ಕೈನಲ್ಲಿ ನಗದಿಲ್ಲ ಎಂದಾಗ ಜನರು ಎಟಿಎಂಗೆ ಹೋಗ್ತಾರೆ. ಬ್ಯಾಂಕ್ ಖಾತೆಯಲ್ಲೂ ಹಣವಿಲ್ಲ ಎಂದಾಗ ಕ್ರೆಡಿಟ್ ಕಾರ್ಡ್ ಬಳಸ್ತಾರೆ. ಕ್ರೆಡಿಟ್ ಕಾರ್ಡ್ ಬಳಸಿ ಹಣ ವಿತ್ ಡ್ರಾ ಮಾಡುವ ಜನರು ಆ ಕ್ಷಣದ ಅಗತ್ಯತೆ ಮಾತ್ರ ಗಮನಿಸ್ತಾರೆ. ಆದ್ರೆ ಮುಂದೆ ಇದ್ರಿಂದ ಸಮಸ್ಯೆಯಾಗ್ಬಹುದು ಎಂಬ ಜ್ಞಾನ ಅವರಿಗಿರೋದಿಲ್ಲ.
ಭಾರತ ಬದಲಾಗ್ತಿದೆ. ಹಾಗೆಯೇ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಕೂಡ ಸಾಕಷ್ಟು ಬದಲಾವಣೆ ಕಾಣ್ತಿದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಹೆಚ್ಚು ಪ್ರಸಿದ್ಧಿಗೆ ಬರ್ತಿದೆ. ಇದ್ರ ಜೊತೆಗೆ ಕ್ರೆಡಿಟ್ ಕಾರ್ಡ್ ಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಅನೇಕ ಬ್ಯಾಂಕ್ ಹಾಗೂ ಕ್ರೆಡಿಟ್ ಕಾರ್ಡ್ ಕಂಪನಿಗಳು ಕ್ರೆಡಿಟ್ ಕಾರ್ಡ್ ಪಡೆಯುವಂತೆ ಗ್ರಾಹಕರನ್ನು ಒತ್ತಾಯಿಸ್ತಾರೆ. ಗ್ರಾಹಕರನ್ನು ಸೆಳೆಯಲು ಸಾಕಷ್ಟು ಆಫರ್ ಗಳನ್ನು ಕಂಪನಿ ಹಾಗೂ ಬ್ಯಾಂಕ್ ಗಳು ನೀಡ್ತಿವೆ. ಕ್ರೆಡಿಟ್ ಕಾರ್ಟ್ ಪಡೆಯುವಂತೆ ದಿನಕ್ಕೆ ನಾಲ್ಕರಿಂದ ಐದು ಕರೆ ಗ್ರಾಹಕರಿಗೆ ಬರ್ತಿರುತ್ತದೆ.
ಕ್ರೆಡಿಟ್ ಕಾರ್ಡ್ (Credit Card) ನಿಂದ ಸಾಕಷ್ಟು ಪ್ರಯೋಜನವಿದೆ. ಕೈನಲ್ಲಿ ಹಣವಿಲ್ಲವೆಂದ್ರೂ ನಿಮಗೆ ಶಾಪಿಂಗ್ (Shopping) ಮಾಡುವ ಅವಕಾಶ ಇದ್ರಿಂದ ಸಿಗುತ್ತದೆ. ಕ್ರೆಡಿಟ್ ಕಾರ್ಡ್ ಉಜ್ಜಿ ಶಾಪಿಂಗ್ ಮಾಡಿದ ಒಂದು ತಿಂಗಳ ನಂತ್ರ ನೀವು ಕ್ರೆಡಿಟ್ ಕಾರ್ಡ್ ಬಿಲ್ (Bill) ಪಾವತಿ ಮಾಡಬಹುದು. ಕೆಲ ಗ್ರಾಹಕರು ಕ್ರೆಡಿಟ್ ಕಾರ್ಡ್ ಬಳಸಿ, ವಸ್ತುಗಳನ್ನು ಖರೀದಿ ಮಾಡಿದ ನಂತ್ರ ಅದನ್ನು ಇಎಂಐ ಆಗಿ ಬದಲಿಸಿಕೊಳ್ತಾರೆ. ಇದ್ರಿಂದ ಹಣ ಪಾವತಿ ಸುಲಭವಾಗುತ್ತದೆ. ಆದ್ರೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ವೇಳೆ ಕೆಲವರು ತಪ್ಪುಗಳನ್ನು ಮಾಡ್ತಾರೆ. ಕ್ರೆಡಿಟ್ ಕಾರ್ಡ್ ಬಳಸಿ ನಗದು ವಿತ್ ಡ್ರಾ ಮಾಡುವವರಿದ್ದಾರೆ. ನಾವಿಂದು ಇದ್ರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಕ್ರೆಡಿಟ್ ಕಾರ್ಡ್ ಮೂಲಕ ನಗದು ಹಿಂಪಡೆಯುವಿಕೆ: ಎಲ್ಲ ಕ್ರೆಡಿಟ್ ಕಾರ್ಡ್ ನಲ್ಲೂ ನಗದು ಹಿಂಪಡೆಯುವ ವ್ಯವಸ್ಥೆ ಇರುತ್ತದೆ. ಇದ್ರ ಮಿತಿ ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಅವಲಂಬಿಸಿರುತ್ತದೆ. ಕ್ರೆಡಿಟ್ ಕಾರ್ಡ್ ಲಿಮಿಟ್ ನ ಶೇಕಡಾ 20ರಿಂದ 40ರಷ್ಟು ಹಣವನ್ನು ನಗದು ರೂಪದಲ್ಲಿ ವಿತ್ ಡ್ರಾ ಮಾಡಲು ಬ್ಯಾಂಕ್ ಅನುಮತಿ ನೀಡುತ್ತದೆ. ಕ್ರೆಡಿಟ್ ಕಾರ್ಡ್ ಲಿಮಿಟ್ 5 ಲಕ್ಷವಿದ್ದರೆ ನೀವು ಒಂದರಿಂದ ಎರಡು ಲಕ್ಷ ಹಣವನ್ನು ನಗದು ರೂಪದಲ್ಲಿ ವಿತ್ ಡ್ರಾ ಮಾಡಬಹುದು.
