Business Ideas: ಕಾಲೇಜ್ ವಿದ್ಯಾರ್ಥಿಗಳಿಗೂ ಇದೆ ಗಳಿಕೆಗೆ ನಾನಾ ದಾರಿ

By Roopa Hegde  |  First Published Jan 23, 2023, 6:46 PM IST

ಪಾಕೆಟ್ ಮನಿ ಸಾಲ್ತಿಲ್ಲ ಅಂತಾ ಪಾಲಕರನ್ನು ಬೈತಾ ಓಡಾಡುವ ಬದಲು ಕಾಲೇಜು ವಿದ್ಯಾರ್ಥಿಗಳು ತಾವೇ ಹಣ ಸಂಪಾದನೆ ಮಾಡಬಹುದು. ಈಗ ಹಣ ಗಳಿಸಲು ಸಾಕಷ್ಟು ಆಯ್ಕೆಯಿದೆ. ಬಿಡುವಿನ ಸಮಯದಲ್ಲಿ ಬುದ್ದಿ ಉಪಯೋಗಿಸಿ ಸಂಪಾದನೆ ಮಾಡಬಹುದು.
 


ಈಗಿನ ಕಾಲದಲ್ಲಿ ವಿದ್ಯಾಭ್ಯಾಸ ದುಬಾರಿಯಾಗಿದೆ. ಹಾಗಾಗಿ ಪಾಲಕರು ಮಕ್ಕಳಿಗೆ ಎಜ್ಯುಕೇಷನ್ ಲೋನ್ ಮೂಲಕ ಶಿಕ್ಷಣ ಕಲಿಸ್ತಿದ್ದಾರೆ. ಶಿಕ್ಷಣ ಮುಗಿದ ತಕ್ಷಣ ಕೆಲಸಕ್ಕೆ ಸೇರಿ ಅದ್ರ ಸಾಲ ತೀರಿಸುವ ಜವಾಬ್ದಾರಿ ವಿದ್ಯಾರ್ಥಿಗಳಿಗಿರುತ್ತದೆ. ಕೆಲ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಾಲದ ಹೊರೆ ಜೊತೆ ದಿನನಿತ್ಯ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಷ್ಟು ಹಣ ಕೂಡ ಇರೋದಿಲ್ಲ. ಅಂಥವರು ಎಜ್ಯುಕೇಷನ್ ಲೋನ್ ಮೂಲಕ ಶಿಕ್ಷಣ ಪಡೆಯುತ್ತ, ಪಾರ್ಟ್ ಟೈಂ ಜಾಬ್ ಮಾಡ್ತಾ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ತಾರೆ. 

ಪಾರ್ಟ್ ಟೈಂ (Part Time)  ಜಾಬ್ ಹಾಗೂ ವ್ಯಾಪಾರ (Business ) ವಿದ್ಯಾರ್ಥಿಗಳಲ್ಲಿ, ಮುಂದೆ ಜೀವನ ಮಾಡುವ ಹಾದಿ ತೋರಿಸುತ್ತದೆ. ಅವರದೇ ವೃತ್ತಿಯಲ್ಲಿ ಅವರು ಕೆಲಸ ಅಥವಾ ವ್ಯವಹಾರ ಮಾಡಿದ್ರೆ ಇದು ಕೆಲಸ ಮಾಡುವ ಕೌಶಲ್ಯ (Skill) ಕಲಿಸುತ್ತದೆ. ನಿಮ್ಮ ನೆಟ್ವರ್ಕ್ ಜಾಸ್ತಿ ಮಾಡುತ್ತದೆ. ಕೈನಲ್ಲಿ ಹಣ (Money) ಓಡಾಡೋದ್ರಿಂದ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಓದಿನ ಸಮಯದಲ್ಲಿ ಕೆಲಸ ಮಾಡಿ ಸ್ವಲ್ಪ ಹಣ ಉಳಿತಾಯ ಮಾಡಿದ್ರೆ ಅದು ಕೆಲಸವಿಲ್ಲದ ಸಮಯದಲ್ಲಿ ನೆರವಿಗೆ ಬರುತ್ತದೆ. ನಾವಿಂದು ವಿದ್ಯಾರ್ಥಿಗಳು ಮಾಡ್ಬಹುದಾದ ವ್ಯಾಪಾರದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

