
ನಿಮ್ಮದೆ ಸ್ವಂತ ಬ್ಯುಸಿನೆಸ್ ಶುರು ಮಾಡ್ಬೇಕು ಅಂದ್ರೆ ಬೇಸಿಗೆಯಲ್ಲಿ ಒಳ್ಳೆಯ ಅವಕಾಶವಿದೆ. ಎಲ್ಲ ಸಮಯದಲ್ಲೂ ಅಗತ್ಯವಿರುವ ಹಾಗೂ ಬೇಸಿಗೆಯಲ್ಲಿ ಹೆಚ್ಚು ಬೇಡಿಕೆಯಿರುವ ಐಸ್ ಕ್ಯೂಬ್ ಫ್ಯಾಕ್ಟರಿಯನ್ನು ನೀವು ಶುರು ಮಾಡಬಹುದು. ನಗರವಿರಲಿ ಇಲ್ಲ ಹಳ್ಳಿಯಿರಲಿ ಎಲ್ಲ ಕಡೆ ಈಗ ಐಸ್ ಕ್ಯೂಬ್ ಗೆ ಡಿಮ್ಯಾಂಡ್ ಇದೆ. ನೀವು ಐಸ್ ಕ್ಯೂಬ್ ಫ್ಯಾಕ್ಟರಿಯನ್ನು ನಗರದಲ್ಲೇ ಶುರು ಮಾಡ್ಬೇಕೆಂದೇನಿಲ್ಲ. ನೀವು ಹಳ್ಳಿಯಲ್ಲೂ ಇದನ್ನು ಪ್ರಾರಂಭಿಸಿ ಕೈ ತುಂಬ ಸಂಪಾದನೆ ಮಾಡಬಹುದು.
ಈಗಿನ ದಿನಗಳಲ್ಲಿ ಅನೇಕ ಐಸ್ ಕ್ಯೂಬ್ (Ice Cube) ಫ್ಯಾಕ್ಟರಿಯನ್ನು ನೀವು ನೋಡ್ಬಹುದು. ಆದ್ರೂ ಇದಕ್ಕೆ ಬೇಡಿಕೆ ಕಡಿಮೆಯೇನಾಗಿಲ್ಲ. ನೀವು ಐಸ್ ಕ್ಯೂಬ್ ಫ್ಯಾಕ್ಟರಿ (Factory) ಶುರು ಮಾಡಲು ಸ್ಥಳೀಯ ಆಡಳಿತದಿಂದ ಒಪ್ಪಿಗೆ ಪತ್ರ ಪಡೆಯಬೇಕಾಗುತ್ತದೆ. ನಿಮ್ಮ ಫ್ಯಾಕ್ಟರಿಯನ್ನು ನೋಂದಣಿ (Registration )ಮಾಡ್ಬೇಕು. ಐಸ್ ಕ್ಯೂಬ್ ಫ್ಯಾಕ್ಟರಿ ಶುರು ಮಾಡಲು ನಿಮಗೆ ಫ್ರಿಜರ್ ಅವಶ್ಯಕತೆ ಇರುತ್ತದೆ. ಐಸ್ ಕ್ಯೂಬ್ ತಯಾರಿಸಲು ಹಾಗೂ ಸಂಗ್ರಹಿಸಲು ಫ್ರಿಜರ್ ಬೇಕಾಗುತ್ತದೆ. ನೀವು ಬೇರೆ ಬೇರೆ ಆಕಾರದಲ್ಲಿ ಹಾಗೂ ಡಿಸೈನ್ ನಲ್ಲಿ ಐಸ್ ಕ್ಯೂಬ್ ತಯಾರಿಸಬಹುದು. ಇದು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತದೆ.
ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ
ಐಸ್ ಕ್ಯೂಬ್ ಫ್ಯಾಕ್ಟರಿ ಶುರು ಮಾಡಲು ಎಷ್ಟು ಹಣ ಹೂಡಿಕೆ ಮಾಡ್ಬೇಕು? : ಐಸ್ ಕ್ಯೂಬ್ ಫ್ಯಾಕ್ಟರಿ ತಯಾರಿಸಲು ನೀವು ಆರಂಭದಲ್ಲಿ ಒಂದು ಲಕ್ಷ ರೂಪಾಯಿ ಖರ್ಚು ಮಾಡ್ಬೇಕಾಗುತ್ತದೆ. ನೀವು ಡೀಪ್ ಫ್ರಿಜರ್ ಖರೀದಿ ಮಾಡ್ಬೇಕಾಗುತ್ತದೆ. ಇದ್ರ ಬೆಲೆ 50,000 ರೂಪಾಯಿಯಿಂದ ಶುರುವಾಗುತ್ತದೆ. ಇದಲ್ಲದೆ ಕೆಲ ಅವಶ್ಯಕ ವಸ್ತುಗಳನ್ನು ನೀವು ಖರೀದಿ ಮಾಡಬೇಕಾಗುತ್ತದೆ. ನಿಮ್ಮ ವ್ಯವಹಾರದಲ್ಲಿ ಅಭಿವೃದ್ಧಿಯಾಗ್ತಿದ್ದಂತೆ ನೀವು ಇನ್ನಷ್ಟು ವಸ್ತುಗಳನ್ನು ಖರೀದಿ ಮಾಡಬಹುದು. ಐಸ್ ಕ್ಯೂಬ್ ಫ್ಯಾಕ್ಟರಿ ಶುರು ಮಾಡುವ ಮೊದಲು ಅದ್ರ ಬಗ್ಗೆ ನೀವು ರಿಸರ್ಚ್ ಮಾಡಬೇಕಾಗುತ್ತದೆ. ಹಾಗೆಯೇ ಮಾರುಕಟ್ಟೆ ಬಗ್ಗೆಯೂ ನೀವು ಮಾಹಿತಿ ಪಡೆದಿರಬೇಕು. ನಿಮ್ಮ ಫ್ಯಾಕ್ಟರಿಯಲ್ಲಿ ಸಿದ್ಧವಾದ ಐಸ್ ಕ್ಯೂಬನ್ನು ಎಲ್ಲಿ ಮಾರಾಟ ಮಾಡ್ಬೇಕು ಎಂಬುದು ನಿಮಗೆ ತಿಳಿದಿರಬೇಕು.
