ಬೆಂಗಳೂರು ಹೊರತುಪಡಿಸಿ ಇನ್ನುಳಿದ ಎಲ್ಲಾ ಬೈಜೂಸ್ ಕಚೇರಿಗೆ ಬೀಗ, ಉದ್ಯೋಗಿಗಳಿಗೆ ಒಂದು ಆಯ್ಕೆ!

By Suvarna News  |  First Published Mar 11, 2024, 3:50 PM IST

ಬೈಜೂಸ್ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಆರ್ಥಿಕ ಹಿಂಜರಿತದಲ್ಲಿ ಮುಳುಗಿರುವ ಬೈಜೂಸ್ ಮತ್ತೆ ಮೇಲೆಳೆಲು ಹಲವು ಪ್ರಯತ್ನ ಮಾಡುತ್ತಿದೆ. ಆದರೆ ಯಾವೂದು ಕೈಗೂಡುತ್ತಿಲ್ಲ. ಇದೀಗ ಬೈಜೂಸ್ ಬೆಂಗಳೂರು ಕೇಂದ್ರ ಕಚೇರಿ ಹೊರತುಪಡಿಸಿ ದೇಶಾದ್ಯಂತ ಇರುವ ಎಲ್ಲಾ ಕಚೇರಿಗಳನ್ನು ತೊರೆದಿದೆ. ಇತ್ತ ಉದ್ಯೋಗಿಗಳಿಗೆ ಒಂದು ಆಯ್ಕೆ ನೀಡಿದೆ.
 


ಬೆಂಗಳೂರು(ಮಾ.11) ಆನ್‌ಲೈನ್ ಶಿಕ್ಷಣದ ಮೂಲಕ ಕ್ರಾಂತಿ ಮಾಡಿದ ಬೈಜೂಸ್ ಕಂಪನಿ ಇದೀಗ ಸಂಕಷ್ಟದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಆರ್ಥಿಕ ಸಂಕಷ್ಟ, ಫೆಮಾ ಕಾಯ್ದೆ ಉಲ್ಲಂಘನೆ ಸೇರಿದಂತೆ ಹಲವು ಸಂಕಷ್ಟಗಳು ಎದುರಾಗಿದೆ. ಇತ್ತೀಚೆಗೆ ಬೈಜೂಸ್‌ ಸಂಸ್ಥೆಯ ಸಂಸ್ಥಾಪಕ ಬೈಜು ರವೀಂದ್ರನ್‌ ವಜಾ ಮಾಡಲು ಷೇರುದಾರರು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಉದ್ಯೋಗಿಳಿಗೆ ವೇತ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಈ ಬೆಳವಣಿಗೆ ನಡುವೆ ವೆಚ್ಚ ಕಡಿಮೆ ಮಾಡಲು ಬೈಜೂಸ್ ಇದೀಗ ಬೆಂಗಳೂರಿನ ಕೇಂದ್ರ ಕಚೇರಿ ಹೊರತುಪಡಿಸಿ ದೇಶದ ಎಲ್ಲಾ ಭಾಗದಲ್ಲಿರುವ ಕಚೇರಿಗಳನ್ನು ತೊರೆದಿದೆ. ಬಾಡಿಗೆ ಹಾಗೂ ಇತರ ನಿರ್ವಹಣಾ ವೆಚ್ಚ ಉಳಿಸಲು ಕಂಪನಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 

ಬೆಂಗಳೂರಿನ ನಾಲೇಜ್ ಪಾರ್ಕ್‌ನಲ್ಲಿರುವ ಪ್ರಧಾನ ಕಚೇರಿಯೊಂದನ್ನು ಮಾತ್ರ ಉಳಿಸಿಕೊಂಡಿರುವ ಬೈಜೂಸ್, ಇನ್ನುಳಿದ ಎಲ್ಲಾ ಕಚೇರಿಗಳಿಗೆ ಬೀಗ ಹಾಕಿದೆ. ಬಾಡಿಗೆ ಹಾಗೂ ಲೀಸ್‌ಗೆ ಪಡೆದಿದ್ದ ಕಟ್ಟಡ ಮಾಲೀಕರಿಗೆ ಒಪ್ಪಂದ ಅಂತ್ಯಗೊಳಿಸಿದೆ. ಬಾಡಿಗೆ, ಕಚೇರಿ ನಿರ್ವಹಣಾ ವೆಚ್ಚ, ಸಿಬ್ಬಂದಿ ವೆಚ್ಚ, ವಿದ್ಯುತ್ ಬಿಲ್ ಸೇರಿದಂತೆ ಇತರ ವೆಚ್ಚಗಳನ್ನು ಕಡಿತಗೊಳಿಸಲು ಬೈಜೂಸ್ ಈ ನಿರ್ಧಾರ ಮಾಡಿದೆ.

