ನವದೆಹಲಿ(ಡಿ.21): ದೇಶದಲ್ಲಿ ಒಮಿಕ್ರೋನ್(Omicron) ವ್ಯಾಪಕವಾಗಿ ಹರಡಬಹುದು, ಅದರಿಂದ ಉದ್ದಿಮೆಗಳಿಗೆ ನಷ್ಟವಾಗಬಹುದು ಎಂಬ ಭೀತಿಯಿಂದ ಸೋಮವಾರ ಒಂದೇ ದಿನ ಬಾಂಬೆ ಷೇರುಪೇಟೆ(BSE Sensex) ಸೂಚ್ಯಂಕ 1189 ಅಂಕಗಳ ಮಹಾಪತನ ಕಂಡು 55,822ರಲ್ಲಿ ಕೊನೆಗೊಂಡಿದೆ. ನಿಫ್ಟಿಕೂಡ(Nifty) 371 ಅಂಕ ಪತನಗೊಂಡಿದೆ.
ವಿಶ್ವದ ಹಲವು ದೇಶಗಳಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ ಕೊರೋನಾ ವೈರಸ್ಸಿನ ಹೊಸ ರೂಪಾಂತರಿ ಒಮಿಕ್ರೋನ್ ಪ್ರಭೇದದ ಬಿಸಿ ಭಾರತೀಯ ಷೇರು ಮಾರುಕಟ್ಟೆಗೂ(Indian Stock Market) ತಟ್ಟಿದೆ. ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ ಒಂದೇ ದಿನ 1189 ಅಂಕಗಳಿಗೆ ಕುಸಿದು, 55,822ಕ್ಕೆ ತನ್ನ ವಹಿವಾಟನ್ನು ಮುಗಿಸಿದೆ. ಇದು 4 ತಿಂಗಳ ಕನಿಷ್ಠ.
undefined
Omicron lockdown ಕ್ರಿಸ್ಮಸ್ ಬಳಿಕ 2 ವಾರ ಲಾಕ್‌ಡೌನ್, ಬ್ರಿಟನ್‌ನಲ್ಲಿ ಕಠಿಣ ನಿಮಯ ಜಾರಿ ಸಾಧ್ಯತೆ!
ಅದೇ ರೀತಿ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ371 ಅಂಕಗಳ ಪತನ ಕಂಡು 16,614ಕ್ಕೆ ಇಳಿದಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 1879 ಅಂಕಗಳ ಕುಸಿತ ಕಂಡಿತ್ತು. ಆದರೆ ದಿನದ ಕೊನೆಗೆ ಕೊಂಚ ಚೇತರಿಸಿಕೊಂಡಿತು. ಯುರೋಪ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಒಮಿಕ್ರೋನ್ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದು, ಮಾರುಕಟ್ಟೆಯ ಪತನಕ್ಕೆ ಕಾರಣವಾಗಿದೆ
10 ದಿನದಲ್ಲಿ ಸೋಂಕು 2-3 ಪಟ್ಟು ಹೆಚ್ಚಳ ಸಾಧ್ಯತೆ
ರಾಜ್ಯದ ಬೇರೆ ಭಾಗಗಳಲ್ಲಿ ಒಮಿಕ್ರೋನ್ ಪತ್ತೆಯಾಗಿದ್ದು, ಮುಂದಿನ 10 ದಿನಗಳಲ್ಲಿ ಸೋಂಕಿನ ತೀವ್ರತೆ ತಿಳಿಯುತ್ತದೆ. ಈ ಅವಧಿಯಲ್ಲಿ ಸೋಂಕು 2-3 ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಖ್ಯಾತ ವೈರಾಣು ತಜ್ಞ, ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ವಿ. ರವಿ ತಿಳಿಸಿದ್ದಾರೆ.
News Hour ಫೆಬ್ರವರಿಯಲ್ಲಿ ಮೂರನೇ ಅಲೆ ಎದುರಿಸಲು ಸಿದ್ದರಾಗಿ, ಭಾರತಕ್ಕೆ ಎಚ್ಚರಿಕೆ!
