ಭಾರತೀಯರ ಹಿಂದೂ – ಮುಸ್ಲಿಮರಲ್ಲಿ ಯಾರು ಶ್ರೀಮಂತರು? ಶೇ.30ರಷ್ಟು ಮಂದಿ ಹತ್ರ ಕುಕ್ಕರ್ ಸಹ ಇಲ್ಲ!

By Suvarna News  |  First Published Apr 24, 2024, 2:27 PM IST

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಭಾರತದಲ್ಲಿ ಶ್ರೀಮಂತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿರೋದೇನೋ ನಿಜ. ಆದ್ರೆ ಬಡವರ ಸಂಖ್ಯೆ ಕಡಿಮೆ ಏನಾಗಿಲ್ಲ. ಇದಕ್ಕೆ ಕಾರಣ ಏನು ಗೊತ್ತಾ? 
 


ಲೋಕಸಭೆ ಚುನಾವಣೆ ನಡೆಯುತ್ತಿರುವ ಕಾರಣ ಪಕ್ಷಗಳ ಮಧ್ಯೆ ಮಾತಿನ ಯುದ್ಧ ನಡೆಯುತ್ತಿದೆ. ಯಾರು ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ, ಮುಂದಿನ ಪ್ರಣಾಳಿಕೆ ಹೇಗಿದೆ ಎಂಬೆಲ್ಲದರ ಬಗ್ಗೆ ವಾದ – ವಿವಾದ ಶುರುವಾಗಿದೆ. ರಾಜಕೀಯ ಪಕ್ಷ ಹಾಗೂ ಮುಖಂಡರ ವಾದ ಏನೇ ಇರಲಿ. ಸದ್ಯ ನಮ್ಮ ದೇಶದ ಪರಿಸ್ಥಿತಿ ಹೇಗಿದೆ ಎಂಬುದನ್ನು ನಾವಿಂದು ಕೆಲ ಸಮೀಕ್ಷಾ ವರದಿಯಿಂದ ತಿಳಿಯಬಹುದು. 

ಭಾರತ (India) ದ ಸಂಪತ್ತಿನ ಹೆಚ್ಚಿನ ಪಾಲು ಯಾರ ಬಳಿ ಇದೆ ಎನ್ನುವ ಬಗ್ಗೆ ಸಮೀಕ್ಷೆ ನಡೆದಿದೆ. ಸರ್ಕಾರಿ (Government) ಅಂಕಿ ಅಂಶದ ಪ್ರಕಾರ, ಭಾರತದ ಶೇಕಡಾ 20ರಷ್ಟು ಮಂದಿ ಕೋಟ್ಯಾಧಿಪತಿಗಳು. ಅಂತರಾಷ್ಟ್ರೀಯ (International) ಸಂಸ್ಥೆಗಳ ವರದಿ ಪ್ರಕಾರ, ದೇಶದ ಶೇಕಡಾ 40ಕ್ಕಿಂತ ಹೆಚ್ಚು ಸಂಪತ್ತು ಶೇಕಡಾ ಒಂದರಷ್ಟು ಜನರ ಬಳಿ ಮಾತ್ರ ಸಂಗ್ರಹವಾಗಿದೆ. 

Tap to resize

Latest Videos

ಲಂಡನ್‌, ಅಬುಧಾಬಿ ಯಾವ್ದೂ ಅಲ್ಲ, ಮುಂಬೈನಲ್ಲಿ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ!

ಭಾರತ ಎಷ್ಟು ಶ್ರೀಮಂತ? : ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಸಂಪತ್ತಿನ ಆಧಾರದ ಮೇಲೆ ಐದು ಭಾಗವಾಗಿ ವಿಂಗಡಿಸಿದೆ. ಅತ್ಯಂತ ಬಡವರು, ಬಡವರು, ಮಧ್ಯಮ ವರ್ಗ, ಶ್ರೀಮಂತರು, ಅತ್ಯಂತ ಶ್ರೀಮಂತ. ಈ ದಾಖಲೆ ಪ್ರಕಾರ, ನಗರ ಪ್ರದೇಶಗಳಲ್ಲಿನ ಜನಸಂಖ್ಯೆಯ ಸುಮಾರು ಶೇಕಡಾ 46 ರಷ್ಟು ಜನರು ಅತ್ಯಂತ ಶ್ರೀಮಂತರು. ಗ್ರಾಮದಲ್ಲಿ ಶೇಕಡಾ 8ರಷ್ಟು ಜನರು ಅತ್ಯಂತ ಶ್ರೀಮಂತರ ವರ್ಗದಲ್ಲಿ ಬರ್ತಾರೆ. ಭಾರತದಲ್ಲಿ ಚಂಡೀಗಢವು ಅತಿ ಹೆಚ್ಚು ಶ್ರೀಮಂತರನ್ನು ಹೊಂದಿದೆ ನಗರವಾಗಿದೆ. ಇಲ್ಲಿನ ಶೇಕಡಾ 79ರಷ್ಟು ಮಂದಿ ಬಳಿ ಅತಿ ಹೆಚ್ಚು ಸಂಪತ್ತಿದೆ. ಇದ್ರ ನಂತ್ರ ಶೇಕಡಾ 68ರಷ್ಟು ಶ್ರೀಮಂತರನ್ನು ಹೊಂದಿರುವ ದೆಹಲಿ ಎರಡನೇ ಸ್ಥಾನದಲ್ಲಿ ಬಂದ್ರೆ ಹರಿಯಾಣ ಮೂರನೇ ಸ್ಥಾನದಲ್ಲಿದೆ.

