ಚೋಲೆ ಕುಲ್ಚಾ ಮಾರಿ ಕೋಟಿ ಮೌಲ್ಯದ ಮನೆ ಖರೀದಿ ! ಆತನ ತಿಂಗಳ ಗಳಿಕೆ ಎಷ್ಟು?

Published : Apr 11, 2025, 02:53 PM ISTUpdated : Apr 11, 2025, 03:14 PM IST
ಚೋಲೆ ಕುಲ್ಚಾ ಮಾರಿ ಕೋಟಿ ಮೌಲ್ಯದ ಮನೆ ಖರೀದಿ ! ಆತನ ತಿಂಗಳ ಗಳಿಕೆ ಎಷ್ಟು?

ಸಾರಾಂಶ

ಚೋಲೆ-ಕುಲ್ಚಾ ಮಾರುವ ವ್ಯಕ್ತಿಯೊಬ್ಬ ಕೋಟಿ ರೂಪಾಯಿ ಬೆಲೆಯ ಮನೆ ಖರೀದಿಸಲು ಮುಂದಾಗಿದ್ದಾನೆ. ಆತ ಈಗಾಗಲೇ ಒಂದು ಮನೆ ಹೊಂದಿದ್ದು, ಕೇವಲ 4-5 ವರ್ಷಗಳಲ್ಲಿ 35 ಲಕ್ಷ ರೂಪಾಯಿ ಉಳಿತಾಯ ಮಾಡಿದ್ದಾನೆ. ಈತನ ಯಶಸ್ಸಿನ ಬಗ್ಗೆ ರೆಡ್ಡಿಟ್‌ನಲ್ಲಿ ಚರ್ಚೆ ನಡೆದಿದ್ದು, ಅನೇಕರು ಬೀದಿ ವ್ಯಾಪಾರಿಗಳ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.

ಈಗಿನ ದಿನಗಳಲ್ಲಿ ಕಚೇರಿಯಲ್ಲಿ ಕೆಲಸ ಮಾಡುವವರಿಗಿಂತ ವ್ಯಾಪಾರ ಮಾಡುವವರ ಗಳಿಕೆ ಹೆಚ್ಚಿದೆ. ಅದ್ರಲ್ಲೂ ಸಣ್ಣ ಸಣ್ಣ ತಳ್ಳು ಗಾಡಿಗಳಲ್ಲಿ ಆಹಾರ ಮಾರಾಟ ಮಾಡುವವರು ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡ್ತಿದ್ದಾರೆ. ಪಾನಿಪುರಿ, ಸಮೋಸಾ ಸೇರಿದಂತೆ ಬೀದಿ ಬದಿಯಲ್ಲಿ ಬೆಳಿಗ್ಗೆ, ಸಂಜೆ ಊಟ ನೀಡುವವರ ಗಳಿಕೆ ಹೆಚ್ಚಿದೆ. ಅದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಬೀದಿ ಬದಿಯಲ್ಲಿ ಚೋಲೆ – ಕುಲ್ಚಾ (Chole – Kulcha) ಮಾರಾಟ ಮಾಡುವವನು ಒಂದು ಕೋಟಿ ಬೆಲೆ ಬಾಳುವ ಮನೆ ಖರೀದಿಗೆ ಮುಂದಾದ ಸುದ್ದಿ ಚರ್ಚೆಯಲ್ಲಿದೆ. ಆತ ಪ್ರತಿ ತಿಂಗಳು ಎಷ್ಟು ಸಂಪಾದನೆ ಮಾಡ್ಬಹುದು ಅಂತ ಜನ ಯೋಚನೆ ಮಾಡ್ತಿದ್ದಾರೆ.

ರೆಡ್ಡಿಟ್ (Reddit Editing) ನಲ್ಲಿ ಸ್ಪೆಷಲಿಸ್ಟ್-ಫುಡ್7313 ಹೆಸರಿನ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಠೇಲಾ ವಾಲ ನನಗಿಂತ ಚೆನ್ನಾಗಿ ಗಳಿಸ್ತಾನೆ ಎನ್ನವು ಶೀರ್ಷಿಕೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಕೇವಲ ಒಂದು ದೂರಿನೊಂದಿಗೆ ಅಂತ ಪೋಸ್ಟ್ ಬರೆದಿರುವ ವ್ಯಕ್ತಿ, ಬೀದಿ ಬದಿಯಲ್ಲಿರುವ ಚೋಲೆ – ಕುಲ್ಚಾ ಮಾರಾಟಗಾರನ ಗಳಿಕೆಯನ್ನು ವಿವರಿಸಿದ್ದಾನೆ. ನನ್ನ ತಂದೆ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ನಮ್ಮ ಮನೆಯಿಂದ ಅಂಗಡಿ 200 -300 ಮೀಟರ್ ದೂರದಲ್ಲಿರುವ ಮಾರುಕಟ್ಟೆಯಲ್ಲಿದೆ. ಒಬ್ಬ ವ್ಯಕ್ತಿ ಅಂಗಡಿ ಪಕ್ಕದಲ್ಲಿ ಚೋಲೆ – ಕುಲ್ಚಾ ಮಾರಾಟ ಮಾಡ್ತಾನೆ. ಆತನ ಅಂಗಡಿಯಲ್ಲಿ ಸದಾ ಗ್ರಾಹಕರಿರ್ತಾರೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ರೈಲ್ವೆ ಇಲಾಖೆ ಜೊತೆ ಸೇರಿ ಈ ಬ್ಯುಸಿನೆಸ್ ಶುರು ಮಾಡಿ

