ  ಸಿಬ್ಬಂದಿ, ಸಾವರ್ಜನಿಕ ಕೊಂದುಕೊರತೆ ಹಾಗೂ ಪಿಂಚಣಿ ಸಚಿವಾಲಯವು ಜೀವಿತಾವಧಿ ಪ್ರಮಾಣಪತ್ರ ಸಲ್ಲಿಕೆ ಗಡುವನ್ನು ಡಿಸೆಂಬರ್ 31ರ ತನಕ ವಿಸ್ತರಿಸಿದೆ. ಹೀಗಾಗಿ ಈ ತನಕ ಜೀವಿತಾವಧಿ ಪ್ರಮಾಣಪತ್ರ ಸಲ್ಲಿಸದ ಪಿಂಚಣಿದಾರರು ಅಷ್ಟರೊಳಗೆ ಸಲ್ಲಿಕೆ ಮಾಡೋದು ಕಡ್ಡಾಯ.

Nominee To PF:ನಾಮಿನಿ ಸೇರ್ಪಡೆಗೆ ಡಿ.31 ಕೊನೆಯ ದಿನಾಂಕ; ನಾಮಿನಿ ಸೇರಿಸೋದು ಹೇಗೆ? ಇಲ್ಲಿದೆ ಮಾಹಿತಿ

 

EPFO ಆಧಾರ್ ಹಾಗೂ UAN ಡೆಡ್ ಲೈನ್
. ನಿಮ್ಮ ಆಧಾರ್ ಕಾರ್ಡ್ (Aadhaar card) ಅನ್ನು ಇಪಿಎಫ್‌ಒ ನೀಡಿರುವ ಯುನಿವರ್ಸಲ್ ಅಕೌಂಟ್ ನಂಬರ್‌ನೊಂದಿಗೆ ಲಿಂಕ್ ಮಾಡುವುದು ಬಹಳ ಮುಖ್ಯ. ಪ್ರತಿ ಉದ್ಯೋಗಿಗೆ ನಿಯೋಜಿಸಲಾದ ಸಂಖ್ಯೆಗಳಲ್ಲಿ UAN ಒಂದಾಗಿದೆ ಮತ್ತು ಇದು ಶಾಶ್ವತವಾದ ಅಕೌಂಟ್ ನಂಬರ್ ಆಗಿದೆ. EPFO ಯುನಿವರ್ಸಲ್ ಅಕೌಂಟ್ ನಂಬರ್ (UAN) ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಗಡುವು ಡಿಸೆಂಬರ್ 31 ಆಗಿದೆ. 

click me!