ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು 91.50 ರೂ ಕಡಿತಗೊಳಿಸಲಾಗಿದೆ. ಈ ಹಿನ್ನೆಲೆ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಈಗ ದೆಹಲಿಯಲ್ಲಿ 2,028 ರೂ. ವೆಚ್ಚವಾಗುತ್ತದೆ.
ನವದೆಹಲಿ (ಏಪ್ರಿಲ್ 1, 2023): ಪೆಟ್ರೋಲಿಯಂ ಕಂಪನಿಗಳು ಸಾಮಾನ್ಯವಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಣೆ ಮಾಡುತ್ತವೆ. ಅದೇ ರೀತಿ, ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ 1 ರಂದು ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. 2024 ರ ಆರ್ಥಿಕ ವರ್ಷದ ಮೊದಲ ದಿನದಂದು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರವನ್ನು ಸುಮಾರು ₹92 ರಷ್ಟು ಕಡಿತಗೊಳಿಸಲಾಗಿದೆ. ಆದರೆ, ಕಳೆದ ತಿಂಗಳು ಏರಿಕೆಯಾಗಿದ್ದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲವಣೆಯಾಗಿಲ್ಲ.
ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು 91.50 ರೂ ಕಡಿತಗೊಳಿಸಲಾಗಿದೆ. ಈ ಹಿನ್ನೆಲೆ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಈಗ ದೆಹಲಿಯಲ್ಲಿ 2,028 ರೂ. ವೆಚ್ಚವಾಗುತ್ತದೆ.
ಇದನ್ನು ಓದಿ: Petrol, Diesel Price Today: ಏಪ್ರಿಲ್ ತಿಂಗಳ ಮೊದಲ ದಿನ ನಿಮ್ಮ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೇಗಿದೆ ನೋಡಿ..
19 kg Commercial LPG cylinder prices reduced by Rs 91.50. 19 kg commercial cylinder will cost Rs 2,028 in Delhi. No change in domestic LPG prices: Sources
— ANI (@ANI)ಕಳೆದ ತಿಂಗಳು ಕೇಂದ್ರ ಸರ್ಕಾರವು 14.2 ಕೆಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 50 ರೂ. ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 350 ರೂ. ಹೆಚ್ಚಿಸಿತ್ತು.ಇನ್ನು, 2022 ರಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು 4 ಬಾರಿ ಹೆಚ್ಚಿಸಲಾಯಿತು. ಈ ವರ್ಷದ ಜನವರಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ. ಹೆಚ್ಚಿಸಲಾಗಿದ್ದು, ಆ ವೇಳೆ ದೆಹಲಿಯಲ್ಲಿ 1,768 ರೂ. ಬೆಲೆ ಇತ್ತು.
ಇದನ್ನೂ ಓದಿ: ಜನಸಾಮಾನ್ಯರಿಗೆ ಬಿಗ್ ಶಾಕ್: ಗ್ಯಾಸ್ ಸಿಲಿಂಡರ್ ದರ 350 ರೂ. ಏರಿಕೆ; ಹೋಟೆಲ್ ದರವೂ ಹೆಚ್ಚಾಗುತ್ತಾ..?
ನಗರ 19 ಕೆಜಿ ಇಂಡೇನ್ ಗ್ಯಾಸ್ ಸಿಲಿಂಡರ್ ಬೆಲೆ
ದೆಹಲಿ ₹2028
ಕೋಲ್ಕತ್ತಾ ₹2132
ಮುಂಬೈ ₹1980
ಚೆನ್ನೈ ₹2192.50
ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಗೆ ಹೋಲಿಸಿದರೆ, ವಾಣಿಜ್ಯ ಅನಿಲದ ದರಗಳು ಹೆಚ್ಚು ಏರಿಳಿತಗೊಳ್ಳುತ್ತವೆ. ಕಳೆದ ವರ್ಷ ಈ ಬಾರಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,253 ರೂ. ಗೆ ಮಾರಾಟವಾಗಿತ್ತು. ಒಂದು ವರ್ಷದಲ್ಲಿ, ರಾಷ್ಟ್ರ ರಾಜಧಾನಿಯೊಂದರಲ್ಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ 225 ರೂ. ಇಳಿಕೆಯಾಗಿದೆ.
ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ಶಾಕಿಂಗ್ ನ್ಯೂಸ್: ಎಲ್‌ಪಿಜಿ ದರದಲ್ಲಿ 25 ರೂ. ಹೆಚ್ಚಳ
ಈ ಮಧ್ಯೆ, ಮಾರ್ಚ್‌ನಲ್ಲಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಯೋಜನೆಯ 9.59 ಕೋಟಿ ಫಲಾನುಭವಿಗಳು ವಾರ್ಷಿಕವಾಗಿ ಪ್ರತಿ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ₹ 200 ಸಬ್ಸಿಡಿ ಪಡೆಯುತ್ತಾರೆ ಎಂದು ಹೇಳಿದ್ದರು. ಎಲ್ಲಾ ಕುಟುಂಬಗಳು 12 ಸಬ್ಸಿಡಿ ಹೊಂದಿರುವ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಅರ್ಹವಾಗಿವೆ, ಹಾಗೂ ಯಾವುದೇ ಹೆಚ್ಚುವರಿ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬಹುದು ಎಂದೂ ಅವಾರು ಮಾಹಿತಿ ನೀಡಿದ್ದರು.
ಜಾಗತಿಕ ತೈಲ ದರ ಸತತ ಐದನೇ ತಿಂಗಳಿಗೆ ಕುಸಿಯಿತು, ಇದು 2020 ರ ಆರಂಭದಿಂದಲೂ ಅದರ ಎರಡನೇ ತ್ರೈಮಾಸಿಕ ಕುಸಿತದಲ್ಲಿ ಉತ್ತುಂಗಕ್ಕೇರಿತು. ಅಮೆರಿಕ ಆರ್ಥಿಕ ಬಿಕ್ಕಟ್ಟು ಮತ್ತು ವಿಶಾಲ ಮಾರುಕಟ್ಟೆಗಳನ್ನು ಕದಡುವ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬೆಲೆಗಳು ಕುಸಿದಿವೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಶೇ. 50 ರಷ್ಟು ಇಳಿಕೆ ಮಾಡಿದ ಅಶೋಕ್ ಗೆಹ್ಲೋಟ್..!