CEA For Central Government Employees:ಮಕ್ಕಳ ಶಿಕ್ಷಣ ಭತ್ಯೆ ಕ್ಲೇಮ್ ಮಾಡಲು ಕೇಂದ್ರ ಸರ್ಕಾರಿ ನೌಕರರಿಗೆ ಮಾ.31 ಗಡುವು

Suvarna News   | Asianet News
Published : Mar 03, 2022, 09:00 PM IST
CEA For Central Government Employees:ಮಕ್ಕಳ ಶಿಕ್ಷಣ ಭತ್ಯೆ ಕ್ಲೇಮ್ ಮಾಡಲು ಕೇಂದ್ರ ಸರ್ಕಾರಿ ನೌಕರರಿಗೆ ಮಾ.31 ಗಡುವು

ಸಾರಾಂಶ

*ಕೊರೋನಾ ಕಾರಣಕ್ಕೆ ಮಕ್ಕಳ ಶಿಕ್ಷಣ ಭತ್ಯೆ ಕ್ಲೇಮ್ ಮಾಡಲು ಸಾಧ್ಯವಾಗಿಲ್ಲ *7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಪ್ರತಿ ಮಗುವಿಗೆ ಮಾಸಿಕ 2,250ರೂ. ಶಿಕ್ಷಣ ಭತ್ಯೆ *ಎರಡು ಮಕ್ಕಳ ಶಿಕ್ಷಣ ಭತ್ಯೆ ಕ್ಲೇಮ್ ಮಾಡಿಕೊಳ್ಳಲು ಕೇಂದ್ರ ಸರ್ಕಾರಿ ನೌಕರರಿಗೆ ಅವಕಾಶವಿದೆ 

ನವದೆಹಲಿ (ಮಾ.3): ಕೇಂದ್ರ ಸರ್ಕಾರಿ (Central Government) ನೌಕರರು (employees) ಹಾಗೂ ಪಿಂಚಣಿದಾರರು (Pensioner)ಗಮನಿಸಲೇಬೇಕಾದ ಸುದ್ದಿ ಇದು. ಇತ್ತೀಚೆಗಷ್ಟೇ ಹೆಚ್ಚಳಗೊಂಡ ತುಟ್ಟಿ ಭತ್ಯೆ (DA)ಹಾಗೂ ತುಟ್ಟಿ ಪರಿಹಾರ (DR) ಪಡೆದಿರೋ ನೌಕರರಿಗೆ ಇನ್ನೊಂದು ಭತ್ಯೆ (Allowance) ಸಿಗಲಿದೆ. ಈ ತನಕ ಕೊರೋನಾ (Corona) ಕಾರಣಕ್ಕೆ ಮಕ್ಕಳ ಶಿಕ್ಷಣದ ಭತ್ಯೆ (CEA) ಕ್ಲೇಮ್ ಮಾಡಲು ಸಾಧ್ಯವಾಗದ ನೌಕರರು (employees) 2022ರ ಮಾರ್ಚ್ 31ರೊಳಗೆ ಕ್ಲೇಮ್ (Claim) ಮಾಡಬೇಕು. ಇದಕ್ಕೆ ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾದ
ಅಗತ್ಯವೂ ಇಲ್ಲ.

CEA ಕ್ಲೇಮ್ ಗೆ ಮಾ.31 ಗಡುವು
ಕೇಂದ್ರ ಸರ್ಕಾರಿ ನೌಕರರಿಗೆ ಮಕ್ಕಳ ಶಿಕ್ಷಣಕ್ಕೆ ಕೂಡ ಭತ್ಯೆ (Allowance) ಸಿಗುತ್ತದೆ. 7ನೇ ವೇತನ ಆಯೋಗದ (7th Pay Comission) ಶಿಫಾರಸ್ಸುಗಳ ಅನ್ವಯ ಪ್ರತಿ ತಿಂಗಳು 2,250ರೂ. ಶಿಕ್ಷಣ ಭತ್ಯೆ (Education Allowance) ನೀಡಲಾಗುತ್ತದೆ. ಆದ್ರೆ ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣಕ್ಕೆ ಶಾಲೆಗಳು ತೆರೆದಿಲ್ಲ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ CEA ಕ್ಲೇಮ್ ಮಾಡಲು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಅಂತಿಮ ಗಡುವನ್ನು (Deadline) ವಿಸ್ತರಿಸಲಾಗಿತ್ತು ಕೂಡ. ಹೀಗಾಗಿ ಅಂತಿಮ ದಿನಾಂಕವಾದ ಮಾರ್ಚ್ 31ರ ಮುನ್ನ CEA ಕ್ಲೇಮ್ ಮಾಡಿ.

Income Tax Rule Change:ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 3 ತೆರಿಗೆ ಲಾಭ; ಯಾರಿಗೆಲ್ಲ ಸಿಗುತ್ತೆ ಈ ಪ್ರಯೋಜನ?

