ಯೋಗ ಗುರು ರಾಮ್‌ದೇವ್ ಕಂಪೆನಿ ಪತಂಜಲಿ ಭರ್ತಿ 55490 ಕೋಟಿ ಮಾರುಕಟ್ಟೆ ಮೌಲ್ಯದೊಂದಿಗೆ ಎಲ್ಲೆಡೆ ಹೆಸರುವಾಸಿಯಾಗಿದೆ. ಪತಂಜಲಿಯ ಉತ್ಪನ್ನಗಳನ್ನು ಜನರು ಇಷ್ಟಪಟ್ಟು ಖರೀದಿಸುತ್ತಾರೆ. ಆದರೆ ಈ ಉದ್ಯಮವನ್ನು ಆರಂಭಿಸಲು ಭೂಮಿಯನ್ನು ದಾನ ಮಾಡಿ ನೆರವಾದ ದಂಪತಿಗಳ ಬಗ್ಗೆ ನಿಮ್ಗೆ ಗೊತ್ತಿದ್ಯಾ?
ಯೋಗ ಗುರು ರಾಮ್‌ದೇವ್ ಕಂಪೆನಿ ಪತಂಜಲಿ ಭರ್ತಿ 55490 ಕೋಟಿ ಮಾರುಕಟ್ಟೆ ಮೌಲ್ಯದೊಂದಿಗೆ ಎಲ್ಲೆಡೆ ಹೆಸರುವಾಸಿಯಾಗಿದೆ. ಪತಂಜಲಿಯ ಉತ್ಪನ್ನಗಳನ್ನು ಜನರು ಇಷ್ಟಪಟ್ಟು ಖರೀದಿಸುತ್ತಾರೆ. ಆದರೆ ಈ ಉದ್ಯಮವನ್ನು ಆರಂಭಿಸಲು ಭೂಮಿಯನ್ನು ದಾನ ಮಾಡಿ ನೆರವಾದ ದಂಪತಿಗಳ ಬಗ್ಗೆ ನಿಮ್ಗೆ ಗೊತ್ತಿದ್ಯಾ? 2006ರಲ್ಲಿ, ರಾಮ್‌ದೇವ್ ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಕಂಪನಿಯನ್ನು ಸ್ಥಾಪಿಸಲು ಪ್ರಾರಂಭಿಸಿದರು. ತಮ್ಮ ಅನುಯಾಯಿಗಳಾದ ಸುನೀತಾ ಮತ್ತು ಸರ್ವಾನ್ ಸ್ಯಾಮ್ ಪೊದ್ದಾರ್ ಅವರಿಂದ ಸಾಲವನ್ನು ಪಡೆದುಕೊಂಡರು.
ಸ್ಕಾಟ್ಲೆಂಡ್‌ನ ನಿವಾಸಿಗಳಾದ ಸುನೀತಾ ಮತ್ತು ಸರ್ವಾನ್ ಪೊದ್ದಾರ್, ಕುಂಬ್ರೇ ದ್ವೀಪವನ್ನು ಎರಡು ಮಿಲಿಯನ್ ಪೌಂಡ್‌ಗಳಿಗೆ ಖರೀದಿಸಿ ಬಾಬಾ ರಾಮ್‌ದೇವ್‌ಗೆ 2009ರಲ್ಲಿ ಉಡುಗೊರೆಯಾಗಿ ನೀಡಿದರು. 2011ರ ಹೊತ್ತಿಗೆ ಪತಂಜಲಿ ಆಯುರ್ವೇದದಲ್ಲಿ ಗಣನೀಯ ಸಂಖ್ಯೆಯ ಷೇರುಗಳನ್ನು ಹೊಂದಿದ್ದರು. ಆಚಾರ್ಯ ಬಾಲಕೃಷ್ಣ ಕಂಪನಿಯಲ್ಲಿ ಎರಡನೇ ಅತಿ ದೊಡ್ಡ ಪಾಲುದಾರರು.
ಮುಕೇಶ್ ಅಂಬಾನಿಗೆ ಭಾರತಕ್ಕಿಂತ ವಿದೇಶದಲ್ಲೇ ದುಬಾರಿ ಆಸ್ತಿಗಳಿವೆ ಗೊತ್ತಾ!?