Tap to resize

Latest Videos

ಬೈಜುಸ್‌ ರವೀಂದ್ರನ್‌‌ಗೆ ಹೆಚ್ಚಿದ ಸಂಕಷ್ಟ, ಸಿಇಒ ಹೊರಹಾಕಲು ಹೂಡಿಕೆದಾರರಿಂದ ಮೊಕದ್ದಮೆ!

ಕಚೇರಿ ತೊರೆದ ಕಾರಣ ಬೈಜೂಸ್ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಮಾತ್ರ ಕಚೇರಿಗೆ ತೆರಳಬೇಕು. ಇನ್ನ ದೇಶದ ಇತರ ನಗರ ಹಾಗೂ ರಾಜ್ಯಗಳಲ್ಲಿದ್ದ ಕಚೇರಿಗಳನ್ನು ತೊರದಿರುವ ಕಾರಣ ಈ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲು ಸೂಚಿಸಿದೆ. ಬೈಜೂಸ್ ದೇಶಾದ್ಯಂತ 300ಕ್ಕೂ ಹೆಚ್ಚು ಟ್ಯೂಶನ್ ಸೆಂಟರ್ ಹೊಂದಿದೆ. 

ಇತ್ತೀಚೆಗಷ್ಟೆ ಮಾರ್ಚ್ ತಿಂಗಳಲ್ಲಿ ಉದ್ಯೋಗಿಗಳಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದು ಪತ್ರ ಬರೆದಿತ್ತು. ಹಕ್ಕುಸ್ವಾಮ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಕೋರ್ಟ್ ಆದೇಶ ಬರುವವರೆಗೆ 1700 ಕೋಟಿ ರು. (200 ಮಿಲಿಯನ್‌ ಡಾಲರ್‌) ಹಣವನ್ನು ಬಳಸಬಾರದೆಂದು ಬೈಜೂಸ್‌ಗೆ ಸೂಚಿಸಿದೆ. ಇದೀಗ ವೇತನ ನೀಡಲು ಇತರ ವೆಚ್ಚಗಳನ್ನು ಕಡಿಮೆ ಮಾಡಲು ಕಚೇರಿ ತೊರೆದಿದ್ದಾರೆ.

ಉದ್ಯೋಗಿಗಳಿಗೆ ಸ್ಯಾಲರಿ ನೀಡಲು ಸ್ವಂತ ಮನೆಯನ್ನೇ ಅಡವಿಟ್ಟ ಬೈಜುಸ್ ಸಂಸ್ಥಾಪಕ!  

ಇತ್ತೀಚೆಗೆ ಬೈಜೂಸ್ ಷೇರುದಾರರ ತುರ್ತು ಸಭೆ ಕರೆದು ಮಹತ್ವದ ಆಗ್ರಹ ಮಾಡಿದ್ದರು. ಬೈಜು ರವೀಂದ್ರನ್‌  9300 ಕೋಟಿ ರೂಪಾಯಿ ಫೆಮಾ ನಿಯಮ ಉಲ್ಲಂಘನೆ ಆರೋಪ ಹೊತ್ತು ತನಿಖಾ ಸಂಸ್ಥೆಯಿಂದ ಕಠಿಣ ಲುಕ್‌ಔಟ್‌ ನೋಟಿಸ್‌ಗೆ ಗುರಿಯಾಗಿರುವ ಕಾರಣ ಮುಖ್ಯಕಾರ್ಯನಿರ್ವಹಣಾಧಿಕಾರಿಯ ಹುದ್ದೆಯಿಂದ ವಜಾಗೊಳಿಸಲು ನಿರ್ಣಯ ಕೈಗೊಂಡಿದ್ದರು.
 

click me!