ಭಾರತೀಯರ ನೆಚ್ಚಿನ ಬ್ರ್ಯಾಂಡ್ ಕಾರ್ಲ್ಸ್‌ಬರ್ಗ್ IPO, 8.64 ಕೋಟಿ ಷೇರು ಮಾರಾಟಕ್ಕೆ ತಯಾರಿ, ಆಫರ್ ಡೀಲ್

Published : Oct 28, 2026, 06:43 PM IST
Popular Beer Brand Carlsberg Eyes IPO

ಸಾರಾಂಶ

ಷೇರುಮಾರುಕಟ್ಟೆಯಲ್ಲಿ ಜಿಯೋ ಭರ್ಜರಿ ತಲ್ಲಣ ಮೂಡಿಸಿದೆ. ಇದರ ಬೆನ್ನಲ್ಲೇ ಕಾರ್ಲ್ಸ್‌ಬರ್ಗ್ ಇಂಡಿಯಾ ಐಪಿಒಗೆ ಸಜ್ಜಾಗಿದೆ. ಬರೋಬ್ಬರಿ 8.64 ಕೋಟಿ ಇಕ್ವಿಟಿ ಷೇರುಗಳ ಮಾರಾಟ ನಡೆಯಲಿದೆ. ಇದು ಆಫರ್ ಸೇಲ್ ಡೀಲ್.

ಮುಂಬೈ (ಅ.28) ಜಿಯೋ ಪ್ಲಾಟ್‌ಫಾರ್ಮ್ ಷೇರುಗಳು ದಾಖಲೆ ಆರಂಭ ಪಡೆದು ಮುನ್ನುಗ್ಗಿದೆ. ಈ ಮೂಲಕ ರಿಲಯನ್ಸ್ ಜಿಯೋ ಹೊಸ ದಾಖಲೆ ಬರೆದಿದೆ. ಇದೀಗ ಜಿಯೋ ಬೆನ್ನಲ್ಲೇ ಭಾರತದಲ್ಲಿ ಬಹುತೇಕರ ನೆಚ್ಚಿನ ಬ್ರ್ಯಾಂಡ್ ಕಾರ್ಲ್ಸ್‌ಬರ್ಗ್ ಇದೀಗ ಐಪಿಒಗೆ ಸಿದ್ಧತೆ ನಡೆಸಿದೆ. ಒಪಿಒ ಕುರಿತು ಸೆಬಿಗೆ ಯುಡಿಆರ್‌ಎಚ್‌ಪಿ ಸಲ್ಲಿಕೆ ಮಾಡಿದೆ. ಇದು ಸಂಪೂರ್ಣ ಮಾರಾಟ ಕೊಡುಗೆ (OFS)ಆಗಿರಲಿದೆ. ಐಪಿಒ ಮೌಲ್ಯ ಸುಮಾರು 700 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಕಾರ್ಲ್ಸ್‌ಬರ್ಗ್ ಇಂಡಿಯಾ ಈಗಾಗಲೇ ಸೆಬಿಗೆ DRHP ಸಲ್ಲಿಕೆ ಮಾಡಿದೆ. ಈ ಕುರಿತ ಡ್ರಾಫ್ಟ್ ಪೇಪರ್‌ಗಳಿಗೆ ಸೆಬಿ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಹೊಸ ಷೇರು ವಿತ್ತೀಕರಣ ಇರುವುದಿಲ್ಲ ಎಂದು ವರದಿಯಾಗಿದೆ. ಕಾರ್ಲ್ಸ್‌ಬರ್ಗ್ ಇಂಡಿಯಾ 7 ಬ್ರೂವರಿ ಹಾಗೂ 8 ಗುತ್ತಿಗೆ ಉತ್ಪಾದನಾ ಘಟಕ ಹೊಂದಿದೆ. ಜೂನ್ ತ್ರೈಮಾಸಿಕದಲ್ಲಿ ಪ್ರತಿ ಗಂಚೆಗೆ 1,365.25 ಕಿಲೋಲೀಟರ್ ಸಾಮರ್ಥ್ಯ ಹೊಂದಿದೆ. ವಿಶೇಷ ಅಂದರೆ ಜೂನ್ ತ್ರೈಮಾಸಿಕದಲ್ಲಿ 158.2 ಕೋಟಿ ರೂಪಾಯಿ ಲಾಭ ಗಳಿಸಿದೆ. ಹಿಂದಿನ ವರ್ಷ 165.6 ಕೋಟಿ ಲಾಭಗಳಿಸಿತ್ತು. 2025ಕ್ಕೆ ಹೋಲಿಸಿದರೆ 2026ರ ಜೂನ್ ತ್ರೈಮಾಸಿಕದಲ್ಲಿ ಶೇಕಡಾ 3.9 ಕಡಿಮೆ ಲಾಭ ದಾಖಲಿಸಿದೆ.

ಕಾರ್ಲ್ಸ್‌ಬರ್ಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಡೆನ್ಮಾರ್ಕ್ ಬ್ರಿವರಿಂಗ್ ಒಡೆತದನ ಕಾರ್ಲ್ಸ್‌ಬರ್ಗ್ ಗ್ರೂಪ್ ಕಂಪನಿಯಾಗಿದೆ. ಗುರುಗ್ರಾಂನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಕಾರ್ಲ್ಸ್‌ಬರ್ಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಭಾರತದಲ್ಲಿ ಹಲವು ಬಿಯರ್ ಉತ್ಪನ್ನಗಳ ಮೂಲಕ ನೆಟ್ಚಿನ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಪ್ರಮುಖವಾಗಿ ಕಾರ್ಲ್ಸ್‌ಬರ್ಗ್ ಬಿಯರ್ ಹಾಗೂ ಟ್ಯೂಬಾರ್ಗ್ ಬಿಯರ್ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇನ್ನು ಸ್ಟ್ರಾಂಗ್ ಬಿಯರ್ ಬ್ರ್ಯಾಂಡ್ ಪಾಲೋನ್ ಕೂಡ ಹೆಚ್ಚಿನ ಮಾರಾಟ ಹೊಂದಿದೆ.

ವಾರ್ಷಿಕ ಆದಾಯ 1000 ಕೋಟಿ ರೂ

ಕಾರ್ಲ್ಸ್‌ಬರ್ಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಾರ್ಷಿಕ ಆದಾಯ 1000 ಕೋಟಿ ರೂಪಾಯಿ. ಇದೀಗ ಕಾರ್ಲ್ಸ್‌ಬರ್ಗ್ ಐಪಿಒ ಸಿದ್ದತೆ ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಉದ್ಯೋಗಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​ ಕೊಟ್ಟ Amazon: 250 ಮಂದಿ ವಜಾ ಮಾಡಿ ಇ-ಮೇಲ್​ ಸಂದೇಶ
Zomato: ಗ್ರಾಹಕನ ಸಲಹೆಗೆ ಸಿಇಒ ದೀಪಿಂದರ್ ಗೋಯಲ್ ಅಸ್ತು: ಜೊಮ್ಯಾಟೋದಲ್ಲಿ 'ಮೆಹ್ಮಾನ್ ಮೋಡ್' ಫೀಚರ್ ಜಾರಿ!