ಅನೇಕ ದಾಖಲೆ ಸಲ್ಲಿಸಬೇಕಿತ್ತು
ಮಕ್ಕಳ ಶಿಕ್ಷಣ ಭತ್ಯೆ (CEA) ಕ್ಲೇಮ್ (Claim) ಮಾಡಲು ಕೇಂದ್ರ ಸರ್ಕಾರಿ ನೌಕರರು (Central Government employees)ಮಕ್ಕಳು ಓದುತ್ತಿರೋ ಶಾಲೆಯಿಂದ ಪ್ರಮಾಣಪತ್ರ ಹಾಗೂ ಕ್ಲೇಮ್ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಿತ್ತು. ಶಾಲೆಯಿಂದ ನೀಡೋ ಘೋಷಣಾ ಪತ್ರದಲ್ಲಿ ಆ ಶಾಲೆಯಲ್ಲಿ ಮಗು ಕಲಿಯುತ್ತಿದ್ದು, ಯಾವ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದೆ ಎಂಬ ಮಾಹಿತಿಯನ್ನು ಕೂಡ ಉಲ್ಲೇಖಿಸಬೇಕಿತ್ತು. CEA ಕ್ಲೇಮ್ ಮಾಡಲು ಮಗುವಿನ ರಿಪೋರ್ಟ್ ಕಾರ್ಡ್ (Report card), ಸ್ವಯಂ ದೃಢೀಕರಿಸಿದ ಪ್ರತಿ ಹಾಗೂ ಶುಲ್ಕ ರಸೀದಿಯನ್ನು (Fees receipt) ಕೂಡ ಲಗತ್ತಿಸಬೇಕು.

ಸ್ವಯಂ ಘೋಷಣೆ ನೀಡಬೇಕು
ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (DoPT) ಜುಲೈನಲ್ಲಿ ಹೊರಡಿಸಿದ ಆಫೀಸ್ ಆಫ್ ಮೆಮೊರೆಡಮ್ ನಲ್ಲಿ(OM) ಕೊರೋನಾ ಕಾರಣದಿಂದ ಕೇಂದ್ರ ಸರ್ಕಾರಿ ನೌಕರರಿಗೆ ಮಕ್ಕಳ ಶಿಕ್ಷಣದ ಭತ್ಯೆ ಕ್ಲೇಮ್ ಮಾಡೋದು ಕಷ್ಟಕರವಾಗಿದೆ. ಏಕೆಂದ್ರೆ ಕೆಲವು ಶಾಲೆಗಳು ಶುಲ್ಕ ಪಾವತಿಸಿದ ಬಳಿಕವೂ ಪಾವತಿಸಿದ ಬಗ್ಗೆ ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ದೃಢೀಕರಣ ನೀಡುತ್ತಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಸ್ವಯಂ ದೃಢೀಕರಣ ಅಥವಾ ಫಲಿತಾಂಶ/ ರಿಪೋರ್ಟ್ ಕಾರ್ಡ್/ಶುಲ್ಕ ಪಾವತಿ ಎಸ್ಎಂಎಸ್ ಅಥವಾ ಇ-ಮೇಲ್ ಪ್ರತಿಗಳನ್ನು ಸಲ್ಲಿಸಿ ಕೂಡ CEA ಕ್ಲೇಮ್ ಮಾಡಬಹುದು ಎಂದು ತಿಳಿಸಿತ್ತು. ಆದ್ರೆ ಈ ಅವಕಾಶ ಮಾರ್ಚ್ 2020 ಹಾಗೂ ಮಾರ್ಚ್ 2021ಕ್ಕೆ ಅಂತ್ಯವಾಗೋ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿತ್ತು. 

Russia Ukraine Crisis:ಭಾರತಕ್ಕೆ S-400 ಕ್ಷಿಪಣಿ ಪೂರೈಕೆ ಮೇಲೆ ನಿರ್ಬಂಧ ಪರಿಣಾಮ ಬೀರದು: ರಷ್ಯಾ ರಾಯಭಾರಿ

ಎಷ್ಟು ಭತ್ಯೆ ಸಿಗುತ್ತೆ?
ಕೇಂದ್ರ ಸರ್ಕಾರಿ ನೌಕರರಿಗೆ ಎರಡು ಮಕ್ಕಳ ಶಿಕ್ಷಣಕ್ಕೆ CEA ಸಿಗುತ್ತದೆ. ಪ್ರತಿ ಮಗುವಿಗೆ ಪ್ರತಿ ತಿಂಗಳು 2250ರೂ. ಶಿಕ್ಷಣ ಭತ್ಯೆ ಸಿಗುತ್ತದೆ. ಅಂದ್ರೆ ಎರಡು ಮಕ್ಕಳಿಗೆ ಮಾಸಿಕ 4500ರೂ. ಸಿಗುತ್ತದೆ. ಹೀಗಾಗಿ ಮಾರ್ಚ್ 2020 ಹಾಗೂ ಮಾರ್ಚ್ 2021ಕ್ಕೆ ಅಂತ್ಯವಾಗೋ ಶೈಕ್ಷಣಿಕ ವರ್ಷಕ್ಕೆ CEA ಭತ್ಯೆ ಕ್ಲೇಮ್ ಮಾಡಿಕೊಳ್ಳದ ನೌಕರರಿಗೆ ಮಾರ್ಚ್ 31ರ ತನಕ ಅವಕಾಶವಿದೆ. ಈ ಭತ್ಯೆಯು ವೇತನದೊಂದಿಗೆ ನೌಕರರ ಖಾತೆಗೆ ಜಮೆ ಆಗುತ್ತದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

54 ಸಾವಿರ ಕೋಟಿಗೆ Castrol ಆಯಿಲ್‌ ಬ್ಯುಸಿನೆಸ್‌ ಸೇಲ್‌ ಮಾಡಿದ ಬ್ರಿಟನ್‌ನ BP
2026 ರಲ್ಲಿ ಈ 4 ರಾಶಿಚಕ್ರದವರಿಗೆ ಆದಾಯ ವೃದ್ಧಿ ಪಕ್ಕಾ, ಬಂಪರ್ ಲಾಟರಿ