ಹಿಂದು – ಮುಸ್ಲೀಮರಲ್ಲಿ ಯಾರು ಶ್ರೀಮಂತರು? : ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಂಪತ್ತಿನ ವ್ಯತ್ಯಾಸವು ಹೆಚ್ಚಿಲ್ಲ ಎಂದು ಎನ್ ಎಫ್ ಎಚ್ ಎಸ್ ಡೇಟಾ ತೋರಿಸುತ್ತದೆ. ಎರಡೂ ಧರ್ಮದ ಶೇಕಡಾ 20ರಷ್ಟು ಮಂದಿ ಅತ್ಯಂತ ಬಡವರಾದ್ರೆ ಶೇಕಡಾ 19ರಷ್ಟು ಮಂದಿ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬರ್ತಾರೆ. ಧರ್ಮದ ಆಧಾರದಲ್ಲಿ ನೋಡಿದರೆ ಜೈನರು ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ. ಜೈನ ಧರ್ಮದಲ್ಲಿ ಶೇಕಡಾ 80ರಷ್ಟು ಅತ್ಯಂತ ಶ್ರೀಮಂತರಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಸಿಖ್ ಬಂದ್ರೆ ಮೂರನೇ ಸ್ಥಾನದಲ್ಲಿ ಕ್ರಿಶ್ಚಿಯನ್ನರಿದ್ದಾರೆ. ಪರಿಶಿಷ್ಟ ಜಾತಿ ಶೇಕಡಾ 12ರಷ್ಟು ಮಂದಿ ಹಾಗೂ ಪರಿಶಿಷ್ಠ ಪಂಗಡದ ಶೇಕಡಾ 6ರಷ್ಟು ಮಂದಿ ಅತ್ಯಂತ ಶ್ರೀಮಂತರು ಎನ್ನಿಸಿಕೊಂಡಿದ್ದಾರೆ.

ಶೇಕಡಾ 75ರಷ್ಟು ಭಾರತೀಯರ ಬಳಿ ಎಸಿ – ಕೂಲರ್ ಇಲ್ಲ : NFHS 5 ವರದಿ ಪ್ರಕಾರ, ಈಗ್ಲೂ ಭಾರತದ ಬಹುದೊಡ್ಡ ಜನಸಂಖ್ಯೆ ಬಳಿ ಅಗತ್ಯ ವಸ್ತುಗಳಿಲ್ಲ. ನಿಮಗೆ ಅಚ್ಚರಿ ಎನ್ನಿಸಬಹುದು, ಶೇಕಡಾ 30ರಷ್ಟು ಜನಸಂಖ್ಯೆ ಬಳಿ ಕುಕ್ಕರ್ ಕೂಡ ಇಲ್ಲ. ಶೇಕಡಾ 15ರಷ್ಟು ಮಂದಿ ಬಳಿ ಕುರ್ಚಿ, ಶೇಕಡಾ 40ರಷ್ಟು ಮಂದಿ ಬಳಿ ಟೇಬಲ್ ವ್ಯವಸ್ಥೆಯೂ ಇಲ್ಲ. ಶೇಕಡಾ 30ರಷ್ಟು ಜನಸಂಖ್ಯೆ ಟಿವಿ ಇಲ್ಲದೆ ಜೀವನ ನಡೆಸಿದ್ರೆ ಶೇಕಡಾ 75ರಷ್ಟು ಮಂದಿ ಎಸಿ – ಕೂಲರ್ ಖರೀದಿ ಮಾಡಿಲ್ಲ. 

ಬರೀ 10 ಲಕ್ಷದಲ್ಲಿ ಸನ್ನಿ ಲಿಯೋನ್‌ ಸ್ಟಾರ್ಟ್‌ ಮಾಡಿದ್ದ ಕಂಪನಿಯಿಂದ 10 ಕೋಟಿ ವಹಿವಾಟು!

ಆಕ್ಸ್‌ಫ್ಯಾಮ್ ವರದಿ ಪ್ರಕಾರ, ಭಾರತದ ಶೇಕಡಾ 40ರಷ್ಟು ಆಸ್ತಿಯ ಒಡೆತನ (Ownership of Assets) ಶೇಕಡಾ ಒಂದರಷ್ಟು ಜನಸಂಖ್ಯೆಯಲ್ಲೇ ಸ್ಥಿರವಾಗಿದೆ. ಈ ವರದಿ ಪ್ರಕಾರ, ಭಾರತದಲ್ಲಿ ಒಂದಿಷ್ಟು ಜನರು ಶ್ರೀಮಂತರಾಗ್ತಾ ಹೋದ್ರೆ ಮತ್ತೊಂದಿಷ್ಟು ಜನರು ಬಡವರಾಗ್ತಾ ಹೋಗ್ತಿದ್ದಾರೆ. ಬಡವರಿಂದ ಹೆಚ್ಚು ತೆರಿಗೆ (Tax) ವಸೂಲಿ ಮಾಡಲಾಗ್ತಿದೆ ಎಂಬ ಆರೋಪವೂ ಇದೆ. ಒಟ್ಟಿನಲ್ಲಿ ಭಾರತದಲ್ಲಿ ಸಂಪತ್ತು ಸಾಕಷ್ಟಿದ್ರೂ ಅದು ಹಂಚಿಕೆಯಾಗ್ತಿಲ್ಲ ಎನ್ನುವುದೇ ವಿಷಾದನೀಯ. 

click me!