ದೀಪಾವಳಿಗೆ ಏನಾದ್ರೂ ಖರೀದಿಸುವ ಪ್ಲ್ಯಾನ್ ಇದೆಯಾ? ಹಾಗಾದ್ರೆ ನೋ ಕಾಸ್ಟ್ ಇಎಂಐ ಬಗ್ಗೆ ನಿಮ್ಗೆ ತಿಳಿದಿರಲಿ
ಕ್ರೆಡಿಟ್ ಕಾರ್ಡ್ ಬಳಸಿ ಹಣ ಹಿಂಪಡೆಯುವುದಕ್ಕೆ ಕ್ಯಾಶ್ ವಿತ್ ಡ್ರಾ ಎಂದು ಕರೆಯಲಾಗುತ್ತದೆ. ಅನೇಕ ಜನರು ಹಣದ ಅಗತ್ಯತೆಗೆ ಅಥವಾ ತರಾತುರಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ನಗದನ್ನು ವಿತ್ ಡ್ರಾ ಮಾಡ್ತಾರೆ. ಆದ್ರೆ ಕ್ರೆಡಿಟ್ ಕಾರ್ಡ್ ಬಳಸಿ ನಗದು ಪಡೆಯುವುದು ಕೆಟ್ಟ ನಿರ್ಧಾರ ಎಂದ್ರೆ ತಪ್ಪಾಗಲಾರದು. ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಡೆಯುವುದಿದ್ದರೆ ಅದಕ್ಕಿಂತ ಮೊದಲು ನೀವು ಅನೇಕ ಬಾರಿ ವಿಚಾರ ಮಾಡುವುದು ಬಹಳ ಮುಖ್ಯ.
ಹೆಚ್ಚುವರಿ ಶುಲ್ಕ ಪಾವತಿ : ಕ್ರೆಡಿಟ್ ಕಾರ್ಡ್ ಮೂಲಕ ನಗದು ವಿತ್ ಡ್ರಾ ಮಾಡಿದ್ರೆ ನೀವು ಅದಕ್ಕೆ ಶೇಕಡಾ ಎರಡರಿಂದ ಮೂರುರಷ್ಟು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ನೀವು 1 ಲಕ್ಷ ರೂಪಾಯಿ ನಗದನ್ನು ನೀವು ಕ್ರೆಡಿಟ್ ಕಾರ್ಡ್ ಮೂಲಕ ವಿತ್ ಡ್ರಾ ಮಾಡಿದ್ರೆ ನೀವು ಎರಡರಿಂದ ಮೂರು ಸಾವಿರ ರೂಪಾಯಿಯನ್ನು ಶುಲ್ಕ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ.
ಸಿಬಿಲ್ ಸ್ಕೋರ್ ಮೇಲೆ ಪರಿಣಾಮ : ಕ್ರೆಡಿಟ್ ಕಾರ್ಡ್‌ನಿಂದ ನೀವು ಆಗಾಗ್ಗೆ ನಗದು ಹಿಂಪಡೆಯುತ್ತಿದ್ದರೆ ಅದು ನಿಮ್ಮ ಸಿಬಿಲ್ (CIBIL) ಸ್ಕೋರ್‌ನ ಮೇಲೆ ಪರಿಣಾಮ ಬೀರುತ್ತದೆ. ಸಿಬಿಲ್ ಸ್ಕೋರ್ ಕಡಿಮೆಯಾದ್ರೆ ಅದ್ರಿಂದ ನೀವು ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಹಣ ತಪ್ಪಾಗಿ ಬೇರೆ ಯಾರದ್ದೋ ಖಾತೆಗೆ ವರ್ಗಾವಣೆ ಆಗಿದೆಯಾ? ಡೋಂಟ್ ವರಿ, ಹೀಗೆ ಮಾಡಿ
ಬಡ್ಡಿ ರಹಿತ ಗ್ರೇಸ್ ಅವಧಿ : ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂಪಡೆದರೆ ನೀವು ಬಡ್ಡಿರಹಿತ ಗ್ರೇಸ್ ಅವಧಿಯ ಪ್ರಯೋಜನವನ್ನು ಪಡೆಯುವುದಿಲ್ಲ. ಶಾಪಿಂಗ್ ಮಾಡಿದ ನಂತರ ನಿಮಗೆ ಬಡ್ಡಿರಹಿತ ಗ್ರೇಸ್ ಅವಧಿ ಸಿಗುವುದಿಲ್ಲ. ಹಿಂಪಡೆದ ಮೊತ್ತಕ್ಕೆ ಪ್ರತಿ ತಿಂಗಳು ಬಡ್ಡಿಯನ್ನು ಸಹ ಪಾವತಿಸಬೇಕಾಗುತ್ತದೆ.