
ಮುಂಬೈ: ದೇಶದ ಪ್ರಖ್ಯಾತ ಟೆಲಿಕಾಂ ನೆಟ್‌ವರ್ಕ್ ರಿಲಯನ್ಸ್ ಜಿಯೋದ ಸರ್ವರ್ ಡೌನ್ ಆಗಿದ್ದು, ಇಂದು ಜಿಯೋ ಸೇವೆಯಲ್ಲಿ ಭಾರಿ ವ್ಯತ್ಯಯವಾಗಿದೆ., ದೇಶದೆಲ್ಲೆಡೆ ಜನ ನೆಟ್‌ವರ್ಕ್ ಇಲ್ಲದೇ ಪರದಾಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಜಿಯೋ ಸಿಮ್ ಹೊಂದಿರುವ ಬಳಕೆದಾರರು ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸಲು ಆಗದಿರುವುದರ ಜೊತೆ ನೆಟ್‌ವರ್ಕ್ ಅವಲಂಬಿತ ಕೆಲಸಗಳನ್ನು ಮಾಡಲಾಗದೇ ಪರದಾಡಿದ್ದಾರೆ.
ಬೆಳಗ್ಗೆಯಿಂದಲೇ ಜಿಯೋ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಕಂಡು ಬಂದಿದ್ದು, ಮಧ್ಯಾಹ್ನದ ವೇಳೆಗಾಗಲೇ ಈ ಸಮಸ್ಯೆ ಉತ್ತುಂಗಕೇರಿತ್ತು. ಇದು ಬರೀ ಸಿಮ್ ಬಳಕೆದಾರರಿಗೆ ಮಾತ್ರವಲ್ಲ, ಜಿಯೋ ಫೈಬರ್‌ನೆಟ್, ವೈಫೈ ಸೌಲಭ್ಯವನ್ನು ಬಳಸುತ್ತಿರುವವರು ಕೂಡ ಈ ಸಮಸ್ಯೆಯಿಂದ ತೊಂದರೆಗೊಳಗಾದರು. ಶೇಕಡಾ 19ರಷ್ಟು ತಮ್ಮ ಮೊಬೈಲ್‌ನಲ್ಲಿ ನೆಟ್‌ವರ್ಕ್ ಇಲ್ಲದೇ ಪರದಾಡಿದರೆ, ಉಳಿದ 14ರಷ್ಟು ಜನ ತಮ್ಮ ಫೈಬರ್ ನೆಟ್‌ವರ್ಕ್ ಸಮಸ್ಯೆಯಿಂದ ತೊಂದರೆಗೊಳಗಾದರು ಎಂದು ಡೌನ್ ಡಿಕ್ಟೆಟರ್ ಮಾಹಿತಿ ದಾಖಲಿಸಿದೆ. ಅಲ್ಲದೇ 10 ಸಾವಿರಕ್ಕೂ ಹೆಚ್ಚು ಜನ ಈ ನೆಟ್‌ವರ್ಕ್ ಸಮಸ್ಯೆಯ ಬಗ್ಗೆ ದೂರು ನೀಡಿದ್ದಾರೆ.
ಅಲ್ಲದೇ ತಮ್ಮ ಸಾಮಾಜಿಕ ಜಾಲತಾಣದಲ್ಲೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಆದರೆ ಜಿಯೋ ಸಂಸ್ಥೆ ಮಾತ್ರ ಈ ಸಮಸ್ಯೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತದಾದ್ಯಂತ ಜಿಯೋ ಬಳಕೆದಾರರು ನೆಟ್‌ವರ್ಕ್ ಸಮಸ್ಯೆ ಅನುಭವಿಸುತ್ತಿದ್ದಾರೆ. ಬೇರೆ ಯಾರಿಗಾದರೂ ಇದೇ ಸಮಸ್ಯೆಯಾಗುತ್ತಿದೆಯೇ ಎಂದು ಒಬ್ಬರು ಬಳಕೆದಾರರು ಪ್ರಶ್ನಿಸಿದ್ದಾರೆ. ರಿಲಯನ್ಸ್ ಜಿಯೋ ಮುಂಬೈನಲ್ಲಿ ಬಹಳ ದೊಡ್ಡ ಸರ್ವಿಸ್ ಹಿನ್ನಡೆ ಅನುಭವಿಸುತ್ತಿದೆ. ಬಹುಶಃ ಬೇರೆ ಭಾಗದಲ್ಲೂ ಇದೆ ಸಮಸ್ಯೆ ಇರಬಹುದು. ಏನಾಗುತ್ತಿದೆ, ಜಿಯೋ ಆಪ್ ಕೂಡ ಕೆಲಸ ಮಾಡುತ್ತಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.