ಭಾರತದಲ್ಲಿ ಕಸಕ್ಕೆ ಎಸೆಯೋ ವಸ್ತುವಿಗೆ ವಿದೇಶದಲ್ಲಿ ಭಾರೀ ಬೇಡಿಕೆ, ಬ್ಯುಸಿನೆಸ್ ಶುರು ಮಾಡಿದ್ರೆ ಕೈ ತುಂಬ ಲಾಭ

Published : Jun 17, 2026, 01:13 PM IST
Banana Leaf

ಸಾರಾಂಶ

Banana Leaf Business Idea : ಕೈನಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ಊರಲ್ಲ ಅಲೆದ್ರಂತೆ ಹಾಗಾಗಿದೆ ನಮ್ಮ ಕಥೆ. ನಮ್ಮ ಊರಿನಲ್ಲೇ ಲಕ್ಷಾಂತರ ಸಂಪಾದನೆ ಮಾಡುವ ಬೆಳೆ ಇದೆ. ಆದ್ರೆ ಅದನ್ನು ಸರಿಯಾಗಿ ಬಳಸದೆ ಕಸ ಅಂತ ಎಸೆಯುತ್ತಿದ್ದೇವೆ. 

ಭಾರತದಲ್ಲಿ ಬಾಳೆ ಹಣ್ಣಿಗೆ ಇರುವಷ್ಟು ಬೆಲೆ ಬಾಳೆ ಎಲೆಗಿಲ್ಲ. ಜನರು ಬಾಳೆ ಗಿಡದಿಂದ ಬಾಳೆ ಗೊನೆ ತೆಗೆದು ಗಿಡ ಸಾಯಿಸ್ತಾರೆ. ಹಳ್ಳಿಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಮಾತ್ರ ಬಾಳೆ ಎಲೆಗೆ ಪ್ರಾಮುಖ್ಯತೆ ಸಿಗುತ್ತೆ. ಬಹುತೇಕ ಭಾಗಗಳಲ್ಲಿ ಈ ಬಾಳೆ ಎಲೆಯನ್ನು ಕಸದ ರೀತಿಯಲ್ಲೇ ನೋಡಲಾಗುತ್ತೆ. ನಾವು ಕಸ ಅಂದ್ಕೊಂಡಿರುವ ಈ ಬಾಳೆ ಎಲೆಗೆ ವಿದೇಶದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ನೀವು ಲಕ್ಷಾಂತರ ರೂಪಾಯಿಯನ್ನು ಇದ್ರಿಂದ ಸಂಪಾದನೆ ಮಾಡ್ಬಹುದು.

ವಿದೇಶದಲ್ಲಿ ಬಾಳೆ ಎಲೆಗೆ ಹೈ ಡಿಮ್ಯಾಂಡ್

ಸಿಂಗಾಪುರ, ಯುಎಇ, ಅಮೆರಿಕಾ, ದಕ್ಷಿಣ ಕೊರಿಯಾ ಮತ್ತು ಯುರೋಪಿನ ಅನೇಕ ದೇಶಗಳಲ್ಲಿ ಈ ಬಾಳೆ ಎಲೆಗೆ ಬಹು ಬೇಡಿಕೆ ಇದೆ. ಇದಕ್ಕೆ ಮುಖ್ಯ ಕಾರಣ ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ. ಜಗತ್ತು ಈಗ ಪ್ಲಾಸ್ಟಿಕ್ನಿಂದ ದೂರ ಸರಿಯುತ್ತಿದೆ. ಪರಿಸರ ರಕ್ಷಣೆಗಾಗಿ ನೈಸರ್ಗಿಕ ವಸ್ತುಗಳ ಬಳಕೆ ಮಾಡ್ತಿದೆ. ಬಾಳೆ ಎಲೆಗಳು ನೈಸರ್ಗಿಕವಾಗಿವೆ. ಅವರು ಸುಲಭವಾಗಿ ಮಣ್ಣಿನಲ್ಲಿ ಕರಗಬಲ್ಲವು. ಹಾಗೆಯೇ ಬ್ಯಾಕ್ಟೀರಿಯಾ ವಿರೋಧಿ. ಬಿಸಿ ಹಾಗೂ ನೀರು ಎರಡನ್ನೂ ತಡೆಯಬಲ್ಲವು. ಆಹಾರದ ಸುಹಾಸನೆ ಹೆಚ್ಚಿಸುವ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ಈ ಬಾಳೆ ಎಲೆಯನ್ನು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಹೆಚ್ಚು ಬಳಕೆ ಮಾಡಲಾಗ್ತಿದೆ.