ಅಷ್ಟೇ ಅಲ್ಲ, ಮೂರು ವರ್ಷಗಳಿಂದ ಈತ ನಮ್ಮ ಕಿರಾಣಿ ಅಂಗಡಿಯಲ್ಲೇ ಸರಕುಗಳನ್ನು ಖರೀದಿ ಮಾಡ್ತಾನೆ. ಹಾಗಾಗಿ ಆತ ತನ್ನ ವೈಯಕ್ತಿಕ ವಿಷ್ಯವನ್ನು ನಮ್ಮ ಅಪ್ಪನ ಬಳಿ ಹೇಳ್ತಾನೆ. ಈಗ ಆತ ಮನೆ ಖರೀದಿಸೋದಾಗಿ ಅಪ್ಪನಿಗೆ ಹೇಳಿದ್ದಾನೆ. ಆತನ ಬಜೆಟ್ ಒಂದು ಕೋಟಿಯಂತೆ.  ಇದು ಆತನ ಎರಡನೇ ಮನೆ. ಒಂದು ವರ್ಷದ ಹಿಂದೆ ಆತ ಮನೆಯೊಂದನ್ನು ಖರೀದಿ ಮಾಡಿದ್ದ. ಆ ಮನೆಯನ್ನು ಆತ 40 -50 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾನೆ. ಈಗ 1 ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ಖರೀದಿ ಮಾಡುವ ಆಲೋಚನೆ ಮಾಡಿದ್ದಾನೆ. ಸದ್ಯ ಆತನ ಖಾತೆಯಲ್ಲಿ 35 ಲಕ್ಷ ರೂಪಾಯಿ ಇದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. 

ಆತನ ಖಾತೆಯಲ್ಲಿರುವ ಹಣವನ್ನು ಸಂಪಾದಿಸೋಕೆ ನನಗೆ  5-6 ವರ್ಷಗಳು ಬೇಕಾಯ್ತು. ನನ್ನ ಸಂಬಳ  55,000-60,000 ರೂಪಾಯಿ ನಡುವೆ ಇದೆ. ಆದ್ರೂ ನನಗೆ ನನ್ನ ಬಜೆಟ್ ಗೆ ತಕ್ಕ ಉತ್ತಮ ಮನೆ ಖರೀದಿ ಮಾಡಲು ಸಾಧ್ಯವಾಗ್ತಿಲ್ಲ.  ಅಂಗಡಿಯವನು ಕೇವಲ 4-5 ವರ್ಷಗಳಲ್ಲಿ ಇದನ್ನೆಲ್ಲಾ ಮಾಡಿದ್ದಾನೆ. ಅವನ ಗಳಿಕೆ ಎಷ್ಟಿರಬಹುದು ಎಂದು ಕೇಳಿದ್ದಾನೆ.  

ಮಾರುಕಟ್ಟೆ ಏರಿಳಿತದಲ್ಲಿ ನಿಮ್ಮ SIP ಹೂಡಿಕೆ ಮುಂದುವರಿಸಬೇಕೆ?ತಜ್ಞರ

ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಬಳಕೆದಾರರು ಕಮೆಂಟ್ ಶುರು ಮಾಡಿದ್ದಾರೆ. ಅಂಗಡಿಯವನ ಕಠಿಣ ಪರಿಶ್ರಮ ಮತ್ತು ಗಳಿಕೆಯನ್ನು ಶ್ಲಾಘಿಸುತ್ತಿದ್ದಾರೆ. ಬ್ಯುಸಿನೆಸ್ ಚೆನ್ನಾಗಾದ್ರೆ ಸ್ಟ್ರೀಟ್ ಫುಡ್ ಬಹಳ ಒಳ್ಳೆಯ ಬ್ಯುಸಿನೆಸ್ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಅವರು ತೆರಿಗೆ ಕಟ್ಟದೆ, ಸರ್ಕಾರದ ಎಲ್ಲ ಉಚಿತ ಸೇವೆಗಳನ್ನು ಬಳಸ್ತಾ ಹಣ ಉಳಿಸುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ನಮ್ಮ ಮನೆ ಹತ್ತಿರ ಗೋಬಿ ಮಂಚೂರಿ ಮಾರಾಟ ಮಾಡುವ ವ್ಯಕ್ತಿ ಕೊರೊನಾ ಸಮಯದಲ್ಲಿ 1. 4 ಕೋಟಿ ಮೌಲ್ಯದ ಮನೆ ಖರೀದಿ ಮಾಡಿದ್ದಾರೆ. ಈಗ್ಲೂ ಗೋಬಿ ಮಂಚೂರಿ ಮಾರಾಟ ಮಾಡ್ತಿದ್ದು, ಅವನ ಬಳಿ 5 ಕೋಟಿಗಿಂತ ಹೆಚ್ಚು ಹಣವಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.  ವಡಾಪಾವ್ ಮಾರಾಟಗಾರ ಒಂದು ಗಂಟೆಗೆ 5 ಸಾವಿರ ರೂಪಾಯಿ ಮೌಲ್ಯದ ವಡಾಪಾವ್ ಮಾರಾಟ ಮಾಡ್ತಾನೆ. ಇದು ಜೋಕ್ ಅಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!