Gold, Silver Price: ಇಂದು ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ

Suvarna News   | Asianet News
Published : Dec 07, 2021, 12:07 PM ISTUpdated : Dec 07, 2021, 03:13 PM IST
Gold, Silver Price: ಇಂದು ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ

ಸಾರಾಂಶ

ಒಮಿಕ್ರಾನ್ ಭೀತಿ ಹೆಚ್ಚುತ್ತಿರೋ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಚಿನ್ನದ ದರ ಸ್ಥಿರತೆ ಕಾಯ್ದುಕೊಂಡಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ರೆ, ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.

ಬೆಂಗಳೂರು (ಡಿ.7): ಚಿನ್ನ(Gold)ಅಂದ್ರೆ  ನಾರಿಯರಿಗೆ ಅಚ್ಚುಮೆಚ್ಚು. ಅದೆಷ್ಟೇ ಒಡವೆಗಳಿದ್ರೂ ಹೊಸ ಡಿಸೈನ್ ನಕ್ಲೇಸ್, ಸರ, ಬಳೆಗಳನ್ನು ನೋಡಿದ ತಕ್ಷಣ ಖರೀದಿಸಬೇಕೆಂಬ ಬಯಕೆ ಮೂಡುತ್ತದೆ. ಆದ್ರೆ ಜಗತ್ತಿಗೆ ಕೊರೋನಾ (Corona)ಎಂಬ ಮಹಾಮಾರಿ ಕಾಲಿಟ್ಟ ಬಳಿಕ ಚಿನ್ನದ ಬೆಲೆ ಗಗನಕ್ಕೇರಿತು. ಇದು ಅನೇಕ ನಾರಿಯರ ಮನಸ್ಸು ಕೆಡಿಸಿತ್ತು ಕೂಡ. ಆದ್ರೆ ಕೊರೋನಾದ ಹಾವಳಿ ಸ್ವಲ್ಪ ಮಟ್ಟಿಗೆ ತಗ್ಗಿದಂತೆ ಚಿನ್ನದ ಬೆಲೆಯೂ ಇಳಿಕೆ ಹಾದಿ ಹಿಡಿದಿತ್ತು. ಹೀಗಾಗಿ ನಾರಿಯರ ಕಣ್ಣು ನಿತ್ಯದ ಚಿನ್ನದ ದರದ ಮೇಲೆ ನೆಟ್ಟಿದೆ. ಆದ್ರೆ ಈಗ ಮತ್ತೆ ಒಮಿಕ್ರಾನ್ (Omicron)ಎಂಬ ವೈರಸ್ (Virus)ಹಾವಳಿ ನಡೆಸುತ್ತಿದೆ. ಇದು ಚಿನ್ನದ ದರದ ಮೇಲೆ ಮತ್ತೊಮ್ಮೆ ಪ್ರಭಾವ ಬೀರೋ  ಆತಂಕ ಎದುರಾಗಿದೆ. ಇನ್ನು ಬೆಳ್ಳಿ ಕೂಡ ಭಾರತೀಯರ ನೆಚ್ಚಿನ  ಲೋಹವೇ ಆಗಿದೆ. ಶುಭ ಸಮಾರಂಭಗಳಿಗೆ ಹಾಗೂ ಪೂಜೆಗಳಿಗೆ ಬೆಳ್ಳಿ  (Silver)ಅತ್ಯಗತ್ಯ. ಹೀಗಾಗಿ ಚಿನ್ನ ಹಾಗೂ ಬೆಳ್ಳಿ ದರವನ್ನು ಪ್ರತಿದಿನ ಪರಿಶೀಲಿಸೋ ಅಭ್ಯಾಸವನ್ನು ಕೆಲವರು ಬೆಳೆಸಿಕೊಂಡಿರುತ್ತಾರೆ. ಇನ್ನೂ ಕೆಲವರು ಹೂಡಿಕೆಗೂ ಚಿನ್ನವನ್ನೇ ಆಯ್ಕೆ ಮಾಡುತ್ತಾರೆ. ಚಿನ್ನದ ಬೆಲೆ ತಗ್ಗಿದಾಗ ಅದರ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನದ ದರ ಏರಿಕೆಯಾದಾಗ ಮಾರಾಟ ಮಾಡುತ್ತಾರೆ.  ಕಳೆದ ಕೆಲವು ದಿನಗಳಿಂದ ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು(ಡಿ.7) ಕೂಡ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದ್ರೆ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ದೇಶದ ಪ್ರಮುಖ ನಗರಗಳಲ್ಲಿ ಇಂದು  (ಡಿ.7) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 44,760ರೂ.ಇದ್ದು, ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 48,830 ರೂ.ಇದ್ದು,ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ದರದಲ್ಲಿಇಂದು 300ರೂ. ಇಳಿಕೆ ಕಂಡುಬಂದಿದೆ.  ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,500ರೂ.ಇತ್ತು.ಆದ್ರೆ ಇಂದು 61,200ರೂ.ಗೆ ಇಳಿಕೆಯಾಗಿದೆ. 

Petrol Rate:ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಸ್ಥಿರ

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,910ರೂ.ಆಗಿದ್ದು,ನಿನ್ನೆ ಕೂಡ ಅಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 51,170 ರೂ. ಇತ್ತು, ಇಂದು  ಕೂಡ ಅಷ್ಟೇ ಇದೆ. ಬೆಳ್ಳಿ ದರದಲ್ಲಿಇಂದು 300ರೂ. ಇಳಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿಗೆ 61,500ರೂ.ಇತ್ತು.ಆದ್ರೆ ಇಂದು 61,200ರೂ. ಆಗಿದೆ. 

ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,510ರೂ.ಇದ್ದು,ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ47,510ರೂ.ಇತ್ತು, ಇಂದು ಕೂಡ ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,500ರೂ.ಇತ್ತು.ಆದ್ರೆ ಇಂದು 61,200ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು ಕೇವಲ 300 ರೂ. ಇಳಿಕೆಯಾಗಿದೆ.

ಬೆಂಗಳೂರಿನ ಪ್ರತಿಷ್ಟಿತ ಮಂತ್ರಿ ಮಾಲ್‌ಗೆ ಬೀಗ

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45,000ರೂ.ಇದೆ. ನಿನ್ನೆ 45,080ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 80ರೂ. ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 80ರೂ. ಇಳಿಕೆಯಾಗಿದೆ. ನಿನ್ನೆ 49,180 ರೂ.ಇತ್ತು, ಇಂದು 49,100 ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 65,600ರೂ.ಇದ್ದು, ಇಂದು 65,000ರೂ. ಆಗಿದೆ. ಅಂದ್ರೆ 600ರೂ. ಇಳಿಕೆಯಾಗಿದೆ.  

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!