Tap to resize

Latest Videos

ಟ್ಯೂಷನ್ : ಕಾಲೇಜಿನ ದಿನಗಳಲ್ಲಿ ನಿಮ್ಮ ಓದಿನ ಜೊತೆಗೆ ನಿಮಗೊಂದಿಷ್ಟು ಸಮಯ ಸಿಗ್ತಿದೆ ಎಂದಾದ್ರೆ ನೀವು ಟ್ಯೂಷನ್ ಶುರು ಮಾಡಬಹುದು. ಸಮಯವಿಲ್ಲ ಎನ್ನುವವರು ಬೇಸಿಗೆ ರಜೆಯಲ್ಲಿ  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಥವಾ ಕಿರಿಯ ಕಾಲೇಜು ವಿದ್ಯಾರ್ಥಿಗಳಿಗೆ ಟ್ಯೂಷನ್ ತೆಗೆದುಕೊಂಡು ಹಣ ಸಂಪಾದನೆ ಮಾಡಬಹುದು. 

ಹ್ಯಾಂಡ್ ಮೇಡ್ ವಸ್ತುಗಳ ಮಾರಾಟ : ನೀವು ಸುಂದರ ವಸ್ತುಗಳನ್ನು ತಯಾರಿಸುವ ಕಲೆ ಹೊಂದಿದ್ದರೆ ಅದನ್ನೇ ವ್ಯವಹಾರವಾಗಿ ಶುರು ಮಾಡಬಹುದು. ಪಿಂಗಾಣಿ ವಸ್ತು, ಗಿಫ್ಟ್ ಐಟಂ ಅಥವಾ ಬೇರೆ ಯಾವುದೇ ವಸ್ತುವನ್ನು ನೀವು ತಯಾರಿಸಿ ಅದನ್ನು ಆನ್‌ಲೈನ್ ನಲ್ಲಿ ಅಥವಾ ಸ್ಥಳೀಯ ಅಂಗಡಿಗೆ ನೀಡಬಹುದು. ಇಲ್ಲವೆ ನಿಮ್ಮ ಸ್ನೇಹಿತರಿಗೆ ಮಾರಾಟ ಮಾಡಿ ಹಣ ಗಳಿಸಬಹುದು.  

ನೆರೆಹೊರೆಯವರಿಗೆ ಅಗತ್ಯವಿರುವ ಸೇವೆ ನೀಡಿ ಹಣ ಗಳಿಸಿ :  ಈಗ ಜನರಿಗೆ ಸಮಯವಿಲ್ಲ. ಮನೆ ನಾಯಿಯ ಆರೈಕೆ ಮಾಡುವುದ್ರಿಂದ ಹಿಡಿದು ಮಕ್ಕಳ ಆರೈಕೆ, ದಿನಸಿ ಸಾಮಾನು, ಸ್ವಚ್ಛತೆ ಸೇರಿದಂತೆ ಎಲ್ಲದಕ್ಕೂ ಬೇರೆಯವರನ್ನು ಆಶ್ರಯಿಸುತ್ತಾರೆ. ನೀವು ಇದ್ರಲ್ಲಿ ಒಂದು ಸೇವನೆಯನ್ನು ಅಗತ್ಯವಿರುವವರಿಗೆ ನೀಡುವ ಮೂಲಕ ಹಣ ಸಂಪಾದನೆ ಮಾಡಬಹುದು.  

Business Idea : ರುಚಿ ರುಚಿ ಟೀ ನೀಡಿದ್ರೆ ಝಣ ಝಣ ಕಾಂಚಾಣ ಬರೋದು ಗ್ಯಾರಂಟಿ

ಪ್ರಿಂಟ್ ಆನ್ ಡಿಮ್ಯಾಂಡ್ ಸರಕುಗಳ ಮಾರಾಟ  : ಪ್ರಿಂಟ್ ಆನ್ ಡಿಮಾಂಡ್ ಸರಕುಗಳನ್ನು ಮಾರಾಟ ಮಾಡುವುದು ಕಡಿಮೆ ಬಜೆಟ್‌ನಲ್ಲಿ ವ್ಯಾಪಾರವನ್ನು ಪ್ರಾರಂಭಿಸುವ ಮತ್ತೊಂದು ಉತ್ತಮ ಆಯ್ಕೆಯಾಗಿದೆ.  ಕಲಾತ್ಮಕ ಕೌಶಲ್ಯಗಳನ್ನು ಹೊಂದಿದ್ದರೆ, ಟೀ ಶರ್ಟ್‌ಗಳಿಂದ ಹಿಡಿದು ಕಪ್ ಗಳವರೆಗೆ ನಿಮ್ಮ ವಿನ್ಯಾಸಗಳನ್ನು ನೀವು ಮುದ್ರಿಸಬಹುದು. ಗ್ರಾಹಕರು ಬಯಸುವ ಫೋಟೋ ಪ್ರಿಂಟ್ ಮಾಡಿ ಮಾರಾಟ ಮಾಡಬಹುದು. 

