
ಬೆಂಗಳೂರು (ಡಿ.14): ಚಿನ್ನ (Gold)ಮತ್ತು ಬೆಳ್ಳಿ(Silver) ಅಂದ್ರೆ ಭಾರತೀಯರಿಗೆ (Indians)ವಿಶೇಷವಾದ ಆಕರ್ಷಣೆ. ಹೆಂಗಳೆಯರಿಗೆ ನಾನಾ ವಿನ್ಯಾಸದ ಬಂಗಾರದ ಒಡವೆ (Ornaments)ತೊಟ್ಟು ಸಂಭ್ರಮಿಸೋ ಬಯಕೆಯಾದ್ರೆ, ಮಧ್ಯವಯಸ್ಸಿನವರು ಭವಿಷ್ಯದ ಭದ್ರತೆಗೆ ತೆ ಚಿನ್ನ ಹಾಗೂ ಬೆಳ್ಳಿಯಲ್ಲಿ ಹೂಡಿಕೆ(Invest) ಮಾಡಲು ಇಚ್ಛಿಸುತ್ತಾರೆ. ದೇವರ ಕೋಣೆಯಲ್ಲಿ(Pooja room) ಬೆಳ್ಳಿ ವಸ್ತುಗಳಿದ್ರೇನೆ ಪೂಜೆಗೆ ಕಳೆ. ಹಾಗೆಯೇ ಮದುವೆ (Wedding)ಸೇರಿದಂತೆ ಶುಭ ಕಾರ್ಯಕ್ರಮಗಳಿಗೆ ಚಿನ್ನದ ಒಡವೆಗಳು ಮಹಿಳೆಯರ ಮೈ ಮೇಲೆ ಇದ್ರೇನೆ ಶೋಭೆ. ಹೀಗೆ ಚಿನ್ನ ಹಾಗೂ ಬೆಳ್ಳಿ ಖರೀದಿಗೆ ಭಾರತೀಯರಿಗೆ ವಿಶೇಷ ಕಾರಣಗಳೇನೂ ಬೇಕಾಗಿಲ್ಲ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಚಿನ್ನದ ಬೆಲೆ ಏರಿಕೆಯತ್ತ ಮುಖ ಮಾಡಿತ್ತು. ಇದು ಬಂಗಾರಪ್ರಿಯರ ಚಿಂತೆಗೂ ಕಾರಣವಾಗಿತ್ತು. ಏಕೆಂದ್ರೆ ಕಳೆದ ವರ್ಷ ಕೊರೋನಾ (Corona) ಕಾಣಿಸಿಕೊಂಡ ಬಳಿಕ ಏರಿಕೆ ಕಾಣಲಾರಂಭಿಸಿದ ಚಿನ್ನದ ದರ ಗರಿಷ್ಠ ಮಟ್ಟ ತಲುಪಿತ್ತು. ಈ ಸಮಯದಲ್ಲಿ ಚಿನ್ನ ಖರೀದಿಸೋದೇ ಕಷ್ಟ ಎಂಬ ಭಾವನೆ ಮೂಡಿ ಬಿಟ್ಟಿತ್ತು. ಈಗ ಒಮಿಕ್ರಾನ್ (Omicron) ವೈರಸ್ ಪ್ರಕರಣಗಳು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಮತ್ತೆ ಆತಂಕ ಎದುರಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಚಿನ್ನದ ದರ ಏರಿಕೆಯಾದ್ರೆ ಏನ್ ಮಾಡೋದು ಎಂಬ ಭಯ ಹಲವರನ್ನು ಕಾಡುತ್ತಿದೆ. ಈ ನಡುವೆ ಏರಿಕೆಯತ್ತ ಮುಖ ಮಾಡಿದ ಚಿನ್ನದ ದರದಲ್ಲಿ ಇಂದು (ಡಿ.14) ಸ್ಥಿರತೆ ಕಂಡುಬಂದಿದೆ. ಇದು ಚಿನ್ನ ಖರೀದಿಸಲು ಯೋಚಿಸುತ್ತಿರೋರಿಗೆ ಸ್ವಲ್ಪ ಮಟ್ಟಿಗೆ ನಿರಾಳತೆ ಒದಗಿಸಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಹಾವೇಣಿ ಆಟ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಬೆಳ್ಳಿ ಬೆಲೆಯಲ್ಲಿ ನಿನ್ನೆ ಸ್ಥಿರತೆ ಕಂಡುಬಂದಿತ್ತು. ಆದ್ರೆ ಇಂದು ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.14) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,120ರೂ. ಇದ್ದು,ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,220ರೂ. ಇದ್ದು,ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ಬೆಲೆಯಲ್ಲಿ 200ರೂ. ಏರಿಕೆಯಾಗಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,400ರೂ. ಇತ್ತು. ಇಂದು 61,600ರೂ.ಇದೆ.
Google:ಅಮೆರಿಕದಲ್ಲಿ ಉದ್ಯೋಗಿಗಳ ವೇತನ ಹೊಂದಾಣಿಕೆಗೆ ಮುಂದಾದ ಗೂಗಲ್!
ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 47,260ರೂ. ಇತ್ತು. ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಇಂದು ಕೂಡ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 51, 560ರೂ. ಇದ್ದ ಚಿನ್ನದ ದರ ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ದರದಲ್ಲಿ ಇಂದು ನಿನ್ನೆಗಿಂತ 200ರೂ. ಏರಿಕೆಯಾಗಿದ್ದು, 61,600ರೂ. ಇದೆ.
ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46, 780ರೂ.ಇದ್ದು, ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 47, 780ರೂ. ಇತ್ತು, ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ದರದಲ್ಲಿಇಂದು 400ರೂ. ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,200ರೂ. ಇದ್ದು, ಇಂದು 61,600ರೂ. ಆಗಿದೆ.
LPG subsidy: ನಿಮ್ಮ ಅಕೌಂಟ್ ಗೆ LPG ಸಬ್ಸಿಡಿ ಕ್ರೆಡಿಟ್ ಆಗ್ತಿದ್ಯಾ?
ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ ಕೂಡ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,290ರೂ.ಇದೆ. ನಿನ್ನೆ ಕೂಡ ಅಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ನಿನ್ನೆ 49,400ರೂ. ಇತ್ತು. ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ದರ ಕೂಡ ಸ್ಥಿರವಾಗಿದ್ದು, ಇಂದು ಒಂದು ಕೆ.ಜಿ. ಬೆಳ್ಳಿಗೆ 65,300ರೂ.ಇದೆ.
"
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.