ಐಸ್ ಕ್ಯೂಬ್ ಫ್ಯಾಕ್ಟರಿಯಿಂದ ಎಷ್ಟು ಲಾಭ ? : ಬೇಸಿಗೆ ಸಮಯದಲ್ಲಿ ಐಸ್ ಕ್ಯೂಬ್ ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹಾಗೆಯೇ ಮದುವೆ ದಿನಗಳಲ್ಲಿ ಕೂಡ ಐಸ್ ಕ್ಯೂಬ್ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತದೆ. ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ನೀವು ದೊಡ್ಡ ಮಟ್ಟದಲ್ಲಿ ಲಾಭ ಪಡೆಯಬಹುದು. ನೀವು ಯಾವ ಕ್ಷೇತ್ರದಲ್ಲಿ ಐಸ್ ಫ್ಯಾಕ್ಟರಿ ಶುರು ಮಾಡಿದ್ದೀರಿ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಹಾಗೆಯೇ ನೀವು ಯಾವ ಗುಣಮಟ್ಟದ ಐಸ್ ಕ್ಯೂಬ್ ನೀಡ್ತೀರಿ ಎಂಬುದು ಕೂಡ ಮಹತ್ವಪಡೆಯುತ್ತದೆ. ಆರಂಭದಲ್ಲಿ ಒಂದು ಲಕ್ಷ ಹೂಡಿಕೆ ಮಾಡಿ ನೀವು 30 ಸಾವಿರದವರೆಗೆ ಲಾಭವನ್ನು ಪಡೆಯಬಹುದು. ಬೇಸಿಗೆ ಹಾಗೂ ಮದುವೆ ಸಂದರ್ಭದಲ್ಲಿ ನೀವು ತಿಂಗಳಿಗೆ 50 ಸಾವಿರ ರೂಪಾಯಿ ಆರಾಮವಾಗಿ ಗಳಿಕೆ ಮಾಡಬಹುದು.
ನಂ.1 ಶ್ರೀಮಂತನ ಉತ್ತರಾಧಿಕಾರಿ ಆಯ್ಕೆಗೆ ಪ್ರತಿ ತಿಂಗಳೂ 5 ಮಕ್ಕಳ ಸಂದರ್ಶನ! ಆಡಿಷನ್ ಪ್ರಕ್ರಿಯೆ ಹೀಗಿದೆ..
ಐಸ್ ಕ್ಯೂಬ್ ಮಾರಾಟಕ್ಕೆ ನೀವು ಎಲ್ಲಿಗೂ ಹೋಗ್ಬೇಕಾಗಿಲ್ಲ. ನಿಮ್ಮ ಫ್ಯಾಕ್ಟರಿ ಸುತ್ತಮುತ್ತ ಇರುವ ವ್ಯಾಪಾರಸ್ಥರು ಖರೀದಿಗಾಗಿ ನಿಮ್ಮ ಫ್ಯಾಕ್ಟರಿಗೆ ಬರ್ತಾರೆ. ನೀವು ಫ್ಯಾಕ್ಟರಿಯಲ್ಲಿ ಸಿದ್ಧವಾದ ಐಸ್ ಕ್ಯೂಬನ್ನು ಐಸ್ ಕ್ರೀಂ ಶಾಪ್, ಹೊಟೇಲ್, ರೆಸ್ಟೋರೆಂಟ್, ಹೂವಿನ ಅಂಗಡಿ, ತರಕಾರಿ ಮಾರಾಟ ಅಂಗಡಿಗೆ ಮಾರಾಟ ಮಾಡಬಹುದು. ನಿಮ್ಮಷ್ಟಕ್ಕೆ ನೀವು ಫ್ಯಾಕ್ಟರಿ ಶುರು ಮಾಡಿ ಸುಮ್ಮನಿದ್ರೆ ಮಾರಾಟ ನಡೆಯೋದಿಲ್ಲ. ನಿಮ್ಮ ಫ್ಯಾಕ್ಟರಿ ಬಗ್ಗೆ ಜಾಹೀರಾತು ನೀಡುವುದು ಮುಖ್ಯವಾಗುತ್ತದೆ. ಅದಕ್ಕೆ ನೀವು ಸಾಮಾಜಿಕ ಜಾಲತಾಣ, ಪೋಸ್ಟರ್ ಸಹಾಯ ಪಡೆಯಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.