2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿ.31 ಕೊನೆಯ ದಿನಾಂಕವಾಗಿದೆ. ಈ ಬಾರಿ ಇ-ಪೋರ್ಟಲ್ ಮೂಲಕವೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಬಹುದಾಗಿದೆ. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಆದಾಯ ತೆರಿಗೆ ರಿಟರ್ನ್ಸ್(Income tax returns) ಸಲ್ಲಿಕೆ ಪ್ರಕ್ರಿಯೆಯನ್ನು ಸರಳವಾಗಿಸೋ ಜೊತೆಗೆ ತೆರಿಗೆದಾರರ (Taxpayers) ಸ್ನೇಹಿಯಾಗಿಸೋ ಉದ್ದೇಶದಿಂದ ಕೇಂದ್ರ ಸರ್ಕಾರ ಈ ವರ್ಷ ಇ-ಫೈಲಿಂಗ್ (e-filling) ಪೋರ್ಟಲ್(Portal) ಪ್ರಾರಂಭಿಸಿತ್ತು. ಈ ಪೋರ್ಟಲ್ ಮೂಲಕವೇ ಶೀಘ್ರವಾಗಿ ರಿಟರ್ನ್ಸ್ ಫೈಲ್ ಮಾಡುವಂತೆ ಆದಾಯ ತೆರಿಗೆ ಇಲಾಖೆ (Income Tax Department) ತೆರಿಗೆದಾರರನ್ನು(Taxpayers) ಒತ್ತಾಯಿಸಿದೆ. 2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ದಿನಾಂಕ ಎಂದು ಘೋಷಿಸುವ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಈ ಮನವಿ ಮಾಡಿದೆ.
Budget 2022:ವಿವಿಧ ವಲಯಗಳ ಪ್ರತಿನಿಧಿಗಳೊಂದಿಗೆ ವಿತ್ತ ಸಚಿವರ ಬಜೆಟ್ ಪೂರ್ವ ಸಭೆ
undefined
ಪೋರ್ಟಲ್ ನಲ್ಲಿ ತೊಂದ್ರೆ
ಆದಾಯ ತೆರಿಗೆ ಇಲಾಖೆ ಜೂನ್ 7 ರಂದು ಪ್ರಾರಂಭಿಸಿದ ಈ ಪೋಟರ್ಲ್ ನಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದವು. ಈ ಸಮಸ್ಯೆಗಳ ಬಗ್ಗೆ ತೆರಿಗೆದಾರರು ದೂರುಗಳನ್ನು ಕೂಡ ನೀಡಿದ್ದಾರೆ. ಇದ್ರಿಂದ ಎಚ್ಚೆತ್ತ ಇಲಾಖೆ ಅದನ್ನು ಸರಿಪಡಿಸೋ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿತ್ತು. ಕೇಂದ್ರ ವಿತ್ತ ಸಚಿವೆ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಪೋರ್ಟಲ್ ಅಭಿವೃದ್ಧಿಪಡಿಸಿರೋ ಇನ್ಫೋಸಿಸ್ ಗೆ ಸಮನ್ಸ್ ನೀಡಿ ಸೆಪ್ಟೆಂಬರ್ 15ರೊಳಗೆ ಸರಿಪಡಿಸುವಂತೆ ಸೂಚಿಸಿದ್ದರು. ಪೋರ್ಟಲ್ ನಲ್ಲಿನ ಸಮಸ್ಯೆಗಳ ಕಾರಣಕ್ಕೆ 2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 30ರ ತನಕ ವಿಸ್ತರಿಸಲಾಗಿತ್ತು. ಆ ಬಳಿಕ ಮತ್ತೆ ಡಿಸೆಂಬರ್ 31ಕ್ಕೆ ವಿಸ್ತರಿಸಲಾಯಿತು. ಇನ್ಫೋಸಿಸ್ ಅಕ್ಟೋಬರ್ ನಲ್ಲಿ ಪೋರ್ಟಲ್ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಬಳಕೆದಾರರು ಆದಾಯ ತೆರಿಗೆ ಪೋರ್ಟಲ್ ಮೂಲಕ ಯಾವುದೇ ತೊಂದರೆಯಿಲ್ಲದೆ ತೆರಿಗೆ ಪಾವತಿಸಬಹುದು ಎಂದು ಹೇಳಿತ್ತು.
IT Returns Deadline: ಡಿ.31 ಅಂತಿಮ ಗಡುವು, ಇ-ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಒತ್ತಾಯ
ಪೋರ್ಟಲ್ ಮೂಲಕ ಇ-ಫೈಲಿಂಗ್ ಮಾಡೋದು ಹೇಗೆ?
