ಇತ್ತೀಚೆಗೆ ಖಾಸಗಿ ಟೆಲಿಕಾಮ್ ಕಂಪನಿಗಳ ದರ ಏರಿಕೆಯಿಂದ ಬೇಸತ್ತ ಗ್ರಾಹಕರಿಗೆ BSNL ದೊಡ್ಡ ಟ್ರೀಟ್ ನೀಡಿದೆ. ಕಡಿಮೆ ದರದಲ್ಲಿ ವಿವಿಧ ಪ್ರೀಪೇಯ್ಡ್ ಪ್ಲ್ಯಾನ್ ಗಳನ್ನು ಪರಿಚಯಿಸೋ ಮೂಲಕ ಖಾಸಗಿ ಟೆಲಿಕಾಮ್ ಸಂಸ್ಥೆಗಳ ಅತೃಪ್ತ ಗ್ರಾಹಕರನ್ನು ತನ್ನತ್ತ ಸೆಳೆಯಲು ಮುಂದಾಗಿದೆ.
ನವದೆಹಲಿ (ಡಿ.7): ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಗಳಾದ ಏರ್ ಟೆಲ್ (Airtel),ವೋಡಾಫೋನ್ (Vodafone) ಹಾಗೂ ರಿಲಾಯನ್ಸ್ ಜಿಯೋ( Reliance Jio) ಪರಸ್ಪರ ಒಬ್ಬರಿಗೊಬ್ಬರು ಪೈಪೋಟಿ ನೀಡೋದು ಕಾಮನ್. ಈ ಮೂರು ಕಂಪನಿಗಳು ವಿವಿಧ ಡೇಟಾ ಪ್ಲ್ಯಾನ್ ಗಳು ಹಾಗೂ ಕಡಿಮೆ ದರದಲ್ಲಿ ಹೆಚ್ಚಿನ ಪ್ರಯೋಜನ ಹೊಂದಿರೋ ಹೊಸ ಹೊಸ ಯೋಜನೆಗಳನ್ನು ಪರಿಚಯಿಸೋ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಸದಾ ಪ್ರಯತ್ನಿಸುತ್ತಲೇ ಇರುತ್ತವೆ. ಆದ್ರೆ ಇತ್ತೀಚೆಗೆ ಈ ಮೂರೂ ಕಂಪನಿಗಳು ಪೈಪೋಟಿಗೆ ಬಿದ್ದವರಂತೆ ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿವೆ. ಇದು ಈ ಮೂರೂ ಸಂಸ್ಥೆಗಳ ಗ್ರಾಹಕರಿಗೆ ಶಾಕ್ ನೀಡಿರೋ ಜೊತೆ ಅತೃಪ್ತಿಯನ್ನೂ ಮೂಡಿಸಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಈಗ ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (BSNL) ಮುಂದಾಗಿದೆ. ಖಾಸಗಿ ಟೆಲಿಕಾಮ್ ಸಂಸ್ಥೆಗಳ ಮುನಿಸಿಕೊಂಡ, ಅತೃಪ್ತ ಗ್ರಾಹಕರನ್ನು ತನ್ನತ್ತ ಸೆಳೆಯಲು ಕಡಿಮೆ ದರದಲ್ಲಿ ವಿವಿಧ ಪ್ಲ್ಯಾನ್ ಗಳನ್ನು ಪರಿಚಯಿಸಿದೆ. ಇದು ಖಾಸಗಿ ಟೆಲಿಕಾಮ್ ಸಂಸ್ಥೆಗಳ ಬೆಲೆಯೇರಿಕೆಯಿಂದ ಬೇಸತ್ತ ಗ್ರಾಹಕರಿಗೆ BSNLಕಡೆಯಿಂದ ದೊಡ್ಡ ಟ್ರೀಟ್ ಎಂದೇ ಹೇಳಬಹುದು. BSNLನ ಒಂದು ಯೋಜನೆ ಮಾತ್ರ ಅತೀಹೆಚ್ಚು ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯೋ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇದು 94 ರೂ. ಪ್ರೀಪೇಯ್ಡ್ ಪ್ಲ್ಯಾನ್ ಆಗಿದ್ದು, 75 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆ ಇತರ ಟೆಲಿಕಾಮ್ ಕಂಪನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸೋ ನಿರೀಕ್ಷೆಯೂ ಇದೆ.
ಏನಿದು 94ರೂ. ಪ್ರೀಪೇಯ್ಡ್ ಪ್ಲ್ಯಾನ್?