ಬೇರೆ ಭಾಗಗಳಲ್ಲಿ ಒಮಿಕ್ರೋನ್ ಪ್ರಕರಣ ಬಂದಿರುವುದು ವೈರಾಣು ಸಮುದಾಯಕ್ಕೆ ಹಬ್ಬಿರುವುದನ್ನು ಸೂಚಿಸುತ್ತದೆ. ಆದರೆ ಇದರ ತೀವ್ರತೆ ಏನು ಎಂಬುದು ಇನ್ನು ಎಂಟತ್ತು ದಿನಗಳಲ್ಲಿ ಗೊತ್ತಾಗಲಿದೆ. ಈ ಅವಧಿಯಲ್ಲಿ ಪ್ರಕರಣ 2-3 ಪಟ್ಟು ಹೆಚ್ಚಾಗಬಹುದು. ಒಂದು ವೇಳೆ ಲಸಿಕೆಯ ಪ್ರಭಾವದಿಂದ ಹರಡುವಿಕೆಗೆ ಕಡಿವಾಣ ಬಿದ್ದಿರಲೂಬಹುದು. ಈ ಬಗ್ಗೆ ಖಚಿತವಾಗಿ ಹೇಳಲು ಇನ್ನೂ ಕೆಲ ದಿನ ಕಾಯುವುದು ಅನಿವಾರ್ಯ ಎಂದು ಅವರು ಹೇಳುತ್ತಾರೆ.
ರಜೆಯ ಸಮಯ ಪ್ರಾರಂಭಗೊಂಡಿದೆ. ಜೊತೆಗೆ ಹಬ್ಬ, ಹೊಸ ವರ್ಷದ ಆಚರಣೆ ಎಂದು ಜನ ಸೇರುವ ಸಂದರ್ಭ ಬರುತ್ತಿದೆ. ಆದ್ದರಿಂದ ಜನ ಈ ಸಮಯದಲ್ಲಿ ಅತೀವ ಜಾಗ್ರತೆ ವಹಿಸಬೇಕು. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಗರಿಷ್ಠ ಮಟ್ಟದಲ್ಲಿ ಪಾಲನೆ ಮಾಡಬೇಕು ಎಂದು ಡಾ.ರವಿ ಮನವಿ ಮಾಡಿದ್ದಾರೆ.
ಬ್ರಿಟನ್: ಒಂದೇ ದಿನ 12133 ಒಮಿಕ್ರೋನ್
ಬ್ರಿಟನ್‌ನಲ್ಲಿ ಒಮಿಕ್ರೋನ್ ಅಬ್ಬರ ಮುಂದುವರೆದಿದ್ದು, ಭಾನುವಾರ ಒಂದೇ ದಿನ 12,133 ಕೇಸ್ ದಾಖಲಾಗಿದೆ. ಅದರೊಂದಿಗೆ ದೇಶದಲ್ಲಿ ಈವರೆಗೆ ಪತ್ತೆಯಾದ ಒಮಿಕ್ರೋನ್ ಸೋಂಕಿನ ಪ್ರಕರಣಗಳ ಸಂಖ್ಯೆ 37,101ಕ್ಕೆ ಏರಿಕೆಯಾಗಿದೆ. ಒಮಿಕ್ರೋನ್‌ಗೆ ದೇಶದಲ್ಲಿ ಈವರೆಗೆ 12 ಜನ ಮೃತಪಟ್ಟಿದ್ದಾರೆ.
ಭಾನುವಾರ ಬ್ರಿಟನ್‌ನಲ್ಲಿ ಹೊಸದಾಗಿ 82,886 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಈ ಮೂಲಕ ಒಟ್ಟು ಪ್ರಕರಣಗಳು 1.13 ಕೋಟಿಗೆ ಏರಿಕೆಯಾಗಿದೆ. ಶುಕ್ರವಾರ 93 ಸಾವಿರ ಪ್ರಕರಣ ದಾಖಲಾಗಿದ್ದು ಬ್ರಿಟನ್‌ನ ಈವರೆಗೆ ದಾಖಲಾದ ಅತಿ ಹೆಚ್ಚಿನ ದೈನಂದಿನ ಪ್ರಕರಣವಾಗಿದೆ. ಇದೇ ಅವಧಿಯಲ್ಲಿ 45 ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವು 1.47 ಲಕ್ಷಕ್ಕೆ ಏರಿದೆ. ಕ್ರಿಸ್‌ಮಸ್‌ಗೂ ಮೊದಲು ಸೋಂಕನ್ನು ತಡೆಗಟ್ಟಲು ಅಗತ್ಯವಾದ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬ್ರಿಟಿಷ್ ಆರೋಗ್ಯ ಸಚಿವ ಸಾಜಿದ್ ಜಾವೇದ್ ಹೇಳಿದ್ದಾರೆ.