
Silver Rate today: ಬೆಳ್ಳಿಯ ದರ 2026 ಜನೆವರಿಯಲ್ಲಿ ಎಷ್ಟು ಏರಿಕೆ ಕಂಡಿತ್ತೆಂದರೆ ಜನರು ಬೆಳ್ಳಿ ಖರೀದಿಸುವ ಆಸೆಯೇ ಕೈಬಿಟ್ಟಿದ್ದರು. ಚಿನ್ನದಷ್ಟೇ ಬೆಳ್ಳಿಯೂ ವಿಪರೀತ ಅನ್ನುವಷ್ಟು ಯದ್ವ ತದ್ವಾ ಬೆಲೆ ಏರಿಕೆಯಾಗಿತ್ತು. ಆದರೆ ಇದೀಗ ಹತ್ತೇ ತಿಂಗಳಲ್ಲಿ ಬೆಳ್ಳಿಯ ಬೆಲೆಗಳು ತೀವ್ರಗತಿಯಲ್ಲಿ ಇಳಿಕೆಯಾಗಿದೆ. ಕಳೆದ ಜನೆವರಿಯಲ್ಲಿ ಬೆಳ್ಳಿಯ ದರಕ್ಕೆ ಹೋಲಿಸಿದರೆ ಈಗ ಅರ್ಧಕರ್ಧ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಖರೀದಿಸಬೇಕು ಎನ್ನುವವರಿಗೆ ಈಗ ಗೊಂದಲ ಶುರುವಾಗಿದೆ. ಬೆಳ್ಳಿಯ ಬೆಲೆ ಇನ್ನೂ ಇಳಿಕೆಯಾಗಲಿದೆಯೇ? ಅಥವಾ ಈಗಲೇ ಖರೀದಿಸಿಬಿಡಲು ಒಳ್ಳೆಯ ಸಮಯವೇ? ಇನ್ನಷ್ಟು ಸಮಯ ಕಾದರೆ ಬೆಲೆ ಇನ್ನು ಇಳಿಯಲಿದೆಯೇ? ಎಂಬ ಪ್ರಶ್ನೆ ಎದುರಾಗಿದೆ.
2026 ಆರಂಭದಲ್ಲಿ ಅಂದರೆ ಜನೆವರಿಯಲ್ಲಿ ಬೆಳ್ಳಿ ದರ ಗರಿಷ್ಠಮಟ್ಟದಲ್ಲಿ ಏರಿಕೆ ಕಂಡಿತ್ತು. ಹೀಗಾಗಿ ಈ ವರ್ಷ ಹೂಡಿಕೆದಾರರ ಆದ್ಯತೆ ಬೆಳ್ಳಿಯಾಗಿತ್ತು. ಆದರೆ ಇದೀಗ ಅಕ್ಟೋಬರ್ ವೇಳೆಗೆ ಶೇ.50ರಷ್ಟು ಬೆಲೆ ಕುಸಿದಿದೆ. ಇದರ ಪರಿಣಾಮವಾಗಿ ಹೂಡಿಕೆದಾರರಿಗೂ ಈಗ ಒಂದು ಪ್ರಶ್ನೆ ಎದುರಾಗಿದೆ. ಈ ಬೆಲೆ ಕುಸಿತದಲ್ಲೇ ಬೆಳ್ಳಿ ಖರೀದಿಸಲು ಒಳ್ಳೆಯ ಅವಕಾಶವಾಗಲಿದೆಯೇ? ಅಥವಾ ಇನ್ನು ಕಾಯಬೇಕೇ ಎಂಬುದು.
ಬೆಳ್ಳಿ ಬೆಲೆ ಏರಿಕೆ-ಇಳಿಕೆಯ ಹಿಂದೆ ಸ್ಥಳೀಯ ಮಾರುಕಟ್ಟೆ ಅಲ್ಲ, ಇದರ ಹಿಂದೆ ಹಲವು ಅಂತಾರಾಷ್ಟ್ರೀಯ ಅಂಶಗಳಿವೆ. ಅದರಲ್ಲೂ ಕಚ್ಚಾ ತೈಲ ಬೆಲೆ ಏರಿಕೆ, ಹಣದುಬ್ಬರ, ಇರಾನ್ ಅಮೆರಿಕ ಸಂಘರ್ಷ, ಅಮೆರಿಕದ ಫೆಡರಲ್ ರಿಸರ್ವ ಬಡ್ಡಿದರಗಳು ಇವೆಲ್ಲವೂಗಳು ಬೆಳ್ಳಿಯ ದರ ಹಾವು-ಏಣಿಯ ಆಟಕ್ಕೆ ಕಾರಣಗಳು.