ಫ್ರೀಲ್ಯಾನ್ಸರ್ ಆಗಿ : ಎಡಿಟಿಂಗ್, ಕಾಪಿರೈಟಿಂಗ್, ವೈಸ್ ಓವರ್, ಗ್ರಾಫಿಕ್ ಡಿಸೈನ್ ಸೇರಿದಂತೆ ಆನ್ಲೈನ್ ನಲ್ಲಿ ಕೆಲಸ ಮಾಡುವ ಸಾಕಷ್ಟು ಆಯ್ಕೆಯಿದೆ. ಲ್ಯಾಪ್ ಟಾಪ್ ಹಾಗೂ ಇಂಟರ್ನೆಟ್ ಸೌಲಭ್ಯವಿದ್ದರೆ ನೀವು ಈ ಕೆಲಸವನ್ನು ಮಾಡಬಹುದು. 

ಮರುಮಾರಾಟಗಾರರಾಗಿ : ಮರುಮಾರಾಟದಲ್ಲಿ ಸಾಕಷ್ಟು ಆಯ್ಕೆಯಿದೆ. ಅನೇಕ ವೆಬ್ಸೈಟ್ ಗಳು ನಿಮಗೆ ಮರುಮಾರಾಟಕ್ಕೆ ಅವಕಾಶ ನೀಡುತ್ತವೆ. ಹಳೆಯ ಮನೆಯ ಅಲಂಕಾರದ ವಸ್ತು, ವಿಂಟೇಜ್ ಉಡುಪುಗಳನ್ನು ಸರಿಪಡಿಸಿ ಅವುಗಳನ್ನು ಮೀಸಲಾದ ವೆಬ್‌ಸೈಟ್ ಅಥವಾ ಆನ್‌ಲೈನ್ ನಲ್ಲಿ ಕೂಡ ನೀವು ಮಾರಾಟ ಮಾಡಬಹುದು. 

ತರಕಾರಿ – ಆಹಾರ ಪದಾರ್ಥ : ಬಿಡುವಿನ ಸಮಯದಲ್ಲಿ ಮನೆಯ ಜಾಗದಲ್ಲಿಯೇ ತರಕಾರಿ ಬೆಳೆದು ನೀವು ಅದನ್ನು ಮಾರಾಟ ಮಾಡಬಹುದು. ಇಲ್ಲವೆ ರುಚಿ ರುಚಿ ಆಹಾರ ತಯಾರಿಸುವವರು ನೀವಾಗಿದ್ದರೆ ಕುಕೀಸ್, ಕೇಕ್ ಗಳನ್ನು ತಯಾರಿಸಿ ಮಾರಾಟ ಮಾಡಬಹುದು.   

BUSINESS IDEAS: ಹಸುವಿನ ಸಗಣಿ ನೀಡ್ತಿದೆ ಕೈತುಂಬ ಹಣ

ಬೇಸಿಗೆ ಶಿಬಿರ ಕಾರ್ಯಕ್ರಮ : ಬೇಸಿಗೆ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಪಾಲಕರಿಗೆ ಕಷ್ಟದ ಕೆಲಸ. ಹಾಗಾಗಿ ಶಿಬಿರದ ಹುಡುಕಾಟ ನಡೆಸುತ್ತಾರೆ. ನೀವು ಮಕ್ಕಳಿಗಾಗಿ ಬೇಸಿಗೆ ಶಿಬಿರ ಮಾಡಬಹುದು. ಮನೆಯಲ್ಲಿಯೇ ಕೆಲ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ವಿದ್ಯಾಭ್ಯಾಸದ ಜೊತೆ ಒಂದಿಷ್ಟು ಫನ್ ಆಟ, ಕರಕುಶಲ ವಸ್ತು ತಯಾರಿಕೆ ಸೇರಿದಂತೆ ನಾಟಕ, ನೃತ್ಯವನ್ನು ಹೇಳಿಕೊಡಬಹುದು.

click me!