ಈ ಪ್ಲ್ಯಾನ್ ಪಡೆಯಲು ನೀವು ಕೇವಲ 94ರೂ. ಪಾವತಿಸಿದ್ರೆ ಸಾಕು. ಈ ಪ್ಲ್ಯಾನ್ ಅವಧಿ 75ದಿನಗಳಾಗಿದ್ದು, 60 ದಿನಗಳ ಕಾಲ ಕಾಲರ್ ಟ್ಯೂನ್ ಕೂಡ ನೀಡಲಾಗುತ್ತಿದೆ. ಇನ್ನು ಈ ಪ್ಲ್ಯಾನ್ ನಲ್ಲಿ ನಿಮಗೆ 3ಜಿಬಿ ಡೇಟಾ ಸಿಗುತ್ತದೆ. ಈ ಡೇಟಾ ಬಳಕೆಗೆ ಯಾವುದೇ ಮಿತಿ ವಿಧಿಸಿಲ್ಲ. ನೀವು ಇದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವಾಗ ಬೇಕಾದ್ರೂ ಬಳಸಬಹುದು. ಇನ್ನು 100 ನಿಮಿಷಗಳ ಕರೆ ಕೂಡ ಉಚಿತವಾಗಿ ನೀಡಲಾಗಿದೆ. ಯಾವುದೇ ನೆಟ್ ವರ್ಕ್ ನ ಮೊಬೈಲ್ ಸಂಖ್ಯೆಗೆ ನೀವು ಕರೆ ಮಾಡಿ ಮಾತನಾಡಬಹುದು. ಈ ಉಚಿತ ನಿಮಿಷಗಳು ಮುಗಿದ ಬಳಿಕ ನೀವು ಮಾಡೋ ಕರೆಯ ಪ್ರತಿ ನಿಮಿಷಕ್ಕೆ 30 ಪೈಸೆ ದರ ವಿಧಿಸಲಾಗುತ್ತದೆ.
Mobile Number Portability: ವೊಡಾಫೋನ್ ಪ್ಲಾನ್ ವಿರುದ್ಧ ಟ್ರಾಯ್‌ಗೆ ಜಿಯೋ ದೂರು!
50ದಿನಗಳ ಅವಧಿಯ 75ರೂ. ಪ್ಲ್ಯಾನ್
BSNL 75ರೂಪಾಯಿಯ ಇನ್ನೊಂದು ಪ್ಲ್ಯಾನ್ ಕೂಡ ಪರಿಚಯಿಸಿದ್ದು, ಇದು 50 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನ್ ನಲ್ಲಿ ನಿಮಗೆ 2ಜಿಬಿ ಡೇಟಾ ಲಭಿಸುತ್ತದೆ. ಈ ಪ್ಲ್ಯಾನ್ ನಲ್ಲಿ ಕೂಡ 100 ನಿಮಿಷಗಳ ಕರೆ ಉಚಿತ. ಖಾಸಗಿ ಟೆಲಿಕಾಮ್ ಸಂಸ್ಥೆಗಳ ಬೆಲೆಯೇರಿಕೆ ನಡುವೆ BSNL ಪರಿಚಯಿಸಿರೋ ಇಂಥ ಯೋಜನೆಗಳು ಶೀಘ್ರವಾಗಿ ಗ್ರಾಹಕರನ್ನು ಸೆಳೆಯೋವಲ್ಲಿ ಸಫಲವಾಗೋ ವಿಶ್ವಾಸವಿದೆ.
Jio Hikes Prepaid Tariffs: ಏರ್ಟೆಲ್, ವೊಡಾಫೋನ್ ಬೆನ್ನಲ್ಲೇ ಜಿಯೋ ಗ್ರಾಹಕರಿಗೆ ಶಾಕ್: ರೀಚಾರ್ಜ್ ದರ ಹೆಚ್ಚಳ!
ದರ ಹೆಚ್ಚಿಸಿದ ಖಾಸಗಿ ಟೆಲಿಕಾಮ್ ಸಂಸ್ಥೆಗಳು
ಏರ್ ಟೆಲ್ ನ.26ರಿಂದ ತನ್ನ ಕರೆ ಹಾಗೂ ಡೇಟಾ ದರವನ್ನು(data Price) ಶೇ.20 ರಿಂದ 25ರಷ್ಟುಏರಿಕೆ ಮಾಡೋ ಮೂಲಕ ಪ್ರಿಪೇಯ್ಡ್ ಗ್ರಾಹಕರಿಗೆ(Prepaid Users) ಆಘಾತ ನೀಡಿತ್ತು. ವೊಡಾಫೋನ್ ಐಡಿಯಾ (Vodafone Idea)ಕೂಡ ನವೆಂಬರ್ ನಲ್ಲಿ ಕರೆ ಮತ್ತು ಇಂಟರ್ನೆಟ್ (Call And Internet) ಶುಲ್ಕದಲ್ಲಿ ಶೇ.20-25ರಷ್ಟುಹೆಚ್ಚಳ ಮಾಡಿತ್ತು. ಈ ಎರಡೂ ಸಂಸ್ಥೆಗಳು ದರ ಏರಿಕೆ ಮಾಡಿದ ಬೆನ್ನಲ್ಲೇ ಜಿಯೋ ಕೂಡ (Reliance Jio) ತನ್ನ ಪ್ರೀಪೇಯ್ಡ್ ಯೋಜನೆಗಳನ್ನು (Prepaid Plans) ದುಬಾರಿಗೊಳಿಸಿದೆ. ಡಿಸೆಂಬರ್ 1ರಿಂದ ಜಿಯೋ ಯೋಜನೆಗಳು ದುಬಾರಿಯಾಗಿವೆ.