ಬಡ್ಡಿ ಆದಾಯವನ್ನು ನೀಡುವ ಹೂಡಿಕೆ ಆಯ್ಕೆಗಳು ಆಕರ್ಷಕವಾದಾಗ ಚಿನ್ನ ಮತ್ತು ಬೆಳ್ಳಿಯಂತಹ ಲೋಹಗಳ ಬೇಡಿಕೆಯ ಮೇಲೆ ಒತ್ತಡ ಉಂಟಾಗಬಹುದು. ಏಕೆಂದರೆ ಇವು ನಿಯಮಿತ ಬಡ್ಡಿ ಅಥವಾ ಆದಾಯವನ್ನು ನೀಡುವುದಿಲ್ಲ. ಇದಲ್ಲದೆ, ಅಮೆರಿಕದ ಡಾಲರ್ ಬಲಗೊಳ್ಳುತ್ತಿರುವುದು ಮತ್ತು ಬಾಂಡ್ ಇಳುವರಿ (bond yields) ಹೆಚ್ಚಾಗುತ್ತಿರುವುದು ಕೂಡ ಬೆಳ್ಳಿ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿವೆ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ (MCX) ಪ್ರಕಾರ 2026ರ ಜನವರಿ 29ರಂದು ಬೆಳ್ಳಿಯ ಬೆಲೆಯು ಪ್ರತಿ ಕೆಜಿಗೆ ಸುಮಾರು ₹3,84,632ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು. ಆದರೆ ಇದೇ ಬೆಳ್ಳಿ ಅಕ್ಟೋಬರ್ 27ರ ವೇಳೆಗೆ ಈ ಬೆಲೆಯು ಪ್ರತಿ ಕೆಜಿಗೆ ಸುಮಾರು ₹1,90,847ಕ್ಕೆ ಇಳಿದಿದೆ! ಅಂದರೆ ಕೇವಲ ಕೆಲವೇ ತಿಂಗಳುಗಳಲ್ಲಿ 50 ಪ್ರತಿಶತಕ್ಕೂ ಹೆಚ್ಚು ಕುಸಿತ ಕಂಡಿದೆ. ಆದರೆ ಅರ್ಧಕರ್ಧ ಬೆಲೆ ಇಳಿದಿರುವುದರಿಂದ ಇನ್ನೊಂದು ಲಾಂಗ್ ಟರ್ಮ್ ಹೂಡಿಕೆ ಮಾಡುವವರಿಗೆ ಹೇಳಿ ಮಾಡಿಸಿದ ಸಮಯವಾಗಿದೆ. ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಪ್ಲಾನ್ ಮಾಡುತ್ತಿರುವವರು ಈಗ ಅಲರ್ಟ್ ಆಗಿದ್ದಾರೆ. ಬೆಳ್ಳಿ ಖರೀದಿಸಲು ಇದೇ ಒಳ್ಳೆಯ ಸಮಯ ಎಂದು ಯೋಚಿಸುತ್ತಿದ್ದಾರೆ. ಇನ್ನು ಕೆಲವರು, ಈಗಲೇ ಖರೀದಿಸುವ ಬದಲು ಇನ್ನಷ್ಟು ಸಮಯ ಕಾಯುವದರಿಂದ ಬೆಳ್ಳಿಯ ಬೆಲೆ ಇನ್ನೂ ಕಡಿಮೆಯಾಗಬಹುದು ಎಂದು ಯೋಚಿಸುತ್ತಿದ್ದಾರೆ. ಆದರೆ ಒಂದು ಗಮನಿಸಬೇಕು ಕೇವಲ ಬೆಲೆ ಇಳಿಕೆಯಾಗಿದೆ ಎಂಬ ಕಾರಣಕ್ಕೆ ಹೂಡಿಕೆ ಮಾಡುವುದು ಅಪಾಯಕಾರಿಯಾಗಬಹುದು.
ತಜ್ಞರ ಹೇಳುವ ಪ್ರಕಾರ ಬೆಳ್ಳಿ ಬೆಲೆ ಅರ್ಧಕರ್ಧ ಇಳಿಕೆಯಾಗಿದ್ದರೂ ಮುಂದೆ ಇನ್ನಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಒಂದೇ ಬಾರಿಗೆ ದೊಡ್ಡ ಮಟ್ಟದಲ್ಲಿ ಖರೀಸುವ ಬದಲು ಸ್ವಲ್ಪ ಮಟ್ಟಿಗೆ ಖರೀದಿಸಿ, ಮುಂದಿನ ಬೆಳವಣಿಗೆ ನೋಡಿಕೊಂಡು ಹಂತ ಹಂತವಾಗಿ ಖರೀದಿಸುವುದು ಉತ್ತಮ ಎನ್ನುತ್ತಾರೆ.
ಬೆಳ್ಳಿಯಲ್ಲಿ ಹೂಡಿಕೆ ಮಾಡುವ ಮುನ್ನ ಹೂಡಿಕೆದಾರರು ಅಮೆರಿಕದ ಬಡ್ಡಿದರಗಳು, ಡಾಲರ್ ಏರಿಕೆ, ಜಾಗತಿಕ ಬೇಡಿಕೆ, ಹಣದುಬ್ಬರ ಇವೆಲ್ಲವುಗಳ ಬೆಳವಣಿಗೆ ಮೇಲೆ ನಿಗಾ ಇಡಬೇಕು. ದೀರ್ಘಕಾಲದಲ್ಲಿ ಹೂಡಿಕೆದಾರರ ತಮ್ಮ ಆರ್ಥಿಕ ಪರಿಸ್ಥಿತಿ, ಅಪಾಯವಾದಾಗ ಅದನ್ನ ಎದುರಿಸುವ ಸಾಮರ್ಥ್ಯ ಇದೆಯೇ? ಇಲ್ಲವೇ? ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಬೇಕು ಎಂದು ಹೇಳುತ್ತಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.