71,100 ಉದ್ಯೋಗ ನೀಡಲಿದ್ದಾರೆ ಗೌತಮ್ ಅದಾನಿ… ಇದು ಒಂದಲ್ಲ, ಎರಡಲ್ಲ ಬರೋಬ್ಬರಿ 4 ಲಕ್ಷ ಕೋಟಿಯ ಮಾಸ್ಟರ್ ಪ್ಲಾನ್

By Mahmad RafikFirst Published Sep 17, 2024, 3:15 PM IST
Highlights

ಗೌತಮ್ ಅದಾನಿ ಅವರು ಮುಂದಿನ ಕೆಲ ವರ್ಷಗಳಲ್ಲಿ 71,100 ಜನರಿಗೆ ಉದ್ಯೋಗ ನೀಡುವ 4 ಲಕ್ಷ ಕೋಟಿ ರೂಪಾಯಿಗಳ ಮಾಸ್ಟರ್ ಪ್ಲಾನ್ ಅನ್ನು ಘೋಷಿಸಿದ್ದಾರೆ. ಏನಿದು  ಪ್ಲಾನ್? ಇಲ್ಲಿದೆ ನೋಡಿ ಮಾಹಿತಿ

ನವದೆಹಲಿ: ಏಷಿಯಾದ ಎರಡನೇ ಶ್ರೀಮಂತ ಉದ್ಯಮಿಯಾಗಿರುವ ಗೌತಮ್ ಅದಾನಿ ದೇಶಕ್ಕಾಗಿ ಅತಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಮುಂದಿನ ಕೆಲ ವರ್ಷಗಳಲ್ಲಿಯೇ 71,100 ಜನರಿಗೆ ಉದ್ಯೋಗ ನೀಡುವದಾಗಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಗೌತಮ್ ಅದಾನಿ 4 ಲಕ್ಷ ಕೋಟಿಯ ಮಾಸ್ಟರ್ ಪ್ಲಾನ್ ಮಾಡಿಕೊಂಡಿರೋದಾಗಿ ಮಾಹಿತಿಯನ್ನು ನೀಡಿದ್ದಾರೆ. ಈ ಘೋಷಣೆಯನ್ನು ತಮ್ಮ ನಾಲ್ಕನೇ 'ರೀ-ಇನ್ವೆಸ್ಟ್ 2024' ಕಾರ್ಯಕ್ರಮದಲ್ಲಿ ಮಾಡಿದ್ದಾರೆ. 2030ರೊಳಗೆ ಭಾರತದಲ್ಲಿ ಪುನರ್‌ಬಳಕೆ ಶಕ್ತಿ ಯೋಜನೆಯಲ್ಲಿ (Renewable Energy Project) 4 ಲಕ್ಷ ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಲಾಗುವುದು. ಈ ಯೋಜನೆ ಮೂಲಕ 71,100 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಗೌತಮ್ ಅದಾನಿ ತಿಳಿಸಿದ್ದಾರೆ.

ಅದಾನಿ ಗ್ರೂಪ್ ರೀ-ಇನ್ವೆಸ್ಟ್ 2024  ಕಾರ್ಯಕ್ರಮದಲ್ಲಿ ದೊಡ್ಡ ಮೊತ್ತದ ಹೂಡಿಕೆಯ ಘೋಷಣೆ ಮಾಡೋದರ  ಜೊತೆಗೆ ಸೋಲಾರ್, ವಿಂಡ್ ಮತ್ತು ಗ್ರೀನ್ ಹೈಡ್ರೋಜನ್ ಸೇರಿದಂತೆ Renewable Energy projectsನಲ್ಲಿ 4,05,800 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಮತ್ತು ಅದಾನಿ  ನ್ಯೂ ಇಂಡಸ್ಟ್ರೀಸ್ ಲಿಮಿಟೆಡ್ (ANIL) 2030ರೊಳಗೆ ಈ ಪ್ರೊಜೆಕ್ಟ್‌ನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿವೆ. 