ಸುನೀತಾ, ಜೀವನವು ಬಾಬಾ ರಾಮ್‌ದೇವ್‌ರಿಂದ ಆಳವಾಗಿ ಪ್ರಭಾವಿತವಾಗಿದೆ. ವಿಶೇಷವಾಗಿ ಯೋಗದ ಮೂಲಕ ತೂಕ ಇಳಿಸುವ ಪ್ರಕ್ರಿಯೆಯಿಂದ ಪ್ರೇರಿತಲಾದ ಸುನೀತಾ, ರಾಮ್‌ದೇವ್‌ಗೆ ದ್ವೀಪವನ್ನು ಮತ್ತು ಸಾಕಷ್ಟು ಹಣವನ್ನು ದಾನ ಮಾಡುವಂತೆ ಪತಿಯ ಮನವೊಲಿಸಿದರು. ನಂತರದ ದಿನಗಳಲ್ಲಿ ಸುನೀತಾ ಯುಕೆಯಲ್ಲಿ ಪತಂಜಲಿ ಯೋಗ ಪೀಠ ಟ್ರಸ್ಟ್‌ನ್ನು ಆರಂಭಿಸಿದರು.
ಮುಂಬೈನಲ್ಲಿ ಹುಟ್ಟಿ ಕಠ್ಮಂಡುವಿನಲ್ಲಿ ಬೆಳೆದ ಸುನೀತಾ ಈಗ ಗ್ಲಾಸ್ಗೋದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ಅಲ್ಲಿ ಯೋಗ ತರಗತಿಗಳನ್ನು ನೀಡುತ್ತಾರೆ ಮತ್ತು ಯೋಗ ಶಿಕ್ಷಕರಿಗೆ ತರಬೇತಿ ನೀಡುತ್ತಾರೆ, ಗ್ಲಾಸ್ಗೋಗೆ ಭೇಟಿ ನೀಡಿದ ಬಾಬಾ ರಾಮ್‌ದೇವ್ ಅವರನ್ನು ಭೇಟಿಯಾದರು. ಇನ್ನು ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸ್ಯಾಮ್, 1980ರ ದಶಕದಲ್ಲಿ ಗೃಹೋಪಯೋಗಿ ವ್ಯಾಪಾರವನ್ನು ಖರೀದಿಸುವ ಮೂಲಕ ಉದ್ಯಮತೊಡಗಿದರು. ಆರಂಭದಲ್ಲಿ ಗ್ಯಾಸ್ ಸ್ಟೇಷನ್‌ನ್ನು ನಿರ್ವಹಿಸುತ್ತಿದ್ದ ಸುನೀತಾ, ನಂತರ ತನ್ನ ಪತಿಯ ವ್ಯಾಪಾರಕ್ಕೆ ಸೇರಿಕೊಂಡರು. ಇಬ್ಬರೂ ಈಗ ಯಶಸ್ವೀ ಉದ್ಯಮಿಗಳು.
ಲಕ್ಷಾಂತರ ರೂ. ಸಂಬಳ ಬರೋ ಕೆಲ್ಸ ಬಿಟ್ಟು, ಇವಳ್ಯಾಕೆ ಹಂದಿ ಸಾಕೋಕೆ ಶುರು ಮಾಡಿದ್ಲು?
ರಾಮ್‌ದೇವ್ ಜನಪ್ರಿಯತೆ ಹೆಚ್ಚುತ್ತಾ ಹೋದಂತೆ ಸುನೀತಾ ಹಾಗೂ ಸ್ಯಾಮ್ ಕಂಪನಿಯ ವಿಸ್ತರಣೆಯನ್ನು ಬೆಂಬಲಿಸಲು ಗಣನೀಯ ಸಾಲಗಳನ್ನು ನೀಡಿದರು. ಪ್ರಸ್ತುತ, ಸುನೀತಾ ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ಗೃಹ ಆರೈಕೆ ಮತ್ತು ಪುನರ್ವಸತಿ ಸೇವೆಯಾದ ಓಕ್ಮಿನ್‌ಸ್ಟರ್ ಹೆಲ್ತ್‌ಕೇರ್‌ನ CEO ಮತ್ತು ಸಂಸ್ಥಾಪಕಿ ಸ್ಥಾನವನ್ನು ಹೊಂದಿದ್ದಾರೆ.