2030ಕ್ಕೆ 165 ಲಕ್ಷ ಕೋಟಿ ರೂ. ರಫ್ತಿನ ಬೃಹತ್‌ ಗುರಿ: ಕೇಂದ್ರದಿಂದ ಹೊಸ ವಿದೇಶಿ ವ್ಯಾಪಾರ ನೀತಿ ಅನಾವರಣ

By Kannadaprabha NewsFirst Published Apr 1, 2023, 8:09 AM IST
Highlights

2030ಕ್ಕೆ 165 ಲಕ್ಷ ಕೋಟಿ ರೂ. ರಫ್ತಿನ ಬೃಹತ್‌ ಗುರಿಯನ್ನು ಹೊಂದುವ ಮೂಲಕ ಕೇಂದ್ರ ಹೊಸ ವಿದೇಶಿ ವ್ಯಾಪಾರ ನೀತಿ ಅನಾವರಣ ಮಾಡಿದೆ. ಪ್ರೋತ್ಸಾಹಕ ಆಧರಿತ ನೀತಿ ಕೈಬಿಟ್ಟು ಸುಂಕ ರದ್ದು ಮತ್ತು ಅರ್ಹತೆ ಆಧರಿತ ನೀತಿ ಅನುಸರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ನವದೆಹಲಿ (ಏಪ್ರಿಲ್ 1, 2023): 2030ರ ವೇಳೆಗೆ ದೇಶದ ರಫ್ತು ಪ್ರಮಾಣವನ್ನು 2 ಲಕ್ಷ ಕೋಟಿ ಡಾಲರ್‌ಗೆ (ಅಂದಾಜು 165 ಲಕ್ಷ ಕೋಟಿ ರು.ಗೆ) ಹೆಚ್ಚಿಸುವ ಮಹತ್ವಕಾಂಕ್ಷೆಯ ನೂತನ ವಿದೇಶಿ ವ್ಯಾಪಾರ ನೀತಿ-2023 ಅನ್ನು ಕೇಂದ್ರ ಸರ್ಕಾರ ಶುಕ್ರವಾರ ಅನಾವರಣಗೊಳಿಸಿದೆ. ಹೊಸ ನೀತಿಯು ಪ್ರೋತ್ಸಾಹಕ ಆಧರಿತ ನೀತಿಯನ್ನು ಕೈಬಿಟ್ಟು, ಸುಂಕ ರದ್ದು ಮತ್ತು ಅರ್ಹತೆ ಆಧರಿತ ನೀತಿಯನ್ನು ಅನುಸರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2021​​-22ನೇ ಸಾಲಿನಲ್ಲಿ ದೇಶದ ರಫ್ತು ಪ್ರಮಾಣ 56 ಲಕ್ಷ ಕೋಟಿ ರೂ.ಗಳಷ್ಟಿದ್ದು, ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ 65 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್‌ ಗೋಯಲ್‌ (Piyush Goyal) ಈ ಹೊಸ ವ್ಯಾಪಾರ ನೀತಿಯನ್ನು ಅನಾವರಣಗೊಳಿಸಿದರು. ಹೊಸ ನೀತಿಯಲ್ಲಿ, ಈ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದ 5 ವರ್ಷಗಳ ವಿದೇಶಿ ವ್ಯಾಪಾರ ನೀತಿಯ ಬದಲಾಗಿ, ಹೊಸ ನೀತಿಗೆ ಯಾವುದೇ ಕಾಲಮಿತಿಯನ್ನು ಹಾಕಲಾಗಿಲ್ಲ. ಅದರ ಬದಲಾಗಿ, ಅಗತ್ಯಬಿದ್ದರೆ ನೀತಿಯಲ್ಲಿ ಕಾಲಕಾಲಕ್ಕೆ ಬದಲಾವಣೆಯ ಅವಕಾಶವನ್ನು ಕಲ್ಪಿಸಲಾಗಿದೆ.

ಇದನ್ನು ಓದಿ: ಲಾಜಿಸ್ಟಿಕ್ಸ್‌ ನೀತಿಯಿಂದ ಅಭಿವೃದ್ಧಿಗೆ ಚೀತಾ ವೇಗ: Piyush Goyal

ಜೊತೆಗೆ ಹೊಸ ನೀತಿಯಲ್ಲಿ ಭಾರತದ ಕರೆನ್ಸಿಯಾದ (Indian Currency) ರೂಪಾಯಿಯನ್ನು (Rupee) ಜಾಗತಿಕ ಕರೆನ್ಸಿಯಾಗಿ (Global Currency) ಪರಿವರ್ತಿಸುವ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳನ್ನು ದೇಶೀಯ ಕರೆನ್ಸಿಯಲ್ಲೇ ನಿರ್ವಹಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಕೊರಿಯರ್‌ ಮೂಲಕ ನಿರ್ವಹಿಸಬಹುದಾದ ರಫ್ತು ಉತ್ಪನ್ನಗಳ ಮೌಲ್ಯವನ್ನು ಪ್ರತಿ ಕನ್‌ಸೈನ್‌ಮೆಂಟ್‌ಗೆ 5 ರಿಂದ 10 ಲಕ್ಷ ರೂ. ಹೆಚ್ಚಳ ಮಾಡಲಾಗಿದೆ.

ಹೊಸ ನೀತಿಯಲ್ಲಿ ಫರೀದಾಬಾದ್‌, ಮೊರಾದಾಬದ್‌, ಮಿರ್ಜಾಪುರ ಮತ್ತು ವಾರಾಣಸಿ ನಗರಗಳನ್ನು ಹೊಸ ರಫ್ತು ಶ್ರೇಷ್ಠತಾ ನಗರಗಳಾಗಿ ಗುರುತಿಸಲಾಗಿದೆ. ಇವು ಈಗಾಗಲೇ ಇರುವ ಇಂಥ 39 ನಗರಗಳ ಪಟ್ಟಿಗೆ ಸೇರಲಿವೆ.

ಇದನ್ನೂ ಓದಿ: 2047ರ ವೇಳೆಗೆ Indian Economy 30 ಟ್ರಿಲಿಯನ್ ಡಾಲರ್‌ ಮೌಲ್ಯ ಆಗಲಿದೆ: Piyush Goyal ವಿಶ್ವಾಸ

  • 5 ವರ್ಷಗಳ ವಿದೇಶಿ ವ್ಯಾಪಾರ ನೀತಿ ಬದಲು ಇನ್ನು ಯಾವುದೇ ಕಾಲಮಿತಿ ಇಲ್ಲದ ನೀತಿ
  • ರೂಪಾಯಿಯನ್ನು ಜಾಗತಿಕ ಕರೆನ್ಸಿ ಮಾಡಲು ಕ್ರಮ
  • ಹೊಸ ಮಿತಿಯಲ್ಲಿ 4 ನಗರಗಳಿಗೆ ರಫ್ತು ಶ್ರೇಷ್ಠತಾ ನಗರ ಪಟ್ಟ: 39 ನಗರಗಳ ಪಟ್ಟಿಗೆ 4 ನಗರ ಸೇರ್ಪಡೆ
click me!