Latest Videos

ಭಾರತ ಅತಿ ದೊಡ್ಡ Renewable Energy project ಕಂಪನಿ, ಅದಾನಿ ಗ್ರೀನ್ ಎನರ್ಜಿ, 2030ರವರೆಗೆ 50 ಗಿಗಾವ್ಯಾಟ್  Renewable Energy project ಸಾಮಾರ್ಥ್ಯವನ್ನು ಹೊಂದುವ ಬಗ್ಗೆ ಗುರಿ ಹೊಂದಿವೆ. ಇದರ ಜೊತೆಯಲ್ಲಿ ಅದಾನಿ ನ್ಯೂ ಇಂಡಸ್ಟ್ರೀಸ್ 10 ಗಿಗಾವ್ಯಾಟ್‌ನನ  ಸೋಲಾರ್ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್, 5 ಗಿಗಾವ್ಯಾಟ್ ಸಾಮಾರ್ಥ್ಯದ ವಿಂಡ್ ಮ್ಯಾನುಫ್ಯಾಕ್ಚರಿಂಗ್, 10  ಗಿಗಾವ್ಯಾಟ್ ಸಾಮಾರ್ಥ್ಯದ ಗ್ರೀನ್ ಹೈಡ್ರೋಜನ್  ಮತ್ತು 5 ಗಿಗಾವ್ಯಾಟ್ ಸಾಮಾರ್ಥ್ಯದ ಇಲೆಕ್ಟ್ರೋಲೈಸರ್ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ಸ್ಥಾಪನೆ ಮಾಡಲಿವೆ. ಈ ಯೋಜನೆಯಿಂದ ಭಾರತಕ್ಕೆ ಬೇಕಿರುವ ಇಂಧನ ಶಕ್ತಿಯ ಬೇಡಿಕೆಯನ್ನು ಪೂರೈಸೋದರ ಜೊತೆಗೆ, 71,100 ಜನರಿಗೆ ಉದ್ಯೋಗ ಸಿಗಲಿದೆ.

5 ಸ್ವಿಸ್ ಬ್ಯಾಂಕ್‌ಗಳಲ್ಲಿದ್ದ 2575 ಕೋಟಿ ರೂ. ಅದಾನಿ ಹಣ ಜಪ್ತಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಗ್ರೀನ್ ಎನರ್ಜಿಯ ಕುರಿತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. 31,000 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆಗೆ 7,000 ಕೋಟಿ ಮತ್ತು 12,000 ಕೋಟಿಯ ವಯಬಿಲಿಟಿ ಗ್ಯಾಪ್ ಫಂಡ್ ಯೋಜನೆಗೆ ಅವರು ಅನುಮೋದನೆ ನೀಡಿದ್ದಾರೆ. ಭಾರತವು 500 GW ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಡಿಯಲ್ಲಿ, ಪ್ರತಿ ಮನೆಗೆ ಸೌರ ಫಲಕಗಳನ್ನು ಅಳವಡಿಸುವ ಯೋಜನೆಯು ಸಹ ನಡೆಯುತ್ತಿದೆ, ಇದರಿಂದ ಜನರು ವಿದ್ಯುತ್ ಉತ್ಪಾದಕರಾಗಬಹುದು. ಗೌತಮ್ ಅದಾನಿಯವರ ಈ ಮಾಸ್ಟರ್ ಪ್ಲಾನ್ ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹೊಸ ದಿಕ್ಕನ್ನು ನೀಡುತ್ತದೆ ಮತ್ತು ದೇಶದ ಇಂಧನ ಸ್ವಾವಲಂಬನೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಅದಾನಿ ಒಡೆತನದ ಈ ಕಂಪನಿಯ ನೌಕರನ ತಿಂಗಳ ಸಂಬಳ 10 ಲಕ್ಷ ರೂ: ಇಲ್ಲಿ ಕೆಲಸ ಸಿಕ್ರೆ ಸ್ವರ್ಗಕ್ಕೆ ಮೂರೇ ಗೇಣು!

click me!