ಆದಾಯ ತೆರಿಗೆ ಪೋರ್ಟಲ್ ಬಳಸಿ ಇ-ಫೈಲಿಂಗ್ ಮಾಡೋ ವ್ಯವಸ್ಥೆ ಈ ವರ್ಷದಿಂದ ಪ್ರಾರಂಭವಾಗಿರೋ ಕಾರಣ ಬಹುತೇಕರಿಗೆ ಆ ಬಗ್ಗೆ ಗೊಂದಲಗಳಿರೋದು ಸಹಜ. ಅಂಥವರಿಗೆ ಪೋರ್ಟಲ್ ಬಳಸಿ ಇ-ಫೈಲಿಂಗ್ ಮಾಡೋದು ಹೇಗೆ ಎಂಬ ಮಾಹಿತಿ ಇಲ್ಲಿದೆ.
-ಆದಾಯ ತೆರಿಗೆ ಇಲಾಖೆ ಪೋರ್ಟಲ್ https://www.incometax.gov.in ಭೇಟಿ ನೀಡಿ.
-ಮುಖಪುಟದಲ್ಲಿರೋ (Front Page)) Login Here ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
-ಒಂದು ವೇಳೆ ನೀವು ಇನ್ನ ಪೋರ್ಟಲ್ ಗೆ ನೋಂದಣಿ ಮಾಡಿಸಿಲ್ಲವೆಂದ್ರೆ ‘Register’ Yourself’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
-ಆ ಬಳಿಕ ‘Taxpayer’ಆಯ್ಕೆ ಮೇಲೆ ಕ್ಲಿಕ ಮಾಡಿ. ನಂತರ ನಿಮ್ಮ ಪ್ಯಾನ್ ಮಾಹಿತಿಗಳನ್ನು ತುಂಬಿ ಹಾಗೂ‘validate' ಮೇಲೆ ಕ್ಲಿಕ್ ಮಾಡಿ, ನಂತರ ‘Continue’ಕ್ಲಿಕಿಸಿ.
-ನಿಮ್ಮ ಹೆಸರು, ವಿಳಾಸ, ಲಿಂಗ, ಮನೆ ವಿಳಾಸ, ಜನ್ಮದಿನಾಂಕ ಮುಂತಾದ ಮಾಹಿತಿಗಳನ್ನು ನೀಡಿ.
-ನಿಮ್ಮ ಇ-ಮೇಲ್ ಐಡಿ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನೀಡಿ.
-ಒಮ್ಮೆ ಅರ್ಜಿ ಭರ್ತಿ ಮಾಡಿದ ಬಳಿಕ ‘Continue’ಮೇಲೆ ಕ್ಲಿಕ್ ಮಾಡಿ.
-ನಿಮ್ಮ ಮೊಬೈಲ್ ಹಾಗೂ ಇ-ಮೇಲ್ ಗೆ ಆರು ಅಂಕೆಗಳ OTP ಬರುತ್ತದೆ.
-OTP ನೋಂದಾಯಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಇರುವ ಸೂಚನೆಗಳನ್ನು ಪಾಲಿಸಿ.
-ಒಮ್ಮೆ OTP ಪರಿಶೀಲನೆಯಾದ ಬಳಿಕ ಹೊಸ ವಿಂಡೋ (window) ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನೀಡಿರೋ ವಿವರಗಳನ್ನು ಪರಿಶೀಲಿಸಿ. ಒಂದು ವೇಳೆ ಯಾವುದೇ ಮಾಹಿತಿ ತಪ್ಪಿದ್ರೆ ಅದನ್ನು ನೀವು ಬದಲಾಯಿಸಬಹುದು. ಒಂದು ವೇಳೆ ನೀವು ಬದಲಾವಣೆ ಮಾಡಿದ್ರೆ ಇನ್ನೊಂದು OTP ಮೊಬೈಲ್ ಗೆ ಬರುತ್ತದೆ.
-ಅಂತಿಮವಾಗಿ ಪಾಸ್ ವಾರ್ಡ್ ಸೆಟ್ ಮಾಡಿ ನಿಮ್ಮ ಲಾಗಿ ಇನ್ ಮೆಸೇಜ್ ಗಳನ್ನು ಸುರಕ್ಷಿತವಾಗಿಡಿ.
-ಈಗ ‘Register’ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಣಿ ಯಶಸ್ವಿಯಾದ ಬಗ್ಗೆ ನಿಮಗೆ ಮೆಸೇಜ್ ಬರುತ್ತದೆ.