ವರ್ಷದಲ್ಲೇ ಕೋಟ್ಯಾಧಿಪತಿ ಮಾಡಿದ ₹4ರ ಷೇರು ! ₹1 ಲಕ್ಷ ಹೂಡಿದವರಿಗೆ

ಬಾಳೆ ಎಲೆಗಳನ್ನು ರೆಸ್ಟೋರೆಂಟ್ಗಳು, ಕ್ಯಾಟರಿಂಗ್ ಕಂಪನಿಗಳು, ದೇವಸ್ಥಾನಗಳು ಮತ್ತು ರೆಡಿ-ಮೀಲ್ ಪ್ಯಾಕೇಜಿಂಗ್ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸ್ತಿದ್ದಾರೆ. ವಿಶ್ವದ ಅತಿ ಹೆಚ್ಚು ಬಾಳೆ ಉತ್ಪಾದಕ ಕ್ಷೇತಗಳಲ್ಲಿ ಭಾರತ ಸೇರಿದ್ದು, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಳೆ ಬೆಳೆಯಲಾಗುತ್ತದೆ.

ನೀವೂ ಶುರು ಮಾಡ್ಬಹುದು ಬ್ಯುಸಿನೆಸೆ

ಭಾರತದಲ್ಲಿ ಕಚ್ಚಾ ವಸ್ತುವೆಂದು ಬಿಸಾಡುವ ಈ ಬಾಳೆ ಎಲೆಯನ್ನು ಮಾರಾಟ ಮಾಡಿ ನೀವು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ಐವತ್ತು ಸಾವಿರದಿಂದ ಒಂದೂವರೆ ಲಕ್ಷ ರೂಪಾಯಿಗಳ ಹೂಡಿಕೆ ಅಗತ್ಯವಿದೆ.ಎಲೆ ಕತ್ತರಿಸುವ ಉಪಕರಣಗಳು, ತೊಳೆಯುವ ಮತ್ತು ಒಣಗಿಸುವ ಯಂತ್ರ, ಉತ್ತಮ ಪ್ಯಾಕೇಜಿಂಗ್ ಅಗತ್ಯವಿರುತ್ತದೆ.

ನಾಗಲೋಟಕ್ಕೆ ಬಿತ್ತು ಬ್ರೇಕ್; ಚಿನ್ನದ ಬೆಲೆಯಲ್ಲಿ ಎರಡನೇ ದಿನವೂ ಇಳಿಕೆ, ಇಂದೇ ಖರೀದಿಸಿ

ರಫ್ತು ಮಾಡಲು IEC, GST ಮತ್ತು APEDA ನೋಂದಣಿ ಅಗತ್ಯ

ಮಾರುಕಟ್ಟೆಯಲ್ಲಿ ಕಚ್ಚಾ ಬಾಳೆ ಎಲೆಗಳು ಪ್ರತಿ ಕೆಜಿಗೆ ಸುಮಾರು ಇಪ್ಪತ್ತರಿಂದ ಅರವತ್ತು ರೂಪಾಯಿವರೆಗೆ ಮಾರಾಟವಾಗುತ್ತವೆ. ಸಂಸ್ಕರಿಸಿದ ರಫ್ತು ಗುಣಮಟ್ಟದ ಎಲೆಗಳು ಎಂಭತ್ತರಿಂದ ಇನ್ನೂರು ರೂಪಾಯಿವರೆಗೆ ಮಾರಾಟವಾಗುತ್ತವೆ. ಸರಿಯಾದ ಖರೀದಿದಾರರು ಸಿಕ್ಕರೆ ತಿಂಗಳಿಗೆ ಇಪ್ಪತ್ತೈದು ಸಾವಿರದಿಂದ ಎರಡು ಲಕ್ಷ ರೂಪಾಯಿವರೆಗೆ ಆದಾಯ ಗಳಿಸಬಹುದು. ಸ್ಥಳೀಯ ರೈತರಿಂದ ಎಲೆಗಳನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಿ, ಸಂಸ್ಕರಿಸಿ, ತೇವಾಂಶ ನಿರೋಧಕ ಪ್ಯಾಕೇಜಿಂಗ್ನಲ್ಲಿ ಪ್ಯಾಕ್ ಮಾಡಿ. ನಂತರ ಇಂಡಿಯಾ ಮಾರ್ಟ್‌, Alibaba, TradeIndia ಮುಂತಾದ ವೇದಿಕೆಗಳ ಮೂಲಕ ಮಾರಾಟ ಮಾಡಿ. ವ್ಯಾಪಾರ ಶುರು ಮಾಡುವ ಮುನ್ನ ಸರಿಯಾದ ಮಾಹಿತಿ, ಜ್ಞಾನದ ಅಗತ್ಯವಿದೆ. ರಫ್ತು ನಿಯಮಗಳ ಬಗ್ಗೆ ನೀವು ಸರಿಯಾಗಿ ತಿಳಿದಿರಬೇಕು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ನೂತನ ನೊಯ್ಡಾ ಏರ್‌ಪೋರ್ಟ್‌ನಿಂದ ಸೇವೆ ಆರಂಭಿಸಿದ ಆಕಾಶ ಏರ್, ಬೆಂಗಳೂರಿಗೆ ನೇರ ವಿಮಾನ ಸಂಪರ್ಕ!
ಕಾಮಾಕ್ಯದಲ್ಲಿ ಪಾರಿವಾಳ ಹಾರಿಬಿಟ್ಟ ಅನಂತ್ ಅಂಬಾನಿ, ಈ ಹರಕೆ ಹಿಂದಿನ ಕಾರಣ ಏನು?